ಯಾರೂ ಸುರಕ್ಷಿತರಲ್ಲ! ಪ್ಲಂಬರ್, ಎಲೆಕ್ಟ್ರಿಷಿಯನ್ ವಲಯಕ್ಕೂ ಕಾಲಿಟ್ಟ ಎಐ: ಉದ್ಯೋಗ ಕ್ಷೇತ್ರದಲ್ಲಿ ಭಾರೀ ಬದಲಾವಣೆ

ಜಾಗತಿಕವಾಗಿ ವ್ಯಾಪಿಸಿರುವ ಹಾಗೂ ಉದ್ಯೋಗ ವಜಾಗೆ ಪ್ರಮುಖ ಕಾರಣವಾಗಿರುವ ಈ 'ಕೃತಕ ಬುದ್ಧಿಮತ್ತೆ ಯುಗ'ವು 2022ರಲ್ಲಿ ಓಪನ್‌ಎಐ (OpenAI) ಚಾಟ್‌ಜಿಪಿಟಿ (ChatGPT) ಬಿಡುಗಡೆಗೊಂಡ ಬಳಿಕ ಆರಂಭವಾಯಿತು. ಎಐ ಉದ್ಯೋಗಗಳ ಮೇಲೆ ಬೀರಬಹುದಾದ ಸಂಭಾವ್ಯ ಪರಿಣಾಮಗಳ ಕುರಿತು ತಜ್ಞರೇ ಅಧ್ಯಯನ ಆರಂಭಿಸಿರುವುದು ಮತ್ತೊಂದು ವಿಶೇಷ. ಐಟಿ ಕಂಪನಿಗಳು, ಸರ್ಕಾರಿ ಆಡಳಿತದ ಜೊತೆಗೆ ಇದೀಗ 'ಪ್ಲಂಬರ್, ಎಲೆಕ್ಟ್ರಿಷಿಯನ್ ವಲಯ'ಕ್ಕೂ ಎಐ ಕಾಲಿಟ್ಟಿದೆ. ಆ ಕಾರ್ಮಿಕರ ಕೆಲಸಗಳನ್ನು ಎಐ ಕಸಿದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ನಾವು ಇನ್ನಷ್ಟು ಬದಲಾವಣೆಗೆ ಸಾಕ್ಷಿ ಆಗಲಿದ್ದೇವೆ. ಜನರೇಟಿವ್ ಎಐ 2032ರ ಹೊತ್ತಿಗೆ ಜಾಗತಿಕವಾಗಿ ಶೇ.90 ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರಲಿವೆ ಎಂದು 2023ರಲ್ಲಿ ಕಾಗ್ನಿಜೆಂಟ್ ವರದಿ ಬಹಿರಂಗಪಡಿಸಿತ್ತು. ಇಂದು ಎಐ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ.

ಎಐ ಬಂದ ಮೇಲೆ ಯಾರೂ ಸುರಕ್ಷಿತರಲ್ಲ!

ಎಐ ಬಂದ ಮೇಲೆ ಪ್ರತಿ ನೌಕರರು ಅಪಾಯದಲ್ಲಿದ್ದಾರೆ. ಇದೀಗ "ಯಾರೂ ಸುರಕ್ಷಿತವಲ್ಲ" ಎಂದು ಇತ್ತೀಚೆಗೆ ಬಿಡುಗಡೆ ಆದ ಕಾಗ್ನಿಜೆಂಟ್‌ನ ಮತ್ತೊಂದು ವರದಿಯಲ್ಲಿ ತಿಳಿಸಲಾಗಿದೆ. ಕಾಗ್ನಿಜೆಂಟ್‌ನ ಸಂಶೋಧನಾ ಮುಖ್ಯಸ್ಥ ಆಲಿ ಓ'ಡೊನೊಗ್ಯೂ ಅವರ, ಎಐ ಯುಗದಲ್ಲಿ ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್‌ಗಳಂತಹ ಕೆಲಸಗಳೂ ಸಹ ವಿಕಸನಗೊಳ್ಳಲಿವೆ. ಪ್ಲಂಬರ್‌ ನಂತಹ ಕೆಲಸಗಳನ್ನು ಎಐ ಮಾಡುತ್ತವೆ. ಇದರ ಪ್ರಾಯೋಗಿಕ ಕೆಲಸಗಳು ಯಶಸ್ವಿಯಾಗುತ್ತಿದ್ದಂತೆ, ಈ ವಲಯದಲ್ಲಿ ಎಐ ವಿಸ್ತರಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

AI Impact

ಜನರೇಟಿವ್ ಎಐ ನಿರೀಕ್ಷೆಗೂ ಮೊದಲೇ ಮುಂಚೆಯೇ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಪ್ರಭಾವ ಉಂಟು ಮಾಡಲಿದೆ. ಅನೇಕರ ಸೃಜನಶೀಲತೆ ಕಸಿದುಕೊಳ್ಳಲುವ ಸಾಧ್ಯತೆ ಇದೆ. ಸದ್ಯದಲ್ಲಿ 93 ರಷ್ಟು ಉದ್ಯೋಗಗಳನ್ನು 'ಎಐ- ಸಾಮರ್ಥ್ಯ' ಎಂದು ವರ್ಗೀಕರಿಸಲಾಗಿದೆ. ಶೇ.30 ಪ್ರತಿಶತ ಉದ್ಯೋಗಗಳು ಗಂಭೀರ ಸ್ವರೂಪದ ಬದಲಾವಣೆ ಎದುರಿಸುತ್ತಿವೆ. ಅಂದರೆ ಹತ್ತು ವರ್ಷದಲ್ಲಿ ಆಗುವ ಬದಲಾವಣೆ ನಾಲ್ಕೇ ವರ್ಷಕ್ಕೆ ಆಗುವಷ್ಟರ ಮಟ್ಟಿಗೆ ಎಐ ಪ್ರಭಾವ ಬೀರುತ್ತಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಐದೇ ತಿಂಗಳಲ್ಲಿ 1,15,907 ಉದ್ಯೋಗ ನಷ್ಟ

ಸಾಫ್ಟವೇರ್ ಕಂಪನಿಗಳು ಸೇರಿದಂತೆ ಒಟ್ಟಾರೆ ಐಟಿ ತಂತ್ರಜ್ಞಾನ ಕಂಪನಿಗಳಲ್ಲಿ ಎಐ ಕೃತಕ ಬುದ್ಧಿಮತ್ತೆ ಅಳವಡಿಕೆ ಕಾಣದಿಂದ ಸಾವಿರಾರು ಮಂದಿಯ ಸಾಮೂಹಿಕ ವಜಾ ಪ್ರಕ್ರಿಯೆ ನಡೆಸಲಾಗಿದೆ. ಅದರಲ್ಲಿ ದೈತ್ಯ ಕಂಪನಿಗಳಾದ ಅಮೆಜಾನ್, ಒರಾಕಲ್, ಗೂಗಲ್ ಸೇರಿದಂತೆ ಹಲವು ಕಂಪನಿಗಳಿದ್ದು, ಇವು ಒಂದೇ ವರ್ಷದ ಅವಧಿಯಲ್ಲಿ ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ. layoffs.fyi ಪ್ರಕಾರ, 2026ರಲ್ಲಿ ಈವರೆಗೆ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಸುಮಾರು 1,15,907 ರಷ್ಟಿದೆ. ಕಳೆದ ವರ್ಷವು ಇದೇ ಅವಧಿಯಲ್ಲಿ ಈ ಸಂಖ್ಯೆ ಒಂದು ಲಕ್ಷ ದಾಟಿತ್ತು ಎಂಬುದು ಕಳವಳಕಾರಿ ಸಂಗತಿ.

Konkan Railway: ಬೆಂಗಳೂರು-ಕಾರವಾರ ಸೇರಿ ವಿವಿಧ ರೈಲುಗಳ ಪರಿಷ್ಕೃತ ಮುಂಗಾರು ವೇಳಾಪಟ್ಟಿ ಪ್ರಕಟ
Konkan Railway: ಬೆಂಗಳೂರು-ಕಾರವಾರ ಸೇರಿ ವಿವಿಧ ರೈಲುಗಳ ಪರಿಷ್ಕೃತ ಮುಂಗಾರು ವೇಳಾಪಟ್ಟಿ ಪ್ರಕಟ

ಎಐಗೆ ಒಗ್ಗಿಕೊಳ್ಳುವ ಪ್ರಮಾಣ ಏರಿಕೆ

2026ರ ಮಾರ್ಚ್‌ನಲ್ಲಿ ಆಂತ್ರೊಪಿಕ್ ಬಿಡುಗಡೆ ಮಾಡಿದ ಅಧ್ಯಯನದ ವರದಿಯಲ್ಲಿ 'ಸ್ಥಾಪನೆ ಮತ್ತು ದುರಸ್ತಿಯಂತಹ ಕೆಲಸ ಸೇರಿದಂತೆ ಒಟ್ಟು 22 ವೃತ್ತಿಗಳ ಮೇಲೆ ಎಐ ಪರಿಣಾಮ ಬೀರಲಿದೆ. ಒಟ್ಟಾರೆ ಇಡೀ ಉದ್ಯೋಗ ವಲಯಕ್ಕೆ ಎಐ ಭಯ ಕಾಡುತ್ತಿವೆ. ಇನ್ನೂ AI ತಂತ್ರಜ್ಞಾನ ಕಲಿಕೆ ಅಥವಾ ಅದರೊಂದಿಗೆ ಒಗ್ಗಿಕೊಳ್ಳುವಿಕೆಯ ಪ್ರಮಾನ 2032ಕ್ಕೆ ಶೇ.30ರಷ್ಟು ಹೆಚ್ಚಾಗಲಿದೆ. ಪ್ರತಿ ವರ್ಷ ಶೇ. 2ರಷ್ಟು ಏರಿಕೆ ಕಂಡರೂ ಸಹಿತ ಕಲಿಕೆ, ಒಗ್ಗಿಕೊಳ್ಳುವ ಪ್ರಮಾಣ ಮುಂದಿನ ಮೂರು ವರ್ಷಕ್ಕೆ ಶೇ.6ರಷ್ಟು ಹೆಚ್ಚಾಗಲಿದೆ.

ಇಂದಿನ ಉದ್ಯೋಗ ಮತ್ತು ಉದ್ಯೋಗ ಭವಿಷ್ಯ ಕುರಿತು ಅನೇಕ ವರದಿಗಳು ಎಚ್ಚರಿಕೆ ನೀಡುತ್ತಲೇ ಇವೆ. ಕಾಗ್ನಿಜೆಂಟ್‌ನ ಎಐ ಮುಖ್ಯ ವ್ಯಾಪಾರ ಅಧಿಕಾರಿ ಸುಶಾಂತ್ ವಾರಿಕೂ ಅವರು ಎಐಯಿಂದ ಹೊಸ 'ಮೂಲಗಳು" ಸೃಷ್ಟಿಯಾಗಬಹುದು. ಅದರಿಂದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ನಿರೀಕ್ಷೆ ಇದೆ. ಅದು ಮಾರುಕಟ್ಟೆಯಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ಕಾರಣವಾಗಬಹುದು ಎಐ ತಂತ್ರಜ್ಞಾನವು ವೈಟ್‌ಕಾಲರ್ ಉದ್ಯೋಗಗಳನ್ನು ಬಹುಬೇಗನೇ ಆವರಿಸಿಕೊಳ್ಳಲಿದೆ ಎಂದು ತಜ್ಞರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+