ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಟಿಕೆಟ್ ಬುಕ್ಕಿಂಗ್ ರದ್ದು, ಹಣ ವಾಪಸ್; ಹೊಸ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 14 : ಭಾರತೀಯ ರೈಲ್ವೆ ಈಗಾಗಲೇ ಬುಕ್ಕಿಂಗ್ ಮಾಡಿರುವ ಟಿಕೆಟ್ ರದ್ದುಗೊಳಿಸುವುದು ಮತ್ತು ಹಣ ವಾಪಸ್ ಪಡೆಯುವ ಬಗ್ಗೆ ಇರುವ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಮಾರ್ಚ್ 21ರಿಂದ ಬುಕ್ ಮಾಡಿದ ಟಿಕೆಟ್‌ಗೆ ಇದು ಅನ್ವಯವಾಗುತ್ತದೆ.

ಕೊರೊನಾ ಸೋಂಕಿನ ಲಕ್ಷಣ ಇರುವ ಕಾರಣಕ್ಕೆ ಪ್ರಯಾಣಿಕರಿಗೆ ರೈಲಿನಲ್ಲಿ ಸಂಚಾರ ನಡೆಸಲು ಅವಕಾಶ ನೀಡದಿದ್ದರೆ ಅಂತಹವರಿಗೆ ಟಿಕೆಟ್‌ನ ಪೂರ್ತಿ ಹಣವನ್ನು ವಾಪಸ್ ನೀಡಲಾಗುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ

ಕೇಂದ್ರ ಗೃಹ ಸಚಿವಾಲಯ ಎಲ್ಲಾ ರೈಲು ಪ್ರಯಾಣಿಕರ ಆರೋಗ್ಯ ತಪಾಸಣೆ ಕಡ್ಡಾಯ. ಪ್ರಯಾಣಿಕರಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಅವರಿಗೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಬಾರದು ಎಂದು ಮಾರ್ಗಸೂಚಿ ಹೊರಡಿಸಿದೆ.

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

Railways Issues Revised Guidelines For Ticket Cancellation Fare Refund

ರೈಲು ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡುವಾಗ ಪ್ರಯಾಣಿಕರ ದೇಶದ ಉಷ್ಣತೆ ಹೆಚ್ಚಿದ್ದರೆ, ಕೊರೊನಾ ಸೋಂಕಿನ ಲಕ್ಷಣಗಳ ಇದ್ದರೆ ಖಚಿತವಾದ ಟಿಕೆಟ್ ಇದ್ದರೂ ಅವರಿಗೆ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ಕೊಡುವುದಿಲ್ಲ. ಆಗ ಪೂರ್ತಿ ಹಣವನ್ನು ವಾಪಸ್ ಕೊಡಲಾಗುತ್ತದೆ.

ದೆಹಲಿಯಿಂದ ಬೆಂಗಳೂರಿಗೆ ಬಂತು ಮೊದಲ ಪ್ರಯಾಣಿಕ ರೈಲು ದೆಹಲಿಯಿಂದ ಬೆಂಗಳೂರಿಗೆ ಬಂತು ಮೊದಲ ಪ್ರಯಾಣಿಕ ರೈಲು

ಗುಂಪು ಟಿಕೆಟ್ : ಒಂದು ವೇಳೆ ಒಂದೇ ಪಿಎನ್‌ಆರ್ ಸಂಖ್ಯೆಯಲ್ಲಿ ಗುಂಪು ಟಿಕೆಟ್ ಬುಕ್ಕಿಂಗ್ ಮಾಡಿದ್ದರೆ. ಥರ್ಮಲ್ ಸ್ಕ್ಯಾನಿಂಗ್ ಮಾಡುವಾಗ ಒಬ್ಬ ಪ್ರಯಾಣಿಕರಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಯಾರಿಗೂ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ. ಎಲ್ಲರ ಟಿಕೆಟ್‌ ಹಣವನ್ನು ಪೂರ್ಣವಾಗಿ ವಾಪಸ್ ಮಾಡಲಾಗುತ್ತದೆ.

ಭಾರತೀಯ ರೈಲ್ವೆ ಮೇ 22ರಿಂದ ಅನ್ವಯವಾಗುವಂತೆ ವೈಟಿಂಗ್ ಲಿಸ್ಟ್ ಸೌಲಭ್ಯವನ್ನು ಕಲ್ಪಿಸಲಿದೆ. ಈಗ ಸಂಚಾರ ನಡೆಸುತ್ತಿರುವ ಮತ್ತು ಮುಂದೆ ಸಂಚಾರ ನಡೆಸುವ ರೈಲುಗಳಿಗೆ ಸದ್ಯಕ್ಕೆ ವೈಟಿಂಗ್ ಲಿಸ್ಟ್ ಸೌಲಭ್ಯವಿಲ್ಲ. ಟಿಕೆಟ್ ಖಚಿತವಾಗಿದ್ದರೆ ಮಾತ್ರ ಪ್ರಯಾಣ ಮಾಡಬಹುದು.

ಪ್ರಸ್ತುತ ಸಂಚಾರ ನಡೆಸುತ್ತಿರುವ ರೈಲುಗಳಲ್ಲಿ ಖಚಿತವಾದ ಟಿಕೆಟ್ ಇರಬೇಕು. ಇಲ್ಲವಾದಲ್ಲಿ ರೈಲು ನಿಲ್ದಾಣದ ಒಳಗೂ ಸಹ ಬಿಡುವುದಿಲ್ಲ. ಮೇ 17ರ ಬಳಿಕ ಇನ್ನೂ ಹೆಚ್ಚಿನ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

English summary
Railways issued revised guidelines on cancellation of already booked tickets and refund of fare. It will apply with effect from 21st March 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X