Bengaluru-Danapur Special train: ವಿಶೇಷ ರೈಲುಗಳ ಸೇವೆ ವಿಸ್ತರಣೆ-ಎಲ್ಲಿಂದ ಎಲ್ಲಿವರೆಗೆ
Bengaluru-Danapur Special train: ಭಾರತೀಯ ರೈಲ್ವೆಯು ಆಗಾಗ ಪ್ರಯಾಣಕರ ಬೇಡಿಕೆಗೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಈಗಾಗಲೇ ಬೇಸಿಗೆ ಹಿನ್ನೆಲೆ ಪ್ರಯಾಣಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕಳೆದ ಒಂದು ವಾರದಿಂದಲೂ ರಾಜ್ಯದ ಹಲವು ಜಿಲ್ಲೆಗಳಿಗೆ ವಿಶೇಷ ಸಾಪ್ತಾಯಿಕ ರೈಲುಗಳನ್ನು ಬಿಡುತ್ತಲೇ ಇದೆ. ಹಾಗೆಯೇ ಕೆಲವೆಡೆ ರೈಲು ಸೇವಗಳನ್ನು ವಿಸ್ತರಣೆ ಮಾಡಲಾಗಿದೆ. ಇದೀಗ ಬೆಂಗಳೂರು-ದಾನಪುರ ನಡುವಿನ ವಿಶೇಷ ರೈಲು ಸೇವೆಗಳನ್ನು ವಿಸ್ತರಣೆ ಮಾಡಲಾಗಿದೆ. ಹಾಗಾದರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
SMVT ಬೆಂಗಳೂರು ಮತ್ತು ದಾನಾಪುರ ನಡುವಿನ ವಿಶೇಷ ರೈಲು ಸೇವೆಯ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಮಾಹಿತಿ ಈ ಕೆಳಗೆ ನೀಡಲಾಗಿದೆ ಗಮನಿಸಿ.

ಎಲ್ಲಿವರೆಗೂ ವಿಶೇಷ ರೈಲುಗಳ ಸಂಚಾರ?
* ರೈಲು ಸಂಖ್ಯೆ 03245 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 31ರವರೆಗೆ (14 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03246 SMVT ಬೆಂಗಳೂರು-ದಾನಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಆಗಸ್ಟ್ 2 ರವರೆಗೆ (14 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03251 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ವಿಶೇಷ ಜುಲೈ 29ರವರೆಗೆ (26ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03252 SMVT ಬೆಂಗಳೂರು-ದಾನಾಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಜುಲೈ 31ರವರೆಗೆ (26 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03260 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 1ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03247 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 25ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03248 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 27ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03241 ದಾನಾಪುರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ಜುಲೈ 26ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.
* ರೈಲು ಸಂಖ್ಯೆ 03242 SMVT ಬೆಂಗಳೂರು-ದಾನಾಪುರ ವಿಶೇಷ ವೀಕ್ಲಿ ಎಕ್ಸ್‌ಪ್ರೆಸ್ ವಿಶೇಷ ಜುಲೈ 28ರವರೆಗೆ (13 ಟ್ರಿಪ್) ಸಂಚಾರ ಮಾಡಲಿದೆ.
ಈ ನಿಲ್ದಾಣಗಳಲ್ಲಿ ರೈಲು ತಾತ್ಕಾಲಿಕ ನಿಲುಗಡೆ ದಿನಾಂಕಗಳ ವಿಸ್ತರಣೆ
ರೈಲು ತಾತ್ಕಾಲಿಕ ನಿಲುಗಡೆ ವಿಸ್ತರಣೆ: ಭಾರತೀಯ ರೈಲ್ವೆ ವಿಭಾಗಗಳಲ್ಲಿ ಆಗಾಗ ಬದಲಾವಣೆಗಳಾಗುತ್ತಲೇ ಇರುತ್ತವೆ. ಇನ್ನು ಈ ನಿಲ್ದಾಣಗಳಲ್ಲಿ ರೈಲು ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ವಿವರ ಇಲ್ಲಿದೆ ಗಮನಿಸಿ.
ಬೀರೂರು ಮತ್ತು ರಾಮಗಿರಿ ನಿಲ್ದಾಣಗಳಲ್ಲಿದ್ದ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದಿನ 6 ತಿಂಗಳವರೆಗೆ ನೈರುತ್ಯ ರೈಲ್ವೆ ಮುಂದುವರೆಸಿದೆ. ದೇವನಗೋದಿ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಯನ್ನು 3 ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ.
ವಿಜಯಪುರ-ಮಂಗಳೂರು ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ಬೀರೂರು ನಿಲ್ದಾಣದಲ್ಲಿ 2 ನಿಮಿಷ ನಿಲ್ಲುವ ವ್ಯವಸ್ಥೆ ತಾತ್ಕಾಲಿಕ ಇತ್ತು. ಯಶವಂತಪುರ-ಸಿಂಧನೂರು ನಿಲ್ದಾಣಗಳ ನಡುವೆ ನಿತ್ಯ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ರಾಮಗಿರಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ವ್ಯವಸ್ಥೆ ತಾತ್ಕಾಲಿಕ ಇತ್ತು. ಇದೀಗ ಏಪ್ರಿಲ್ 16ರವರೆಗೂ ಇದ್ದ ಈ ಅವಧಿಯನ್ನು ಅಕ್ಟೋಬರ್ 16ರವರೆಗೂ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಮಾರಿಕೊಪ್ಪಂ ನಿಲ್ದಾಣಗಳ ನಡುವೆ ಸಂಚರ ಮಾಡುವ ಮೆಮು ವಿಶೇಷ ರೈಲು ಮತ್ತು ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ನಡುವೆ ನಿತ್ಯ ಓಡುವ ಮೆಮು ಎಕ್ಸ್‌ಪ್ರೆಸ್ ರೈಲುಗಳಿಗೆ ದೇವನಗೊಂದಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಜುಲೈ 16ರವರೆಗೆ ವಿಸ್ತರಣೆ ಮಾಡಲಾಗಿದೆ.
ಮತ್ತೊಂದೆಡೆ ಪ್ರಯಾಣಿಕರ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ಬೆಂಗಳೂರು ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ದಾನಾಪುರ ನಿಲ್ದಾಣಗಳ ನಡುವೆ ಸಂಚಾರ ಮಾಡುವ 10 ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಅಸ್ತತ್ವದಲ್ಲಿರುವ ಮಾರ್ಗ, ನಿಲುಗಡೆ ಮತ್ತು ಸಮಯದೊಂದಿಗೆ ಜುಲೈವರೆಗೆ ಮುಂದುವರೆಸಲು ಪೂರ್ವ ಮಧ್ಯ ರೈಲ್ವೆ ವಲಯ ನಿರ್ಧಾರ ಮಾಡಿದೆ. ಹೀಗೆ ರೈಲ್ವೆ ವಿಭಾಗಗಳಲ್ಲಿ ಆಗಾಗ ಬದಲಾವಣೆಗಳು ಆಗುತ್ತಲೇ ಇರುತ್ತವೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Karnataka Heatwave: ಕಲಬರಗಿಯಲ್ಲಿ 44 ಡಿಸೆ ತಾಪಮಾನ, 12 ಜಿಲ್ಲೆಗಳಿಗೆ ಮಹತ್ವದ ಎಚ್ಚರಿಕೆ: ಐಎಂಡಿ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
New Railway Line: 6000 ಕಿಮೀ ರೈಲ್ವೆ ಜಾಲ ವಿಸ್ತರಣೆ, 100 ಯೋಜನೆಗಳ ಜಾರಿಗೆ ₹1.53 ಲಕ್ಷ ಕೋಟಿ ಹೂಡಿಕೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು












Click it and Unblock the Notifications