Corona: ಕಂಟ್ರೋಲ್‌ಗೆ ಸಿಗುತ್ತಿದೆ ಡೆಡ್ಲಿ ‘ಕೊರೊನಾ’ ವೈರಸ್!
ನವದೆಹಲಿ: ಕೊರೊನಾ ಪ್ರಕರಣಗಳು ದಿಢೀರ್ ಏರಿಕೆಯಾಗಿ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ, ಡೆಡ್ಲಿ ವೈರಸ್‌ನ ಕಂಟ್ರೋಲ್ ಮಾಡುವಲ್ಲಿ ಭಾರತ ಗೆದ್ದಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಕೊರೊನಾ (Covid) ಪ್ರಕರಣದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡಿರುವುದು, ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಅಂದಹಾಗೆ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 7,633 ಹೊಸ ಪ್ರಕರಣಗಳು ಪತ್ತೆಯಾಗಿವೆ. ಜೊತೆಗೆ ಮತ್ತೊಂದು ಸಿಹಿಸುದ್ದಿ ಏನೆಂದರೆ 6,702 ಸೋಂಕಿತರು ಕಳೆದ 24 ಗಂಟೆಯಲ್ಲಿ ಕೊರೊನಾ ಕಂಟಕದಿಂದ ಮುಕ್ತರಾಗಿದ್ದಾರೆ. ಹೊಸ ಕೊರೊನಾ ಸೋಂಕಿತರ ಸಂಖ್ಯೆ ಅಲ್ಪಪ್ರಮಾಣದಲ್ಲಿ ಏರಿಕೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 61 ಸಾವಿರದ ಗಡಿ ದಾಟಿದೆ. ಆದರೆ ಕಳೆದ ವಾರ ಇದ್ದ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ ಈಗಿನ ಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಂತಾಗಿದೆ.

ಕಂಟ್ರೋಲ್‌ಗೆ ಸಿಕ್ಕ ಸೋಂಕು
ಅಷ್ಟಕ್ಕೂ ಕೊರೊನಾ ಪ್ರಕರಣಗಳು ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಕಾರಣ ತಜ್ಞರು ಎಚ್ಚರಿಕೆ ನೀಡಿದ್ದರು. ಮತ್ತೆ ಕೊರೊನಾ ಕಂಟಕ ತಲೆದೂರುವ ಬಗ್ಗೆ ವಾರ್ನಿಂಗ್ ನೀಡಲಾಗಿತ್ತು. ಆದರೆ ಪರಿಸ್ಥಿತಿ ಈಗ ಹಿಡಿತಕ್ಕೆ ಸಿಗುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರಿ ಪ್ರಮಾಣದಲ್ಲಿ ಸೋಂಕು ಹರಡುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಸೋಂಕು ಹರಡುವ ಪ್ರಮಾಣವೂ ಕಡಿಮೆ ಆಗುತ್ತಿರುವುದು ರಿಲೀಫ್ ನೀಡಿದೆ. ಆದರೆ ಕೊರೊನಾ 4ನೇ ಅಲೆಯ ಆತಂಕ ಇನ್ನೂ ಸಂಪೂರ್ಣ ದೂರವಾಗಿಲ್ಲ.
4ನೇ ಅಲೆಯ ಬಲೆಯೊಳಗೆ ಭಾರತ
ಸದ್ಯಕ್ಕೆ ಇರುವ ಮಾಹಿತಿ ಪ್ರಕಾರ ಭಾರತದಲ್ಲಿ 4ನೇ ಅಲೆ ಈಗಾಗಲೇ ವಕ್ಕರಿಸಿದೆ, ಮುಂದಿನ 1 ವಾರ ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಿಸಿದೆ. ಮತ್ತೊಂದು ಕಡೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕಳೆದ 24 ಗಂಟೆಯಲ್ಲಿ ಸೋಂಕು ಭಾರಿ ಪ್ರಮಾಣದಲ್ಲಿ ಹಿಡಿತಕ್ಕೆ ಸಿಕ್ಕಿರುವುದು ಸಿಹಿಸುದ್ದಿ ನೀಡಿದೆ. ಹಗಂತಾ ಸಂಪೂರ್ಣವಾಗಿ ಕೊರೊನಾ ವೈರಸ್ ಕಂಟ್ರೋಲ್‌ಗೆ ಬಂದಿಲ್ಲ. ಹೀಗಾಗಿ ದೇಶದ ಹಲವು ರಾಜ್ಯಗಳಲ್ಲಿ ಮಾಸ್ಕ್ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ಕಂಟಕದಲ್ಲಿ ಕೇರಳ ವಿಲವಿಲ
ಪ್ರಮುಖವಾಗಿ ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಸಿಲುಕುತ್ತಿಲ್ಲ. ಮೊದಲ 2 ಅಲೆಗಳಲ್ಲೂ ಕೊರೊನಾ ಕೇರಳ ಜನರನ್ನು ಹಿಂಸಿಸಿತ್ತು. ಈಗ 4ನೇ ಅಲೆಯಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಒಂದೇ ದಿನ ಕೇರಳದಲ್ಲಿ ಬರೋಬ್ಬರಿ 1500ಕ್ಕೂ ಹೆಚ್ಚು ಕೊರೊನಾ ಕೇಸ್ ಕನ್ಫರ್ಮ್ ಆಗಿವೆ. ಹೀಗೆ ಕೇರಳ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,700ನ್ನು ತಲುಪಿದೆ. ದೇಶದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 25ಕ್ಕೂ ಹೆಚ್ಚು ಪ್ರಕರಣಗಳು ಕೇರಳದಲ್ಲೇ ಇರುವುದು ಆತಂಕದ ಸಂಗತಿ.
ದೆಹಲಿ, ಮಹಾರಾಷ್ಟ್ರದಲ್ಲಿ ವೈರಸ್ ಭೀತಿ
ಕೇರಳ ಹೊರತುಪಡಿಸಿದರೆ ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ನಿನ್ನೆ ಮಹಾರಾಷ್ಟ್ರದಲ್ಲಿ 505 ಹೊಸ ಕೊರೊನಾ ಕೇಸ್ ಕನ್ಫರ್ಮ್ ಆಗಿದ್ದರೆ, ದೆಹಲಿಯಲ್ಲಿ 1000ಕ್ಕೂ ಹೆಚ್ಚು ಕೇಸ್ ಪತ್ತೆಯಾಗಿವೆ. ಹಾಗೇ ಹರಿಯಾಣ ಸುಮಾರು 900 ಕೇಸ್ ದಾಖಲಿಸಿದ್ದರೆ, ಉತ್ತರ ಪ್ರದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 500ರ ಗಡಿ ಪ್ರವೇಶಿಸುತ್ತಿದೆ. ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ಪರಿಸ್ಥಿತಿಯೇ ಒಂದಷ್ಟು ಉತ್ತಮವಾಗಿದೆ.
ಭಾರತದಲ್ಲಿ ಕೋವಿಡ್ 19ಅಂಕಿ ಅಂಶ#covid_19 #coronavirus #COVID19india pic.twitter.com/YKfv3o8cOL
— oneindiakannada (@OneindiaKannada) April 18, 2023
ರಾಜ್ಯದಲ್ಲಿ 24 ಗಂಟೆಯಲ್ಲಿ 358 ಕೇಸ್
ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 358 ಕೇಸ್ ಕನ್ಫರ್ಮ್ ಆಗಿದೆ. ಮತ್ತೊಂದು ಕಡೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿತವಾಗಿದ್ದು, ಪರಿಸ್ಥಿತಿ ಉತ್ತಮವಾಗಿದೆ. ಆದರೆ 4ನೇ ಅಲೆಯ ಭೀತಿ ಇದ್ದೇ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಈಗಾಗಲೇ ಕೇಂದ್ರ ಸರ್ಕಾರದಿಂದ ರಾಜ್ಯದ ಆರೋಗ್ಯಾಧಿಕಾರಿಗಳಿಗೆ ಸೂಚನೆ ಸಿಕ್ಕಿದೆ. ಕರ್ನಾಟಕದಲ್ಲಿ ನಿನ್ನೆ 529 ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.












Click it and Unblock the Notifications