Yeswanthpur-Chennai special trains: ಯಶವಂತಪುರ-ಚೆನ್ನೈ ನಡುವೆ ಬೇಸಿಗೆ ವಿಶೇಷ ರೈಲುಗಳು
ಬೆಂಗಳೂರು, ಏಪ್ರಿಲ್. 19: ಯಶವಂತಪುರ-ಚೆನ್ನೈ, ಚೆನ್ನೈ- ವೈಟ್ ಫೀಲ್ಡ್ ನಡುವೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಉಮಟಾಗಿದೆ. ಇದನ್ನು ತೆರವುಗೊಳಿಸುವ ಸಲುವಾಗಿ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
I. ಯಶವಂತಪುರ-ಚೆನ್ನೈ ನಡುವೆ ವಿಶೇಷ ರೈಲುಗಳ ಸಂಚಾರ
ಯಶವಂತಪುರ ಮತ್ತು ಡಾ.ಎಂ.ಜಿ.ಆರ್.ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ 1 ಟ್ರಿಪ್ ಮತ್ತು ಎಸ್‌ಎಂವಿಟಿ ಬೆಂಗಳೂರು-ಹೌರಾ ನಿಲ್ದಾಣಗಳ ನಡುವೆ 6 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ:

1. ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06533/06534) ರೈಲುಗಳ ಸಂಚಾರ:
ರೈಲು ಸಂಖ್ಯೆ 06533 ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 18 ರಂದು ಯಶವಂತಪುರದಿಂದ ರಾತ್ರಿ 10:45 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 04:55 ಗಂಟೆಗೆ ತನ್ನ ಗಮ್ಯಸ್ಥಾನವಾದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ.
ಪುನಃ ಇದೆ ರೈಲು (06534) ಏಪ್ರಿಲ್ 19 ರಂದು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ 06:45 ಗಂಟೆಗೆ ಹೊರಟು, ಅದೇ ದಿನ ಮಧ್ಯಾಹ್ನ 12.30 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಜೋಲಾರಪೆಟ್ಟೆ ಜಂಕ್ಷನ್, ಅರಕ್ಕೋಣಂ ಜಂಕ್ಷನ್ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ವಿಶೇಷ ರೈಲು ಎಸಿ ಫಸ್ಟ್ ಕ್ಲಾಸ್ - ಒಂದು, ಎಸಿ ಟು ಟೈಯರ್- ಎರಡು, ಎಸಿ ತ್ರಿ ಟೈಯರ್- ಆರು, ಸ್ಲೀಪರ್ ಕ್ಲಾಸ್- ಎಂಟು, ಜನರಲ್ ಸೆಕೆಂಡ್ ಕ್ಲಾಸ್-2 ಮತ್ತು ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್-2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.
2. ಎಸ್‌ಎಂವಿಟಿ ಬೆಂಗಳೂರು-ಹೌರಾ ನಿಲ್ದಾಣಗಳ ನಡುವೆ ಆರು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06585/06586) ರೈಲುಗಳ ಸಂಚಾರ:
ಏಪ್ರಿಲ್ 19, 26, ಮೇ 3, 10, 17, ಮತ್ತು 24, 2024 ರಂದು ರೈಲು ಸಂಖ್ಯೆ 06585 ಬೆಂಗಳೂರು-ಹೌರಾ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ 00:30 ಗಂಟೆಗೆ ಹೊರಟು, ಮರುದಿನ 10:00 ಗಂಟೆಗೆ ಹೌರಾ ನಿಲ್ದಾಣವನ್ನು ತಲುಪಲಿದೆ.
ಏಪ್ರಿಲ್ 20, 27, ಮತ್ತು 4, 11, 18, ಮತ್ತು 25, 2024 ರಂದು ರೈಲು ಸಂಖ್ಯೆ 06586 - ಬೆಂಗಳೂರು ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಹೌರಾ ನಿಲ್ದಾಣದಿಂದ ಮಧ್ಯಾಹ್ನ 13:05 ಗಂಟೆಗೆ ಹೊರಟು, ಮರುದಿನ ರಾತ್ರಿ 20:10 ಗಂಟೆಗೆ ತನ್ನ ಗಮ್ಯಸ್ಥಾನವಾದ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟಿ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರೋಡ, ಪಾಲಸ, ಬ್ರಹ್ಮಪುರ, ಖುರ್ದಾ ರೋಡ, ಭುವನೇಶ್ವರ, ಕಟಕ್ ಜಂಕ್ಷನ್, ಭದ್ರಾಕ್, ಬಾಲೇಶ್ವರ ಮತ್ತು ಖರಗುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ವಿಶೇಷ ರೈಲು ಎಸಿ ಟು ಟ್ರೈಯರ್-1, ಎಸಿ ತ್ರಿ ಟೈಯರ್ ಎಕನಾಮಿ -4, ಸ್ಲೀಪರ್ ಕ್ಲಾಸ್ -8, ಸೆಕೆಂಡ್ ಕ್ಲಾಸ್-4, ಸೆಕೆಂಡ್ ಲಗೇಜ್ ಕಂ ಬ್ರೇಕ್ ವ್ಯಾನ್/ದಿವ್ಯಾಂಗ ಸ್ನೇಹಿ ಬೋಗಿ-1 ಮತ್ತು ಬ್ರೇಕ್, ಲಗೇಜ್ ಮತ್ತು ಜನರೇಟರ್ ಕಾರ್-1 ಸೇರಿದಂತೆ ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತದೆ.
||. ಚೆನ್ನೈ- ವೈಟ್ ಫೀಲ್ಡ್ ನಡುವೆ ವಿಶೇಷ ರೈಲುಗಳ ಸಂಚಾರ
ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆಯು ಸೂಚಿಸಿದೆ. ಅವುಗಳ ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06005 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ವೈಟ್ ಫೀಲ್ಡ್ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 18 ಮತ್ತು 20, 2024 ರಂದು ಬೆಳಗ್ಗೆ 05:35 ಗಂಟೆಗೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಟು, ಅದೇ ದಿನ ಮಧ್ಯಾಹ್ನ 12 ಗಂಟೆಗೆ ವೈಟ್ ಫೀಲ್ಡ್ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಅರಕ್ಕೋಣಂ ಜಂಕ್ಷನ್, ವಾಲಜ್ ರೋಡ್, ಕಟಪಾಡಿ ಜಂಕ್ಷನ್, ಜೋಲಾರಪೆಟ್ಟಿ ಜಂಕ್ಷನ್, ಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06006 ವೈಟ್ ಫೀಲ್ಡ್-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 18 ಮತ್ತು 20, 2024 ರಂದು ಮಧ್ಯಾಹ್ನ 01:00 ಗಂಟೆಗೆ ವೈಟ್ ಫೀಲ್ಡ್ ನಿಲ್ದಾಣದಿಂದ ಹೊರಟು, ಅದೇ ದಿನ ಸಂಜೆ 07:00 ಗಂಟೆಗೆ ತನ್ನ ಗಮ್ಯಸ್ಥಾನವಾದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಬಂಗಾರಪೇಟೆ, ಕುಪ್ಪಂ, ಜೋಲಾರಪೆಟ್ಟಿ ಜಂಕ್ಷನ್, ಕಟಪಾಡಿ ಜಂಕ್ಷನ್, ವಾಲಜ್ ರೋಡ್, ಅರಕ್ಕೋಣಂ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
III. ಎಸ್‌ಎಂವಿಟಿ ಬೆಂಗಳೂರು ಮತ್ತು ಕಲಬುರಗಿ ನಡುವಿನ ಬೇಸಿಗೆ ವಿಶೇಷ ರೈಲು ಸೇವೆಯ ಪರಿಷ್ಕೃತ ದಿನಾಂಕ
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ 9 ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ಸಂಚರಿಸಲಿವೆ ಎಂದು ಈ ಮೊದಲು ತಿಳಿಸಲಾಗಿತ್ತು. ಈಗ, ಆ ವಿಶೇಷ ರೈಲುಗಳು ಏಳು ಟ್ರಿಪ್ ಮಾತ್ರ ಸಂಚರಿಸಲಿದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 06589 ಏಪ್ರಿಲ್ 21 ರಿಂದ ಮೇ 19, 2024 ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ರಾತ್ರಿ 11:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 09:05 ಗಂಟೆಗೆ ಕಲಬುರಗಿಯನ್ನು ತಲುಪಲಿದೆ. ಈಗ, ಈ ರೈಲು ಏಪ್ರಿಲ್ 22 ರಿಂದ ಮೇ 12, 2024 ರವರೆಗೆ 7 ಟಿಪ್ಪಳಿಗೆ ಮಾತ್ರ ಚಲಿಸುತ್ತದೆ.
ರೈಲು ಸಂಖ್ಯೆ 06590 ಏಪ್ರಿಲ್ 22 ರಿಂದ ಮೇ 20, 2024 ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಸಂಜೆ 05:10 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ ಬೆಳಿಗ್ಗೆ 04:15 ಗಂಟೆಗೆ ತನ್ನ ಗಮ್ಯಸ್ಥಾನವಾದ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ. ಈಗ, ಈ ರೈಲು ಏಪ್ರಿಲ್ 22 ರಿಂದ ಮೇ 13, 2024 ರವರೆಗೆ 7 ಟ್ರಿಪ್‌ಳಿಗೆ ಮಾತ್ರ ಚಲಿಸುತ್ತದೆ. ನಿಲುಗಡೆ, ಸೇವೆಯ ದಿನಗಳು ಮತ್ತು ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.












Click it and Unblock the Notifications