Tour Package: ಪ್ರವಾಸಿಗರಿಗೆ ಗುಡ್ ನ್ಯೂಸ್! ಸಿಗಂದೂರು, ಜೋಗ ಜಲಪಾತಕ್ಕೆ ವಿಶೇಷ ಬಸ್, ಟಿಕೆಟ್ ದರ- ವೇಳಾಪಟ್ಟಿ
Tour Package: ರಾಜ್ಯಾದ್ಯಂತ ಭಾರೀ ಮಳೆ ದಾಖಲಾದ ಬೆನ್ನಲ್ಲೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಮತ್ತು ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಬಾರಿಯಂತೆ ಈ ವರ್ಷವು ಕೂಡ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ವತಿಯಿಂದ 'ಸಿಂಗದೂರು ಮತ್ತು ಜೋಗಫಾಲ್ಸ್'ಗೆ ವಿಶೇಷ ವೇಗದೂತ ಬಸ್‌ಗಳನ್ನು ಬಿಡಲಾಗಿದೆ. ಈ ಬಸ್‌ಗಳ ಸಂಚಾರ ಎಲ್ಲಿಂದ, ಸಮಯ, ಟಿಕೆಟ್ ದರ ವೇಳಾಪಟ್ಟಿ ವಿವರ ಇಲ್ಲಿದೆ.
ಹಾವೇರಿ ಬಸ್ ನಿಲ್ದಾಣದಿಂದ ಸಿಗಂದೂರು ಮತ್ತು ಜೋಗ ಜಲಪಾತಕ್ಕೆ ಮತ್ತು ರಾಣೆಬೆನ್ನೂರು ಬಸ್ ಘಟಕದಿಂದ ನೇರ ಜೋಗಕ್ಕೆ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ವೇಗದೂತ ವಿಶೇಷ ಸಾರಿಗೆ ಬಸ್‌ಗಳು ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮೂಲ ನಿಲ್ದಾಣಗಳಿಂದ ಹೊರಡಲಿವೆ. ಒಂದು ದಿನದ ಪ್ರವಾಸದ ಪ್ಯಾಕೇಜ್ ಇದಾಗಿದೆ. ಯಾರೆಲ್ಲ ಈ ವರ್ಷ ಸಿಂಗದೂರು ದೇವಸ್ಥಾನ ಹಾಗೂ ಹಚ್ಚ ಹಸಿರಿನ ಮಧ್ಯೆ ಧುಮ್ಮಿಕ್ಕುವ ಜೋಗ ಜಲಪಾತ ಕಣ್ತುಂಬಿಕೊಳ್ಳಲು ಇಚ್ಛಿಸುವಿರೋ ಅವರಿಗೆ ಕಡಿಮೆ ವೆಚ್ಚದಲ್ಲಿ ಹೋಗಿ ಬರಬಹುದಾಗಿದೆ.

ಹಾವೇರಿ-ಸಿಗಂದೂರಿಗೆ ವಿಶೇಷ ಬಸ್
ಹಾವೇರಿ-ಸಿಗಂದೂರು ಬಸ್ ಬೆಳಗ್ಗೆ 7.30ಕ್ಕೆ ಹಾವೇರಿ ನಿಲ್ದಾಣದಿಂದ ಹೊರಟು 11.30 ಗಂಟೆಗೆ ಸಿಗಂದೂರು ತಲುಪುತ್ತದೆ. ಅಲ್ಲಿ ಚೌಡೇಶ್ವರಿ ದೇವಸ್ಥಾನ, ವಿಶೇಷ ಪೂಜೆ, ಪ್ರಸಾದ ಸೇವನೆ ಬಳಿಕ ಪ್ರಯಾಣಿಕರನ್ನು ಕರೆದುಕೊಂಡು 15.30 (ಮಧ್ಯಾಹ್ನ 3.30)ಕ್ಕೆ ಬಸ್ ಅಲ್ಲಿಂದ ಹೊರಡುತ್ತದೆ. ಸಂಜೆ 19.30 (07.30)ಕ್ಕೆ ಹಾವೇರಿಗೆ ಬರಲಿದೆ.
ಟಿಕೆಟ್ ದರ, ವಿಶೇಷ ಸೂಚನೆ
ಎರಡು ಕಡೆಗಿನ ಪ್ರಯಾಣ ಟಿಕೆಟ್ ತಲಾ ಒಬ್ಬರಿಗೆ 455 ರೂಪಾಯಿ ನಿಗದಿಪಡಿಸಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ 7760991925/7760969286 ಗೆ ಸಂಪರ್ಕಿಸಬಹುದು. ವಿಶೇಷ ಸೂಚನೆ ಎಂದರೆ, 'ಶಕ್ತಿ ಯೋಜನೆ'ಯಡಿ ಮಹಿಳೆಯರಿಗೆ ಈ ವಿಶೇಷ ಪ್ರವಾಸ ಪ್ಯಾಕೇಜ್ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವೇರಿ ಮತ್ತು ರಾಣೆಬೆನ್ನೂರು-ಜೋಗಕ್ಕೆ ವಿಶೇಷ ಬಸ್
ಹಾವೇರಿ ನಿಲ್ದಾಣ ಮತ್ತು ರಾಣೆಬೆನ್ನೂರು ನಿಲ್ದಾಣದಿಂದ ನೇರವಾಗಿ ಜೋಗ್ ಫಾಲ್ಸ್‌ಗೆ ಬಸ್ ವಿಶೇಷ ವೇಗದೂತ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರತಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಈ ಸೇವೆ ಸಿಗಲಿದೆ.
ಬೆಳಗ್ಗೆ 8 ಗಂಟೆಗೆ ಹಾವೇರಿಯಿಂದ ಹೊರಡುವ ಬಸ್ 12ಗಂಟೆಗೆ ಜೋಗ ತಲುಪುತ್ತದೆ. ಮಾರ್ಗ ಮಧ್ಯೆ ಶ್ರೀ ಶಿರಸಿ ಮಾರಿಕಾಂಬ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೋಗ ವೀಕ್ಷಣೆ ಬಳಿಕ ಮರಳಿ ಅಲ್ಲಿಂದ ಸಂಜೆ 4 ಗಂಟೆಗೆ ಹೊರಟು 7.30ಕ್ಕೆ ಹಾವೇರಿ ನಿಲ್ದಾಣಕ್ಕೆ ಬರಲಿದೆ. ಒಬ್ಬರಿಗೆ 410 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ 776091925ಗೆ ಸಂಪರ್ಕಿಸಬಹುದು.
ರಾಣೆಬೆನ್ನೂರು ಘಟಕದಿಂದ ಬೆಳಗ್ಗೆ 8 ಗಂಟೆಗೆ ವೇಗದೂತ ಬಸ್ ಹೊರಟು 11.30ಕ್ಕೆ ಜೋಗಕ್ಕೆ ತಲುಪುತ್ತದೆ. ಈ ಬಸ್ ಸಹ ಶಿರಸಿ ಮಾರಿಕಾಂಬ ದೇವಸ್ಥಾನಕ್ಕೆ ಒಂದು ಸ್ಟಾಪ್ ನೀಡಲಿದೆ. ದರ್ಶನ ಬಳಿಕ ಮುಂದೆ ಜೋಗಕ್ಕೆ ತೆರಳುತ್ತದೆ. ಜೋಗದ ರಮಣೀಯ ದೃಶ್ಯ ಕಣ್ತುಂಬಿಕೊಂಡ ಬಳಿಕ ಪ್ರಯಾಣಿಕರೊಂದಿಗೆ ಸಂಜೆ 4 ಗಂಟೆಗೆ ಹೊರಟು ರಾತ್ರಿ 7.30ಗಂಟೆಗೆ ರಾಣೆಬೆನ್ನೂರಿಗೆ ಬಂದು ಸೇರುತ್ತದೆ.
ಈ ಮೇಲಿನ ಎಲ್ಲ ಪ್ರವಾಸಿ ಬಸ್‌ಗಳ ಟಿಕೆಟ್‌ಗಳನ್ನು www.ksrtc.in ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಬುಕ್ ಮಾಡಬಹುದು. ಈ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಅಧಿಕಾರಿಗಳು ತಿಳಿಸಿದ್ದಾರೆ.













Click it and Unblock the Notifications