Gruhalakshmi Scheme: ಲಕ್ಷಾಂತರ ಫಲಾನುಭವಿಗಳು ಡಿಲೀಟ್, ನಿಮ್ಮ ಹೆಸರು ಚೆಕ್ ಮಾಡೋದ್ಹೇಗೆ?

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಲ್ಲಿ ವ್ಯಾಪಕ ಪರಿಶೀಲನೆ ನಡೆಸಿದ ಬಳಿಕ ಸುಮಾರು 4.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮಿ ಯೋಜನೆಯಲ್ಲಿ, ಅನರ್ಹರು ಸೌಲಭ್ಯ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ "ಆಪರೇಷನ್ ಗೃಹಲಕ್ಷ್ಮಿ" ಹೆಸರಿನಲ್ಲಿ ವಿಶೇಷ ಪರಿಶೀಲನಾ ಕಾರ್ಯಾಚರಣೆ ಆರಂಭಿಸಿತ್ತು.

ಅಧಿಕೃತ ಮೂಲಗಳ ಪ್ರಕಾರ, ವಿವಿಧ ಜಿಲ್ಲೆಗಳಲ್ಲಿ ನಡೆದ ಪರಿಶೀಲನೆಯ ವೇಳೆ ಹಲವು ಅಕ್ರಮಗಳು ಪತ್ತೆಯಾಗಿವೆ. ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರ ಕುಟುಂಬಗಳು, ಮೃತ ಫಲಾನುಭವಿಗಳ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಾಗೂ ಒಂದೇ ಕುಟುಂಬದಿಂದ ಒಂದಕ್ಕಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಈ ಎಲ್ಲ ಅನರ್ಹರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.

Gruhalakshmi Scheme

ಗೃಹಲಕ್ಷ್ಮಿ ರದ್ದಾದ ಪಟ್ಟಿ ಎಂದರೇನು?

ಸರ್ಕಾರದ ನಿಯಮಗಳ ಪ್ರಕಾರ ಅರ್ಹತೆ ಇಲ್ಲದ ಅಥವಾ ದಾಖಲೆಗಳಲ್ಲಿ ತಪ್ಪುಗಳಿರುವ ಕಾರಣಕ್ಕೆ ಯಾರ ಅರ್ಜಿಗಳು ತಿರಸ್ಕೃತಗೊಂಡಿವೆಯೋ, ಅಂತಹವರ ಹೆಸರಿರುವ ಪಟ್ಟಿಯೇ ಈ 'ಕ್ಯಾನ್ಸಲ್ಡ್ ಲಿಸ್ಟ್'. ನೀವು ನೀಡಿದ ದಾಖಲೆಗಳು ಸರ್ಕಾರದ ನಿಯಮಗಳಿಗೆ ಹೊಂದಾಣಿಕೆಯಾಗದಿದ್ದರೆ ಅಥವಾ ಯೋಜನೆಗೆ ಬೇಕಾದ ಅಗತ್ಯ ಅರ್ಹತೆಗಳು ನಿಮ್ಮಲ್ಲಿ ಇಲ್ಲದಿದ್ದರೆ ನಿಮ್ಮ ಹೆಸರು ಈ ಪಟ್ಟಿಗೆ ಸೇರುತ್ತದೆ ಮತ್ತು ನಿಮಗೆ ಸಿಗಬೇಕಾದ ಸೌಲಭ್ಯಗಳು ಸ್ಥಗಿತಗೊಳ್ಳುತ್ತವೆ.

Gruhalakshmi Scheme: ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಬೆಂಗಳೂರು ದಕ್ಷಿಣ ವಲಯದ 12,719 ಮಹಿಳೆಯರು ಹೊರಕ್ಕೆ, ಕಾರಣವೇನು?
Gruhalakshmi Scheme: ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಬೆಂಗಳೂರು ದಕ್ಷಿಣ ವಲಯದ 12,719 ಮಹಿಳೆಯರು ಹೊರಕ್ಕೆ, ಕಾರಣವೇನು?

ಆನ್‌ಲೈನ್‌ನಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ವಿಧಾನ 1: ಸೇವಾ ಸಿಂಧು ಪೋರ್ಟಲ್ ಮೂಲಕ

1. ಮೊದಲಿಗೆ ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ.

2. ಅಲ್ಲಿ 'ಗೃಹಲಕ್ಷ್ಮಿ ಯೋಜನೆ' ವಿಭಾಗವನ್ನು ಕ್ಲಿಕ್ ಮಾಡಿ.

3. ನಂತರ 'ಅರ್ಜಿ ಸ್ಥಿತಿ' ಅಥವಾ 'ಫಲಾನುಭವಿ ಸ್ಥಿತಿ' ಆಯ್ಕೆ ಮಾಡಿ.

4. ನಿಮ್ಮ ಆಧಾರ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

5. ವಿವರಗಳನ್ನು ಸಲ್ಲಿಸಿದ ನಂತರ ನಿಮ್ಮ ಅರ್ಜಿಯ ಸ್ಥಿತಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

6. ಒಂದು ವೇಳೆ ನಿಮ್ಮ ಸ್ಟೇಟಸ್ 'Rejected', 'Cancelled' ಅಥವಾ 'Inactive' ಎಂದು ತೋರಿಸಿದರೆ, ನಿಮಗೆ ಬರಬೇಕಾದ ಹಣ ನಿಂತಿದೆ ಎಂದರ್ಥ.

ವಿಧಾನ 2: ಡಿಬಿಟಿ ಕರ್ನಾಟಕ ಆ್ಯಪ್ ಮೂಲಕ

1. ನಿಮ್ಮ ಮೊಬೈಲ್‌ನಲ್ಲಿ 'ಡಿಬಿಟಿ ಕರ್ನಾಟಕ' ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿ ತೆರೆಯಿರಿ.

2. ನಿಮ್ಮ ಆಧಾರ್ ವಿವರಗಳನ್ನು ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.

3. ಅಲ್ಲಿ 'ಪೇಮೆಂಟ್‌ ಸ್ಟೇಟಸ್‌' ಆಯ್ಕೆ ಮಾಡಿ.

4. ಯೋಜನೆಗಳ ಪಟ್ಟಿಯಲ್ಲಿ 'ಗೃಹಲಕ್ಷ್ಮಿ ಯೋಜನೆ'ಯನ್ನು ಆಯ್ಕೆ ಮಾಡಿ.

5. ಅಲ್ಲಿ ನಿಮ್ಮ ಪಾವತಿಯ ಹಿಸ್ಟರಿ ನೋಡಬಹುದು. ಹಣ ಬರುವುದು ನಿಂತಿದ್ದರೆ ಮರುಪರಿಶೀಲನೆ ಅಗತ್ಯವಿದೆ.

ನಿಮ್ಮ ಅರ್ಜಿ ರದ್ದಾಗಲು ಪ್ರಮುಖ ಕಾರಣಗಳೇನು?

* ಆಧಾರ್ ಮತ್ತು ರೇಷನ್ ಕಾರ್ಡ್‌ನಲ್ಲಿರುವ ವಿವರಗಳು ಅಂದರೆ ಹೆಸರು, ವಿಳಾಸ ಒಂದಕ್ಕೊಂದು ಹೊಂದಾಣಿಕೆಯಾಗದಿರುವುದು.

* ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವುದು.

* ಒಂದೇ ಕುಟುಂಬದಿಂದ ಎರಡು ಅಥವಾ ಅದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವುದು.

* ಬ್ಯಾಂಕ್ ಖಾತೆ ಅಥವಾ ಫಲಾನುಭವಿಗಳ ತಪ್ಪು ವಿವರಗಳನ್ನು ನಮೂದಿಸಿರುವುದು.

* ಪರಿಶೀಲನೆಯ ವೇಳೆ ಫಲಾನುಭವಿಗಳು ಅನರ್ಹರೆಂದು ಕಂಡುಬಂದಿರುವುದು.

ರದ್ದಾದ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಹೆಸರು ರದ್ದಾದ ಪಟ್ಟಿಯಲ್ಲಿದ್ದರೆ ಆತಂಕಪಡುವ ಅಗತ್ಯವಿಲ್ಲ. ನೀವು ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ. ಹೋಗುವಾಗ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಹೋಗಿ. ಅಲ್ಲಿ ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಅಥವಾ ಮರು-ಪರಿಶೀಲನೆಗೆ ವಿನಂತಿಸಿ. ತಪ್ಪುಗಳನ್ನು ಸರಿಪಡಿಸಿದ ಬಳಿಕ ಆಗಾಗ ನಿಮ್ಮ ಸ್ಟೇಟಸ್ ಚೆಕ್ ಮಾಡುತ್ತಿರಿ.

Shakti Scheme: ಆಧಾರ್ ಕಾರ್ಡ್‌ ಕಿರಿಕಿರಿ ಇನ್ಮುಂದೆ ಇರಲ್ಲ; ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬರಲಿದೆ 'ಸ್ಮಾರ್ಟ್ ಕಾರ್ಡ್'
Shakti Scheme: ಆಧಾರ್ ಕಾರ್ಡ್‌ ಕಿರಿಕಿರಿ ಇನ್ಮುಂದೆ ಇರಲ್ಲ; ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಬರಲಿದೆ 'ಸ್ಮಾರ್ಟ್ ಕಾರ್ಡ್'

ನೆನಪಿಡಬೇಕಾದ ಪ್ರಮುಖ ಅಂಶಗಳು

ನಿಮ್ಮ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಸಕ್ರಿಯವಾಗಿಟ್ಟುಕೊಳ್ಳಿ. ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಸಿ ಹಾಗೂ ನಕಲಿ ಅರ್ಜಿಗಳನ್ನು ಸಲ್ಲಿಸುವುದನ್ನು ತಪ್ಪಿಸಿ. ದಾಖಲೆಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಸ್ಥಗಿತಗೊಂಡಿರುವ 2,000 ರೂ. ಆರ್ಥಿಕ ನೆರವನ್ನು ನೀವು ಮತ್ತೆ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+