ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ಮತ್ತೊಂದೆಡೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಕೊರತೆ, ಕಾರಣ ತಿಳಿಯಿರಿ
ಕರ್ನಾಟಕ, ಏಪ್ರಿಲ್, 09: ರಾಜ್ಯದಲ್ಲಿ ಇನ್ನೇನು ಮಹಾಮಾರಿ ಕೊರೊನಾ ಕಾಟದಿಂದ ಮುಕ್ತಿ ಸಿಕ್ಕಿದೆ ಅನ್ನುವಷ್ಟರಲ್ಲಿಯೇ ಮತ್ತೆ ಇದೀಗ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಜನರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ ರಾಜ್ಯ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಲಸಿಕೆ ದಾಸ್ತಾನುಗಳನ್ನು ಹೊಂದಿಲ್ಲ. ಇದರಿಂದ ರಾಜ್ಯದಲ್ಲಿ ಲಸಿಕೆ ಅಭಾವ ಎದುರಾಗಿದೆ.
ಸಾರ್ವಜನಿಕ ಆರೋಗ್ಯ ಕೇಂದ್ರಗಳು ದುರ್ಬಲರಿಗೆ ಬೂಸ್ಟರ್ ಡೋಸ್ ನೀಡಲು ಹಿಂದೇಟು ಹಾಕುತ್ತಿವೆ. ಏಕೆಂದರೆ ಕೇಂದ್ರವು ತಾಜಾ ಡೋಸ್‌ಗಳನ್ನು ರಾಜ್ಯಕ್ಕೆ ಪೂರೈಸಲು ನಿರಾಕರಿಸಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ. ಇದರಿಂದ ನಷ್ಟವನ್ನು ಉಲ್ಲೇಖಿಸಿ ಡೋಸ್ ಸಂಗ್ರಹಿಸುವುದನ್ನು ಕೂಡ ನಿಲ್ಲಿಸಿದ್ದಾರೆ.

ಕೋವಿಡ್ ಪ್ರಕರಣ ವಿವರ
ಜನವರಿಯಲ್ಲಿ ರಾಜ್ಯವು ಕೇವಲ ಒಂದು ಕೋವಿಡ್ ಸಾವು ಪ್ರಕರಣ ದಾಖಲಿಸಿತ್ತು. ಮಾರ್ಚ್‌ನಲ್ಲಿ ಈ ಸಂಖ್ಯೆ 12ಕ್ಕೆ ಏರಿಕೆ ಆಗಿದ್ದು, ಏಪ್ರಿಲ್‌ನಲ್ಲಿ ದಿನಕ್ಕೆ ಸರಾಸರಿ ಒಂದದಂತೆ ಪ್ರಕರಣಗಳ ಸಂಖ್ಯೆ ಏರಿಕೆ ಆಗಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಾಗ, ಕರ್ನಾಟಕವು ಫೆಬ್ರವರಿವರೆಗೆ ಲಸಿಕೆ ಡ್ರೈವ್‌ಗಳನ್ನು ನಡೆಸಿತು. ಅಂದಿನಿಂದ ಯಾವುದೇ ದಾಸ್ತಾನು ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ಸಚಿವಾಲಯ ಹೇಳಿದ್ದೇನು?
ನಾವು ಮಾರ್ಚ್ ಮೂರನೇ ವಾರದಲ್ಲಿ ಬೇಡಿಕೆಯ ಆಧಾರದ ಮೇಲೆ ಒಂದು ಲಕ್ಷ ಕಾರ್ಬೆವಾಕ್ಸ್ ಡೋಸ್‌ಗಳನ್ನು ನೀಡುವಂತೆ ಕೇಂದ್ರಕ್ಕೆ ವಿನಂತಿಸಿದ್ದೇವೆ. ಆದರೆ ಏಪ್ರಿಲ್ 7ರಂದು ನಡೆದ ಸಭೆಯಲ್ಲಿ ಆರೋಗ್ಯ ಸಚಿವಾಲಯವು ಡೋಸ್‌ಗಳನ್ನು ಪೂರೈಸುವುದಿಲ್ಲ ಎಂದು ತಿಳಿಸಿದೆ ಅಂತಾ ಟಿ.ಕೆ.ಅನಿಲ್ ಕುಮಾರ್ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿಎಚ್‌ಒಗೆ ತಿಳಿಸಿದ್ದಾರೆ.
ತಯಾರಕರಿಂದ ಲಸಿಕೆ ಖರೀದಿಸಲು ನಿರ್ಧಾರ
ಕರ್ನಾಟಕವು ಈಗ ಲಸಿಕೆಗಳನ್ನು ತಯಾರಕರಿಂದ ನೇರವಾಗಿ ಖರೀದಿಸಬೇಕಾಗುತ್ತದೆ. ವೆಚ್ಚಗಳು, ಲಭ್ಯತೆ ಇತ್ಯಾದಿಗಳ ಆಧಾರದ ಮೇಲೆ ನಾವು ಮುಂದಿನ ವಾರ ಲಸಿಕೆ ಸಂಗ್ರಹಣೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಕುಮಾರ್ ಹೇಳಿದರು. ಇನ್ನು ದೀರ್ಘಾಕಾಲದ ಶ್ವಾಸಕೋಶದ ಅಥವಾ ಹೃದಯ ಖಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಇಮ್ಯುನೊಸಪ್ರೆಸೆಂಟ್ಸ್ ಮತ್ತು ವಯಸ್ಸಾದವರಿಗೆ ಬೂಸ್ಟರ್ ಡೋಸ್ ನಿರ್ಣಾಯಕವಾಗಿದೆ. ಮತ್ತು ಇತರರು ಕೂಡ ಈ ಡೋಸ್ ಪಡೆಯಬೇಕು ಎಂದು ವೈರಾಲಜಿಸ್ಟ್ ಡಾ.ಜಾಕೋಬ್ ಜಾನ್ ತಿಳಿಸಿದ್ದಾರೆ.

ಶನಿವಾರ Cowin ಪೋರ್ಟಲ್‌ನಲ್ಲಿ ಲಸಿಕೆ ಕೇಂದ್ರಗಳನ್ನು ಡಿಎಚ್ ಹುಡುಕಾಟ ನಡೆಸಿದ್ದು, ಈ ವೇಳೆ ಎರಡು ಲಸಿಕಾ ಕೆಂದ್ರಗಳು ಮಾತ್ರ ಪತ್ತೆಯಾಗಿವೆ. ಒಂದು ಬೆಂಗಳೂರಿನಲ್ಲಿ ಮತ್ತು ಮತ್ತೊಂದು ಕೊಪ್ಪಳದಲ್ಲಿ ಲಸಿಕಾ ಕೆಂದ್ರ ಇದ್ದು, ಇನ್ನು ಇತರ 29 ಜಿಲ್ಲೆಗಳಲ್ಲಿ ಯಾವುದೇ ಖಾಸಗಿ ಲಸಿಕೆ ಕೇಂದ್ರಗಳಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
15 ಲಕ್ಷ ರೂಪಾಯಿ ನಷ್ಟ
ಬೆಂಗಳೂರಿನ ಬಹುತೇಕ ಆಸ್ಪತ್ರೆಗಳು ಬೇಡಿಕೆ ಕಡಿಮೆ ಇರುವ ಕಾರಣ ಲಸಿಕೆ ಖರೀದಿಯನ್ನು ನಿಲ್ಲಿಸಿವೆ. ವೈದೇಹಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಸ್ ಅಂಡ್ ರಿಸರ್ಚ್ ಸೆಂಟರ್ ಕಳೆದ ತಿಂಗಳು ಕೋವ್ಯಾಕ್ಸಿನ್ ಡೋಸ್ ಅವಧಿ ಮುಗಿದ ಕಾರಣ, 15 ಲಕ್ಷ ರೂಪಾಯಿ ನಷ್ಟ ಅನುಭವಿಸಿದೆ.
ಪ್ರತಿದಿನ ಸುಮಾರು 10 ಜನ ಮಾತ್ರ ಲಸಿಕೆ ತೆಗೆದುಕೊಂಡಿದ್ದರಿಂದ ಇನ್ನುಳಿದ ಡೋಸ್‌ಗಳ ಅವಧಿ ಮುಗಿದಿದೆ. ಈಗ ದಿನಕ್ಕೆ 5-6 ಜನ ಬೂಸ್ಟರ್ ಡೋಸ್ ಕೇಳುತ್ತಿದ್ದು, ನಾವು ಅವರಿಗೆ ಲಸಿಕೆ ಲಭ್ಯವಿಲ್ಲ ಎಂದು ಹೇಳಿ ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾ ಅಸಮಧಾನ ಹೊರಹಾಕಿದ್ದಾರೆ.
ಹಾಗೆಯೇ ಫೋರ್ಟ್‌ಸ್ ಆಸ್ಪತ್ರೆಯವರು ವಾರಕ್ಕೆ ಸುಮಾರು 20 ಜನರಿಗೆ ಬೂಸ್ಟರ್ ಡೋಸ್ ಅನ್ನು ನೀಡುತ್ತಿದ್ದಾರೆ. ಆದರೆ ಇದನ್ನು ಕಡಿಮೆ ಜನ ಹಾಕಿಸುವುದರಿಂದ ಲಸಿಕೆಗಳನ್ನು ಸಂಗ್ರಹಿಸುವುದಿಲ್ಲ ಎಂದು ಹೆಳುತ್ತಾರೆ. ಈವರೆಗೂ ಲಸಿಕೆಯನ್ನು ಮುಂದುವರೆಸಿದ ಕೆಲವು ಆಸ್ಪತ್ರೆಗಳಲ್ಲಿ ಅಪೊಲೊ ಒಂದಾಗಿದೆ. ಇಲ್ಲಿ ವಾರದಲ್ಲಿ ಸುಮಾರು 10 ಜನ ಮತ್ತು ಶನಿವಾರದಂದು 25 ಜನರು ಲಸಿಕೆಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಏಪ್ರಿಲ್ 7ರಂದು 550ಕ್ಕೂ ಹೆಚ್ಚು ಕೋವಿಶೀಲ್ಡ್ ಡೋಸ್ ಅವಧಿ ಮುಗಿದಿದ್ದರಿಂದ ಆಸ್ಪತ್ರೆಯು ನಷ್ಟವನ್ನು ಅನುಭವಿಸಿದೆ. ಆದರೆ ಅಗತ್ಯವಿರುವವರಿಗೆ ಪೂರೈಸಲು ಈ ನಿಯಮವನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಪೊಲೋ ಉಪಾಧ್ಯಕ್ಷ ಡಾ.ಯತೀಶ್ ಗೋವಿದಯ್ಯ ತಿಳಿಸಿದ್ದಾರೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications