Daily Horoscope: ಹೊಸ ಮೈಲಿಗಲ್ಲು ಸಾಧಿಸುವರು ಈ ರಾಶಿಯವರು, ಅಪೂರ್ಣ ಕೆಲಸ ಪೂರ್ಣವಾಗುವುದು, ಹಣದ ಸಮಸ್ಯೆ ಪರಿಹಾರ

Horoscope June 24: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ರಾಹುಕಾಲವು ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 1:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಈ ದಿನ ನಿಮಗೆ ವಿಶೇಷ ದಿನವಾಗಿರುತ್ತದೆ. ನಿಮ್ಮ ವ್ಯಕ್ತಿತ್ವ ಮತ್ತು ಸ್ವಭಾವದಲ್ಲಿನ ಸಕಾರಾತ್ಮಕ ಬದಲಾವಣೆಗಳು ಕುಟುಂಬವನ್ನು ಸಂತೋಷಪಡಿಸುತ್ತವೆ. ನಿಕಟ ಸಂಬಂಧಿಯ ಆಗಮನವು ಮನೆಯಲ್ಲಿ ಸಂತೋಷದ ವಾತಾವರಣಕ್ಕೆ ಕಾರಣವಾಗುತ್ತದೆ. ಎದುರಿಸುತ್ತಿರುವ ವ್ಯವಹಾರ ಸಮಸ್ಯೆಗಳು ಇಂದು ಬಗೆಹರಿಯುತ್ತವೆ.

Horoscope June 24

ವೃಷಭ ರಾಶಿ (Taurus):

ತಾಯಿಯ ಸಲಹೆಯ ಮೇರೆಗೆ ಇಂದು ತೆಗೆದುಕೊಂಡ ನಿರ್ಧಾರವು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ನಿಮ್ಮ ನಂಬಿಕೆ ಹೆಚ್ಚಾಗುತ್ತದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಪೋಷಕರಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.

ಮಿಥುನ ರಾಶಿ (Gemini):

ನಿಮ್ಮ ವ್ಯಕ್ತಿತ್ವವು ಸಕಾರಾತ್ಮಕವಾಗಿ ಬದಲಾಗುತ್ತದೆ. ನಿಮ್ಮ ಜೀವನಶೈಲಿಯ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಸೂಕ್ತ ಸಮಯ. ಹಣಕಾಸಿನ ವಹಿವಾಟುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಬೇಕಾ ಬಿಟ್ಟಿ ಖರ್ಚು ಮಾಡುವುದು ಸಮಸ್ಯೆಗೆ ಕಾರಣವಾಗಬಹುದು.

ಕರ್ಕಾಟಕ ರಾಶಿ (Cancer):

ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ವ್ಯಾಪಾರ ವ್ಯವಹಾರ ನಡೆಸುವಾಗ ಎಚ್ಚರಿಕೆ ಅಗತ್ಯ. ಬಾಕಿ ಇರುವ ಹಣ ಕೈ ಸೇರುವುದು. ಕುಟುಂಬದೊಂದಿಗೆ ಸಂತೋಷಕರ ಸಮಯವನ್ನು ಕಳೆಯುವಿರಿ. ಸಹೋದ್ಯೋಗಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಆರ್ಥಿಕ ಲಾಭವಾಗುವುದು.

ಸಿಂಹ ರಾಶಿ (Leo):

ಸಿಂಹ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಇಂದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುತ್ತದೆ; ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ.

ಕನ್ಯಾ ರಾಶಿ (Virgo):

ಉತ್ಸಾಹದಿಂದ ತುಂಬಿದ ದಿನವಾಗಿರುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ವಿಯಾಗುವುದು.ವ್ಯವಹಾರದಲ್ಲಿ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಕೋಪದ ಮೇಲೆ ನಿಯಂತ್ರಣವಿದ್ದರೆ ಒಳ್ಳೆಯದು. ಇಲ್ಲವಾದರೆ ಕೆಲಸ ಕೆಡಬಹುದು.

ತುಲಾ ರಾಶಿ (Libra):

ನಿಮ್ಮ ಪಾಲಿನ ಅದೃಷ್ಟದ ದಿನ ನೀವು ಮಾಡುವ ಕೆಲಸಕ್ಕೆ ನಿಮ್ಮ ಸಂಗಾತಿ ಮತ್ತು ಕುಟುಂಬ ಸದಸ್ಯರಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಇದು ನಿಮ್ಮ ಸಂಬಂಧಗಳಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತದೆ. ವ್ಯಾಪಾರ ಚಟುವಟಿಕೆಗಳು ಸುಧಾರಿಸುತ್ತವೆ. ವಿದ್ಯಾರ್ಥಿಗಳಿಗೆ ಇಂದು ಶುಭದಿನವಾಗಿರಲಿದೆ.

ವೃಶ್ಚಿಕ ರಾಶಿ(Scorpio):

ಬಹಳ ದಿನಗಳಿಂದ ಖರೀದಿಸಬೇಕು ಅಂದುಕೊಂಡಿರುವ ವಸ್ತುವನ್ನು ಖರೀದಿಸುವುದು ಸಾಧ್ಯವಾಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭವಾಗುವುದು. ಕೋಪವನ್ನು ನಿಯಂತ್ರಣದಲ್ಲಿಡಿ.

ಧನು ರಾಶಿ (Sagitarius):

ಧನು ರಾಶಿಯವರಿಗೆ ಉತ್ತಮ ದಿನವಾಗಿರಲಿದೆ. ನಿಮ್ಮ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ. ಸಾಲದಿಂದ ಮುಕ್ತಿ ಸಿಗುವುದು. ಕ್ರೀಡೆಗಳಲ್ಲಿ ತೊಡಗಿರುವವರಿಗೆ ಯಶಸ್ಸು ಸಿಗುವುದು. ಅಂದುಕೊಂಡ ಕಾರ್ಯ ಕೈಗೂಡುವುದು.

ಮಕರ ರಾಶಿ (Capricorn):

ಕೆಲಸದ ಹೊರೆ ಹೆಚ್ಚಾಗುವುದು. ಇದು ನಿಮ್ಮ ಕುಟುಂಬದಲ್ಲಿ ಪರಸ್ಪರ ಪ್ರೀತಿ ಹೆಚ್ಚಾಗಲು ಕಾರಣವಾಗುವುದು. ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಕುಟುಂಬದಲ್ಲಿನ ಆಸ್ತಿ ಸಮಸ್ಯೆ ಬಗೆಹರಿಯಬಹುದು. ಸಂತೋಷ ಹೆಚ್ಚಾಗುವುದು.

ಕುಂಭ ರಾಶಿ (Aquarius):

ಯಾವುದೇ ಕೆಲಸವಿರಲಿ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನ ಇಂದು ಅದ್ಭುತವಾಗಿರುತ್ತದೆ. ವ್ಯವಹಾರದಿಂದ ಲಾಭ ಪಡೆಯುವಿರಿ. ವಿದೇಶದಿಂದ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು.

ಮೀನ ರಾಶಿ (Pisces):

ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚುತ್ತದೆ. ಆದಾಯದ ಹೊಸ ಮಾರ್ಗ ತೆರೆದುಕೊಳ್ಳುವುದು. ಹೊಸ ವಾಹನವನ್ನು ಖರೀದಿಸುವ ಕನಸು ಇಂದು ನನಸಾಗುತ್ತದೆ. ಹಠಾತ್ ಆರ್ಥಿಕ ಲಾಭವಾಗುವುದು. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+