Indian Railways Job: 8,000 ಹುದ್ದೆಗಳಿಗೆ ಅರ್ಜಿ ಆಹ್ವಾನ-ಅರ್ಜಿ ಸಲ್ಲಿಕೆ ದಿನಾಂಕ & ತಿಂಗಳ ಸಂಬಳದ ವಿವರ ತಿಳಿಯಿರಿ
Indian Railways Job: ಭಾರತೀಯ ರೈಲ್ವೆಯು ಉದ್ಯೋಗಾಂಕ್ಷಿಗಳಿಗೆ ಆಗಾಗ ಸಿಹಿಸುದ್ದಿಯನ್ನು ನೀಡುತ್ತಲೇ ಬಂದಿದೆ. ಇದೀಗ ಮತ್ತೆ ಆರ್‌ಆರ್‌ಬಿ 8,000ಕ್ಕೂ ಹೆಚ್ಚು ಟಿಟಿಇ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ತಿಂಗಳ ಸಂಬಳ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆದರೆ ಇನ್ನು ಅರ್ಜಿ ಸಲ್ಲಿಕೆಯ ದಿನಾಂಕವನ್ನು ಘೋಷಣೆ ಮಾಡಿಲ್ಲ. ಮೇ ತಿಂಗಳಿನಲ್ಲಿಯೇ ದಿನಾಂಕ ಪ್ರಕಟಣೆ ಮಾಡುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮತ್ತೊಂದೆಡೆ ಇದೀಗ ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ವಿಳಂಬ ಆಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಭಾರತೀಯ ರೈಲ್ವೆಯ Indianrailways.gov.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಖಾಲಿಯಿರುವ ಟಿಟಿಇ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು 2024, ಮೇ ನಿಂದ ಆರಂಭವಾಗುವ ನಿರೀಕ್ಷೆಯಿದೆ. ಅರ್ಜಿ ಸಲ್ಲಿಕೆ ಪ್ರಾರಂಭವಾದ ಬಳಿಕವೇ ಪರೀಕ್ಷೆಯ ದಿನಾಂಕವನ್ನು ತಿಳಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
* ಹುದ್ದೆ: ಟಿಟಿಇ
* ಸಂಬಳ: 8,000ಕ್ಕೆ ಹೆಚ್ಚು ಹುದ್ದೆಗಳು
* ವಯಸ್ಸಿನ ಮಿತಿ: ಕನಿಷ್ಠ ವಯಸ್ಸು - 18, ಗರಿಷ್ಠ ವಯಸ್ಸು- 28 ವರ್ಷಗಳು
ವೇತನದ ವಿವರವನ್ನು ನೋಡುವುದಾದರೆ, ಟಿಟಿಇ ಹುದ್ದೆಯ ವೇತನವು 27,400-45,600 ರೂಪಾಯಿಗಳವರೆಗೆ ಇರುತ್ತದೆ. ಇನ್ನು ಅರ್ಜಿ ಸಲ್ಲಿಸಬಯಸುವವರು ಮಾನ್ಯತೆ ಪಡೆದ ಶೀಕ್ಷಣ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಎಂದು ತಿಳಿಸಿದೆ.
ಆಯ್ಕೆ ಪ್ರಕ್ರಿಯೆಯನ್ನು ನೋಡುವುದಾದರೆ, ಲಿಖಿತ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂಪಾಯಿ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 300 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ Indianrailways.gov.in ಗೆ ಭೇಟಿ ನೀಡಿ, ಇತ್ತೀಚಿನ ಆಯ್ಕೆಗೆ ಹೋಗಿ ಮತ್ತು ಅಲ್ಲಿ ರೈಲ್ವೆ ಟಿಟಿಇ ನೇಮಕಾತಿ 2024 ಅನ್ನು ಹುಡುಕಿ. ಬಳಿಕ ರೈಲ್ವೆ ಟಿಟಿಇ ನೇಮಕಾತಿ ವಿಭಾಗದಲ್ಲಿ, ನೀವು ಆನ್‌ಲೈನ್ ಅರ್ಜಿ ಲಿಂಕ್ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ನೀವು ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಬಳಿಕ ಮುಂದಿನ ಬಟನ್ ಕ್ಲಿಕ್ ಮಾಡಿ ಗಾತ್ರಕ್ಕೆ ಅನುಗುಣವಾಗಿ ನಿಮ್ಮ ಫೋಟೋ ಮತ್ತು ಹೆಬ್ಬೆರಳಿನ ಗುರುತನ್ನು ಅಪ್‌ಲೋಡ್ ಮಾಡಿ. ನಂತರ ನೀವು ಶುಲ್ಕವನ್ನು ಸಲ್ಲಿಸಬೇಕಾಗುತ್ತದೆ.












Click it and Unblock the Notifications