Chardham Yatra 2024: ಚಾರ್‌ಧಾಮ್ ಯಾತ್ರೆಗೆ ಭಕ್ತರಲ್ಲಿ ಹೆಚ್ಚಿದ ಉತ್ಸಾಹ- ಆರು ದಿನಗಳಲ್ಲಿ ಲಕ್ಷಾಂತರ ಜನ ನೋಂದಣಿ
ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಮೇ ತಿಂಗಳಲ್ಲಿ ಶುರುವಾಗಲಿದೆ. ಇಲ್ಲಿಗೆ ಭೇಟಿ ನೀಡುವವರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ವರ್ಷದಲ್ಲಿ ಆರು ತಿಂಗಳು ತೆರೆದಿರುವ ಚಾರ್‌ಧಾಮ್ ಯಾತ್ರೆಗೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಈ ಬಾರಿಯೂ ಲಕ್ಷಾಂತರ ಜನ ಕೆಲವೇ ದಿನದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಈ ಬಾರಿ ಕೇದಾರನಾಥ ದೇವಸ್ಥಾನದ ಬಾಗಿಲು ಮೇ10ರಂದು ತೆರೆಯಲಿದ್ದು, ಈ ದಿನದಿಂದ ಭಕ್ತಾಧಿಗಳಿಗೆ ಕೇದಾರನಾಥನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿಗೆ ಭೇಟಿ ನೀಡಲು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೀಗಾಗಿ ಭಕ್ತರಿಗಾಗಿ ಸೋಮವಾರದಿಂದ (ಏಪ್ರಿಲ್ 15) ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಈಗಾಗಲೇ ಚಾರ್‌ಧಾಮ್ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು. ಕಳೆದ ಆರು ದಿನಗಳಲ್ಲಿ ಚಾರ್‌ಧಾಮ್ ಯಾತ್ರೆಗಾಗಿ 11 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಆರು ದಿನಗಳಲ್ಲಿ ಉತ್ತರಾಖಂಡದ ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್ ಯಾತ್ರೆಗೆ 11,45000 ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಗರಿಷ್ಠ ಸಂಖ್ಯೆಯ ನೋಂದಣಿಗಳು ಕೇದಾರನಾಥ ಧಾಮಕ್ಕೆ ಆಗಿದ್ದು 382159 ಜನ ನೋಂದಣಿ ಮಾಡಿಕೊಂಡಿದ್ದಾರೆ.
ಉತ್ತರಾಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಏಪ್ರಿಲ್ 15ರಿಂದ ಚಾರ್‌ಧಾಮ್ ಯಾತ್ರೆ ಮತ್ತು ಹೇಮಕುಂಡ್ ಸಾಹಿಬ್ ಯಾತ್ರೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಶನಿವಾರ ಸಂಜೆ 4 ಗಂಟೆಯವರೆಗೆ, 1145014 ಯಾತ್ರಾರ್ಥಿಗಳು ಚಾರ್‌ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಇದರಲ್ಲಿ ಕೇದಾರನಾಥ ಧಾಮಕ್ಕೆ 383159 ಜನ, ಬದರಿನಾಥ ಧಾಮಕ್ಕೆ 326677 ಜನ ಭಕ್ತರು, ಗಂಗೋತ್ರಿ ಧಾಮಕ್ಕೆ 214302 ಜನ ಸೇರಿದಂತೆ ಯಮುನೋತ್ರಿ ಧಾಮಕ್ಕೆ 205561 ಯಾತ್ರಿಕರು ನೋಂದಣಿ ಮಾಡಿಕೊಂಡಿದ್ದಾರೆ. 15315 ಯಾತ್ರಿಕರು ಹೇಮಕುಂಡ್ ಸಾಹಿಬ್‌ಗೆ ನೋಂದಾಯಿಸಿಕೊಂಡಿದ್ದಾರೆ.

ಚಾರ್‌ಧಾಮ್ ಯಾತ್ರೆಗಾಗಿ ಹೆಲಿಕಾಪ್ಟರ್ ಸೇವೆಗಳ ಬುಕಿಂಗ್ ಏಪ್ರಿಲ್ 20ರಿಂದ ಪ್ರಾರಂಭವಾಗದೆ. ಈ ಬಾರಿ ಚಾರ್‌ಧಾಮ್‌ಗೆ ಹೆಲಿಕಾಪ್ಟರ್ ಸೇವೆಯ ದರವನ್ನು ಶೇಕಡಾ ಐದರಷ್ಟು ಹೆಚ್ಚಿಸಲಾಗಿದೆ.












Click it and Unblock the Notifications