ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
ಬೆಂಗಳೂರು, ಏಪ್ರಿಲ್ 18: ದೇಶಾದ್ಯಂತ ಒಂದು ಲಕ್ಷ ಕಿಲೋ ಮೀಟರ್‌ಗೂ ಹೆಚ್ಚು ಟ್ರ್ಯಾಕ್ ಹೊಂದಿರುವ ಹೆಮ್ಮೆ ಭಾರತೀಯ ರೈಲ್ವೆ (Indian Railways 171 Year) ಭಾರತೀಯ ಜೀವನಾಡಿಯಾಗಿದೆ. ವಿಶ್ವದ ನಾಲ್ಕನೇ ದೊಡ್ಡ ಜಾಲವಾಗಿರುವ ಈ ರೈಲ್ವೆ ಇಲಾಖೆಯಿಂದ ಮೊದಲು ರೈಲು ಆರಂಭಗೊಂಡು 171 ವರ್ಷಗಳು ಉರುಳಿವೆ.
ಭಾರತದ ಎಲ್ಲ ರಾಜ್ಯಗಳ ಉದ್ದಗಲಕ್ಕೂ ರೈಲ್ವೆ ಜಾಲ ಪಸರಿಸಿದೆ. ದೇಶದ ಜನ ಸಾರಿಗೆ ಜೀವನಾಡಿ ಆಗಿರುವ ರೈಲ್ವೆ ಗುರುತಿಸಿಕೊಂಡಿದೆ. ಉಪನಗರಗಳಿಂದ ನಗರ ಸಾರಿಗೆ ಜಾಲ ಅಭಿವೃದ್ಧಿ ಆಗುತ್ತಿದೆ. 31 ಮಾರ್ಚ್ 2022ರ ವರೆಗೆ ಭಾರತೀಯ ರೈಲ್ವೆ ನೆಟ್‌ವರ್ಕ್ ಟ್ರ್ಯಾಕ್ 128,305 ಕಿ.ಮೀ (79,725 ಮೈಲಿ) ಉದ್ದವಿದೆ.

1853ರಲ್ಲಿ ಬೋರಿ ಬಂದರ್-ಥಾಣೆಗೆ ಮೊದಲ ರೈಲು
102,831 ಕಿಲೋ ಮೀಟರ್ (63,896 ಮೈಲಿ) ಚಾಲನೆಯಲ್ಲಿರುವ ಟ್ರ್ಯಾಕ್ ಉದ್ದ ಮತ್ತು 68,043 ಕಿಮೀ (42,280 ಮೈಲಿ) ಮಾರ್ಗದ ಉದ್ದವನ್ನು ವ್ಯಾಪಿಹೊಂದಿದೆ. ಭಾರತೀಯ ರೈಲ್ವೇಯು 1853 ರ ಏಪ್ರಿಲ್ 16 ರಂದು ಬೋರಿ ಬಂದರ್‌ನಿಂದ ಥಾಣೆಗೆ 34 ಕಿಮೀ ದೂರವನ್ನು ಒಳಗೊಂಡ ಮೊದಲ ಪ್ಯಾಸೆಂಜರ್ ರೈಲು ಪ್ರಯಾಣಿಸಿತು. ಈ ಕುರಿತು ಸೆಂಟ್ರಲ್ ರೈಲು ಟ್ವೀಟ್ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ.
ಭಾರತೀಯ ರೈಲು ಸಾರಿಗೆ ದಿನ
2024 ರ ಏಪ್ರಿಲ್ 16ವರೆಗಿನ ಒಂದೂವರೆ ಶತಮಾನದಿಂದ ದೀರ್ಘ ಸೇವೆ ನೀಡುತ್ತಾರೆ ಬಂದಿದೆ. ಈ ಮೊದಲ ಪ್ಯಾಸೆಂಜರ್ ರೈಲನ್ನು ಸಾಹಿಬ್, ಸುಲ್ತಾನ್ ಮತ್ತು ಸಿಂಧ್ ಎಂಬ ಮೂರು ಇಂಜಿನ್‌ಗಳು ನಿರ್ವಹಿಸಿದ್ದವು. ಒಟ್ಟು ಹದಿಮೂರು ಬೋಗಿಗಳ ಈ ರೈಲು ಸಂಚರಿಸಿದ ಈ ದಿನವನ್ನು 'ಭಾರತೀಯ ರೈಲು ಸಾರಿಗೆ ದಿನ'ವೆಂದು ಗುರುತಿಸಲಾಗಿದೆ.
ಭಾರತೀಯ ರೈಲ್ವೆಯ ಪ್ರಕಾರ ಮೊದಲ ರೈಲಿನ ಚಾಲನೆಗೆ 1853 ಏಪ್ರಿಲ್ 16 ರಂದು ಅಧಿಕೃತ ಚಾಲನೆ ನೀಡಲಾಯಿತು. ಸುಮಾರು 400 ಅತಿಥಿಗಳನ್ನು ಹೊತ್ತ ರೈಲು ಬೋರಿ ಬಂದರ್‌ನಿಂದ ಮಧ್ಯಾಹ್ನ 3.30 ಗಂಟೆಗೆ ಪ್ರಯಾಣ ಆರಂಭಿಸಿತು. ಬೃಹತ್ ಜನ ಸಮೂಹದ ಚಪ್ಪಾಳೆ, 21 ಬಂದೂಕುಗಳ ವಂದನಾ ಘರ್ಜನೆ ಮಧ್ಯೆ ರೈಲು ಪ್ರಯಾಣಿಸಿತು.

ಸೆಂಟ್ರಲ್ ರೈಲ್ವೆ ಪೋಸ್ಟ್‌ನಲ್ಲಿ ಏನಿದೆ?
ಟ್ವೀಟ್‌ನಲ್ಲಿ ಸೆಂಟ್ರಲ್ ರೈಲ್ವೆ ಈ ಬಗ್ಗೆ ಪೋಸ್ಟ್ ಮಾಡಿದೆ. ಅದರಲ್ಲಿ ''1853 ರಲ್ಲಿ, ಇಂದಿಗೆ ಸರಿಯಾಗಿ 171 ವರ್ಷಗಳ ಹಿಂದೆ, ಬೋರಿ ಬಂದರ್‌ನಿಂದ ಥಾಣೆಗೆ ಮೊದಲ ರೈಲಿನ ಉದ್ಘಾಟನೆ ಆಗಿತ್ತು. ಮೊದಲ ರೈಲಿನ ಪ್ರಯಾಣ ವಿಜೃಂಭಣೆಯಿಂದ ಸಾಗಿತು. ಇದರೊಂದಿಗೆ ಭಾರತವು ಸಾರಿಗೆ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಮಾಡಿತು. ಈ ಪ್ರಮುಖ ಕ್ಷಣವು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸಂಪರ್ಕದ ಹೊಸ ಯುಗಕ್ಕೆ ನಾಂದಿ ಹಾಡಿತು'' ಎಂದು ಸೆಂಟ್ರಲ್ ರೈಲ್ವೆ ಬರೆದುಕೊಂಡಿದೆ.
ಇನ್ನೂ ಸೆಂಟ್ರಲ್ ರೈಲ್ವೆ ಪೋಸ್ಟ್ ಮಾಡಿರುವ ರೈಲು, ಭಾರತದಲ್ಲಿ ರೈಲ್ವೇಯ ಆರಂಭಿಕ ದಿನಗಳ ದೃಶ್ಯವನ್ನು ಸಾರಿ ಹೇಳುತ್ತದೆ. ಪ್ರಪಂಚದಲ್ಲೇ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿ, ಅತೀ ದೊಡ್ಡ ಉದ್ಯೋಗ ಸಮೂಹ ಹೊಂದಿರುವ ರೈಲ್ವೆಯು ನಿತ್ಯ 2.3 ಕೋಟಿಗೂ ಹೆಚ್ಚು ರೈಲ್ವೆ ಪ್ರಯಾಣಿಕರಿಗೆ ಸೇವೆ ನೀಡುತ್ತಿದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ಕಲ್ಲಿದ್ದಲಿನ ಉಗಿ ಬಂಡಿಯಿಂದ ಹಿಡಿದು ಇಂದಿನ ಬುಲೆಟ್ ರೈಲಿನ ವರೆಗೆ ಭಾರತೀಯ ರೈಲ್ವೆ ಕ್ರಮೇಣ ಅಭಿವೃದ್ಧಿ ಆಗುತ್ತಾ ಬಂದಿದೆ. ಇತ್ತೀಚೀನ ದಿನಗಳಲ್ಲಿ ಭಾರತದಲ್ಲಿ ನೂರಕ್ಕು ಹೆಚ್ಚು ವಂದೇ ಭಾರತ್ ರೈಲು ಸೇವೆ ನೀಡುತ್ತಿವೆ. ಇವುಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬುಲೆಟ್ ರೈಲನ್ನು ಸಹ ಭಾರತದಲ್ಲಿ ನಿರ್ಮಸುವುದಾಗಿ, ಕಾರಿಡಾರ್‌ಗಳ ಮಾಹಿತಿಯನ್ನು ಖದ್ದು ಪ್ರಧಾನಿಯವರೇ ತಿಳಿಸಿದ್ದಾರೆ.












Click it and Unblock the Notifications