ಬೆಂಗಳೂರು-ತುಮಕೂರು ಪ್ರಯಾಣಿಕರಿಗೆ ಗುಡ್ ನ್ಯೂಸ್: BMTC ಈ ಸೇವೆಗೆ ಟೆಕ್ಕಿಗಳಿಂದ ಭಾರಿ ಮೆಚ್ಚುಗೆ

ಬೆಂಗಳೂರು: ಪ್ರತಿದಿನ ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಓಡಾಡುವ ಐಟಿ ಉದ್ಯೋಗಿಗಳಿಗೆ ಮತ್ತು ಇತರ ಪ್ರಯಾಣಿಕರಿಗೆ ಅನುಕೂಲಕರ ಆಗುವಂತೆ ಬಿಎಂಟಿಸಿ ಸಿಹಿಸುದ್ದಿಯನ್ನು ನೀಡಿದೆ. ತುಮಕೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನೈಸ್ ರಸ್ತೆಯ ಮುಖಾಂತರ ವಿಸ್ತಾರ ಎಸಿ ಬಸ್ ಸೇವೆ ಆರಂಭಿಸಲಾಗಿದೆ. ಇದು 101 ಕಿಲೋಮಿಟರ್‍ಗಳಷ್ಟು ಸಂಚರಿಸುವ ಮಾರ್ಗದ ಬಸ್ಸು ಇದಾಗಿದೆ.

ಈ ಹೊಸ ಬಸ್ ಸೇವೆಯಿಂದ ಪದೆ ಪದೆ ಪ್ರಯಾಣಿಕರು ಮಧ್ಯದಲ್ಲಿ ಬಸ್ ಬದಲಾಯಿಸುವ ತೊಂದರೆಯಿಂದ ಮುಕ್ತರಾಗಿದ್ದು, ಪ್ರಯಾಣದ ಸಮಯವು ಕಡಿಮೆ ಆಗಿದೆ.

Bengaluru BMTC Bus Route

ಬಸ್ ಸಂಚರಿಸುವ ನಿಗದಿತವಾದ ವೇಳಾಪಟ್ಟಿ

ವರದಿಗಳ ಪ್ರಕಾರ, ಈ ವಿಸ್ತಾರ ಎಸಿ ಬಸ್ ತುಮಕೂರಿನಿಂದ ಬೆಳಿಗ್ಗೆ 7.45ಕ್ಕೆ ಹೊರಟು ಬೆಳಿಗ್ಗೆ 9.45ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತದೆ. ಸಾಯಂಕಾಲ 5.45ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡುವ ಬಸ್ ರಾತ್ರಿ 9ರ ವೇಳೆಗೆ ತುಮಕೂರು ತಲುಪಲಿದೆ. ಈ ಮಾರ್ಗವು ನೆಲಮಂಗಲ, ಮಾದಾವರ ಮೂಲಕ ನೈಸ್ ರಸ್ತೆಯನ್ನು ಸೇರುತ್ತದೆ. ಏಕಮುಖ ಸಂಚಾರದ ಪ್ರಯಾಣ ದರ ₹200 ನಿಗದಿಪಡಿಸಲಾಗಿದೆ.

ಪ್ರಯಾಣದ ಸಮಯ ಉಳಿತಾಯ

ಹೊಸ ಬಸ್ ನೇರವಾದ ಸೇವೆಯಿಂದ ಪ್ರತಿದಿನ ಪ್ರಯಾಣ ಮಾಡುವವರ ಸುಮಾರು 45 ನಿಮಿಷದಿಂದ ಒಂದು ಗಂಟೆಯವರಗೆ ಸಮಯ ಉಳಿಯುತ್ತದೆ ಎಂದು ಪ್ರಯಾಣಿಕರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತುಮಕೂರಿನಿಂದ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಮೊದಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅರಿಶಿನಕುಂಟೆ, ಅಲ್ಲಿಂದ ಬಸ್ ಬದಲಾಯಿಸಿ ಮಾದಾವರ ಬಳಿಕ ಬಿಎಂಟಿಸಿ ಬಸ್್ನಲ್ಲಿ NICE ರಸ್ತೆಯ ಮೂಲಕ ಎಲೆಕ್ಟ್ರಾನಿಕ್ ಸಿಟಿ್ಗೆ ತೆರಳಬೇಕಾಗುತ್ತಿತ್ತು. ಇದರಿಂದ ಪ್ರಯಾಣದ ಸಮಯ ಹೆಚ್ಚು ತೆಗೆದುಕೊಳ್ಳುತ್ತಿತ್ತು. ಈಗ ಹೊಸದಾಗಿ ಪ್ರಾರಂಭ ಮಾಡಿರುವ ಸೇವೆಯಿಂದ ಒಂದೇ ಬಸ್‌ನಲ್ಲಿ ಗಮ್ಯಸ್ಥಾನವನ್ನು ಬೇಗನೆ ತಲುಪಬಹುದಾಗಿದೆ.

ಐಟಿ ಉದ್ಯೋಗಿಗಳ ಮೆಚ್ಚುಗೆ

ಸಂಜೆ 5.45ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡುವ ಬಸ್ ಐಟಿ ಉದ್ಯೋಗಿಗಳ ಕಚೇರಿ ಸಮಯಕ್ಕೆ ಅನುಕೂಲಕರ ಆಗಿದೆ ಎಂದು ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಾದಾವರದಿಂದ ತುಮಕೂರಿನವರೆಗಿನ ಮಾರ್ಗದಲ್ಲಿ ಕಡಿಮೆ ನಿಲ್ದಾಣಗಳಿರುವುದರಿಂದ ಪ್ರಯಾಣವು ಬೇಗ ಮುಗಿಯುತ್ತದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಇನ್ನಷ್ಟು ಬಸ್ ಸೇವೆಗಳಿಗೆ ಬೇಡಿಕೆ

ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಈ ಹಿನ್ನಲೆಯಲ್ಲಿ, ಎಲೆಕ್ಟ್ರಾನಿಕ್ ಸಿಟಿಯನ್ನು ಬೆಂಗಳೂರಿನ ಇನ್ನಿತರ ಉಪನಗರಗಳಿಗೆ ಸಂಪರ್ಕ ಹೊಂದುವಂತೆ ದೂರದ ಸೇವೆಗಳನ್ನು ಪ್ರಾರಂಬಿಸುವಂತೆ ಪ್ರಯಾಣಿಕರು ಬಿಎಂಟಿ್ಸಿ ಸಂಸ್ಥೆ್ಗೆ ಮನವಿಯನ್ನು ಮಾಡಿದ್ದಾರೆ.

ಒಟ್ಟಾರೆ, 101 ಕಿಲೋಮಿಟರ್ ದೂರದ ಇರುವ ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಬಿಎಂಟಿಸಿಯ ಅತಿ ಉದ್ದದ ಬಸ್ ಸೇವೆ ಆಗಿದೆ, ದಿನನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಸಮಯ ಉಳಿತಾಯ ಮತ್ತು ಸುಗಮ ಪ್ರಯಾಣ ಹೊಸ ಪರಿವರ್ತನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+