ರಾಜ್ಯದ ಈ 5 ರೈಲ್ವೆ ನಿಲ್ದಾಣಗಳಲ್ಲಿ ಸಿಗತ್ತೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ & ಊಟ-ಯಾವ ಬೋಗಿಯವರಿಗೆ ಈ ಸೌಲಭ್ಯ?

Indian Railways: ಭಾರತೀಯ ರೈಲ್ವೆ ಆಗಾಗಾ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಇದೀಗ ಭಾರತೀಯ ರೈಲ್ವೆ ಇಲಾಖೆಯು ಪ್ರವಾಸೋದ್ಯಮ ವಿಭಾಗ IRCTC ಜೊತೆಗೆ ಪ್ರಯಾಣಿಕರಿಗೆ, ವಿಶೇಷವಾಗಿ ಜನರಲ್ ಬೋಗಿಗಳ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲು ತಿಂಡಿ ಮತ್ತು ಊಟ ನೀಡುವ ಹೊಸ ಯೋಜನೆಯನ್ನು ಆರಂಭಿಸಿದೆ. ಹಾಗಾದರೆ ರಾಜ್ಯದ ಯಾವ್ಯಾವ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇರಲಿದೆ ಹಾಗೂ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಜ್ಯದಲ್ಲಿ ನೈಋತ್ಯ ರೈಲ್ವೆ ಅಡಿಯಲ್ಲಿ ಬರುವ 5 ರೈಲು ನಿಲ್ದಾಣಗಳಲ್ಲಿ ತಿಂಡಿ ಮತ್ತು ಊಟವನ್ನು ಭಾರತೀಯ ರೈಲ್ವೆ ತನ್ನ ಕೌಂಟರ್‌ಗಳ ಮೂಲಕ ಕೊಡಲಾರಂಭಿಸಿದೆ. ಭಾರತದ 100ಕ್ಕೂ ಹೆಚ್ಚು ರೈಲ್ಲವೆ ನಿಲ್ದಾಣಗಳಲ್ಲಿ 150 ಕೌಂಟರ್‌ಗಳ ಮೂಲಕ ಬೇಸಿಗೆ ಸಮಯಭದಲ್ಲಿ ಈ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

High quality snacks amp amp meals available at low prices in Karnataka s This 5 railway stations

ಜನರಲ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಅನ್ನಾಹಾರ ಒದಗಿಸುವುದನ್ನು ಖಾತರಿಪಡಿಸುವ ಉದ್ದೇಶ ಈ ಉಪಕ್ರಮದ್ದಾಗಿದೆ. ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ನಿಲ್ಲುವ ಫ್ಲಾಟ್‌ಫಾರಂ ಬಳಿಯೇ ಇಂತಹ ಆಹಾರ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಅಲ್ಲಿ ಸ್ನ್ಯಾಕ್ ಮೀಲ್‌ಗಳನ್ನು ಪಡೆಯಬಹುದಾಗಿದ ಎಂದು ರೈಲ್ವೆ ಮಾಹಿತಿ ನೀಡಿದೆ.

ಕರ್ನಾಟಕದ 5 ರೈಲು ನಿಲ್ದಾಣಗಳಲ್ಲಿ ಫುಡ್ ಕೌಂಟರ್‌

1. ಕೆಎಸ್‌ಆರ್ ಬೆಂಗಳೂರು
2. ಯಶವಂತಪುರ
3. ಮೈಸೂರು
4. ವಿಜಯಪುರ
4. ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ನಿಲ್ಲುವ ಫ್ಲಾಟ್‌ಫಾರಂ ಬಳಿ ಇಂತಹ ಫುಡ್‌ ಕೌಂಟರ್‌ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ನೈಋತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ಮಾಹಿತಿ ನೀಡಿದ್ದಾರೆ.

ಇನ್ನು ಕಾಯ್ದಿರಿಸದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುವವರು ಎದುರಿಸುವ ಸವಾಲುಗಳನ್ನು ಭಾರತೀಯ ರೈಲ್ವೇ ಗುರುತಿಸಿದ್ದು, ಅವರಿಗೆ ಯಾವಾಗಲೂ ಅನುಕೂಲಕರ ಮತ್ತು ಬಜೆಟ್ ಸ್ನೇಹಿ ಊಟದ ಆಯ್ಕೆಗಳಿರುವುದಿಲ್ಲ. ಆದ್ದರಿಂದ ಬೇಸಿಗೆ ತಿಂಗಳ ಪ್ರಯಾಣಿಕ ದಟ್ಟಣೆಯನ್ನು ನಿರೀಕ್ಷಿಸುತ್ತಿರುವ ಭಾರತೀಯ ರೈಲ್ವೆಯು ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿ ಮಾಡಿದೆ.

ಏನೆಲ್ಲ ಇರುತ್ತದೆ?: ಬಜೆಟ್ ಸ್ನೇಹಿ ಊಟ, ತಿಂಡಿ ಹುಡುಕುವ ಸಾಮಾನ್ಯ ಪ್ರಯಾಣಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ನ್ಯಾಕ್ ಮೀಲ್ ಅನ್ನು ಈ ಕೌಂಟರ್‌ಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಎಕಾನಮಿ ಮೀಲ್ಸ್ - ಈ ಕ್ಷಣಕ್ಕೆ ಸ್ವಲ್ಪ ಹೊಟ್ಟೆ ಹಸಿವು ತಗ್ಗಿಸಿಕೊಳ್ಳಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಆಹಾರದ ಪೊಟ್ಟಣ ಆಗಿದ್ದು, ಇದು ಪಾಕೆಟ್ ಫ್ರೆಂಡ್ಲಿ ಆಗಿದ್ದು, 20 ರೂಪಾಯಿಗೆ ಸಿಗಲಿದೆ ಎಂದು ತಿಳಿಸಿದೆ.

ಸ್ನ್ಯಾಕ್ ಮೀಲ್: ಇದು ಎಕಾನಮಿ ಮೀಲ್ಸ್‌ಗಿಂತ ಸ್ವಲ್ಪ ಹೆಚ್ಚಿನದ್ದು. ಇದರಲ್ಲಿ ಹೊಟ್ಟೆ ಹಸಿವು ನೀಗಿಸಬಹುದಾದಷ್ಟು ಆಹಾರ ಇರಲಿದ್ದು, 50 ರೂಪಾಯಿಗೆ ಲಭ್ಯವಿರಲಿದೆ. ಕಳೆದ ವರ್ಷ ದೇಶದ ಸುಮಾರು 51 ನಿಲ್ದಾಣಗಳಲ್ಲಿ ಈ ಸೇವೆಯನ್ನು ಪ್ರಾಯೋಗಿಕವಾಗಿ ಯಶಸ್ವಿಯಾಗಿ ನಡೆಸಲಾಗಿತ್ತು. ಇದರ ಆಧಾರದ ಮೇಲೆಯೇ ರೈಲ್ವೇಯು ಈ ಯೋಜನೆಯನ್ನು ಈ ವರ್ಷ ಮತ್ತಷ್ಟು ನಿಲ್ದಾಣಗಳಿಗೆ ವಿಸ್ತರಣೆ ಮಾಡಿದೆ.

ಇದೀಗ 100ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ಸುಮಾರು 150 ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಿಲ್ದಾಣಗಳಿಗೆ ವಿಸ್ತರಣೆ ಮಾಡುವ ಚಿಂತನೆಯಿದೆ ಭಾರತೀಯ ರೈಲ್ವೆಯದ್ದಾಗಿದೆ. ಅದರಲ್ಲೂ ವಿಶೇಷವಾಗಿ ಸಾಮಾನ್ಯ ವರ್ಗದ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಯೋಜನೆ ಗಮನಾರ್ಹ ಪ್ರಯೋಜನವಾಗಲಿದೆ. ಒಟ್ಟಿನಲ್ಲಿ ಹೀಗೆ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡುತ್ತಲೇ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+