ಮತದಾನ: ಬೆಂಗಳೂರು-ಮಂಗಳೂರು ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಏಪ್ರಿಲ್ 24: ಶುಕ್ರವಾರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಕರಾವಳಿ ಭಾಗದ ಜನರು ಮತದಾನ ಮಾಡಲು ತೆರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.

ಏಪ್ರಿಲ್ 26ರ ಶುಕ್ರವಾರ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಮತದಾನ ನಡೆಯಲಿದೆ. ಮತದಾನ ಮಾಡಲು ರಾಜಧಾನಿ ಬೆಂಗಳೂರು ನಗರದಿಂದ ಸಂಚಾರ ನಡೆಸುವ ಜನರಿಗಾಗಿ ವಿಶೇಷ ರೈಲು ಘೋಷಣೆ ಮಾಡಲಾಗಿದೆ.

Bengaluru Mangaluru Special One Tip Train Schedule

ರೈಲು ನಂಬರ್ 06553/ 06554 ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ.

ರೈಲಿನ ವೇಳಾಪಟ್ಟಿ: ರೈಲು ನಂಬರ್ 06553 ಏಪ್ರಿಲ್ 25ರಂದು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ 18:00 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು 10:00 ಗಂಟೆಗೆ ತಲುಪಲಿದೆ.

ವಾಪಸ್ ಬರುವಾಗ ರೈಲು ನಂಬರ್ 06554 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಏಪ್ರಿಲ್ 26ರ 12:00 ಗಂಟೆಗೆ ಹೊರಡಲಿದೆ. ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರಿಗೆ 03:00 ಗಂಟೆಗೆ ಆಗಮಿಸಲಿದೆ.

ಈ ಒಂದು ಟ್ರಿಪ್ ವಿಶೇಷ ರೈಲು ಕೆಆರ್ ಪುರ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತಿರೂರ್, ಕೊಯಿಕ್ಕೋಡ್, ವಡಾಕರ, ತಲಸ್ಸೇರಿ, ಕಣ್ಣೂರು, ಪಯನೂರು ಮತ್ತು ಕಾಸರಗೋಡು ನಿಲ್ದಾಣದಲ್ಲಿ ಹೋಗುವಾಗ ಮತ್ತು ಬರುವಾಗ ನಿಲುಗಡೆ ಹೊಂದಿದೆ.

ಈ ರೈಲು 19 ಕೋಚ್‌ಗಳನ್ನು ಒಳಗೊಂಡಿದೆ. 1 ಎಸಿ 2 ಟೈರ್, 4 ಎಸಿ 3 ಟೈರ್, 8 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌/ಡಿ.

ಕುಂದಾಪುರಕ್ಕೂ ರೈಲು: ನೈಋತ್ಯ ರೈಲ್ವೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಮತ್ತು ಮಂಗಳೂರು ಸೆಂಟ್ರಲ್ ಮಾದರಿಯಲ್ಲಿ ಯಶವಂತಪುರ-ಕುಂದಾಪುರ ನಡುವೆ ಸಹ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.

ರೈಲು ನಂಬರ್ 06547 ಯಶವಂತಪುರದಿಂದ ಏಪ್ರಿಲ್ 25ರಂದು 23;20 ಗಂಟೆಗೆ ಹೊರಟು, 10:45ಕ್ಕೆ ಕುಂದಾಪುರ ತಲುಪಲಿದೆ. ರೈಲು ನಂಬರ್ 06548 ಕುಂದಾಪುರದಿಂದ ಏಪ್ರಿಲ್ 26ರಂದು 11:20ಕ್ಕೆ ಹೊರಡಲಿದ್ದು, ಯಶವಂತಪುರಕ್ಕೆ 21:50ಕ್ಕೆ ಆಗಮಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+