BSNL: ಕೈಗೆಟುಕುವ ಬೆಲೆಗೆ ಭರ್ಜರಿ ಪ್ಲ್ಯಾನ್ ಘೋಷಣೆ: 51ರೂ ರೀಚಾರ್ಜ್‌ಗೆ ಅನೇಕ ಪ್ರಯೋಜನ
ನವದೆಹಲಿ: ಕೇಂದ್ರ ಸರ್ಕಾರದ ಅಧೀನದ ಹಾಗೂ ಖಾಸಗಿ ಸಂಸ್ಥೆಯ ಒಪ್ಪಂದದಡಿ ದೇಶದಲ್ಲಿ 5ಜಿ ಸೇವೆ ನೀಡಲು ಮುಂದಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸದಾಗಿ ಗ್ರಾಹಕಸ್ನೇಹಿ ರೀಚಾರ್ಜ್ ಯೋಜನೆ ಘೋಷಿಸಿದೆ. ಕೇವಲ 51ರೂಪಾಯಿ ನೀಡಿದರೆ ಸಾಕು ತಿಂಗಳಪೂರ್ತಿ ವಿವಿಧ ಪ್ರಯೋಜನ ಪಡೆಯಬಹುದು. ಇಷ್ಟು ಕಡಿಮೆ ಬೆಲೆಯ ರೀಚಾರ್ಜ್‌ನಲ್ಲಿ ಎಲ್ಲ ಸೇವೆಯನ್ನು ಒಳಗೊಂಡ ಅದ್ಭುತ ರೀಚಾರ್ಜ್ ಯೋಜನೆ ಇದಾಗಿದೆ. 28 ದಿನ ಯಾವೆಲ್ಲ ಪ್ರಯೋಜನಗಳು ಗ್ರಾಹಕರಿಗೆ ಸಿಗುತ್ತವೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಇತರ ಖಾಸಗಿ ಟೆಲಿಕಾಂ ಸಂಸ್ಥೆಗಳ ದುಬಾರಿ ರೀಚಾರ್ಜ್ ಯೋಜನೆಗಳಿಂದ ಕಂಗೆಟ್ಟ ಮೊಬೈಲ್ ಬಳಕೆದಾರರಿಗೆ ಈ ರೀಚಾರ್ಜ್ ಯೋಜನೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲಿದೆ. ಕೇವಲ 51 ರೂಪಾಯಿಗೆ ಅಂಥದ್ದೊಂದು ಗಮನಾರ್ಹ ಯೋಜನೆ ಪರಿಚಯಿಸಿದೆ. ಮಾತ್ರವಲ್ಲದೇ ಉಚಿತ ಸಿಮ್ ಸಹ ನೀಡುತ್ತದೆ. ನೀವು 51ರೂ. ನೀಡಿ ಉಚಿತ ಸಿಮ್ ಪಡೆದುಕೊಂಡರೆ, ಉಚಿತ ಕರೆ ಮತ್ತು ಸಾಕಷ್ಟು ಹೈ-ಸ್ಪೀಡ್ ಇಂಟರ್‍ನೆಟ್ ಡೇಟಾ ಬಳಸಬಹುದು. ದೈನಂದಿನ ಎಸ್‌ಎಂಎಸ್ ಪ್ಯಾಕ್ ಸಹ ಇದರಲ್ಲಿಯೇ ಬರುತ್ತದೆ.

ಹೊಸ ಗ್ರಾಹಕರ ಆಕರ್ಷಣೆಗೆ ಮಸ್ತ್ ಪ್ಲ್ಯಾನ್
ದೇಶದಲ್ಲಿ 4 ಮತ್ತು 5ಜಿಗೆ ಅಪ್‌ಗ್ರೇಡ್ ಆಗುತ್ತಿರುವ BSNL ವಿಶೇಷ ಕೊಡುಗೆ 51 ರೂ. ಯೋಜನೆ ಮೂಲಕ ಹೊಸ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇಷ್ಟು ಹಣಕ್ಕೆ ಉಚಿತ ಸಿಮ್ ಸಿಗುವ ಜೊತೆಗೆ ಹಲವು ಉಚಿತ ಟೆಲಿಕಾಂ ಸೇವೆಗಳು ಲಭ್ಯವಿವೆ. ಈ ಪ್ಯಾಕೇಜ್ 28 ದಿನಗಳ ಮಾನ್ಯವಾಗಿರುತ್ತದೆ. ಅಂದರೆ ಸುಮಾರು ಒಂದು ತಿಂಗಳವರೆಗೆ ನಿಮ್ಮ ಮೊಬೈಲ್ ಸಿಮ್ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಅಷ್ಟು ದಿನವು ಉಚಿತ ಅನಿಯಮಿತ ಧ್ವನಿ ಕರೆಗಳು ಮಾಡಬಹುದು. ಎಷ್ಟು ಹೊತ್ತು ಬೇಕಾದರೆ ಕರೆಯಲ್ಲಿ ಮಾತನಾಡಬಹುದು. ಉಚಿತ ಕರೆಯನ್ನು ಆನಂದಿಸಲು ಸಾಧ್ಯವಾಗುತ್ತದೆ.
ಇದರೊಂದಿಗೆ ಪ್ರತಿನಿತ್ಯ ನೀವು 2ಜಿಬಿ ವೇಗದ ಇಂಟರ್‍ನೆಟ್ ಸೇವೆ ಪಡೆಯಬಹುದಾಗಿದೆ. ದಿನದ 24 ಗಂಟೆಗಳ ಒಳಗೆ 2ಜಿಬಿ ಬಳಸುತ್ತಿದ್ದಂತೆ ಮತ್ತೆ ಮಾರನೇ ದಿನ ಮತ್ತೆ ಖಾತೆಗೆ ಡೇಟಾ ಜಮೆ ಆಗುತ್ತದೆ. ಒಟ್ಟು 56ಜಿಬಿ ಇಂಟರ್‍ನೆಟ್ ಡೇಟಾ ಲಭ್ಯವಿರುತ್ತದೆ. ಮಾತ್ರವಲ್ಲದೇ ನಿತ್ಯ 100 ಉಚಿತ ಎಸ್‌ಎಂಎಸ್ ಸಂದೇಶ ಸಹ ಕಳುಹಿಸಬಹುದು.ಇಷ್ಟೆಲ್ಲ ಪ್ರಯೋಜನಗಳು ಅದು ದುಬಾರಿ ಕಾಲದಲ್ಲಿ ಒಂದೇ ರೀಚಾರ್ಜ್‌ನಿಂದ ಸಿಗುವಂತೆ BSNL ಮಾಡಿದೆ.
BSNL ಗ್ರಾಹಕರಿಗೆ 30 ದಿನದ ಮತ್ತೊಂದು ಯೋಜನೆ
ನೀವು ಈಗಾಗಲೇ BSNL ಗ್ರಾಹಕರಾಗಿದ್ದರೆ ನೀವು ಸಂಪೂರ್ಣ ಒಂದು ತಿಂಗಳ ರೀಚಾರ್ಜ್ ಯೋಜನೆ ಪಡೆಯಬಹುದು. ಹೊಸ ಸಿಮ್ ಖರೀದಿಸುವವರಿದ್ದರೆ ನಿಮಗೆ 255 ರೂಪಾಯಿ ಯೋಜನೆಯು ಉತ್ತಮ ಆಯ್ಕೆಯಾಗಬಹುದು. ಈ ಪ್ರಿಪೇಯ್ಡ್ ಯೋಜನೆ 30 ದಿನಗಳವರೆಗೆ ಮಾನ್ಯವಾಗಿರುತ್ತದೆ. ನಿತ್ಯ 2.5ಜಿಬಿ 4ಜಿ ಇಂಟರ್‍ನೆಟ್ ಸೇವೆಯನ್ನು ಬಳಸಬಹುದು. ಉಚಿತ ಅನಿಯಮಿತ ಕರೆ ಮಾಡಬಹುದು. ಪ್ರತಿದಿನ 100 ಎಸ್‌ಎಂಎಸ್ ಸಂದೇಶ ಕಳುಹಿಸಬಹುದು. ಖಾಸಗಿ ಕಂಪನಿಗಳ ರೀಚಾರ್ಜ್‌ಗಿಂತಲೂ ಈ ಯೋಜನೆ ಸಾಕಷ್ಟು ಅನುಕೂಲ ನೀಡಲಿದೆ. ಈ ರೀಚಾರ್ಜ್ ಯೋಜನೆ ಪಡೆದಲ್ಲಿ ನಿಮ್ಮ ದೈನಂದಿನ ಮೊಬೈಲ್ ವೆಚ್ಚ ಸುಮಾರು 7.50 ರೂಪಾಯಿ ಆಗಿರಲಿದೆ ಎಂದು ಕಂಪನಿ ತಿಳಿಸಿದೆ.
https://kannada.oneindia.com/news/bengaluru/bengaluru-airport-operator-bial-pays-rs-16-49-cr-dividend-to-karnataka-government-after-8-year-gap-014-455243.html












Click it and Unblock the Notifications