ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಿಂದ ಬೆಂಗಳೂರಿಗೆ ಬಂತು ಮೊದಲ ಪ್ರಯಾಣಿಕ ರೈಲು

|
Google Oneindia Kannada News

ಬೆಂಗಳೂರು, ಮೇ 14 : ನವದೆಹಲಿಯಿಂದ ಬೆಂಗಳೂರಿಗೆ ಮೊದಲ ಪ್ರಯಾಣಿಕ ರೈಲು ಆಗಮಿಸಿದೆ. 55 ದಿನಗಳ ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ದೆಹಲಿಯಿಂದ ಆಗಮಿಸಿದರು.

ಮಂಗಳವಾರ ರಾತ್ರಿ 9.15ಕ್ಕೆ ನವದೆಹಲಿಯಿಂದ ಹೊರಟಿದ್ದ ಎಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಮೂರನೇ ದಿನ ಬೆಂಗಳೂರಿಗೆ ಆಗಮಿಸಿದೆ. ಮಂಗಳವಾರದಿಂದ ಪ್ರತಿದಿನ ದೆಹಲಿ- ಬೆಂಗಳೂರು ನಡುವೆ ರೈಲು ಸಂಚಾರ ಆರಂಭವಾಗಿದೆ.

ಬೆಂಗಳೂರು-ದೆಹಲಿ ಪ್ರತಿದಿನದ ರೈಲು; ವೇಳಾಪಟ್ಟಿ, ನಿಲ್ದಾಣಗಳು ಬೆಂಗಳೂರು-ದೆಹಲಿ ಪ್ರತಿದಿನದ ರೈಲು; ವೇಳಾಪಟ್ಟಿ, ನಿಲ್ದಾಣಗಳು

ನೈಋತ್ಯ ರೈಲ್ವೆ ಪ್ರಯಾಣಿಕರನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿತ್ತು. ರೈಲು ಬರುತ್ತಿದ್ದಂತೆ ಎಲ್ಲರನ್ನೂ ಇಳಿಸಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಆರೋಗ್ಯ ತಪಾಸಣೆ ಮಾಡದೇ ಯಾರನ್ನೂ ಸಹ ರೈಲು ನಿಲ್ದಾಣದಿಂದ ಹೊರ ಬಿಡುತ್ತಿಲ್ಲ.

ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್! ಬೆಂಗಳೂರು-ದೆಹಲಿ ರೈಲಿನ ಟಿಕೆಟ್ ಅರ್ಧಗಂಟೆಯಲ್ಲಿ ಸೋಲ್ಡ್‌ ಔಟ್!

ಬೆಂಗಳೂರು ನಗರದಿಂದ ಪ್ರತಿದಿನ ರಾತ್ರಿ 8.30ಕ್ಕೆ ನವದೆಹಲಿಗೆ ರೈಲು ಸಂಚಾರ ನಡೆಸಲಿದೆ. ಲಾಕ್ ಡೌನ್ ಪರಿಣಾಮ ಪ್ರಯಾಣಿಕ ರೈಲು ಸಂಚಾರ ರದ್ದುಗೊಳಿಸಿದ ಮೇಲೆ ಇದೇ ಮೊದಲ ರೈಲು ದೆಹಲಿ-ಬೆಂಗಳೂರು ನಡುವೆ ಸಂಚಾರ ನಡೆಸಿದೆ.

ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು ರೈಲು ಸೇವೆ ಆರಂಭ; ಪ್ರಯಾಣಿಕರಿಗೆ ಮಾರ್ಗಸೂಚಿಗಳು

ಥರ್ಮಲ್ ಸ್ಕ್ಯಾನಿಂಗ್

ಥರ್ಮಲ್ ಸ್ಕ್ಯಾನಿಂಗ್

ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಅನ್ವಯ ರೈಲು ಹತ್ತುವ ಮತ್ತು ಇಳಿದ ಮೇಲೆ ಎಲ್ಲಾ ಪ್ರಯಾಣಿಕರಿಗೂ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಬೇಕು. ನೈಋತ್ಯ ರೈಲ್ವೆ ಥರ್ಮಲ್ ಸ್ಕ್ಯಾನಿಂಗ್ ಮಾಡಲು ನಿಲ್ದಾಣದಲ್ಲಿ ಹಲವಾರು ಕೌಂಟರ್‌ಗಳನ್ನು ಮಾಡಿದೆ.

1076 ಜನರ ಪ್ರಯಾಣ

1076 ಜನರ ಪ್ರಯಾಣ

ನವದೆಹಲಿ-ಬೆಂಗಳೂರು ನಡುವಿನ ಎಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ 1076 ಜನರು ಸಂಚಾರ ನಡೆಸಬಹುದಾಗಿದೆ. ಸೋಮವಾರ ಟಿಕೆಟ್ ಬುಕ್ಕಿಂಗ್ ಆರಂಭಿಸಿದ ಅರ್ಧಗಂಟೆಯಲ್ಲಿ ಮೊದಲ ರೈಲಿನ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿತ್ತು.

ಎಲ್ಲೆಲ್ಲಿ ರೈಲು ನಿಲುಗಡೆ?

ಎಲ್ಲೆಲ್ಲಿ ರೈಲು ನಿಲುಗಡೆ?

ನವದೆಹಲಿ-ಬೆಂಗಳೂರು ಮಾರ್ಗದ ಎಸಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಅನಂತಪುರ, ಗುಂತಕಲ್ ಜಂಕ್ಷನ್, ಸಿಕಂದರಾಬಾದ್, ನಾಗ್ಪುರ, ಭೋಪಾಲ್ ಮತ್ತು ಝಾನ್ಸಿಯಲ್ಲಿ ನಿಲುಗಡೆಗೊಳ್ಳಲಿದೆ.

ವೇಳಾಪಟ್ಟಿ

ವೇಳಾಪಟ್ಟಿ

* ಬೆಂಗಳೂರು ನಗರದಿಂದ ಪ್ರತಿದಿನ ರಾತ್ರಿ 8.30ಕ್ಕೆ ರೈಲು ಹೊರಡಲಿದೆ. ಮೂರನೇ ದಿನ ಬೆಳಗ್ಗೆ 5.55ಕ್ಕೆ ನವದೆಹಲಿಯನ್ನು ತಲುಪುತ್ತದೆ.

* ನವದೆಹಲಿಯಿಂದ ಪ್ರತಿದಿನ ರಾತ್ರಿ 9.15ಕ್ಕೆ ರೈಲು ಹೊಡಲಿದ್ದು, ಮೂರನೇ ದಿನ ಬೆಳಗ್ಗೆ 6.40ಕ್ಕೆ ಬೆಂಗಳೂರನ್ನು ತಲುಪಲಿದೆ.

English summary
Passenger train from Delhi arrived at Bengaluru City railway station on May 14 morning. All the passengers were screened after they reached the station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X