Chardham Yatra 2024: ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ....
ಭಾರತದಲ್ಲಿ ಅತ್ಯಂತ ಜನಪ್ರಿಯ ಹಿಂದೂ ತೀರ್ಥಯಾತ್ರೆಗಳಾದ ಚಾರ್‌ಧಾಮ್ ಆನ್‌ಲೈನ್ ನೋಂದಣಿ ಆರಂಭವಾಗಿದೆ. ಉತ್ತರಾಖಂಡದ ಪ್ರವಾಸೋದ್ಯಮ ಇಲಾಖೆಯು ಚಾರ್ ಧಾಮ್ ಯಾತ್ರೆಗೆ ಆನ್‌ಲೈನ್ ನೋಂದಣಿಯನ್ನು ಆರಂಭಿಸಿದೆ. ನಾಲ್ಕು ಪವಿತ್ರ ಸ್ಥಳಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ತೀರ್ಥಯಾತ್ರೆಗೆ ಹೋಗುವ ಭಕ್ತರು ಮೊದಲು ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬೇಕು. ಹಾಗಾದರೆ ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ತಿಳಿಯೋಣ.
ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥದ ಬಾಗಿಲುಗಳು ಮೇ 10 ರಂದು ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ತೆರೆಯಲಿದ್ದು, ಬದರಿನಾಥ ದೇವಾಲಯ ಮೇ 12 ರಂದು ತೆರೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಪವಿತ್ರ ತೀರ್ಥಯಾತ್ರೆಗೆ ಭೇಟಿ ನೀಡುತ್ತಾರೆ. ಇದು ಪ್ರತಿ ವರ್ಷ ಸುಮಾರು ಆರು ತಿಂಗಳ ಕಾಲ ಮುಚ್ಚಿರುತ್ತದೆ.

ಗಂಗೋತ್ರಿ ಧಾಮ ಸ್ಥಳೀಯ ಕಾಲಮಾನ ಮಧ್ಯಾಹ್ನ 12:25ಕ್ಕೆ ತನ್ನ ಬಾಗಿಲು ತೆರೆಯಲಿದೆ. ಬದರಿನಾಥ ದೇವಸ್ಥಾನದ ಬಾಗಿಲು ಮೇ 12 ರಂದು ಬೆಳಿಗ್ಗೆ 6 ಗಂಟೆಗೆ ತೆರೆಯಲು ನಿರ್ಧರಿಸಲಾಗಿದೆ. ಕೇದಾರನಾಥ ದೇವಸ್ಥಾನದ ಬಾಗಿಲು ಮೇ 10ರಿಂದ ಬೆಳಿಗ್ಗೆ 7ಗಂಟೆಗೆ ತೆರೆಯುತ್ತದೆ. ಚಾರ್‌ಧಾಮ್ ಯಾತ್ರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
ಚಾರ್‌ಧಾಮ್ ಯಾತ್ರೆಗಾಗಿ ನೋಂದಾಯಿಸುವುದು ಹೇಗೆ:
1) ಚಾರ್ ಧಾಮ್ ಯಾತ್ರಾ ನೋಂದಣಿ ವೆಬ್‌ಸೈಟ್‌ಗೆ registrationandtouristcare.uk.gov.in ನಲ್ಲಿ ಭೇಟಿ ನೀಡಿ
2) ರಿಜಿಸ್ಟರ್ ಅಥವಾ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
3) ನಿಮ್ಮ ವೈಯಕ್ತಿಕ ವಿವರಗಳಾದ ಫೋನ್ ಹೆಸರು, ಸಂಖ್ಯೆ, ಇಮೇಲ್ ಐಡಿ ಇತ್ಯಾದಿಗಳನ್ನು ನಮೂದಿಸುವ ಮೂಲಕ ನೋಂದಾಯಿಸಿ.
4) ನಿಮ್ಮ ಮೊಬೈಲ್ ಫೋನ್‌ನಲ್ಲಿ ಕಳುಹಿಸಲಾದ OTP ಅನ್ನು ನಮೂದಿಸುವ ಮೂಲಕ ನೋಂದಣಿಯನ್ನು ಪೂರ್ಣಗೊಳಿಸಿ.
5) ಪ್ರಯಾಣದ ದಿನಾಂಕಗಳು, ಪ್ರವಾಸಿಗರ ಹೆಸರು ಮುಂತಾದ ನಿಮ್ಮ ಪ್ರವಾಸದ ವಿವರಗಳನ್ನು ಭರ್ತಿ ಮಾಡಿ
6) ನಿಮ್ಮ ನೋಂದಣಿ ಪೂರ್ಣಗೊಂಡ ನಂತರ, ನಿಮ್ಮ ಮೊಬೈಲ್ ಫೋನ್‌ಗೆ ನೋಂದಣಿ ಸಂಖ್ಯೆಯನ್ನು ಕಳುಹಿಸಲಾಗುತ್ತದೆ
7) ನೀವು ಚಾರ್ ಧಾಮ್ ಯಾತ್ರೆಗಾಗಿ ನೋಂದಣಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

ಆನ್‌ಲೈನ್ ಅಲ್ಲದೆ ಮೊಬೈಲ್ ಅಪ್ಲಿಕೇಶನ್‌ನ ಮೂಲಕ ನೋಂದಣಿಗಳನ್ನು ಮಾಡಬಹುದು - 'ಟೂರಿಸ್ಟ್ ಕೇರ್ ಉತ್ತರಾಖಂಡ್' ಇದು Android ಮತ್ತು iO ಗಳಲ್ಲಿ ಲಭ್ಯವಿದೆ. WhatsApp ನೋಂದಣಿ ಸಹ ಲಭ್ಯವಿದೆ. +91 8394833833 ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೀವು 'ಯಾತ್ರಾ' ಎಂದು ಸಂದೇಶವನ್ನು ಕಳುಹಿಸಬೇಕು.
ಕಳೆದ ವಾರ ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ಅವರು ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದರು ಮತ್ತು ಯಾತ್ರೆ ಪ್ರಾರಂಭವಾಗುವ ಮೊದಲು ಒಳಚರಂಡಿ ದುರಸ್ತಿ, ಆಂತರಿಕ ಮಾರ್ಗಗಳ ಸುಧಾರಣೆ, ನೀರು, ವಿದ್ಯುತ್, ಬೀದಿ ದೀಪಗಳು ಮತ್ತು ವಾಹನ ನಿಲುಗಡೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
IRCTC ಪ್ರವಾಸ ಪ್ಯಾಕೇಜ್
IRCTC 11 ದಿನಗಳು ಮತ್ತು 12 ರಾತ್ರಿಗಳ ತಿರುಪತಿ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದೆ. IRCTC ತನ್ನ 11 ದಿನಗಳು 12 ರಾತ್ರಿಗಳ ಪ್ಯಾಕೇಜ್‌ಗಳನ್ನು ಮುಂಬೈನಿಂದ ಘೋಷಿಸಿದೆ. ದೆಹಲಿಯಿಂದ ಮೇ 11-22 ರಂದು, ಮೇ 18-29 ಮತ್ತು 25 ಮೇ ನಿಂದ 5 ಜೂನ್ ಪ್ರವಾಸ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಯಾತ್ರಾರ್ಥಿಗಳು IRCTC ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. irctctourism.com ಗೆ ಭೇಟಿ ನೀಡಿ ನೀವು ಯಾವ ಸ್ಥಳಗಳಿಂದ ಪ್ರವಾಸ ಮಾಡಲು ಇಚ್ಚಿಸುತ್ತೀರಿ ಎನ್ನುವುದನ್ನು ಖಾತರಿಪಡಿಸಬೇಕು.
ಜೊತೆಗೆ ಈ ಪ್ಯಾಕೇಜ್ ಮೂಲಕ ನೀವು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡುವಿರಿ ಎಂದು ನೋಡುವುದಾದರೆ- ಏರ್ ಟೂರ್ ಪ್ಯಾಕೇಜ್ ಮುಂಬೈನಿಂದ ದೆಹಲಿಗೆ ವಿಮಾನದಿಂದ ಪ್ರಾರಂಭವಾಗುತ್ತದೆ. ನಂತರ ಹರಿದ್ವಾರ - ಬಾರ್ಕೋಟ್ - ಜಾಂಕಿಚಟ್ಟಿ - ಯಮುನೋತ್ರಿ - ಉತ್ತರಕಾಶಿ - ಗಂಗೋತ್ರಿ - ಗುಪ್ತಕಾಶಿ - ಕೇದಾರನಾಥ್ - ಗೌರಿಕುಂಡ್ - ಸೀತಾಪುರ- ಬದರಿನಾಥ್ - ರುದ್ರಪ್ರಯಾಗ ಸೇರಿದಂತೆ ಇತರ ಸ್ಥಳಗಳಿಗೆ ಭೇಟಿ ನೀಡಿ ಹರಿದ್ವಾರ- ದೆಹಲಿ- ಮುಂಬೈಗೆ ಮರಳುವ ಮೂಲಕ ಯಾತ್ರೆ ಪೂರ್ಣಗೊಳ್ಳಲಿದೆ.












Click it and Unblock the Notifications