4 ವರ್ಷಗಳಲ್ಲೇ ಮುರಿದ ಶುಭಾ ಪೂಂಜಾ ದಾಂಪತ್ಯ ? ಪತಿ ಸುಮಂತ್ ಬಿಲ್ಲವ ಜೊತೆ ಡಿವೋರ್ಸ್‌ಗೆ ಅರ್ಜಿ: ಫೋಟೋಗಳು ಡಿಲೀಟ್
ಭಾರತೀಯ ಸಿನಿಮಾರಂಗದಲ್ಲಿ ನಟ - ನಟಿಯರು ತಮ್ಮ ವೈವಾಹಿಕ ಜೀವನದಿಂದ ಡಿವೋರ್ಸ್ ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಈಚೆಗೆ ತಮಿಳು ಚಿತ್ರರಂಗದಲ್ಲಿ ಸಾಲು ಸಾಲು ಡಿವೋರ್ಸ್ ಪ್ರಕರಣಗಳು ವರದಿಯಾಗಿವೆ. ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಪ್ರಕರಣ ವರದಿಯಾಗಿರುವುದು ಕಡಿಮೆ. ನಟ ಮತ್ತು ನಟಿಯರು ತಮ್ಮ ವೈಯಕ್ತಿಕ ಜೀವನದಲ್ಲಿ ಬರುವ ಸವಾಲುಗಳನ್ನು ಪರಿಹರಿಸಿಕೊಳ್ಳುತ್ತಿರುವುದು ಇದೆ. ಆದರೆ ಇದೀಗ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಮದುವೆಯಾದ ನಾಲ್ಕು ವರ್ಷಗಳಲ್ಲೇ ವೈವಾಹಿಕ ಸಂಬಂಧ ಮುರಿದು ಬೀಳುತ್ತಿದೆ. ಶುಭಾ ಪೂಂಜಾ ಅವರು ಕನ್ನಡದ ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡವರು, ನಟಿಯಾಗುವುದಕ್ಕೂ ಮೊದಲು ಅವರು ಮಾಡೆಲ್ ಆಗಿ ಮಿಂಚಿದ್ದರು. ಕನ್ನಡ ಸಿನಿಮಾ ರಂಗದಲ್ಲಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾ ಮೊಗ್ಗಿನ ಮನಸು. ಈ ಸಿನಿಮಾದ ನಂತರ ಹೆಚ್ಚು ಖ್ಯಾತಿ ಗಳಿಸಲು ಪ್ರಾರಂಭಿಸಿದರು.
ಇದೀಗ ಶುಭಾ ಪೂಂಜಾ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ. ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಇಬ್ಬರು ಜೋಡಿ ಈಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಅವರ ಬಾಳಲ್ಲಿ ಯಾವ ಬಿರುಗಾಳಿ ಬೀಸಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಶುಭಾ ಪೂಂಜಾ ಅವರು ಕನ್ನಡದ ಮೊಗ್ಗಿನ ಮನಸು ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮದುವೆಯಾದ ನಂತರ ಈ ಜೋಡಿ ಸಂತೋಷದಿಂದಲೇ ಜೀವನ ಸಾಗಿಸುತ್ತಿತ್ತು. ಆದರೆ ಈಗ ಬಂದಿರುವ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ.

ಶುಭಾ ಪೂಂಜಾ - ಸುಮಂತ್ ಬಿಲ್ಲವ ಡಿವೋರ್ಸ್
ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಒಮ್ಮತದಿಂದಲೇ ಡಿವೋರ್ಸ್‌ಗೆ ಮುಂದಾಗಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಕೊಡುವಂತೆ ಕೋರಿ ಈ ದಂಪತಿ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ಡಿವೋರ್ಸ್ ಅರ್ಜಿ ಸಲ್ಲಿಕೆಯಾಗಿದೆ. ಮುಂದಿನ ವಿಚಾರಣೆಯ ವೇಳೆ ಶುಭಾ ಪೂಂಜಾ ಮತ್ತು ಸುಮಂತ್ ಇಬ್ಬರೂ ಕೋರ್ಟ್‌ಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಫೋಟೋಗಳನ್ನು ಡಿಲೀಟ್ ಮಾಡಿದ ಶುಭಾ
ಇನ್ನು ಡಿವೋರ್ಸ್ ಸುದ್ದಿ ವರದಿಯಾಗುತ್ತಿರುವ ಸಂದರ್ಭದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಶುಭಾ ಪೂಂಜಾ ಅವರು ಸುಮಂತ್ ಬಿಲ್ಲವ ಅವರೊಂದಿಗಿನ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈಗಾಗಲೇ ಶುಭಾ ಅವರು ಸೋಶಿಯಲ್ ಮೀಡಿಯಾದಿಂದ ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿರುವುದು ಸಹ ಚರ್ಚೆಗೆ ಕಾರಣವಾಗಿದೆ. ಸಿನಿಮಾಗಳಿಂದ ಮಾತ್ರವಲ್ಲದೆ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿಯೂ ಶುಭಾ ಪೂಂಜಾ ಮಿಂಚಿದ್ದರು. ಅವರ ಮುಗ್ಧ ಮತ್ತು ಚುರುಕಿನ ನಡವಳಿಕೆಯಿಂದ ಜನರ ಮನಸ್ಸು ಗೆದ್ದಿದ್ದರು. ಸದಾ ನಗುಮುಖದಿಂದಲೇ ಇರುತ್ತಿದ್ದರು. ಆದರೆ ದಿಢೀರ್ ಸುದ್ದಿಯು ಶುಭಾ ಪುಂಜಾ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.













Click it and Unblock the Notifications