ಉದ್ಯೋಗಿಗಳು ಕೆಲಸ ಬಿಟ್ಟಾಗ 3 ದಿನ ಅತ್ತಿದ್ದೆ: ಮ್ಯಾಡ್‌ಚಾಟರ್ CEO ರಚನಾ ಬರುವಾ ಭಾವುಕ ನುಡಿ

ಒಂದು ಯಶಸ್ವಿ ಉದ್ಯಮವನ್ನು ಕಟ್ಟುವುದು ಮತ್ತು ಅದನ್ನು ಮುನ್ನಡೆಸುವುದು ಅಷ್ಟು ಸುಲಭದ ಮಾತಲ್ಲ. ವರ್ಷಗಳ ಕಾಲ ಶ್ರಮವಹಿಸಿ ಕಂಪನಿಯೊಂದನ್ನು ಬೆಳೆಸಿದರೂ, ಸಂಸ್ಥಾಪಕರಿಗೆ ಕೆಲವು ಘಟನೆಗಳು ಅನಿರೀಕ್ಷಿತವಾಗಿ ಭಾರಿ ಆಘಾತವನ್ನು ನೀಡುತ್ತವೆ. ಈ ಪೈಕಿ ಉದ್ಯೋಗಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವುದು ಸಿಇಒ ಅಥವಾ ಉದ್ಯಮಿಗಳಿಗೆ ಅತ್ಯಂತ ಕಷ್ಟ ಮತ್ತು ಭಾವನಾತ್ಮಕವಾಗಿ ಕುಗ್ಗಿಸುವ ಕ್ಷಣಗಳಲ್ಲಿ ಒಂದಾಗಿದೆ.

ಇತ್ತೀಚೆಗೆ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್ ಸಂಸ್ಥೆಯಾದ 'ಮ್ಯಾಡ್‌ಚಾಟರ್' ಸಂಸ್ಥಾಪಕಿ ಹಾಗೂ ಸಿಇಒ ಆಗಿರುವ ರಚನಾ ಬರುವಾ ಅವರು, ಕಂಪನಿಯನ್ನು ಮುನ್ನಡೆಸುವಾಗ ಎದುರಿಸುವ ಇಂತಹ ಹೇಳಿಕೊಳ್ಳಲಾಗದ ಮಾನಸಿಕ ತುಮುಲಗಳ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಮುಕ್ತವಾಗಿ ಬರೆದುಕೊಂಡಿದ್ದಾರೆ.

CEO Rachna Baruah

ಮ್ಯಾಡ್‌ಚಾಟರ್ ಸಿಇಒ ರಚನಾ ಬರುವಾ ಅವರ ಆರಂಭಿಕ ದಿನಗಳು

ದುಬೈ ಮತ್ತು ಮುಂಬೈನಲ್ಲಿ ಕಚೇರಿಗಳನ್ನು ಹೊಂದಿರುವ ಮ್ಯಾಡ್‌ಚಾಟರ್ ಸಂಸ್ಥೆಯನ್ನು ರಚನಾ ಬರುವಾ ಅವರು 2017ರಲ್ಲಿ ಹುಟ್ಟುಹಾಕಿದರು. ತಮ್ಮ ಸಂಸ್ಥೆಯ ಆರಂಭಿಕ ದಿನಗಳಲ್ಲಿ ಮೊದಲ ಕೆಲವು ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದಾಗ ತಾವು ಅನುಭವಿಸಿದ ನೋವನ್ನು ಅವರು ಹಂಚಿಕೊಂಡಿದ್ದಾರೆ. "ಒಬ್ಬ ಸಂಸ್ಥಾಪಕಿಯಾಗಿ, ನನ್ನ ಮೊದಲ ಕೆಲವು ಉದ್ಯೋಗಿಗಳು ರಾಜೀನಾಮೆ ನೀಡಿದಾಗ ಆದ ಹೃದಯವಿದ್ರಾವಕ ಅನುಭವ ನನಗೆ ಇನ್ನೂ ನೆನಪಿದೆ," ಎಂದು ಅವರು ಹೇಳಿದ್ದಾರೆ.

ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಬೆಳೆದು, ಉತ್ತಮ ಅವಕಾಶಗಳನ್ನು ಅರಸಿ ಹೋಗುತ್ತಿರುವುದಕ್ಕೆ ಅವರಿಗೆ ಅತೀವ ಸಂತೋಷವಿತ್ತು. ಆದರೆ, ಈ ಪ್ರಕ್ರಿಯೆ ಅವರಲ್ಲಿರುವ ಆತ್ಮವಿಶ್ವಾಸವನ್ನು ತೀವ್ರವಾಗಿ ಕುಗ್ಗಿಸುತ್ತಿತ್ತು.

'ಹೇ ನಿತಿನ್, ಡ್ರಿಂಕ್ಸ್‌ಗೆ ಬರ್ತೀರಾ?': ಸಿಇಒಗೆ ಆಫರ್ ಕೊಟ್ಟ ಜೆನ್ ಜಿ ಉದ್ಯೋಗಿ, ಕಾರ್ಪೊರೇಟ್ ಲೋಕದಲ್ಲಿ ಹೊಸ ಚರ್ಚೆ!
'ಹೇ ನಿತಿನ್, ಡ್ರಿಂಕ್ಸ್‌ಗೆ ಬರ್ತೀರಾ?': ಸಿಇಒಗೆ ಆಫರ್ ಕೊಟ್ಟ ಜೆನ್ ಜಿ ಉದ್ಯೋಗಿ, ಕಾರ್ಪೊರೇಟ್ ಲೋಕದಲ್ಲಿ ಹೊಸ ಚರ್ಚೆ!

ಉದ್ಯೋಗಿಗಳ ರಾಜೀನಾಮೆ

ಹೊರನೋಟಕ್ಕೆ ಉದ್ಯೋಗಿಗಳಿಗೆ ಬೆಂಬಲ ನೀಡಿದರೂ, ಅವರು ಒಳಗೊಳಗೆ ತೀವ್ರವಾದ ಮಾನಸಿಕ ನೋವನ್ನು ಎದುರಿಸಿದ್ದರು. "ಯಾರಿಗೂ ತಿಳಿಯದ ಇನ್ನೊಂದು ಕರಾಳ ಮುಖವೆಂದರೆ, ಉದ್ಯೋಗಿಗಳು ಕೆಲಸ ಬಿಟ್ಟಾಗ ನಾನು ಮುಂದಿನ ಮೂರು ದಿನಗಳ ಕಾಲ ಹಾಸಿಗೆಯಿಂದ ಮೇಲಕ್ಕೇಳಲಿಲ್ಲ. ಮುಖವನ್ನು ದಿಂಬಿನಲ್ಲಿ ಹುದುಗಿಸಿಕೊಂಡು ಅತ್ತಿದ್ದೆ.

ಬಾಸ್ ಆಗಿ, ಹಾಗೂ ಒಬ್ಬ ಮನುಷ್ಯಳಾಗಿ ನಾನು ಎಲ್ಲೋ ವಿಫಲಳಾಗಿದ್ದೇನೆ ಎಂಬ ಭಾವನೆ ನನ್ನನ್ನು ಕಾಡತೊಡಗಿತ್ತು. ಇದು ನನ್ನ ಅತಿಯಾದ ಆಲೋಚನೆಯ ಪರಿಣಾಮವಾಗಿತ್ತು," ಎಂದು ಅವರು ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ಕಲಿತ ಅತ್ಯಂತ ಕಷ್ಟಕರವಾದ ಪಾಠವೆಂದರೆ, ಉದ್ಯೋಗಿಗಳ ರಾಜೀನಾಮೆಯನ್ನು ವೈಯಕ್ತಿಕ ವೈಫಲ್ಯ ಎಂದು ಪರಿಗಣಿಸದಿರುವುದು.

ಉದ್ಯಮಶೀಲತೆಯ ಸವಾಲುಗಳು

ಉದ್ಯೋಗಿಗಳು ಒಂದಲ್ಲ ಒಂದು ದಿನ ಕೆಲಸ ಬಿಟ್ಟು ಹೋಗುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬಹಳ ದೃಢವಾಗಿರಬೇಕಾಗುತ್ತದೆ. "ಕಳೆದ ಒಂಬತ್ತು ವರ್ಷಗಳಲ್ಲಿ ನಾನು ರೂಢಿಸಿಕೊಳ್ಳಬೇಕಾಗಿ ಬಂದ ಅತ್ಯಂತ ಕಷ್ಟಕರವಾದ ಅಭ್ಯಾಸವೆಂದರೆ, ತಂಡದಿಂದ ಬರುವ ರಾಜೀನಾಮೆಗಳನ್ನು ಸಹಜವಾಗಿ ಸ್ವೀಕರಿಸುವುದು. ಜನರು ಅಂತಿಮವಾಗಿ ಬೇರೆಡೆಗೆ ಹೋಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು," ಎಂದು ಅವರು ಬರೆದಿದ್ದಾರೆ.

ಇಷ್ಟೆಲ್ಲಾ ಸವಾಲುಗಳ ನಡುವೆಯೂ, ಕೆಲಸ ಬಿಟ್ಟು ಹೋದ ಉದ್ಯೋಗಿಗಳೊಂದಿಗೆ ಬರುವಾ ಅವರು ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. "ಅವರಿಗೆ ಇಷ್ಟವಿರಲಿ ಅಥವಾ ಇಲ್ಲದಿರಲಿ, ನಾನು ಎಲ್ಲಾ ಮಾಜಿ ಮ್ಯಾಡ್‌ಚಾಟರ್ ಉದ್ಯೋಗಿಗಳೊಂದಿಗೆ ಸ್ನೇಹವನ್ನು ಕಾಯ್ದುಕೊಳ್ಳುತ್ತೇನೆ," ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.

CEO Rachna Baruah

ನಾಯಕತ್ವದ ಸವಾಲುಗಳು

"ಇಷ್ಟೊತ್ತಿಗಾಗಲೇ ನನ್ನ ಚರ್ಮ ದಪ್ಪಗಾಗಿರಬಹುದು ಎಂದು ನಾನು ಭಾವಿಸಿದ್ದೆ. ಆದರೆ ಎಲ್ಲಾ ಥೆರಪಿ ಮತ್ತು 'ಹೀಲಿಂಗ್'ಗಳ ಹೊರತಾಗಿಯೂ ಕೆಲವು ರಾಜೀನಾಮೆಗಳು ಈಗಲೂ ಎಲ್ಲಿಂದಲೋ ಬಂದು ಹೊಡೆದಂತೆ ಭಾಸವಾಗುತ್ತವೆ. ನನ್ನ ಮೊದಲ ಉದ್ಯೋಗಿಗಳ ಗುಂಪು ಬಿಟ್ಟು ಹೋದಾಗ 25 ವರ್ಷದ ಯುವತಿಯಾಗಿದ್ದ ನನಗೆ ಕಾಡಿದ್ದ ಅದೇ ಅನಿಶ್ಚಿತತೆಗೆ ನನ್ನನ್ನು ಇನ್ನು ಕಾಡುತ್ತದೆ," ಎಂದು ಅವರು ವಿವರಿಸಿದ್ದಾರೆ.

ನಕ್ಸಲ್ ಪೀಡಿತ ಹಳ್ಳಿಗಳ ಚಿತ್ರಣ ಬದಲಿಸಿದ IAS ಅಧಿಕಾರಿ: ನಮ್ರತಾ ಜೈನ್ ಅವರ ಸ್ಫೂರ್ತಿದಾಯಕ ಕಥೆ
ನಕ್ಸಲ್ ಪೀಡಿತ ಹಳ್ಳಿಗಳ ಚಿತ್ರಣ ಬದಲಿಸಿದ IAS ಅಧಿಕಾರಿ: ನಮ್ರತಾ ಜೈನ್ ಅವರ ಸ್ಫೂರ್ತಿದಾಯಕ ಕಥೆ

ನಾಯಕತ್ವದೊಂದಿಗೆ ಬರುವ ನಿರಂತರ ಭಾವನಾತ್ಮಕ ಏರಿಳಿತಗಳನ್ನು ನಿಭಾಯಿಸುವುದು ಉದ್ಯಮಶೀಲತೆಯ ಮತ್ತೊಂದು ದೊಡ್ಡ ಸವಾಲಾಗಿದೆ. ತಮ್ಮ ವೃತ್ತಿಪರ ಕಾರ್ಯನಿರ್ವಹಣೆಗೆ ಮಾತ್ರವಲ್ಲದೆ, ತಮ್ಮ ಸ್ವಂತ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಭಾವನಾತ್ಮಕ ಗಡಿಗಳನ್ನು ಸೃಷ್ಟಿಸಿಕೊಳ್ಳುವುದು ಅತ್ಯಗತ್ಯ ಎಂದು ಬರುವಾ ಹೇಳಿದ್ದಾರೆ. "ಉದ್ಯಮಶೀಲತೆಯಲ್ಲಿ ಈ ವಿಚಾರಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ," ಎಂದು ಹೇಳುವ ಮೂಲಕ ಅವರು ಎಲ್ಲರಿಗೂ ಕನೆಕ್ಟ್ ಆಗುವಂತಹ ವಾಸ್ತವವನ್ನು ತೆರೆದಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+