Video Viral: ರೈಲು ಕಿಟಕಿಯಿಂದ ಮೂತ್ರ ವಿಸರ್ಜನೆ ಮಾಡಿ ಮುಖಕ್ಕೆ ಸಿಂಪಡಿಸಿದ ವ್ಯಕ್ತಿ! ನೆಟ್ಟಿಗರಿಂದ ಭಾರೀ ಆಕ್ರೋಶ

Video Viral: ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಇಂದಿನ ದಿನಗಳಲ್ಲಿ ಅನೇಕರಿಗೆ ರೀಲ್ಸ್ ಹುಚ್ಚು ಹಿಡಿದಿದೆ. ಹೆಚ್ಚಿನ ವಿವ್ಸ್, ಲೈಕ್ಸ್, ಪಾಪ್ಯುಲಾರಿಟಿಗಾಗಿ ವಿಡಿಯೋ ಮಾಡಿ ಹರಿ ಬಿಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಚಲಿಸುವ ರೈಲಿನ ಕಿಟಕಿ ಮೂಲಕ ಮೂತ್ರ ವಿಸರ್ಜನೆ ಮಾಡಿ, ಬಳಿಕ ಅಕ್ಕಪಕ್ಕದ ಸಹ ಪ್ರಯಾಣಿಕರಿಗೆ ಅದನ್ನು ಸಿಂಪಡಿಸಿ ವಿಕೃತಿ ಮೆರೆದಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗಿದೆ.

ಸೋಷಿಯಲ್ ಮೀಡಿಯಾ ಕಾಲದಲ್ಲಿ ಟ್ರಾವೆಲ್, ಆಹಾರ, ಸ್ಪೂರ್ತಿದಾಯಕ ಇನ್ನಿತರ ರೀಲ್ಸ್ ಮಾಡಿ ಸುದ್ದಿ ಆಗುವವರಿದ್ದಾರೆ. ಅದೊಂದು ಪಾಸಿಟಿವ್ ಬೆಳವಣಿಗೆ ಎನ್ನಬಹುದು. ಆದರೆ ಈ ವ್ಯಕ್ತಿ ರೀಲ್ಸ್‌ಗಾಗಿ ಮೂತ್ರ ವಿಸರ್ಜಿಸಿದವನಂತೆ ಮಾಡಿರುವುದು ಮೆಲ್ನೋಟಕ್ಕೆ ಗೊತ್ತಾಗುತ್ತದೆ. ಆತನಿದ್ದ ಬೋಗಿಯ ಸೀಟಿನ ಅಕ್ಕಪಕ್ಕ ಮಹಿಳಾ ಪ್ರಯಾಣಿಕರು ನಿದ್ರಿಸುತ್ತಿದ್ದಾರೆ. ಒಬ್ಬ ಮಹಿಳೆ ಕಿಟಕಿ ಪಕ್ಕ ಮಲಗಿದ್ದಾರೆ. ರಾತ್ರಿ ಜರ್ನಿ ಮಾಡುವಾಗ ನಡೆದ ಘಟನೆಯಂತೆ ಈ ದೃಶ್ಯಾವಳಿಗಳು ಸೆರೆಯಾಗಿವೆ.

Viral Train Urination Video

ವ್ಯಕ್ತಿಯು ರೈಲಿನ ಕಿಟಕಿಗೆ ಮುಖ ಮಾಡಿ ನಿಂತು ಮೂತ್ರ ವಿಸರ್ಜಿಸುವಂತೆ ವಿಡಿಯೋದಲ್ಲಿ ಸೆರೆಯಾಗಿದೆ. ಮೂತ್ರ ವಿಸರ್ಜಿಸಿದ ಬಳಿಕ ಪಕ್ಕದಲ್ಲೇ ಮಲಗಿದ್ದ ಮಹಿಳೆ ಮುಖಕ್ಕೆ ಮೂತ್ರ ಸಿಂಪಡಿಸುತ್ತಾನೆ. ಆಗ ಆ ಮಹಿಳೆ ಮುಖಕ್ಕೆ ನೀರು ಬಿದ್ದಂತೆ ತಕ್ಷಣವೇ ಎದ್ದು ಅವನನ್ನು ಆಕ್ರೋಶದಿಂದ ನೋಡುತ್ತಾಳೆ. ಇದೇ ವೇಳೆ ಇತರ ಸಹ ಪ್ರಯಾಣಿಕರು ದಿಢೀರನೇ ಅವನ ಮೇಲೆ ಸಿಟ್ಟು ಬಂದಂತೆ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಅದೇ ಬೋಗಿಯಲ್ಲಿ ಆರ್‌ಎಸಿ ಸೀಟಿನಲ್ಲಿ ಕೂತಿದ್ದ ವ್ಯಕ್ತಿಯ ಮೊಬೈಲ್‌ನಲ್ಲಿ ಇದೆಲ್ಲ ದೃಶ್ಯಗಳು ಸೆರೆಯಾಗಿದೆ ಎಂಬುದು ಗೊತ್ತಾಗುತ್ತದೆ.

ವ್ಯಕ್ತಿಯ ವಿಕೃತಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲಿನಲ್ಲಿ ಸುರಕ್ಷತೆ, ಅಸಹ್ಯಕರ ವರ್ತನೆ ಪ್ರದರ್ಶನ, ಪ್ರಯಾಣದ ನಿಯಮ ಉಲ್ಲಂಘನೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಈತನ ವಿರುದ್ಧ ರೈಲ್ವೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ನಿಜವಾಗಿಯೂ ನಡೆದ ಘಟನೆಯೇ?

ವಾಸ್ತವದಲ್ಲಿ ಈ ವಿಡಿಯೋ ನಿಜವಾದುದಲ್ಲ. ಮೊದಲೇ ಪ್ಲ್ಯಾನ್ ಮಾಡಿಕೊಂಡು ರೀಲ್ಸ್‌ಗಾಗಿ ಮಾಡಿದ ವಿಡಿಯೋ ಎನ್ನಲಾಗುತ್ತಿದೆ. ಮಹಿಳೆ ನಿದ್ರೆಯಲ್ಲಿರುವಂತೆ ನಟಿಸಿರುವುದು, ಆತನ ಮೂತ್ರ ವಿಸರ್ಜನೆಯ ರೀತಿ, ಬಳಿಕ ಎಲ್ಲರು ಏನಾಯಿತು? ಎಂದು ಹಿಂದಿ ಭಾಷೆಯಲ್ಲಿ ಕೇಳುತ್ತಲೇ ದಿಢೀರನೇ ಆತನ ಮೇಲೆ ಕೋಪಗೊಂಡು ಬೈದಂತೆ ಕಾಣುತ್ತದೆ. ಇದೆಲ್ಲವು ನೈಜತೆವಾಗಿ ಕಾಣದೇ ನಟಿಸಿದಂತೆ, ರೀಲ್ಸ್ ಹುಚ್ಚಿಗಾಗಿ, ವೈರಲ್ ಆಗಬೇಕೆಂಬ ಕಾರಣಕ್ಕೆ ಮಾಡಿದ ಘಟನೆಯಾಗಿದೆ ಎಂದು ತಿಳಿದು ಬಂದಿದೆ.

ಬ್ಲೂಟಿಕ್, ವೀಕ್ಷಣೆಗಾಗಿ ಮಾಡಿದ ವಿಡಿಯೋ: ನೆಟ್ಟಿಗರು ಗರಂ

ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು 'ನನಗೆ ಈ ವೀಡಿಯೊ ಸ್ಕ್ರಿಪ್ಟ್‌ನಂತೆ ತೋರುತ್ತದೆ. ಅಂತಹ ಯಾವುದೇ ಘಟನೆ ನಿಜವಾಗಿಯೂ ನಡೆದಿಲ್ಲ. ಇದು ಕೇವಲ ಹೆಚ್ಚು ವೀಕ್ಷಣೆಗಾಗಿ ಮಾಡಿದಂತಿದೆ' ಎಂದು ಹೇಳಿದ್ದಾರೆ. ಎರಡನೇಯವರು ಸಹ 'ಈ ಘಟನೆ ಖಂಡಿತವಾಗಿಯೂ ಸ್ಕ್ರಿಪ್ಟ್ ಆಗಿದೆ. ವೈರಲ್ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಇಂತಹ ನಡವಳಿಕೆ ಸಾರ್ವಜನಿಕ ಸ್ಥಳಗಳಲ್ಲಿ ಸೂಕ್ತವಲ್ಲ. ರೈಲ್ವೆಗಳು ಅಂತಹ ಜನರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು' ಎಂದು ಆಗ್ರಹಿಸಿದ್ದಾರೆ.

'ವಿಡಿಯೋ ಸುಳ್ಳೆಂಬುದು ಸರಿಯಾದ ಅವಲೋಕನ. ರೈಲಲ್ಲಾಗಲಿ, ಹೊರಗಡೆ ಆಗಲಿ, ವೀಕ್ಷಣೆಗೆ ಈ ರೀತಿ ಮಾಡಿ ನೋಡುಗರಲ್ಲಿ ಧ್ವಂದ್ವ ನಿಲುವು ಬರುವಂತೆ ಮಾಡುವುದು ತಪ್ಪು. ಇದು ಸಂಘರ್ಷವನ್ನೂ ಪ್ರಚೋದಿಸುವಂತಿದೆ. ರೀಲ್ಸ್‌ಗಾಗಿ ಮಾಡುವ ಇಂತಹ ವಿಡಿಯೋಗಳು ಸತ್ಯವನ್ನು ಮರೆಮಾಚುತ್ತವೆ. ನಿಜವಾಗಿ ನಡೆದರೂ ನಂಬದ ಸ್ಥಿತಿ ನಿರ್ಮಾಣವಾಗುತ್ತದೆ' ಎಂದು ಮೂರನೇ ಬಳಕೆದಾರರು ಇವೆಲ್ಲರ ರೀಲ್ಸ್ ವರ್ತನೆಯನ್ನು ಖಂಡಿಸಿದ್ದಾರೆ.

'ಮೂತ್ರ ವಿಸರ್ಜಿಸಿದ ಎನ್ನಲಾದ ಈ ವ್ಯಕ್ತಿ, ಅಕ್ಕಪಕ್ಕದ ಮಹಿಳೆಯರು ಇವೆರೆಲ್ಲರದ್ದು ಒಂದೇ ಗುಂಪು. ಅವರೆಲ್ಲ ಕೂಡಿಯೇ ರೀಲ್ಸ್‌ ವೈರಲ್‌ಗಾಗಿ ಹೀಗೆ ಮಾಡಿದ್ದಾರೆ' ಎಂದು ನೆಟ್ಟಿಗರು ದೂರಿದ್ದಾರೆ. ಇಂಥಹ ಘಟನೆಗಳು ಮರುಕಳಿಸಬಾರದೆಂದರೆ, ನಿಜಯವಾಗಿ ಅಹಿತಕರ ಘಟನೆಗಳಾದಾದ ಸಾರ್ವಜನಿಕರು ಸಂತ್ರಸ್ತರ ನೆರೆವಿಗೆ ಬರಬೇಕಾದರೆ ಇಂತಹ ಸುಳ್ಳು, ರೀಲ್ಸ್ ವಿಡಿಯೋ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭಾರತೀಯ ರೈಲ್ವೆ ಇಲಾಖೆ ಇವರನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು. ರೀಲ್ಸ್‌ಗಾಗಿ ಎಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಉತ್ತೇಜನ ಸಿಗಬಾರದು' ಅನೇಕರು ಕಾಮೆಂಟ್ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+