ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಜೆಂಟೀನಾ ವಿಜಯೋತ್ಸವಕ್ಕೆ ಅದೃಷ್ಟದ ಸಾಥ್

By Mahesh
|
Google Oneindia Kannada News

Carlos tevez source: http://images.google.ci/
ಜೋಹಾನ್ಸ್ ಬರ್ಗ್, ಜೂ.28: ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅರ್ಜೆಂಟೀನಾದ ವಿವಾದಿತ ಗೋಲುಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಪ್ರಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 3-1ಅಂತರದಲ್ಲಿ ಜಯಗಳಿಸಿ, ಕ್ವಾಟರ್ ಫೈನಲ್ ತಲುಪಿದ ಅರ್ಜೆಂಟೀನಾ ತಂಡದ ಸಂಭ್ರಮದ ನಡುವೆ ವಿವಾದಿತ ಗೋಲು ಕಪ್ಪು ಚುಕ್ಕೆಯಾಗಿ ಉಳಿಯಿತು.

ನಿರೀಕ್ಷೆಯಂತೆ ಡಿಯಾಗೋ ಮರಡೋನಾ ಸಶಕ್ತ ತಂಡವನ್ನು ಮೈದಾನಕ್ಕಿಳಿಸಿದರು. ವೆರಾನ್ ಬದಲಿಗೆ ಹಿಗ್ವೇನ್, ಟೆವೆಜ್, ಮೆಸ್ಸಿ ಜೋಡಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದು ಉಪಯೋಗಕ್ಕೆ ಬಂತು.

ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ ||

ಮೆಕ್ಸಿಕೋ ಮುಂಪಡೆ ಆಟಗಾರರು ಉತ್ತಮ ಆರಂಭ ತೋರಿದರೂ ಬರೀ ದೂರದಿಂದ ಕಿಕ್ ಗಳನ್ನು ಹೊಡೆದು ಅರ್ಜೆಂಟೀನಾ ಗೋಲಿಯನ್ನು ಕಂಗೆಡಿಸಿದ್ದು, ಬಿಟ್ಟರೆ, ಡ್ರಿಬ್ಲಿಂಗ್, ಪಾಸಿಂಗ್ ಮಾಡುತ್ತಾ ಗೋಲ್ ಪೋಸ್ಟ್ ಕಡೆಗೆ ಹೋಗಿದ್ದು ಕಮ್ಮಿ, ಕಾರಣ, ಅರ್ಜೆಂಟೀನಾದ ರಕ್ಷಣಾ ಪಡೆಯನ್ನು ಛಿದ್ರಗೊಳಿಸಲು ಸಾಧ್ಯವಾಗುತ್ತಿರಲಿಲ್ಲ.

ವಾದ ವಿವಾದ ಗೋಲುಗಳು: ಕೊನೆಗೂ ಮೆಸ್ಸಿ ಗೋಲು ಹೊಡೆದ ಎನ್ನುವಷ್ಟರಲ್ಲಿ ಮಿಸ್ ಆಗಿಬಿಟ್ಟಿತು. ಆದರೆ, ಅರ್ಜೆಂಟೀನಾಗೆ ಅದೃಷ್ಟ ಸಾಥ್ ನೀಡಿತು. ಮೆಸ್ಸಿ ಬಲವಾಗಿ ಒದ್ದ ಜಬಲಾನಿಯನ್ನು ಹಿಡಿಯಲು ಆಗದೆ ಗೋಲಿಯಿಂದ ಚೆಂಡು ಮತ್ತೆ ಮೆಸ್ಸಿ ಕಾಲಬುಡಕ್ಕೆ ಬಂದಾಗ, ಅದನ್ನು ಲಿಫ್ಟ್ ಮಾಡಿ ಮುಂದಿದ್ದ ಟೆವೇಜ್ ನತ್ತ ತಳ್ಳಿದರು. ಆಫ್ ಸೈಡ್ ನಲ್ಲಿದ್ದ ಟೆವೇಜ್ ಫೌಲ್ ಆದರೂ ಗೋಲು ದಾಖಲಿಸಿ ಬೀಗಿದರು.

ರಿಪ್ಲೆ ನೋಡಿದ ಮೆಕ್ಸಿಕೋ ತಂಡದವರು ಲೈನ್ ರೆಫ್ರಿ ಹಾಗು ಮುಖ್ಯ ರೆಫ್ರಿ ವಿರುದ್ಧ ತಿರುಗಿಬಿದ್ದರು. ಮೊದಲಾರ್ಧ ಮುಗಿದು ಆಟಗಾರರು ನಿರ್ಗಮಿಸುತ್ತಿದ್ದಂತೆ ಡೆಕ್ ನಲ್ಲಿದ್ದ ಬದಲಿ ಆಟಗಾರರ ಕಿತ್ತಾಟ ಜೋರಾಯಿತು. ತಕ್ಷಣ ಮಧ್ಯ ಪ್ರವೇಶಿಸಿದ ರೆಫ್ರಿ, ಡಿಯಾಗೋ ಮರಡೋನಾ ಪರಿಸ್ಥಿತಿ ಸಂಭಾಳಿಸಿದರು.

ಹ್ಯಾಟ್ರಿಕ್ ಗೋಲುಗಳ ಸರದಾರ ಅರ್ಜೆಂಟೀನಾಗೆ ಮತ್ತೆ ಯಶ ತಂದು ಕೊಟ್ಟರು 32ನೇ ನಿಮಿಷದಲ್ಲಿ ಹಿಗುವೇನ್, ಮೆಕ್ಸಿಕೋದ ಡಿಫೆಂಡರ್ ಗಳ ಕೆಟ್ಟ ಪಾಸ್ ನ ಅನುಕೂಲ ಪಡೆದು ಗೋಲಿಯನ್ನು ವಂಚಿಸಿ ಸುಲಭವಾಗಿ ಗೋಲು ದಾಖಲಿಸಿದರು.

ಆದರೆ, ದಿನದ ಅದ್ಭುತ ಗೋಲನ್ನು ಟೆವೇಜ್ 52 ನೇ ನಿಮಿಷದಲ್ಲಿ ಬಾರಿಸಿದರು. ಸುಮಾರು 30 ಅಡಿ ದೂರದಿಂದ ಚೆಂಡನ್ನು ಬಲವಾಗಿ ಗೋಲ್ ಪೋಸ್ಟ್ ನೊಳಗೆ ಒದ್ದು, ಮೊದಲ ಗೋಲ್ ನಿಂದ ಅಂಟಿದ್ದ ಕಳಂಕವನ್ನು ತೊಳೆದುಕೊಂಡರು. 71 ನೇ ನಿಮಿಷದಲ್ಲಿ ಮೆಕ್ಸಿಕೋನ ಹೆರ್ನಾಂಡೀಸ್ ಗೋಲು ಹೊಡೆದು ಗೆಲುವಿನ ಅಂತರ ಕಮ್ಮಿ ಮಾಡಿದರು.

ಜುಲೈ 3 ರಂದು ಕೇಪ್ ಟೌನ್ ನಲ್ಲಿ ನಡೆಯಲಿರುವ ಕ್ವಾಟರ್ ಫೈನಲ್ ಪಂದ್ಯದಲ್ಲಿ ಪ್ರಬಲ ಜರ್ಮನಿ ತಂಡವನ್ನು ಅರ್ಜೆಂಟೀನಾ ಎದುರಿಸಲಿದೆ. ಪ್ರಿ ಕ್ವಾಟರ್ ಫೈನಲ್ ನಲ್ಲಿ ಎರಡೂ ತಂಡಕ್ಕೆ ಉತ್ತಮ ಜಯದ ಜೊತೆಗೆ ಅದೃಷ್ಟವೂ ಸಾಥ್ ನೀಡಿತ್ತು.ಆದರೆ, ಜರ್ಮನಿಯ ಯುವ ಪಡೆ ಎದುರಿಸಲು ಅರ್ಜೆಂಟೀನಾದ ಉತ್ತಮ ಗೇಮ್ ಪ್ಲಾನ್ ನೊಂದಿಗೆ ಮೈದಾನಕ್ಕೆ ಇಳಿಯಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X