Bigg Boss: ಬಿಗ್‌ಬಾಸ್ ಸೀಸನ್‌-13ಕ್ಕೆ ಕೌಂಟ್‌ಡೌನ್; ಲೀಕ್ ಆಯ್ತು ಸಂಭಾವ್ಯ ಸ್ಪರ್ಧಿಗಳ ಲಿಸ್ಟ್, ಯಾರಿಗೆಲ್ಲ ಚಾನ್ಸ್

ಕಿರುತೆರೆ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 13 ಮತ್ತೆ ಶುರುವಾಗುತ್ತಿದೆ. ಒಂದೆಡೆ 'ಕಾಮನ್ ಮ್ಯಾನ್' ಆಡಿಷನ್ ಪ್ರಕ್ರಿಯೆ ಭರ್ಜರಿಯಾಗಿ ಸಾಗುತ್ತಿದ್ದರೆ, ಹೊಸ ಮನೆಗೆ ಕಾಲಿಡಲಿರುವ ಆ ಮಂದಿ ಯಾರು ಎಂಬ ಕುತೂಹಲ ಗಾಂಧಿನಗರದಿಂದ ಹಿಡಿದು ಸೋಷಿಯಲ್ ಮೀಡಿಯಾದವರೆಗೆ ಭಾರಿ ಬಿರುಗಾಳಿ ಎಬ್ಬಿಸಿದೆ. ಈ ಮಧ್ಯೆ ಯಾರೂ ಊಹಿಸದ ಕೆಲವು ಶಾಕಿಂಗ್ ಸೆಲೆಬ್ರಿಟಿಗಳ ಹೆಸರು ಒಳಗೊಂಡ 'ಸಂಭಾವ್ಯ ಸ್ಪರ್ಧಿಗಳ ಲಿಸ್ಟ್' ಸಖತ್ ವೈರಲ್ ಆಗ್ತಿದೆ. ಇಡೀ ಕರ್ನಾಟಕವೇ ಕಾದು ಕುಳಿತಿರುವ ಆ ಲಕ್ಕಿ ಕಂಟೆಸ್ಟೆಂಟ್ಸ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ?

ಪ್ರತಿ ಸೀಸನ್‌ನಂತೆ ಈ ಬಾರಿಯೂ ಬಿಗ್‌ಬಾಸ್ ಮನೆಗೆ ಯಾರೆಲ್ಲಾ ಬರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಸೋಷಿಯಲ್‌ ಮೀಡಿಯಾ ಪ್ರಕಾರ, ಕಿರುತೆರೆ, ಬೆಳ್ಳಿಪರದೆ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸೇರಿದಂತೆ ಈ ಕೆಳಗಿನ ಪ್ರಮುಖ ನಾಯಕರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಹಾಗಾದ್ರೆ ಸಂಭಾವ್ಯ ಸ್ಪರ್ಧಿಗಳು ಯಾರೆಲ್ಲ ಎನ್ನುವ ವಿವರ ಇಲ್ಲಿದೆ ನೋಡಿ.

Bigg Boss Kannada Season 13

ಸುನಿಲ್ ರಾವ್ (ನಟ)

ಕನ್ನಡ ಚಿತ್ರರಂಗದ ಕ್ಲಾಸಿಕ್ ಹಿಟ್ ಸಿನಿಮಾ 'ಎಕ್ಸ್‌ಕ್ಯೂಸ್ ಮೀ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಚಾಕೊಲೇಟ್ ಬಾಯ್ ಸುನಿಲ್ ರಾವ್, ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಸಿನಿಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಇವರು, ಬಿಗ್‌ಬಾಸ್ ವೇದಿಕೆಯ ಮೂಲಕ ದೊಡ್ಡ ಮಟ್ಟದ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ರಗಡ್ ರಶ್ಮಿ (ರಿಯಾಲಿಟಿ ಶೋ ವಿನ್ನರ್)

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಹಳ್ಳಿ ಪವರ್'ನ ವಿನ್ನರ್ ಆಗಿ ಹೊರಹೊಮ್ಮಿದ್ದ ರಗಡ್ ರಶ್ಮಿ, ತಮ್ಮ ನೇರ ನಡೆ-ನುಡಿ ಹಾಗೂ ಬೋಲ್ಡ್ ಆಟಿಟ್ಯೂಡ್‌ನಿಂದಲೇ ಫೇಮಸ್. ಇವರಿಗಿರುವ ಅಪಾರ ಜನಪ್ರಿಯತೆಯಿಂದಾಗಿ ಈ ಬಾರಿ ಬಿಗ್‌ಬಾಸ್ ಲಿಸ್ಟ್‌ನಲ್ಲಿ ಇವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ.

Bigg Boss: ಬಿಗ್‌ಬಾಸ್‌ ಸೀಸನ್ 13: ಸೆಲೆಬ್ರಿಟಿ ಲಿಸ್ಟ್‌ನಲ್ಲಿದ್ದಾರಂತೆ ಈ ಬಹುಭಾಷಾ ನಟಿ
Bigg Boss: ಬಿಗ್‌ಬಾಸ್‌ ಸೀಸನ್ 13: ಸೆಲೆಬ್ರಿಟಿ ಲಿಸ್ಟ್‌ನಲ್ಲಿದ್ದಾರಂತೆ ಈ ಬಹುಭಾಷಾ ನಟಿ

ಶಿವು (ಹಾಸ್ಯ ಕಲಾವಿದ)

'ಕಾಮಿಡಿ ಕಿಲಾಡಿಗಳು' ಮತ್ತು 'ಗಿಚ್ಚಿ ಗಿಲಿಗಿಲಿ' ಶೋಗಳ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿರುವ ಕಾಮಿಡಿಯನ್ ಶಿವು ಕೂಡ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸಹಕಲಾವಿದೆ ಮಾನಸಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಇವರು, ಇದೀಗ ಹೊಸ ಜೀವನದ ಬೆನ್ನಲ್ಲೇ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಸಾಧ್ಯತೆಯಿದೆ.

ಕೋಳಿ ರಮ್ಯಾ (ನಟಿ)

'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' (ಸೀಸನ್ 1 ಮತ್ತು 2) ಹಾಗೂ 'ಹಳ್ಳಿ ಹೈದ ಪ್ಯಾಟೆಗ್ ಬಂದ' ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡು 'ಕೋಳಿ ರಮ್ಯಾ' ಎಂದೇ ಫೇಮಸ್ ಆದ ನಟಿ ರಮ್ಯಾ. ತಮಿಳಿನ 'ಸತ್ಯ' ಸೀರಿಯಲ್‌ನಲ್ಲಿ ನಟಿಸಿದ್ದ ಇವರು, 'ನೀನಾದೆ ನಾ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಗ್ಲಾಮರ್ ಮತ್ತು ಡ್ರಾಮಾ ಕ್ವೀನ್ ಇಮೇಜ್ ಬಿಗ್‌ಬಾಸ್ ಮನೆಗೆ ಪ್ಲಸ್ ಆಗಬಹುದು.

Bigg Boss Kannada Season 13

ಭರತ್ ಬೋಪಣ್ಣ (ನಟ)

ಕನ್ನಡ ಚಿತ್ರರಂಗದ ಹ್ಯಾಂಡ್ಸಮ್ ಮಾಡಲ್ ಹಾಗೂ ನಟ ಭರತ್ ಬೋಪಣ್ಣ ಕೂಡ ಈ ಬಾರಿ ಮನೆಯೊಳಗೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. 'ಡೆಮೊ ಪೀಸ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಇವರು, ಜೀ ಕನ್ನಡದ ಸೂಪರ್ ಹಿಟ್ 'ಬ್ರಹ್ಮಗಂಟು' ಸೀರಿಯಲ್‌ನಲ್ಲಿ 'ಲಕ್ಕಿ' ಪಾತ್ರದ ಮೂಲಕ ಇಡೀ ಕರ್ನಾಟಕದ ಮಹಿಳಾ ವೀಕ್ಷಕರ ಮನಗೆದ್ದಿದ್ದರು.

ಶಿವಪುತ್ರ (ಯೂಟ್ಯೂಬರ್)

ಉತ್ತರ ಕರ್ನಾಟಕ ಶೈಲಿಯ ವಿಶಿಷ್ಟ ಹಾಸ್ಯ ಮತ್ತು ಮನರಂಜನಾ ವಿಡಿಯೋಗಳ ಮೂಲಕ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಶಿವಪುತ್ರ ಈ ಬಾರಿಯ ಬಿಗ್ ಸರ್ಪ್ರೈಸ್ ಎನ್ನಲಾಗುತ್ತಿದೆ. ಇವರ ಹಳ್ಳಿ ಶೈಲಿಯ ಕಾಮಿಡಿ ಮತ್ತು ವಿಡಿಯೋಗಳಲ್ಲಿನ ಜೀವನ ಮೌಲ್ಯಗಳ ಸಂದೇಶ ಬಿಗ್‌ಬಾಸ್ ಮನೆಗೆ ಹೊಸ ಕಳೆ ತರಬಲ್ಲದು.

ರಾಣವ್ ಗೌಡ (ನಟ)

'ಅಮೃತಧಾರೆ' ಸೀರಿಯಲ್‌ನ ಪ್ರಮುಖ ನೆಗೆಟಿವ್ ಪಾತ್ರ 'ಜೈದೇವ್' ಮೂಲಕ ಸಿಕ್ಕಾಪಟ್ಟೆ ಖ್ಯಾತಿ ಗಳಿಸಿರುವ ನಟ ರಾಣವ್ ಗೌಡ. ಇತ್ತೀಚೆಗಷ್ಟೇ ಸಹನಟಿ ರಾಧಾ ಭಗವತಿ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರು ಪ್ರಸ್ತುತ ಬಿಗ್‌ಬಾಸ್ ಟೀಮ್‌ನ ಶಾರ್ಟ್‌ಲಿಸ್ಟ್‌ನಲ್ಲಿದ್ದಾರೆ ಎನ್ನಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಾಗಿದ್ದು, ವಾಹಿನಿಯಿಂದ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. ಆದರೆ ಈ ಲಿಸ್ಟ್ ನೋಡಿದ ಫ್ಯಾನ್ಸ್ ಮಾತ್ರ ಈ ಬಾರಿಯ ಸೀಸನ್ ಸಖತ್ ಎನ್ನುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+