Kannada: ಬೆಂಗಳೂರಲ್ಲಿ ಇನ್ಮುಂದೆ ಶಾಲೆಯಲ್ಲಿ ಕನ್ನಡ ಮಾತನಾಡಲ್ಲ ಅಂತ ವಿದ್ಯಾರ್ಥಿಗಳಿಂದ 200 ಬಾರಿ ತಪ್ಪೊಪ್ಪಿಗೆ!

Kannada: ಬೆಂಗಳೂರಿನಲ್ಲಿ ಕನ್ನಡ ಭಾಷೆ ಹಾಗೂ ಕನ್ನಡಿಗರಿಗೆ ಅವಮಾನವಾಗುತ್ತಿರುವ ವಿಷಯವು ಪದೇ ಪದೇ ಚರ್ಚೆ ಆಗುತ್ತಿದೆ. ಇದೀಗ ಕನ್ನಡ ನೆಲವಾದ ಬೆಂಗಳೂರಿನಲ್ಲೇ ಕನ್ನಡ ಮಾತನಾಡಿರುವುದಕ್ಕೆ ವಿದ್ಯಾರ್ಥಿಗಳಿಂದ ತಪ್ಪೊಪ್ಪಿಗೆ ಮಾದರಿಯಲ್ಲಿ ಬರೆಸಿಕೊಂಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕನ್ನಡ ಮಾತನಾಡಿದ್ದು ತಪ್ಪಾಯಿತು " 'I Will Never Speak Kannada In This Campus' ನಾನು ಈ ಕ್ಯಾಂಪಸ್‌ನಲ್ಲಿ ಎಂದಿಗೂ ಕನ್ನಡ ಮಾತನಾಡುವುದಿಲ್ಲ ಎಂದು ಬರೋಬ್ಬರಿ 200 ಬಾರಿ ಬರೆಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಈ ಖಾಸಗಿ ಶಾಲೆಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡದ ನೆಲದಲ್ಲೇ ಈ ರೀತಿ ಶಿಕ್ಷೆ ಅದೂ ಸಹ ಕನ್ನಡ ಮಾತನಾಡಿರುವುದಕ್ಕೆ ಆಗಿರುವುದು ಅಕ್ಷಮ್ಯ ಎಂದು ಕನ್ನಡಿಗರು ಹೇಳಿದ್ದಾರೆ.

ಈಚೆಗೆ ನಾರ್ಥಿ ಯುವತಿಯರ ಗುಂಪೊಂದು ಬೆಂಗಳೂರಿನಲ್ಲಿ ಕನ್ನಡ ಡಿಲೀಟ್ ಮಾಡಬೇಕು ಎಂದು ಹೇಳಿತ್ತು. ಅಲ್ಲದೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ನಾರ್ಥಿಗಳಿ ಎಲ್ಲೆಂದರಲ್ಲಿ ಹಾಡು ಹಾಡುವುದು ಹಾಗೂ ಪಾರ್ಟಿ ಮಾಡುವ ವಿಡಿಯೋಗಳು ಸಹ ವೈರಲ್ ಆಗಿತ್ತು. ಇದೀಗ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಶಾಲೆಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಕನ್ನಡ ಮಾತನಾಡಿರುವುದಕ್ಕೆ ಶಿಕ್ಷೆ ವಿಧಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Kannada

ಕರ್ನಾಟಕ - ಬೆಂಗಳೂರಿನ ವಿವಿಧ ಭಾಗಗಳಲ್ಲಿನ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡುವ ಮಕ್ಕಳ ಮೇಲೆ ಈ ರೀತಿ ಶಿಕ್ಷೆ ಕೊಡುವುದು ತಪ್ಪು ಎಂದು ಹಲವು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ. ಕನ್ನಡಪರ ಹೋರಾಟಗಾರ ಚೇತನ್ ಸೂರ್ಯ ಎಸ್ ಅವರು, ಕನ್ನಡ ಮಾತಾಡಿದ ಶಾಲಾ ವಿದ್ಯಾರ್ಥಿಗಳಿಗೆ 'I Will Never Speak Kannada In This Campus' ಎಂದು 200 ಬಾರಿ ಬರೆಯುವಂತೆ ದೌರ್ಜನ್ಯ ಎಸಗಿರುವ ಶಾಲೆಯ ಧೋರಣೆಯನ್ನು ಖಂಡಿಸಲಾಯಿತು..! ಮಕ್ಕಳ ಮಾತೃಭಾಷೆ ಹಕ್ಕನ್ನು ಬಲವಂತವಾಗಿ ಕಸಿದುಕೊಳ್ಳುತ್ತಿರುವ‚ ಖಾಸಗಿ ಶಾಲೆಯವರ ನಡೆಯ ವಿರುದ್ಧ ಕ್ರಾಂತಿಕಾರಿ ಹೆಜ್ಜೆ ಇಡಲಾಗುವುದು ಎಚ್ಚರ ಎಂದಿದ್ದಾರೆ.

Kannada: ನೆಟ್ಟಿಗರು ಹೇಳಿದ್ದೇನು ?

ಇದಕ್ಕೆ ಕನ್ನಡಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಮೋಹನ್ ಎನ್ನುವವರು ನಾಡದ್ರೋಹಿ ಖಾಸಗಿ ಶಾಲೆಗಳ ಲೈಸೆನ್ಸ್‌ ರದ್ದುಪಡಿಸಿ. ಖಾಸಗಿ ಶಾಲೆಗಳು ಬಿಸಿನೆಸ್ ಸೆಂಟರ್‌ಗಳಾಗಿವೆ ಇಲ್ಲಿ ಕಲಿಸುವುದು ಅಷ್ಟಕ್ಕಷ್ಟೆ. ರಾಜ್ಯ ಸರ್ಕಾರವು ನಮ್ಮ ತೆರಿಗೆ ಹಣದಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟ ಮತ್ತು ಅಭಿವೃದ್ಧಿಪಡಿಸಲು ವ್ಯಯಿಸಬೇಕು. ನಮಗೆ ಖಾಸಗಿ ಶಾಲೆಗಳ ಅಗತ್ಯವಿಲ್ಲ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗರು ಗುರು ಕ್ಯಾಂಪಸ್‌ನಲ್ಲಿ ಕನ್ನಡ ಮಾತಾಡಲ್ಲ ಅಂತ ಬರೆಸಿರೋದು.

ಶಾಲೆಯಿಂದ ಹೊರಗೆ, ಮನೆಯಲ್ಲಿ ಪೋಷಕರ ಮಾರ್ಗದಲ್ಲಿ ಕನ್ನಡಕ್ಕೆ ಏನು ತೊಂದರೆ ಇದೆ. ಇಂಗ್ಲಿಷ್ ಮಾಧ್ಯಮಕ್ಕೆ ಮಕ್ಕಳನ್ನ ಸೇರಿಸಿ ಕನ್ನಡ ಬೇಕು ಅಂದರೆ ಹೇಗೆ ಎಂದು ಉತ್ತಮ್ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಧನು ಎನ್ನುವವರು ಗುರು ಇಂಗ್ಲೀಷ್ ಕಲಿಯಬೇಕು ಅಂದ್ರೆ, ಅದ್ನೇ ಮಾತಾಡ್ಬೇಕು .. ಕಂಫರ್ಟ್ ಆಗಿರೋ ಕನ್ನಡ ನಾ ಮಾತಾಡ್ಬಾರ್ದು ಅಂತಾ ಹೇಳ್ತಾರೆ ಸ್ಕೂಲ್ ಲಿ.. ಮಾತೃಭಾಷೆಯನ್ನು ಕ್ಯಾಂಪಸ್‌ನಿಂದ ಹೊರಗೆ ಮಾತನಾಡುತ್ತಾರೆ. ಮಾತಾಡ್ಲಿಲ್ಲ ಅಂದ್ರೆ ಕಲಿಯೋಕೆ ಆಗಲ್ಲ .. ಸುಮ್ನೆ ಎಲ್ಲದಿಕ್ಕು ವಿರೋಧಿಸಿ ಮಾಡ್ಬೇಡಿ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+