Monthly Horoscope: ಐದು ರಾಶಿಯವರಿಗೆ ಜೂನ್ ತಿಂಗಳು ಅದೃಷ್ಟ, ಹರಿದು ಬರುವುದು ಸಿರಿ ಸಂಪತ್ತು, ಕೆಲಸದಲ್ಲಿ ಯಶಸ್ಸು
ಗ್ರಹಗಳ ನಕ್ಷತ್ರ ಮತ್ತು ರಾಶಿ ಬದಲಾವಣೆಗಳಿಂದಾಗಿ ಜೂನ್ ತಿಂಗಳು ಬಹಳ ವಿಶೇಷವಾಗಿರಲಿದೆ. ಜೂನ್ 2026 ರಲ್ಲಿ, ಸೂರ್ಯ, ಶುಕ್ರ, ಮಂಗಳ, ಬುಧ ಮತ್ತು ಗುರು ಗ್ರಹಗಳ ಸಂಚಾರ ಪ್ರಮುಖವಾಗಿರುತ್ತದೆ. ಇದು ಕೆಲವು ರಾಶಿಯವರಿಗೆ ಫಲಪ್ರದವಾಗಿರುತ್ತದೆ.ಇನ್ನು ಕೆಲವತಿಗೆ ಕಷ್ಟವನ್ನು ಹೊತ್ತು ತರಬಹುದು. ದ್ವಾದಶ ರಾಶಿಗಳ ಮೇಲೆ ಜೂನ್ ತಿಂಗಳ ಭವಿಷ್ಯ ಯಾವ ರೀತಿ ಪರಿಣಾಮ ಬೀರಲಿದೆ ನೋಡೋಣ.

ಮೇಷ ರಾಶಿ:
ಜೂನ್ ತಿಂಗಳಲ್ಲಿ ವೃತ್ತಿ ಪ್ರಗತಿಗೆ ಉತ್ತಮ ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕ ಲಾಭದ ಸಾಧ್ಯತೆಯಿದೆ. ಸಿಲುಕಿಕೊಂಡಿರುವ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಪ್ರೇಮ ಜೀವನವು ಸಿಹಿಯಾಗಿರುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಷಭ ರಾಶಿ:
ಜೂನ್ ತಿಂಗಳಲ್ಲಿ ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ. ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿ ಇರುತ್ತದೆ. ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಣಕಾಸು ಯೋಜನೆ ಅಗತ್ಯ. ಕುಟುಂಬ ಜೀವನ ಸಂತೋಷದಿಂದ ಇರುತ್ತದೆ.

ಮಿಥುನ ರಾಶಿ:
ಜೂನ್ ತಿಂಗಳು ಮಿಥುನ ರಾಶಿಯವರಿಗೆ ರೋಮಾಂಚಕಾರಿಯಾಗಿರುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಮಯ ಅನುಕೂಲಕರವಾಗಿರುತ್ತದೆ. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಪ್ರಗತಿ ಇರುತ್ತದೆ.

ಕರ್ಕಾಟಕ ರಾಶಿ:
ಈ ತಿಂಗಳು ಕರ್ಕಾಟಕ ರಾಶಿಯವರ ಕೆಲಸದ ಹೊರೆ ಹೆಚ್ಚಾಗಬಹುದು. ಆದರೆ ಕಠಿಣ ಪರಿಶ್ರಮದಿಂದ ಉತ್ತಮ ಫಲ ಸಿಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಜೂನ್ ತಿಂಗಳು ಯಶಸ್ಸು ಮತ್ತು ಗೌರವವನ್ನು ತರುತ್ತದೆ. ಕೆಲಸದಲ್ಲಿ ಬಡ್ತಿ ಅಥವಾ ಹೊಸ ಅವಕಾಶವನ್ನು ಪಡೆಯಬಹುದು. ವ್ಯವಹಾರದಲ್ಲಿ ಲಾಭವಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಪ್ರೇಮ ಜೀವನವು ಸಂತೋಷವಾಗಿರುತ್ತದೆ.

ಕನ್ಯಾರಾಶಿ:
ಕನ್ಯಾ ರಾಶಿಯವರು ಈ ತಿಂಗಳು ಕೆಲಸದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಬಾಕಿ ಇರುವ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ. ಸಂಬಂಧಗಳ ವಿಷಯದಲ್ಲಿ ತಾಳ್ಮೆಯಿಂದಿರಿ. ವಿದ್ಯಾರ್ಥಿಗಳಿಗೆ ಇದು ಕಠಿಣ ಪರಿಶ್ರಮದ ಸಮಯವಾಗಿರುತ್ತದೆ.

ತುಲಾ ರಾಶಿ:
ಜೂನ್ ತಿಂಗಳು ತುಲಾ ರಾಶಿಯವರಿಗೆ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ವೃತ್ತಿ ಪ್ರಗತಿಗೆ ಅವಕಾಶಗಳು ದೊರೆಯುತ್ತವೆ. ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಪ್ರೇಮ ಜೀವನವು ಸಿಹಿಯಾಗಿರುತ್ತದೆ. ಆರ್ಥಿಕ ಲಾಭವಾಗುವ ಸೂಚನೆಗಳಿವೆ. ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಂದ ಬೆಂಬಲ ಸಿಗುತ್ತದೆ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ಕೆಲಸದಲ್ಲಿ ನಿಮ್ಮ ನಿರ್ಧಾರಗಳು ಪರಿಣಾಮಕಾರಿಯಾಗಿರುತ್ತವೆ.ಆರ್ಥಿಕ ಲಾಭವಾಗುವುದು. ಹಳೆಯ ಹೂಡಿಕೆಗಳಿಂದ ಲಾಭವಾಗುವುದು.ಆರೋಗ್ಯವು ಉತ್ತಮವಾಗಿರುವುದು.

ಧನು ರಾಶಿ:
ಧನು ರಾಶಿಯವರಿಗೆ ಜೂನ್ ತಿಂಗಳು ಅದೃಷ್ಟದಾಯಕವಾಗಿರಬಹುದು. ವಿದೇಶಿ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು ಸಿಗುವುದು. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ. ಪ್ರೇಮ ಜೀವನ ಸಂತೋಷದಿಂದ ಕೂಡಿರುತ್ತದೆ.

ಮಕರ ರಾಶಿ:
ಈ ತಿಂಗಳು ಮಕರ ರಾಶಿಯವರು ತಾಳ್ಮೆಯಿಂದ ಇರಬೇಕು.ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು. ಆದರೆ ಪ್ರಯತ್ನ ಬಿಡಬೇಡಿ. ಹಣಕಾಸಿನ ವಹಿವಾಟುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಮುಖ್ಯ.

ಕುಂಭ ರಾಶಿ:
ಜೂನ್ ತಿಂಗಳು ಕುಂಭ ರಾಶಿಯವರಿಗೆ ಹೊಸ ಅವಕಾಶಗಳನ್ನು ತರುತ್ತದೆ. ವ್ಯವಹಾರದಲ್ಲಿ ವಿಸ್ತರಣೆಯ ಸಾಧ್ಯತೆಗಳಿವೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕ ಲಾಭದ ಸೂಚನೆಗಳಿವೆ. ಸ್ನೇಹಿತರ ಸಹಾಯದಿಂದ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ಪ್ರೇಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಮೀನ ರಾಶಿ:
ಮೀನ ರಾಶಿಯವರಿಗೆ ಜೂನ್ ತಿಂಗಳು ಪ್ರಯೋಜನಕಾರಿಯಾಗಲಿದೆ. ವೃತ್ತಿಜೀವನದಲ್ಲಿ ಪ್ರಗತಿ ಕಂಡುಬರುತ್ತದೆ.ಕಠಿಣ ಪರಿಶ್ರಮವು ಫಲ ನೀಡುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬ ವಾತಾವರಣವು ಸಂತೋಷವಾಗಿರುತ್ತದೆ. ಆಧ್ಯಾತ್ಮಿಕ ವಿಷಯಗಳ ಕಡೆಗೆ ಆಕರ್ಷಣೆ ಹೆಚ್ಚಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications