ಒಟ್ಟಿಗೆ ಎರದು ಗ್ರಹಗಳ ಸಂಚಾರ: ನಾಲ್ಕು ರಾಶಿಯವರಿಗೆ ಅದೃಷ್ಟ, ದುಪ್ಪಟ್ಟಾಗುವುದು ಸಂಪತ್ತು, ಸಾಲಗಳಿಂದ ಮುಕ್ತಿ
ಜ್ಯೋತಿಷ್ಯದಲ್ಲಿ ಬುಧ ಮತ್ತು ಶುಕ್ರ ಬಹಳ ಮುಖ್ಯವಾದ ಗ್ರಹಗಳು. ಈ ಎರಡೂ ಗ್ರಹಗಳು ಒಂದೇ ದಿನ ಸಂಕ್ರಮಣ ನಡೆಸುತ್ತವೆ. ಜೂನ್ 11 ರಂದು ಬೆಳಿಗ್ಗೆ 11.30 ಕ್ಕೆ ಬುಧ ಪುನರ್ವಸು ನಕ್ಷತ್ರದಲ್ಲಿ ಮತ್ತು ಬುಧವಾರ ಮಧ್ಯಾಹ್ನ 2.11 ಕ್ಕೆ ಶುಕ್ರ ಪುಷ ನಕ್ಷತ್ರದಲ್ಲಿ ಸಂಕ್ರಮಣ ನಡೆಸಲಿದ್ದಾರೆ. ಬುಧ ಜೂನ್ 23 ರವರೆಗೆ ಇದೇ ನಕ್ಷತ್ರದಲ್ಲಿದ್ದರೆ ಶುಕ್ರ ಆಗಸ್ಟ್ 8 ರವರೆಗೆ ಪುನರ್ವಸು ನಕ್ಷತ್ರದಲ್ಲಿಯೇ ಇರಲಿದ್ದಾನೆ.ಯಾವುದೇ ನಕ್ಷತ್ರದಲ್ಲಿ ಅಥವಾ ರಾಶಿಯಲ್ಲಿ ಗ್ರಹಗಳ ಸಂಯೋಗವಾದಾಗ ಅದು ಎಲ್ಲಾ ರಾಶಿಯವರ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಕೆಲವು ರಾಶಿಯವರಿಗೆ ಅದೃಷ್ಟ ತಂದರೆ ಇನ್ನು ಕೆಲವು ರಾಶಿಯವರಿಗೆ ಅಶುಭ ಫಲಗಳನ್ನೇ ನೀಡಬಹುದು.
ಜ್ಯೋತಿಷ್ಯದ ಪ್ರಕಾರ, ಬುಧ ಮತ್ತು ಶುಕ್ರ ಸಂಯೋಗವು ಬುದ್ಧಿವಂತಿಕೆ ಮತ್ತು ಸೌಕರ್ಯಗಳನ್ನು ಸೂಚಿಸುವ ಶುಭ ಯೋಗವನ್ನು ನೀಡುತ್ತದೆ. ಆದರೆ, ಜಾತಕದಲ್ಲಿ ಈ ಗ್ರಹಗಳ ಸ್ಥಾನವನ್ನು ಆಧರಿಸಿ ಮತ್ತು ಇತರ ಗ್ರಹಗಳ ಪ್ರಭಾವದಿಂದಾಗಿ ಕೆಲವು ನಿರ್ದಿಷ್ಟ ರಾಶಿಯವರಿಗೆ ಅಶುಭ ಫಲಗಳು ಎದುರಾಗಬಹುದು.
ಒಂದೇ ದಿನ ಎರಡು ಗ್ರಹಗಳ ಸಂಚಾರದಿಂದ ಯಾವ ರಾಶಿಯವರಿಗೆ ಅದೃಷ್ಟ :

ವೃಷಭ ರಾಶಿ - ಬುಧ ಮತ್ತು ಶುಕ್ರ ಸಂಚಾರ ವೃಷಭ ರಾಶಿಯವರಿಗೆ ಶುಭ ಫಲಿತಾಂಶ ನೀಡುತ್ತದೆ. ಎದುರಿಸುತ್ತಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ. ಒಡಹುಟ್ಟಿದವರಿಂದ ಸಹಾಯ ಸಿಗುವುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ.ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಹೊಸ ಜವಾಬ್ದಾರಿಗಳು ಹೆಗಲೇರುವುದು. ಆದಾಯ ಹೆಚ್ಚಾಗಬಹುದು.ಅಲ್ಲದೆ, ಹೊಸ ವ್ಯವಹಾರವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ಸಿಂಹ ರಾಶಿ - ಬುಧ ಮತ್ತು ಶುಕ್ರನ ಸಂಚಾರದಿಂದಾಗಿ, ಸಿಂಹ ರಾಶಿಯವರಿಗೆ ಲಾಭವಾಗುವುದು.ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಅವಕಾಶವಿರುತ್ತದೆ. ವಿವಾಹಕ್ಕೆ ಎದುರಾಗಿರುವ ಅಡೆತಡೆಗಳು ದೂರವಾಗುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು.

ಕನ್ಯಾ ರಾಶಿ - ಕನ್ಯಾ ರಾಶಿಯವರ ಅದೃಷ್ಟ ಹೆಚ್ಚಾಗುವುದು. ಕನಸು ನನಸಾಗುವ ಕಾಲ.ಬಹಳ ದಿನಗಳಿಂದ ತಡೆಹಿಡಿಯಲ್ಪಟ್ಟಿದ್ದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಸಂಪತ್ತು ಮತ್ತು ಯಶಸ್ಸು ಹೆಚ್ಚಾಗುತ್ತದೆ. ಕೈ ಹಾಕುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ವ್ಯವಹಾರವನ್ನು ವಿಸ್ತರಿಸುವುದಕ್ಕೆ ಸರಿಯಾದ ಸಮಯ.

ತುಲಾ ರಾಶಿ - ಶುಕ್ರ ಮತ್ತು ಬುಧನ ಸಂಚಾರದಿಂದಾಗಿ ತುಲಾ ರಾಶಿಯವರಿಗೆ ಶುಭ ಫಲಿತಾಂಶಗಳು ದೊರೆಯುತ್ತವೆ. ಸಂಗಾತಿಯೊಂದಿಗಿನ ಸಮಸ್ಯೆಗಳು ಬಗೆಹರಿಯುತ್ತವೆ. ಸಂಪತ್ತು ಹರಿದು ಬರುವುದು. ಅದೃಷ್ಟ ಹೆಚ್ಚಾಗುವುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವುದು. ಬಡ್ತಿ ಸಿಗುವುದು.ಹೂಡಿಕೆಗಳಿಂದ ಹೆಚ್ಚಿನ ಲಾಭವಾಗುವುದು. ಖರ್ಚುಗಳು ಕಡಿಮೆಯಾಗುವುದು. ಸರ್ಕಾರಿ ಉದ್ಯೋಗಗಳಿಗಾಗಿ ಎದುರು ನೋಡುತ್ತಿರುವವರಿಗೆ ಶುಭ ಸುದ್ದಿ ಸಿಗುವುದು.
ಇದರ ಜೊತೆಗೆ ಕೆಲವು ರಾಶಿಯವರಿಗೆ ಅಶುಭ ಫಲವನ್ನು ಅಥವಾ ಮಿಶ್ರ ಫಲ ಸಿಗಬಹುದು.
ಮೇಷ ರಾಶಿಯವರ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು.ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಸಣ್ಣ ಅಜಾಗರೂಕತೆಯು ಕೂಡಾ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು.

ಕಟಕ ರಾಶಿ : ಕಟಕ ರಾಶಿಯವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾನಸಿಕ ಒತ್ತಡ ಹೆಚ್ಚಾಗಬಹುದು. ಮಾಡುವ ಕೆಲಸಗಳಲ್ಲಿ ಗೊಂದಲಗಳು ಉಂಟಾಗಬಹುದು.

ವೃಶ್ಚಿಕ ರಾಶಿ: ಸಂಗಾತಿಯೊಂದಿಗೆ ಮನಸ್ತಾಪ ಮೂಡಿ,ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಹುದು. ಮಾತನಾಡುವಾಗ ಬಳಸುವ ಪದಗಳ ಬಗ್ಗೆ ಎಚ್ಚರಿಕೆ ಇರಲಿ.

ಮೀನ ರಾಶಿ: ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಪ್ರತಿ ಕೆಲಸದಲ್ಲಿಯೂ ಅಡೆತಡೆಗಳು ಎದುರಾಗಬಹುದು.ಕೆಲಸ ಕಾರ್ಯಗಳಲ್ಲಿ ತಾಳ್ಮೆ ಇದ್ದರೆ ಜಯವೂ ಸಿಗುವುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications