• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾದಲ್ಲಿ ಫುಟ್ಬಾಲ್‌ ಫೀವರ್; ಬೀದಿಗಳಲ್ಲಿ ರಾರಾಜಿಸುತ್ತಿವೆ ಮೆಸ್ಸಿ ಪೋಸ್ಟರ್

|
Google Oneindia Kannada News

ಕೋಲ್ಕತ್ತಾ, ನವೆಂಬರ್‌ 21: 2022ರ ಫೀಫಾ ವಿಶ್ವಕಪ್ ಆರಂಭವಾಗುತ್ತಿದ್ದಂತೆ ಫುಟ್‌ಬಾಲ್ ಜ್ವರ ಕೋಲ್ಕತ್ತಾವನ್ನು ಆವರಿಸಿದ್ದು, ನಗರದ ಹಲವಾರು ಭಾಗಗಳಲ್ಲಿ ಫುಟ್‌ಬಾಲ್‌ ತಂಡಗಳ ಧ್ವಜಗಳು ಮತ್ತು ನೆಚ್ಚಿನ ಆಟಗಾರರ ಪೋಸ್ಟರ್‌ಗಳಿಂದ ಅಲಂಕರಿಸಲ್ಪಟ್ಟಿವೆ.

ಕೋಲ್ಕತ್ತಾದಲ್ಲಿರುವ ಅರ್ಜೆಂಟೀನಾ ಫ್ಯಾನ್ ಕ್ಲಬ್ ಸದಸ್ಯರು, ನಗರದ ವಿವಿಧೆಡೆ ದೈತ್ಯ ಕಟೌಟ್‌, ಪೋಸ್ಟರ್ ಗಳನ್ನು ಹಾಕಿದ್ದಾರೆ. ಅರ್ಜೆಂಟೀನಾ ಮತ್ತು ವಿಶ್ವಕಪ್‌ನಲ್ಲಿ ಭಾಗವಹಿಸುವ ಇತರ ದೇಶಗಳ ಧ್ವಜಗಳು ಮತ್ತು ಪೋಸ್ಟರ್‌ಗಳಿಂದ ನಗರದ ವಿವಿಧೆಡೆ ದೈತ್ಯ ಕಟೌಟ್‌ಗಳನ್ನು ಅಳವಡಿಸಲಾಗಿದೆ. ನಗರದ ರಸ್ತೆಗಳಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ದೊಡ್ಡ ಕಟೌಟ್‌ಗಳು ಮತ್ತು ಬ್ಯಾನರ್‌ಗಳು ನಗರದಲ್ಲಿ ರಾರಾಜಿಸುತ್ತಿದ್ದು, ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ.

ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್

ನಾವು ಈ ಬಾರಿ ಅತ್ಯಂತ ಸಕಾರಾತ್ಮಕವಾಗಿದ್ದೇವೆ. ಅರ್ಜೆಂಟೀನಾ ದೇಶ ಅನುಭವಿ ತಂಡವನ್ನು ಹೊಂದಿದೆ. ಮೆಸ್ಸಿ ನಿಜವಾಗಿಯೂ ಚೆನ್ನಾಗಿ ಆಡುತ್ತಿದ್ದಾರೆ. ನಾವು ಫುಟ್‌ಬಾಲ್‌ ಮತ್ತು ಫೀಫಾ ವಿಶ್ವಕಪ್ ಅನ್ನು ಆನಂದಿಸುತ್ತಿದ್ದೇವೆ. ನಾವು ದೊಡ್ಡ ದೊಡ್ಡ ಪರದೆಯ ಮೇಲೆ ಪಂದ್ಯಗಳನ್ನು ವೀಕ್ಷಿಸುತ್ತೇವೆ. ಅದಕ್ಕಾಗಿ ನಾವು ಇಲ್ಲಿ ಫ್ಯಾನ್ ಪಾರ್ಕ್ ಅನ್ನು ರಚಿಸಿದ್ದೇವೆ ಎಂದು ಕೋಲ್ಕತ್ತಾದ ಅರ್ಜೆಂಟೀನಾ ಫುಟ್ಬಾಲ್ ಫ್ಯಾನ್ ಕ್ಲಬ್‌ನ ಸದಸ್ಯ ಪ್ರಗ್ನಾನ್ ಶಾ ತಿಳಿಸಿದರು.

ಡಿಸೆಂಬರ್ 18 ರವರೆಗೆ ಪಂದ್ಯಾಟ

ಡಿಸೆಂಬರ್ 18 ರವರೆಗೆ ಪಂದ್ಯಾಟ

ಫೀಫಾ ವಿಶ್ವಕಪ್ 2022 ಪಂದ್ಯಾಟ ನವೆಂಬರ್ 20ರಂದು ಕತಾರ್‌ನಲ್ಲಿ ಪ್ರಾರಂಭವಾಗಿದೆ. ಇದು ಡಿಸೆಂಬರ್ 18 ರವರೆಗೆ ನಡೆಯಲಿದೆ. ಕತಾರ್‌ನಾದ್ಯಂತ ಎಂಟು ಕ್ರೀಡಾಂಗಣಗಳಲ್ಲಿ ಈ ಪಂದ್ಯಾವಳಿಯ 64 ಪಂದ್ಯಗಳು ನಡೆಯಲಿವೆ. ಐದು ಒಕ್ಕೂಟಗಳ ಒಟ್ಟು 32 ತಂಡಗಳು ಕತಾರ್ ಫೀಫಾ ವಿಶ್ವಕಪ್ 2022ರಲ್ಲಿ ಫುಟ್‌ಬಾಲ್‌ನಲ್ಲಿ ಅತಿದೊಡ್ಡ ಬಹುಮಾನಕ್ಕಾಗಿ ಸ್ಪರ್ಧಿಸುತ್ತಿವೆ. 29 ದಿನಗಳ ಅವಧಿಯಲ್ಲಿ 64 ಪಂದ್ಯಗಳು ಇಲ್ಲಿ ನಡೆಯಲಿವೆ.

ಮೆಕ್ಸಿಕೊ, ಪೋಲೆಂಡ್, ಫ್ರಾನ್ಸ್ ತಂಡಗಳು

ಮೆಕ್ಸಿಕೊ, ಪೋಲೆಂಡ್, ಫ್ರಾನ್ಸ್ ತಂಡಗಳು

ಆ ತಂಡಗಳೆಂದರೆ ಆತಿಥೇಯ ಕತಾರ್, ಈಕ್ವೆಡಾರ್, ಸೆನೆಗಲ್, ನೆದರ್ಲ್ಯಾಂಡ್ಸ್, ಇಂಗ್ಲೆಂಡ್, ಇರಾನ್, ಯುಎಸ್ಎ, ವೇಲ್ಸ್, ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೊ, ಪೋಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಟುನೀಶಿಯಾ, ಸ್ಪೇನ್, ಕೋಸ್ಟಾ ರಿಕಾ, ಜರ್ಮನಿ, ಜಪಾನ್, ಬೆಲ್ಜಿಯಂ, ಕೆನಡಾ , ಮೊರಾಕೊ, ಮತ್ತು ಕ್ರೊಯೇಷಿಯಾ, ಬ್ರೆಜಿಲ್, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕ್ಯಾಮರೂನ್, ಪೋರ್ಚುಗಲ್, ಘಾನಾ, ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಸೇರಿದೆ.

2026ಕ್ಕೆ 48 ತಂಡಗಳು ಆಡುವ ನಿರೀಕ್ಷೆ

2026ಕ್ಕೆ 48 ತಂಡಗಳು ಆಡುವ ನಿರೀಕ್ಷೆ

ಮುಖ್ಯವಾಗಿ 2022ರ ಫೀಪಾ ವಿಶ್ವಕಪ್ ಪಂದ್ಯಾವಳಿಯು 32 ತಂಡಗಳೊಂದಿಗೆ ಕೊನೆಯದಾಗಿದೆ. ಇದು 2026 ರ ಪಂದ್ಯಾವಳಿ ವೇಳೆಗೆ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್ ಆತಿಥ್ಯ ವಹಿಸಿದಾಗ 48 ತಂಡಗಳಿಗೆ ಹಿಗ್ಗಲಿದೆ. ಫೈನಲ್ಸ್‌ನಲ್ಲಿ ಕ್ರೊಯೇಷಿಯಾವನ್ನು ಸೋಲಿಸಿದ ನಂತರ 2018ರಲ್ಲಿ ಎರಡನೇ ಪ್ರಶಸ್ತಿಯನ್ನು ಗೆದ್ದ ಫ್ರಾನ್ಸ್ ಹಾಲಿ ಚಾಂಪಿಯನ್ ಆಗಿದೆ. ಫ್ರಾನ್ಸ್‌ ಹಾಗೂ ಕ್ರೊಯೇಷಿಯಾ ತಂಡಗಳು ನೀಡುವ ವಿಶ್ವ ದರ್ಜೆಯ ಸ್ಪರ್ಧೆಯ ವಿರುದ್ಧ ಫ್ರೆಂಚ್ ತಮ್ಮ ಕಿರೀಟವನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಕ್ರಿಸ್ಟಿಯಾನೊ ರೊನಾಲ್ಡೊಗೂ ಕೊನೆ ಪಂದ್ಯ ಸಾಧ್ಯತೆ

ಕ್ರಿಸ್ಟಿಯಾನೊ ರೊನಾಲ್ಡೊಗೂ ಕೊನೆ ಪಂದ್ಯ ಸಾಧ್ಯತೆ

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿಗೆ ಇದು ಅಂತಿಮ ವಿಶ್ವಕಪ್ ಪಂದ್ಯಾವಳಿಯಾಗಿದೆ. 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ಪೋರ್ಚುಗೀಸ್ ತಂಡದಲ್ಲಿ ಅಂತಿಮ ಬಾರಿಗೆ ಆಡುವ ಸಾಧ್ಯತೆಯಿದೆ. ಇದೇ ಮೊದಲ ಬಾರಿಗೆ ಕತಾರ್‌ ಫೀಫಾ ವಿಶ್ವಕಪ್‌ ಪಂದ್ಯವನ್ನು ಆಯೋಜಿಸುತ್ತಿದೆ. ಏತನ್ಮಧ್ಯೆ, ಭಾನುವಾರ ಕತಾರ್‌ನ ಅಲ್ ಖೋರ್‌ನಲ್ಲಿರುವ ಅಲ್ ಬೇಟ್ ಸ್ಟೇಡಿಯಂನಲ್ಲಿ ನಡೆದ 2022 ರ ಫೀಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಕತಾರ್ ಅನ್ನು ಸೋಲಿಸಲು ಈಕ್ವೆಡಾರ್ ನಾಯಕ ಎನ್ನರ್ ವೇಲೆನ್ಸಿಯಾ ಗಳಿಸಿದ ಎರಡು ಗೋಲು ಕಾರಣವಾಯಿತು. ಈ ಗೆಲುವಿನೊಂದಿಗೆ ಈಕ್ವೆಡಾರ್ 92 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಆತಿಥೇಯ ರಾಷ್ಟ್ರವನ್ನು ಸೋಲಿಸಿದ ಮೊದಲ ತಂಡವಾಯಿತು.

English summary
As the 2022 FIFA World Cup kicks off, football fever has gripped Kolkata, with several parts of the city decorated with flags of football teams and posters of favorite players.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X