Heavy Rain: ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಇಬ್ಭಾಗ: ಭೂಕುಸಿತದಿಂದ ರಸ್ತೆ ಸಂಪರ್ಕ ಬಂದ್‌-ಎಲ್ಲಿ?

Heavy Rain: ಉತ್ತರ ಭಾರತದ ಹಲವೆಡೆ ಮಳೆರಾಯನ ಆರ್ಭಟ ಶುರುವಾಗಿ ಈಗಾಗಲೇ ಹಲವು ಅನಾಹುತಗಳು ಸೃಷ್ಟಿಯಾಗಿವೆ. ಇದನ್ನು ಹೊರತುಪಡಿಸಿದರೆ ಕೆಲವೇ ಕಡೆಗಳಲ್ಲಿ ಮಾತ್ರ ಜಿನುಗು ಮಳೆಯಾಗುತ್ತಿದೆ, ಇನ್ನು ಬಹುತೇಕ ಕಡೆಗಳಲ್ಲಿ ಸೂರ್ಯನ ಶಾಖಕ್ಕೆ ಜನರು ಬೆಂದು ಹೋಗಿದ್ದಾರೆ. ಇದರ ನಡುವೆಯೇ ಇದೀಗ ದೇಶದ ಈಶಾನ್ಯ ಭಾಗದಲ್ಲಿ ಅಬ್ಬರದ ಮಳೆಯಿಂದ ದೊಡ್ಡ ಅನಾಹುತವೊಂದು ಸಂಭವಿಸಿದೆ. ಹಾಗಾದರೆ ಎಲ್ಲಿ ಎನ್ನುವ ಮಾಹಿತಿಯನ್ನು ಮುಂದೆ ತಿಳಿಯೋಣ.

ಅರುಣಾಚಲ ಪ್ರದೇಶದಲ್ಲಿ ಸತತವಾಗಿ ಬಿಟ್ಟುಬಿಡದೇ ಮಳೆರಾಯ ಅಬ್ಬರಿಸುತ್ತಲೇ ಇದ್ದಾನೆ. ಇನ್ನು ಇಂದು (ಏಪ್ರಿಲ್‌ 25) ಸುರಿದ ರಣಭೀಕರ ಮಳೆಗೆ ರಾಷ್ಟ್ರೀಯ ಹೆದ್ದಾರಿ 313ರಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದ್ದು, ಪರಿಣಾಮ ವಾಹನ ಸವಾರಾರು ಹಿಂದಕ್ಕೂ ಹೋಗದೇ, ಮುಂದಕ್ಕೂ ಹೋಗದೇ ಪರದಾಡಿದ ಘಟನೆ ನಡೆದಿದೆ. ಇದಷ್ಟೇ ಅಲ್ಲದೆ, ಅಲ್ಲಿನ ನಿವಾಸಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.

Arunachal Pradesh Rain Massive Landslides Hits National Highway-313 Cutting off Connectivity

ಬುಧವಾರ (ಏಪ್ರಿಲ್‌ 24) ರಾತ್ರಿ ಭೂಕುಸಿತ ಉಂಟಾದ ಹಿನ್ನೆಲೆ ದಿಬಾಂಗ್‌ ವ್ಯಾಲಿ ಜಿಲ್ಲೆಯ ಹುನಲಿ, ಅನಿನಿ ಭಾಗದಲ್ಲಿ ಹಾದುಹೋಗುವ ರಸ್ತೆಗಳು ಸಂಪೂರ್ಣವಾಗಿ ಇಬ್ಭಾಗವಾಗಿವೆ. ಇನ್ನು ಈ ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆ ಎಂದರೆ ಇದೊಂದೆ ಆಗಿತ್ತು. ಇದೀಗ ಈ ರಸ್ತೆ ಸಂಪರ್ಕವಿಲ್ಲದೆ, ಇಲ್ಲಿನ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+