ಅದಾನಿ - ಅನುಷ್ಕಾ ಫೌಂಡೇಶನ್‌ನಿಂದ ಭಾರತದ ಐದು ರಾಜ್ಯಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕ್ಲಬ್‌ಫೂಟ್ ಮಕ್ಕಳಿಗೆ ಆರೋಗ್ಯ ನೆರವು

ಮಕ್ಕಳಿಗೆ ಚಿಕಿತ್ಸೆ ಸಂಬಂಧಿಸಿದಂತೆ ಅದಾನಿ ಫೌಂಡೇಶನ್ ಮತ್ತು ಅನುಷ್ಕಾ ಫೌಂಡೇಶನ್ ಮೂರು ವರ್ಷಗಳ ಅವಧಿಗೆ ವಿಶೇಷ ಒಪ್ಪಂದವನ್ನು ಮಾಡಿಕೊಂಡಿವೆ. ಮಧ್ಯಪ್ರದೇಶ, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶ ಐದು ರಾಜ್ಯಗಳಲ್ಲಿ ಕ್ಲಬ್‌ಫೂಟ್‌ನಿಂದ ಬಳಲುತ್ತಿರುವ 10,000ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ಮತ್ತು ನಂತರದ ಆರೈಕೆಯನ್ನು ಒದಗಿಸಲು ಮಹತ್ವಾಕಾಂಕ್ಷಿ ಉದ್ದೇಶದಿಂದ ಅದಾನಿ ಫೌಂಡೇಶನ್ ಮತ್ತು ಅನುಷ್ಕಾ ಫೌಂಡೇಶನ್ ಮೂರು ವರ್ಷಗಳ ಪಾಲುದಾರಿಕೆಯನ್ನು ಘೋಷಿಸಿವೆ.

ವಿಶ್ವ ಕ್ಲಬ್‌ಫೂಟ್ ದಿನದಂದು ಪ್ರಾರಂಭಿಸಲಾದ ಈ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಸಹಯೋಗದೊಂದಿಗೆ ಜಾರಿಗೆ ತರಲಾಗುವುದು ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆಯ ಮೂಲಕ ಆರಂಭಿಕ ಗುರುತಿಸುವಿಕೆ, ಅದಕ್ಕೆ ಚಿಕಿತ್ಸೆ ಹಾಗೂ ಹೆಚ್ಚುವರಿ ಆರೋಗ್ಯ ಚಿಕಿತ್ಸೆ ನೀಡುವ ಉದ್ದೇಶವನ್ನು ಈ ಯೋಜನೆಯು ಒಳಗೊಂಡಿದೆ ಎಂದು ಹೇಳಲಾಗಿದೆ.

Adani-Anushka

ಭಾರತದ ಐದು ರಾಜ್ಯಗಳಲ್ಲಿ ಕ್ಲಬ್‌ಫೂಟ್ ಹೊಂದಿರುವ 10,000ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಲು ಮತ್ತು ಆರೋಗ್ಯ ಕಾಪಾಡುವ ಉದ್ದೇಶದಿಂದ ಅದಾನಿ ಫೌಂಡೇಶನ್ ಮತ್ತು ಅನುಷ್ಕಾ ಫೌಂಡೇಶನ್ ರಾಷ್ಟ್ರೀಯ ಆರೋಗ್ಯ ಮಿಷನ್‌ನೊಂದಿಗೆ ಮೂರು ವರ್ಷಗಳ ಪಾಲುದಾರಿಕೆಯನ್ನು ಘೋಷಿಸಿವೆ. ಈ ಕಾರ್ಯಕ್ರಮವು 67 ಚಿಕಿತ್ಸಾ ಕೇಂದ್ರಗಳು, ಆರೋಗ್ಯ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ರೋಗಗಳ ಆರಂಭಿಕ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆಗಾಗಿ ರೋಗಿಗಳನ್ನು ಉಲ್ಲೇಖಿಸುವ ವ್ಯವಸ್ಥೆಯ ಮೇಲೆ ಕೇಂದ್ರೀಕರಿಸಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಮಾನ್ಯವರ್ ಕಾನ್ಶಿರಾಮ್ ಸಂಯುಕ್ತ ಚಿಕಿತ್ಸಾಲಯ ಮತ್ತು ಆಘಾತ ಕೇಂದ್ರದಲ್ಲಿ ಪಾಲುದಾರಿಕೆಯನ್ನು ಔಪಚಾರಿಕವಾಗಿ ಪ್ರಾರಂಭಿಸಲಾಯಿತು. ಸಂಘಟನೆಗಳ ಪ್ರಕಾರ, ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಕ್ಲಬ್‌ಫೂಟ್ ಪ್ರಕರಣಗಳನ್ನು ದಾಖಲಿಸುತ್ತಿದ್ದು, ಪ್ರತಿ ವರ್ಷ ಅಂದಾಜು 6,000 ಮಕ್ಕಳು ಈ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಕ್ಲಬ್‌ಫೂಟ್ ಆರೋಗ್ಯ ಸಮಸ್ಯೆ ಎಂದರೇನು

ಕ್ಲಬ್‌ಫೂಟ್ ಆರೋಗ್ಯ ಸಮಸ್ಯೆ ಎನ್ನುವುದು ಮಗುವೊಂದು ಜನಿಸುತ್ತಲ್ಲೇ ಜನನದ ಸಮಯದಲ್ಲಿ ಒಂದು ಅಥವಾ ಎರಡೂ ಪಾದಗಳು ಒಳಮುಖವಾಗಿ ಇರುತ್ತವೆ. ಈ ಸ್ಥಿತಿಯು ಪ್ರತಿ 800 ನವಜಾತ ಶಿಶುಗಳಲ್ಲಿ ಸುಮಾರು ಒಬ್ಬರ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕವಾಗಿ ಗುರುತಿಸಲ್ಪಟ್ಟ ಪೊನ್ಸೆಟಿ ವಿಧಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. ಆದಾಗ್ಯೂ, ವಿಳಂಬವಾದ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಸೀಮಿತ ಪ್ರವೇಶವು ಅನೇಕ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ, ವಿಶೇಷವಾಗಿ ಸೌಲಭ್ಯ ವಂಚಿತ ಸಮುದಾಯಗಳಲ್ಲಿ ಕಷ್ಟವಾಗಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ, ಮುಂದಿನ ಮೂರು ವರ್ಷಗಳಲ್ಲಿ 61 ಜಿಲ್ಲೆಗಳಲ್ಲಿ 67 ಕ್ಲಬ್‌ಫೂಟ್ ಚಿಕಿತ್ಸಾಲಯಗಳಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಂಬಲ ಸಿಗಲಿದೆ. ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಈ ಉಪಕ್ರಮವು ಸಮುದಾಯ ಸಂಪರ್ಕ, ಕ್ಲಿನಿಕಲ್ ಆರೈಕೆ, ಸಾಮರ್ಥ್ಯ ವೃದ್ಧಿ ಮತ್ತು ಕುಟುಂಬ ಬೆಂಬಲದ ಮೇಲೆ ಕೇಂದ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಈ ಕಾರ್ಯಕ್ರಮವು 51 ಆರೋಗ್ಯ ವೃತ್ತಿಪರರ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಕ್ಲಬ್‌ಫೂಟ್ ಸಮಸ್ಯೆ ಹೊಂದಿರುವ ಮಕ್ಕಳ ಆರಂಭಿಕ ಆರೋಗ್ಯ ಸಮಸ್ಯೆ ಪತ್ತೆ ಮತ್ತು ಸಕಾಲಿಕ ಆರೋಗ್ಯ ಸುಧಾರಿಸಲು 30,000ಕ್ಕೂ ಹೆಚ್ಚು ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಈ ಪಾಲುದಾರಿಕೆಯ ಕುರಿತು ಮಾತನಾಡಿದ ಅದಾನಿ ಫೌಂಡೇಶನ್‌ನ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು, ಆರಂಭಿಕ ಗುರುತಿಸುವಿಕೆ ಮತ್ತು ಚಿಕಿತ್ಸೆಯು ಕ್ಲಬ್‌ಫೂಟ್ ಹೊಂದಿರುವ ಮಕ್ಕಳು ಹೆಚ್ಚು ಸ್ವತಂತ್ರ ಜೀವನವನ್ನು ನಡೆಸಲು ಮತ್ತು ಶಿಕ್ಷಣ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಅನುಷ್ಕಾ ಫೌಂಡೇಶನ್‌ನ ಸಂಸ್ಥಾಪಕ ದೀಪಕ್ ಪ್ರೇಮ್‌ನಾರಾಯಣ್, ಈ ಸಹಯೋಗವು ಐದು ರಾಜ್ಯಗಳಲ್ಲಿ ಆರಂಭಿಕ ರೋಗನಿರ್ಣಯ ಮತ್ತು ಮಧ್ಯಸ್ಥಿಕೆಗಾಗಿ ವ್ಯವಸ್ಥೆಗಳನ್ನು ಬಲಪಡಿಸುವುದರ ಜೊತೆಗೆ ಗುಣಮಟ್ಟದ ಚಿಕಿತ್ಸೆಗೆ ಪ್ರವೇಶವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಭಾರತದಲ್ಲಿ ವಾರ್ಷಿಕವಾಗಿ ಅಂದಾಜು 33,000 ಮಕ್ಕಳು ಕ್ಲಬ್‌ಫೂಟ್ ಆರೋಗ್ಯ ಸಮಸ್ಯೆಯೊಂದಿಗೆ ಜನಿಸುತ್ತಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಬರುವ ಐದು ರಾಜ್ಯಗಳಲ್ಲಿಯೇ ಈ ರೀತಿಯ ಸುಮಾರು 12,000 ಪ್ರಕರಣಗಳು ವರದಿಯಾಗುತ್ತಿವೆ. ಸುಸ್ಥಿರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು, ಸುಧಾರಿತ ರೆಫರಲ್ ವ್ಯವಸ್ಥೆಗಳು ಹಾಗೂ ಕುಟುಂಬ ಬೆಂಬಲ ಕಾರ್ಯವಿಧಾನಗಳ ಮೂಲಕ ದೇಶದಲ್ಲಿನ ಕ್ಲಬ್‌ಫೂಟ್ ಸಮಸ್ಯೆಯ ಮಹತ್ವದ ಭಾಗವನ್ನು ನಿವಾರಿಸಲು ಈ ಉಪಕ್ರಮವು ಪ್ರಯತ್ನಿಸುತ್ತದೆ ಎಂದು ಸಂಸ್ಥೆಗಳು ತಿಳಿಸಿವೆ.

1996ರಲ್ಲಿ ಸ್ಥಾಪನೆಯಾದ ಅದಾನಿ ಫೌಂಡೇಶನ್, ಆರೋಗ್ಯ ರಕ್ಷಣೆ, ಶಿಕ್ಷಣ, ಸುಸ್ಥಿರ ಜೀವನೋಪಾಯಗಳು, ಹವಾಮಾನ ಕ್ರಮ ಮತ್ತು ಸಮುದಾಯ ಅಭಿವೃದ್ಧಿ ಸೇರಿದಂತೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರತಿಷ್ಠಾನವು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವಾರ್ಷಿಕವಾಗಿ 13.3 ಮಿಲಿಯನ್‌ಗಿಂತಲೂ ಹೆಚ್ಚು ಫಲಾನುಭವಿಗಳನ್ನು ತಲುಪುತ್ತದೆ.

ಅನುಷ್ಕಾ ಫೌಂಡೇಶನ್, ಸಾರ್ವಜನಿಕ ಆರೋಗ್ಯ ಪಾಲುದಾರಿಕೆಗಳ ಮೂಲಕ ಕ್ಲಬ್‌ಫೂಟ್ ಅನ್ನು ನಿರ್ಮೂಲನೆ ಮಾಡುವತ್ತ ಗಮನಹರಿಸಿದ ಲಾಭರಹಿತ ಸಂಸ್ಥೆಯಾಗಿದ್ದು, ಪ್ರಸ್ತುತ 13 ರಾಜ್ಯಗಳ 165 ಜಿಲ್ಲೆಗಳಲ್ಲಿ ಚಿಕಿತ್ಸಾ ಕಾರ್ಯಕ್ರಮಗಳನ್ನು ಬೆಂಬಲಿಸುತ್ತದೆ. ಈ ಸಂಸ್ಥೆಯು 26,000 ಕ್ಕೂ ಹೆಚ್ಚು ಮಕ್ಕಳಿಗೆ ಆರೈಕೆಯನ್ನು ಒದಗಿಸಿದೆ ಮತ್ತು ಭಾರತದಲ್ಲಿ ಕ್ಲಬ್‌ಫೂಟ್‌ನೊಂದಿಗೆ ಜನಿಸಿದ ಆರು ಮಕ್ಕಳಲ್ಲಿ ಒಬ್ಬರು ಅನುಷ್ಕಾ ಬೆಂಬಲಿತ ಚಿಕಿತ್ಸಾಲಯದ ಮೂಲಕ ಚಿಕಿತ್ಸೆ ಪಡೆಯುತ್ತಾರೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+