Summer Special trains: ಬೆಂಗಳೂರಿನಿಂದ ಬೇಸಿಗೆ ವಿಶೇಷ ರೈಲುಗಳು, ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್. 23: ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹಲವು ಬೇಸಿಗೆ ವಿಶೇಷ ರೈಲುಗಳ ಸೇವೆ ನೀಡುತ್ತಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು, ಎಸ್‌ಎಸ್‌ಎಸ್ ಹುಬ್ಬಳ್ಳಿ - ಅಹಮದಾಬಾದ್ ಬೇಸಿಗೆ ರೈಲುಗಳ ಪಟ್ಟಿ ನೀಡಿದೆ.
1. ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (08549/08550) ರೈಲು ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ನಡುವೆ 10 ಟ್ರಿಪ್ ಸಂಚರಿಸಲಿದೆ:
* ರೈಲು ಸಂಖ್ಯೆ 08549 ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು ಶನಿವಾರದಂದು 27.04.2024 ರಿಂದ 29.06.2024ರ ವರೆಗೆ ಓಡಲಿದೆ.

* ರೈಲು ಸಂಖ್ಯೆ 08550 ಎಸ್‌ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಭಾನುವಾರದಂದು 29.06.2024 ರಿಂದ 30.06.2024ರ ವರೆಗೆ ಓಡಲಿದೆ.
* ರೈಲು ಸಂಖ್ಯೆ 08549 ವಿಶಾಖಪಟ್ಟಣಂ ನಿಲ್ದಾಣದಿಂದ ಮಧ್ಯಾಹ್ನ 13:15 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 07:30 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
* ರೈಲು ಸಂಖ್ಯೆ 08550 ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಬೆಳಗ್ಗೆ 08:50 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 03:10 ಗಂಟೆಗೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ.
* ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ದುವ್ವಾಡ, ರಾಜಮಂಡ್ರಿ, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು, ರೇಣಿಗುಂಟ , ಕಟಪಾಡಿ, ಜೋಲಾರ್ ಪೆಟ್ಟಿ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
* ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿ-ತ್ರಿ ಟೈಯರ್, 11 ಸ್ವೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್ ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

2. ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (07311/07312) ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿ-ಅಹಮದಾಬಾದ್ ನಡುವೆ 5 ಟ್ರಿಪ್ ಸಂಚರಿಸಲಿದೆ:
* ರೈಲು ಸಂಖ್ಯೆ 07311 ಎಸ್‌ಎಸ್‌ಎಸ್ ಹುಬ್ಬಳ್ಳಿ-ಅಹಮದಾಬಾದ್ ರೈಲು ಭಾನುವಾರದಂದು 28.04.2024 ರಿಂದ 26.05.202 ಓಡಲಿದೆ.
* ರೈಲು ಸಂಖ್ಯೆ 07312 ಅಹಮದಾಬಾದ್-ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ಸೋಮವಾರದಂದು 29.04.2024 ರಿಂದ 27.05.202ರವರಗೆ ಓಡಲಿದೆ.
* ರೈಲು ಸಂಖ್ಯೆ 07311 ಹುಬ್ಬಳ್ಳಿಯಿಂದ ಸಾಯಂಕಾಲ 19:30 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 19:20 ಗಂಟೆಗೆ ಅಹಮದಾಬಾದ್ ನಿಲ್ದಾಣವನ್ನು ತಲುಪಲಿದೆ.
* ರೈಲು ಸಂಖ್ಯೆ 07312 ಅಹಮದಾಬಾದ್ ನಿಲ್ದಾಣದಿಂದ ರಾತ್ರಿ 21:25 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 19:45 ಗಂಟೆಗೆ ಎಸ್‌ಎಸ್‌ಎಸ್ ನಿಲ್ದಾಣಕ್ಕೆ ಆಗಮಿಸಲಿದೆ.
* ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ಜಂ. ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
* ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿತ್ರಿ ಟೈಯರ್, 8 ಸ್ವೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಬ್ರೇಕ್ ವ್ಯಾನ್ / ಲಗೇಜ್ ಮತ್ತು ವಿಕಲಚೇತನ ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ.
II. ಬೇಸಿಗೆ ವಿಶೇಷ ರೈಲುಗಳ ಸೇವೆ ವಿಸ್ತರಣೆ
ಅಸ್ತಿತ್ವದಲ್ಲಿರುವ ಸಂಯೋಜನೆ, ನಿಲುಗಡೆ ಮತ್ತು ಸಮಯದೊಂದಿಗೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲಾಗುತ್ತಿದೆ. ವಿವರಗಳು ಈ ಕೆಳಗಿನಂತಿವೆ:
1. ರೈಲು ಸಂಖ್ಯೆ 06563/06564 ಎಸ್‌ಎಂವಿಟಿ ಬೆಂಗಳೂರು-ಮಾಲ್ದಾ ಟೌನ್-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್:
* ರೈಲು ಸಂಖ್ಯೆ 06563 ಮಾಲ್ದಾ ಟೌನ್-ಎಸ್‌ಎಂವಿಟಿ ಬೆಂಗಳೂರು ರೈಲು ಮೇ 05ರ ವರೆಗೆ ಇದ್ದ ರೈಲು ಈಗ 12.05.2024 ರಿಂದ 02.06. 2024ರ ವರೆಗೆ ವಿಸ್ತರಣೆ ಮಾಡಲಾಗಿದೆ.
* ರೈಲು ಸಂಖ್ಯೆ 06564 ಎಸ್‌ಎಂವಿಟಿ ಬೆಂಗಳೂರು-ಮಾಲಾ ಟೌನ್ ರೈಲು ಮೇ 08 ವರೆಗೆ ಇದ್ದ ರೈಲು ಈಗ 15.05.2024 ರಿಂದ 05.06.2024ರ ವರೆಗೆ ವಿಸ್ತರಣೆ ಮಾಡಲಾಗಿದೆ.
2. ರೈಲು ಸಂಖ್ಯೆ 06221/06222 ಮೈಸೂರು-ಮುಜಾಫರ್ಪುರ-ಮೈಸೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್:
* ರೈಲು ಸಂಖ್ಯೆ 06221 ಮೈಸೂರು-ಮುಜಾಫರ್ಪುರ ರೈಲು ಸೋಮವಾರದಂದು ಸೇವೆ ನೀಡಲಿದೆ. ಈ ಮೊದಲು 06.05.2024ರ ವರೆಗೆ ಇದ್ದ ರೈಲು ಸೇವೆ 13.05.2024 ರಿಂದ 03.06.2024ರ ವರೆಗೆ ವಿಸ್ತರಣೆ ಮಾಡಲಾಗಿದೆ.
* ರೈಲು ಸಂಖ್ಯೆ 06222 ಮುಜಾಫರ್ಪುರ-ಮೈಸೂರು ರೈಲು ಗುರುವಾರದಂದು ಸೇವೆ ನೀಡಲಿದೆ. ಈ ಮೊದಲು 09.05.2024ರ ವರೆಗೆ ಇದ್ದ ರೈಲು ಸೇವೆ 16.05.2024 ರಿಂದ 06.06.2024ರ ವರೆಗೆ ವಿಸ್ತರಣೆ ಮಾಡಲಾಗಿದೆ.
-
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
Opinion - Kalyana Karnataka Train: ಕೇಂದ್ರ ಸಚಿವ ವಿ ಸೋಮಣ್ಣ ಅವರೇ ಕನ್ನಡಿಗರ ಸಂಕಷ್ಟ ಸ್ವಲ್ಪ ನೋಡಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications