ಯಶ್, ಎನ್‌ಟಿಆರ್ ಬಳಿಕ ಮತ್ತೊಬ್ಬ ಬಿಗ್ ಸ್ಟಾರ್‌ಗೆ ಜೋಡಿಯಾದ ರುಕ್ಮಿಣಿ ವಸಂತ್, ಸೌತ್ ಸಿನಿರಂಗದಲ್ಲಿ ಕನ್ನಡತಿ ಹವಾ
"ಸಪ್ತ ಸಾಗರದಾಚೆ ಎಲ್ಲೋ" ಚಿತ್ರದ ಮೂಲಕ ಇಡೀ ದಕ್ಷಿಣ ಭಾರತದ ಗಮನ ಸೆಳೆದಿದ್ದ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಕೈಗೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಕಾಲಿವುಡ್‌ನ ಸ್ಟಾರ್ ನಟ ಸೂರ್ಯ ಅವರ ಮುಂಬರುವ ಹೊಸ ಚಿತ್ರಕ್ಕೆ ರುಕ್ಮಿಣಿ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದ ಮೂಲಕ ಸದ್ದು ಮಾಡಿದ್ದ ಈ ನಟಿ, ಈಗ ತಮಿಳು ಚಿತ್ರರಂಗದ ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಸೌತ್ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿಯೂ ರುಕ್ಮಿಣಿ ಈಗ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಕೆವಿಎನ್ ಬ್ಯಾನರ್‌ನಿಂದ ಹೊಸ
ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಈ ಬಿಗ್ ಬಜೆಟ್ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ನಿರ್ಮಿಸುತ್ತಿದೆ. ತಮಿಳುನಾಡಿನ ರಾಜಕೀಯ ನಾಯಕ ಹಾಗೂ ನಟ ವಿಜಯ್ ಅವರ ಕೊನೆಯ "ಜನ ನಾಯಗನ್" ಸಿನಿಮಾ ನಿರ್ಮಿಸುತ್ತಿರುವ ಇದೇ ಸಂಸ್ಥೆ, ಈಗ ಸೂರ್ಯ ಅವರ ಮುಂದಿನ ಚಿತ್ರಕ್ಕೂ ಬಂಡವಾಳ ಹೂಡುತ್ತಿರುವುದು ವಿಶೇಷ. ಇದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಆಗಿದೆ.

ಸೂರ್ಯ ಅವರ ಕೆರಿಯರ್‌ನ ಮೈಲಿಗಲ್ಲಿನ ಸಿನಿಮಾ
ನಟ ಸೂರ್ಯ ಅವರಿಗೆ ಇದು ಪ್ರಮುಖ ಚಿತ್ರವಾಗಿದ್ದು, ಅವರ ಇಡೀ ಕೆರಿಯರ್‌ನಲ್ಲೇ ಅತ್ಯಂತ ಪ್ರತಿಷ್ಠಿತ ಸಿನಿಮಾವಾಗಿ ಮೂಡಿಬರಲಿದೆ. ಈ ಮೈಲಿಗಲ್ಲಿನ ಚಿತ್ರಕ್ಕಾಗಿ ನಿರ್ದೇಶಕರು ವಿಭಿನ್ನವಾದ ಕಥಾಹಂದರವನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸೂರ್ಯ ಅವರಿಗೆ '24' ನಂತಹ ಸೈನ್ಸ್ ಫಿಕ್ಷನ್ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ವಿಕ್ರಮ್ ಕುಮಾರ್ ಅವರೇ ಈ ಹೊಸ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಈ ಯಶಸ್ವಿ ಜೋಡಿಯ ಕಮರ್ಷಿಯಲ್ ಸಕ್ಸಸ್ ಮೇಲೆ ಚಿತ್ರರಂಗಕ್ಕೆ ದೊಡ್ಡ ಭರವಸೆ ಮೂಡಿದೆ.
ಬಾಲಿವುಡ್ ವಿಲನ್ ಮತ್ತು ರೆಹಮಾನ್ ಮ್ಯೂಸಿಕ್
ಚಿತ್ರದ ತಾಂತ್ರಿಕ ಹಾಗೂ ತಾರಾಗಣದ ಲಿಸ್ಟ್ ತೀರಾ ದೊಡ್ಡದಿದೆ. ಬಾಲಿವುಡ್‌ನ ಪವರ್‌ಫುಲ್ ನಟ ಅಕ್ಷಯ್ ಖನ್ನಾ ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರು ಟ್ಯೂನ್ ಹಾಕಲಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಶೀರ್ಷಿಕೆ ಮತ್ತು ಶೂಟಿಂಗ್ ಆರಂಭದ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ. ಕನ್ನಡದ ನಟಿ ರುಕ್ಮಿಣಿ ವಸಂತ್ ಸಾಲು ಸಾಲು ಪರಭಾಷಾ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಸ್ಟಾರ್ ನಟಿಯರ ಸಾಲಿಗೆ ಸೇರುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಹಾಗೆಯೇ, ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರ್ಯಾಗನ್' ಚಿತ್ರದಲ್ಲೂ ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ರುಕ್ಮಿಣಿ ವಸಂತ್ ಅವರು ರಿಷಬ್ ಶೆಟ್ಟಿ ಅವರ 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಇದರೊಂದಿಗೆ ಶಿವರಾಜ್‌ಕುಮಾರ್ ಅಭಿನಯದ ಸೂಪರ್ ಹಿಟ್ 'ಭೈರತಿ ರಣಗಲ್' ಚಿತ್ರದಲ್ಲೂ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.













Click it and Unblock the Notifications