ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸ್ವರೂಪದ ಕೋವಿಡ್‌ ಸೋಂಕಿಗೂ ಈ ಲಸಿಕೆಯೇ ಸಾಕು?

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 24: ಕೋವಿಡ್ ಲಸಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಬ್ರಿಟನ್‌ನಲ್ಲಿ ಕಾಣಿಸಿಕೊಂಡು ಹೊಸ ಸ್ವರೂಪದ ವೈರಸ್ ಆತಂಕ ಮೂಡಿಸಿದೆ. ಮಾಡರ್ನಾ ಪರೀಕ್ಷೆ ನಡೆಸುತ್ತಿರುವ ಲಸಿಕೆ ಹೊಸ ಸ್ವರೂಪದ ವೈರಸ್‌ಗೂ ಸಾಕಾಗಲಿದೆ ಎಂಬ ನಿರೀಕ್ಷೆ ಇದೆ.

ಅಮೆರಿಕ ಮೂಲದ ಮಾಡರ್ನಾ ಈಗಾಗಲೇ ಕೋವಿಡ್ ಸೋಂಕಿಗೆ ಲಸಿಕೆ ತಯಾರು ಮಾಡಿದ್ದು, ಅದು ಪರೀಕ್ಷೆ ಹಂತದಲ್ಲಿದೆ. ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ವೈರಸ್‌ನಿಂದ ರಕ್ಷಣೆ ನೀಡುವ ಅಂಶಗಳು ಈ ಲಸಿಕೆಯಲ್ಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಮುಂದಿನ ವಾರದೊಳಗೆ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿಮುಂದಿನ ವಾರದೊಳಗೆ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ

ಹೊಸ ಸ್ವರೂಪದ ವೈರಸ್‌ ವಿರುದ್ಧವೂ ಕೆಲಸ ಮಾಡುವ ಪ್ರತಿಕಾಯಗಳನ್ನು ಲಸಿಕೆ ಒಳಗೊಂಡಿದೆ. ಇದನ್ನು ಖಚಿತಪಡಿಸಿಕೊಳ್ಳಲು ಮುಂದಿನ ವಾರ ಮತ್ತಷ್ಟು ಪರೀಕ್ಷೆ ಮಾಡಲಾಗುತ್ತದೆ ಎಂದು ಮಾಡರ್ನಾ ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.

ರೂಪಾಂತರಗೊಂಡಿರುವ ಕೊರೊನಾ ವೈರಸ್‌ ಮೇಲೆ ಫೈಜರ್, ಮಾಡೆರ್ನಾ ಲಸಿಕೆ ಪ್ರಯೋಗ ರೂಪಾಂತರಗೊಂಡಿರುವ ಕೊರೊನಾ ವೈರಸ್‌ ಮೇಲೆ ಫೈಜರ್, ಮಾಡೆರ್ನಾ ಲಸಿಕೆ ಪ್ರಯೋಗ

Vaccine

ಫೈಜರ್ ಕಂಪನಿಯ ಲಸಿಕೆಯು ಬ್ರಿಟನ್‌ನಲ್ಲಿ ಕಂಡು ಬಂದಿರುವ ವೈರಸ್‌ನ ಹೊಸ ಸ್ವರೂಪವನ್ನು ನಿಷ್ಕ್ರಿಯಗೊಳಿಸಬಹುದು. ಲಸಿಕೆ ಹಾಕಿಸಿಕೊಂಡವರ ರಕ್ತದ ಮಾದರಿಗಳ ದತ್ತಾಂಶವನ್ನು ಇದಕ್ಕಾಗಿ ಸಂಗ್ರಹ ಮಾಡಲಾಗುತ್ತಿದೆ ಎಂದು ಫೈಜರ್ ತಿಳಿಸಿದೆ.

ರೂಪಾಂತರ ವೈರಸ್‌ಗೂ ಆರೇ ವಾರದಲ್ಲಿ ಲಸಿಕೆ: ಬಯೋಎನ್‌ಟೆಕ್ ಹೇಳಿಕೆರೂಪಾಂತರ ವೈರಸ್‌ಗೂ ಆರೇ ವಾರದಲ್ಲಿ ಲಸಿಕೆ: ಬಯೋಎನ್‌ಟೆಕ್ ಹೇಳಿಕೆ

ಪ್ರಸ್ತುತ ವಿವಿಧ ಕಂಪನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವಲ್ಲಿ ನಿರತವಾಗಿವೆ. ಆದರೆ, ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಸ್ವರೂಪದ ವೈರಸ್ ಈಗಿರುವುದಕ್ಕಿಂತ ಶೇ 40 ರಿಂದ 70ರಷ್ಟು ವೇಗದಲ್ಲಿ ಹಬ್ಬಲಿದೆ ಎಂದು ಅಂದಾಜಿಸಲಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಈಗ ಅಭಿವೃದ್ಧಿಗೊಂಡು, ಪರೀಕ್ಷೆಯ ಹಂತದಲ್ಲಿರುವ ಲಸಿಕೆಗಳು ಹೊಸ ಸ್ವರೂಪದ ವೈರಸ್‌ ಅನ್ನು ಕಟ್ಟಿ ಹಾಕಬಲ್ಲವೇ? ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಬ್ರಿಟನ್‌ನಲ್ಲಿ ಕಂಡು ಬಂದಿರುವ ಹೊಸ ಮಾದರಿಯ ವೈರಸ್ ಜಗತ್ತಿನಲ್ಲಿ ಈಗಾಗಲೇ ಆತಂಕ ಸೃಷ್ಟಿ ಮಾಡಿದೆ.

English summary
American biotechnology company Moderna expects that the immunity induced by its COVID-19 vaccine would be protective against coronavirus reported in the United Kingdom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X