ಪಾಕ್ ಗುಂಡಿನ ದಾಳಿಗೆ ಮತ್ತೊಬ್ಬ ಬಿಎಸ್ ಎಫ್ ಯೋಧ ಸಾವು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಜಮ್ಮು, ಅಕ್ಟೋಬರ್ 24: ಜಮ್ಮುವಿನ ಆರ್ ಎಸ್ ಪುರ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕ್ ನ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ ಎಫ್ ಯೋಧ ಮೃತಪಟ್ಟು, ಯೋಧರು ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಒಬ್ಬ ಯೋಧ ಮೃತಪಟ್ಟಿದ್ದಾರೆ.

ಪಾಕಿಸ್ತಾನ ಆರ್ ಎಸ್ ಪುರ ವಲಯದಲ್ಲಿ ಭಾನುವಾರ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಭಾರತದಿಂದಲೂ ತಕ್ಕ 'ಪ್ರತ್ಯುತ್ತರ' ನೀಡಲಾಗಿದೆ ಎಂದು ಬಿಎಸ್ ಎಫ್ ವಕ್ತಾರ ತಿಳಿಸಿದ್ದಾರೆ. ಶುಕ್ರವಾರ ಪಾಕ್ ದಾಳಿಯಿಂದ ಗಾಯಗೊಂಡಿದ್ದ ಕಥುವಾ ವಲಯದ ಬಿಎಸ್ ಎಫ್ ಯೋಧ ಗುರುನಾಮ್ ಸಿಂಗ್ ಶನಿವಾರ ರಾತ್ರಿ ಮೃತಪಟ್ಟಿದ್ದರು.[ಪಾಕ್ ನ 7 ಸೈನಿಕರ ಸಾವು ಅಂದಿದೆ ಬಿಎಸ್ ಎಫ್, ಇಲ್ಲ ಅಂತಿದೆ ಪಾಕ್]

Indian army

ಹೀರಾನಗರ ವಲಯದಲ್ಲಿ ಶುಕ್ರವಾರ ಪಾಕಿಸ್ತಾನದ ಏಳು ಸೈನಿಕರು ಭಾರತದ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದರು. ಆದರೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪಾಕ್ ಸೇನೆ ಹೇಳಿಕೊಂಡಿತ್ತು. ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ಉತ್ತರಿಸುವುದಕ್ಕೆ ನಾವು ಎಲ್ಲ ರೀತಿಯಿಂದಲೂ ಸಜ್ಜಾಗಿದ್ದೇವೆ ಎಂದು ಸೇನೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ಕಡೆಯಿಂದ ಏನಾದರೂ ಮಾಡುವ ಯತ್ನ ನಡೆಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಕ್ಕೆ ಸಿದ್ಧರಾಗಿದ್ದೇವೆ ಎಂದು ಬಿಎಸ್ ಎಫ್ ನ ಅಡಿಷನಲ್ ಡೈರೆಕ್ಟರ್ ಜನರಲ್ ಅರುಣ್ ಕುಮಾರ್ ಭಾನುವಾರ ಹೇಳಿದ್ದಾರೆ.[ಸೇನೆಯ ಭಾರೀ ಕಾರ್ಯಾಚರಣೆ: 44 ಶಂಕಿತ ಲಷ್ಕರ್ ಉಗ್ರರ ಬಂಧನ]

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ ನಂತ್ರ ಪಾಕಿಸ್ತಾನ ಹಲವು ಬಾರಿ ಕದನ ವಿರಾಮ ಉಲ್ಲಂಘನೆ ನಡೆಸಿದೆ. ಆದರೆ ಭಾರತೀಯ ಸೇನೆಯಿಂದ ಗಡಿಯಾಚೆಗಿನ ಕಾರ್ಯಾಚರಣೆಯನ್ನು ನಿರಾಕರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Border Security Force soldier was killed and another injured in Pak shelling and firing along International Border in Jammu's RS Pura sector. Injured soldiers were evacuated to a hospital in Jammu where one of them died.
Please Wait while comments are loading...