Bengaluru-Kalaburagi weekly Train: ಖುಷಿ ಸುದ್ದಿ.. ಬೆಂಗಳೂರು-ಕಲಬುರಗಿ ನಡುವೆ ಮೂರು ದಿನ ಓಡಲಿದೆ ಎಕ್ಸ್‌ಪ್ರೆಸ್
ಕಲಬುರಗಿ, ಏಪ್ರಿಲ್. 17: ಕಲಬುರಗಿ ಬೆಂಗಳೂರು ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ ಸಿಕ್ಕಿದೆ. ಇನ್ನು ಮುಂದೆ ಕಲಬುರಗಿ ಬೆಂಗಳೂರು ಸಾಪ್ತಾಹಿಕ ವಿಶೇಷ ರೈಲು ಸಂಖ್ಯೆ ವಾರಕ್ಕೆ ಮೂರು ದಿನ ಸಂಚರಿಸಲಿದೆ. ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಭಾರತೀಯ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ.
ರೈಲು ಸಂಖ್ಯೆ 06589 / 06590 ಎಸ್‌ಎಂವಿಟಿ ಬೆಂಗಳೂರು - ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ವಿಶೇಷ ಸಾಪ್ತಾಹಿಕ ಎಕ್ಸ್‌ಪ್ರೆಸ್ ಇನ್ನು ಮುಂದೆ ಮೂರು ದಿನ ಸೇವೆ ನೀಡಲಿದೆ (9 ಟ್ರಿಪ್). ಇದು ಈ ಕಲಬುರಗಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ರಾತ್ರಿ ರೈಲು ಬೇಕು ಎಂಬ ಪ್ರಯಾಣಿಕರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿಸಿದೆ.

ರೈಲು ಸಂಖ್ಯೆ 06589 ಏಪ್ರಿಲ್ 21 ರಿಂದ ಮೇ 19, 2024 ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರದಂದು 23:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಮರುದಿನ ಬೆಳಗ್ಗೆ 09:05 ಗಂಟೆಗೆ ಕಲಬುರಗಿಗೆ ಆಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06590 ಕಲಬುರಗಿಯಿಂದ ಪ್ರತಿ ಸೋಮವಾರ ಮತ್ತು ಬುಧವಾರದಂದು ಏಪ್ರಿಲ್ 22 ರಿಂದ ಮೇ 20, 2024 ರವರೆಗೆ 17:10 ಗಂಟೆಗೆ ಹೊರಟು, ಮರುದಿನ 04:15 ಗಂಟೆಗೆ ಎಸ್‌ಎಂವಿಟಿ ( ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್) ಬೆಂಗಳೂರಿಗೆ ಆಗಮಿಸುತ್ತದೆ.
ಮಾರ್ಗದಲ್ಲಿ, ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಯಲಹಂಕ, ಧರ್ಮಾವರಂ ಜಂಕ್ಷನ್, ಅನಂತಪುರ, ಗುಂತಕಲ್ ಜಂಕ್ಷನ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಕಲ್ಬುರ್ಗಿ ಬೆಂಗಳೂರು ಸಪ್ತಾಹಿಕ ವಿಶೇಷ ರೈಲು, ಈಗ ವಾರಕ್ಕೆ ಮೂರು ದಿನ ನಡೆಸಲು ರೈಲ್ವೆ ಇಲಾಖೆ ಒಪ್ಪಿಗೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ. #ModiKiGuarantee #modihaithomukinhai #DrUmeshJadhav #KalaburagiBangaloreTrain pic.twitter.com/Es2jzGCHKU
— Dr. Umesh G Jadhav MP (Modi Ka Parivar) (@UmeshJadhav_BJP) April 16, 2024
ವಿಶೇಷ ರೈಲುಗಳು ಎಸಿ ಫಸ್ಟ್ ಕ್ಲಾಸ್ ಕಮ್ ಸೆಕೆಂಡ್ ಕ್ಲಾಸ್-1, ಎಸಿ-2 ಟೈರ್-1, ಎಸಿ-3 ಟೈರ್-4, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-2, ಸೆಕೆಂಡ್ ಲಗೇಜ್ ಕಮ್ ಸೇರಿದಂತೆ ಒಟ್ಟು 20 ಕೋಚ್‌ಗಳನ್ನು ಒಳಗೊಂಡಿರುತ್ತವೆ. ಬ್ರೇಕ್ ವ್ಯಾನ್‌ಗಳು/ಅಂಗವಿಕಲ ಕೋಚ್-2 ಇರಲಿವೆ.
ಪ್ರಧಾನಿಗೆ ಧನ್ಯವಾದ ಹೇಳಿದ ಸಂಸದ ಉಮೇಶ್ ಜಿ ಜಾಧವ್
"ಕಲಬುರಗಿ ಬೆಂಗಳೂರು ಸಾಪ್ತಾಹಿಕ ವಿಶೇಷ ರೈಲು ಸಂಖ್ಯೆ 06589 / 06590 ವಾರಕ್ಕೆ ಮೂರು ದಿನ ಸಂಚರಿಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. SMVB KLBG - ಶುಕ್ರವಾರ, ಭಾನುವಾರ & ಮಂಗಳವಾರ ಇದೇ ಭಾನುವಾರ ದಿನಾಂಕ 21.04.24 ರಂದು ಪ್ರಾರಂಭವಾಗಲಿದೆ. KLBG SMVB - ಶನಿವಾರ, ಸೋಮವಾರ ಮತ್ತು ಬುಧವಾರ ಸಂಚರಿಸಲಿದೆ. ಈ ರೈಲು ಪ್ರಾರಂಭ ವಾದ ದಿನದಿಂದ ವಾರಕ್ಕೆ ಮೂರು ದಿನ ಓಡಿಸಲು ನಾನು ಮಾತು ಕೊಟ್ಟಿದ್ದೆ ಅದರಂತೆ ಇಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದ್ದು ಕೇಂದ್ರ ರೈಲ್ವೇ ಸಚಿವರು ಹಾಗೂ ಪ್ರಧಾನಿಯವರಿಗೆ ತುಂಬು ಹೃದಯದ ಧನ್ಯವಾದಗಳು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಇನ್ನು, ತಾವು ಕಲಬುರಗಿ- ಬೆಂಗಳೂರು ಸಾಪ್ತಾಹಿಕ ರೈಲಿಗಾಗಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವ ಸಂಸದ ಉಮೇಶ್ ಜಾಧವ್, "ಕಲಬುರಗಿ ಬೆಂಗಳೂರು ಸಾಪ್ತಾಹಿಕ ವಿಶೇಷ ರೈಲು, ಈಗ ವಾರಕ್ಕೆ ಮೂರು ದಿನ ನಡೆಸಲು ರೈಲ್ವೆ ಇಲಾಖೆ ಒಪ್ಪಿಗೆ. ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.












Click it and Unblock the Notifications