ಟ್ರಿಪ್‌ ಮತ್ತು ತೆರೆಪಿ ಜೊತೆ ಮ್ಯಾಚ್‌‌ ಮೇಕಿಂಗ್: ಜೀವನ ಸಂಗಾತಿಯ ಹುಡುಕಾಟಕ್ಕೆ ಹೊಸ ಆಯಾಮ

ಇತ್ತೀಚಿನ ದಿನಗಳಲ್ಲಿ ಮದುವೆ, ಸಂಬಂಧ ಎಲ್ಲವೂ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಮದುವೆ ಅಂದರೆ ಮೊದಲೆಲ್ಲಾ ಇದ್ದದ್ದು ಒಂದೋ ಲವ್‌ ಮ್ಯಾರೇಜ್‌ ಅಥವಾ ಅರೇಂಜ್ಡ್‌ ಮ್ಯಾರೇಜ್.‌ ಪ್ರೇಮ ವಿವಾಹದಲ್ಲಿ ಹುಡುಗ-ಹುಡುಗಿ ತಮ್ಮ ಮನಸ್ಸಿನ ಇಚ್ಛೆಯಂತೆ, ತಮಗೆ ಬೇಕಾದಂತ ವರನನ್ನು ಅಥವಾ ವಧುವನ್ನು ಆರಿಸಿಕೊಳ್ಳುವುದು. ನಂತರ ಮನೆ ಮಂದಿಯ ಒಪ್ಪಿಗೆ ಪಡೆದು ಕೆಲವೊಮ್ಮೆ ಒಪ್ಪಿಗೆ ಪಡೆಯದೆಯೇ ಮದುವೆಯಾಗುವುದು. ಇನ್ನು ಅರೇಂಜ್‌ ಮ್ಯಾರೇಜ್‌ನಲ್ಲಿ ಹಿರಿಯರು ಹುಡುಕಿ, ನೋಡಿ, ಪೂರ್ವಾಪರಗಳನ್ನು ಅರಿತುಕೊಂಡು ಮದುವೆ ನಿಶ್ಚಯ ಮಾಡುವುದು. ಆದರೆ ಈಗ ವಧು ವರರ ಹುಡುಕಾಟ ಹೊಸ ಹೊಸ ರೀತಿಯಲ್ಲಿ ನಡೆಯುತ್ತಿದೆ.

ಈಗಿನ ಜನರೇಶನ್‌ನವರು ಜೀವನದಲ್ಲಿ ಪ್ರೀತಿ ಹುಡುಕುವುದರಕ್ಕೇ ಕಷ್ಟಪಡುತ್ತಿದ್ದಾರೆ. ಪ್ರೀತಿಯ ಹುಡುಕಾಟದಲ್ಲಿ ಹೊಸ ಹೊಸ ಡೇಟಿಂಗ್‌ ಆಪ್‌ಗಳತ್ತ ಮನಸ್ಸು ಹರಿಸುತ್ತಿದ್ದಾರೆ. ಇಲ್ಲೂ ಆಧುನಿಕ ಡೇಟಿಂಗ್ ಆಪ್‌ಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆನ್‌ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್‌ಗಳು ಈ ಸಂಕೀರ್ಣತೆಗೆ ಮತ್ತಷ್ಟು ಪದರಗಳನ್ನು ಸೇರಿಸಿದೆ. ಸಂಬಂಧಗಳಿಗೆ ಹೊಸ ಹೊಸ ಹೆಸರುಗಳನ್ನು ನೀಡುತ್ತಿದೆ. ಸಿಚುಯೇಶನ್‌ಶಿಪ್, ಘೋಸ್ಟಿಂಗ್, ಬೆಂಚಿಂಗ್, ಕುಷನಿಂಗ್‌ನಂತಹ ಹೊಸ ಶಬ್ದಗಳನ್ನು ಪರಿಚಯಿಸುತ್ತಿದೆ. ಇದರಿಂದ ಯುವಕರು ಸಂತಸ, ತೃಪ್ತಿಪಡುವ ಬದಲು ಹೆಚ್ಚು ದಣಿಯುತ್ತಿದ್ದಾರೆ. ಹೀಗಾಗಿ ಜನರು ಇದೀಗ ಈ ಅಪ್ಲಿಕೇಶನ್‌ಗಳಿಂದಲೂ ದೂರ ಸರಿಯುತ್ತಿದ್ದಾರೆ. ಇದರ ಬದಲಿಗೆ ರನ್ನಿಂಗ್ ಕ್ಲಬ್‌ಗಳಿಗೆ ಸೇರುತ್ತಿದ್ದಾರೆ. ನೆರೆಹೊರೆಯ ಪಬ್‌ಗಳಲ್ಲಿ ಬಿಯರ್ ಹೀರುತ್ತಾ ಮಾತುಕತೆಗೆ ಇಳಿಯುವುದನ್ನು ಆನಂದಿಸುತ್ತಿದ್ದಾರೆ. ಫ್ಲರ್ಟಿಂಗ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Modern Matchmaking Trends

ವರ್ಷದಿಂದ ವರ್ಷಕ್ಕೆ ನಮ್ಮಲ್ಲಿ ಡೇಟಿಂಗ್ ಹೊಸ ರೂಪ ಪಡೆಯುತ್ತಿದ್ದ ಹಾಗೆ ಮ್ಯಾಚ್‌ಮೇಕಿಂಗ್ ಕೂಡಾ ಸದ್ದಿಲ್ಲದೆ ಹೊಂದಿಕೊಳ್ಳುತ್ತಿದೆ. ಪ್ರೀತಿ, ಪ್ರೇಮ ಪ್ರಣಯ ಮತ್ತು ವಾಸ್ತವದ ನಡುವೆ ಸಿಲುಕಿರುವ ಪೀಳಿಗೆಯ ಅಗತ್ಯಗಳಿಗೆ ಸರಿಹೊಂದುವಂತೆ ತನ್ನನ್ನು ತಾನು ಮರುರೂಪಿಸಿಕೊಳ್ಳುತ್ತಿದೆ.

ಮ್ಯಾಚ್‌ಮೇಕಿಂಗ್ ಎಂದರೆ ಮನೆಗೆ ನೆಂಟರಿಷ್ಟರೊಂದಿಗೆ ಭೇಟಿ ನೀಡಿ ಅಪರಿಚಿತ ವ್ಯಕ್ತಿಯನ್ನು ಭೇಟಿ ನೀಡುವ ಪ್ರಕ್ರಿಯೆಗೆ ಆಧುನಿಕ ಪರ್ಯಾಯವಲ್ಲ. WhatsApp ಮೂಲಕ ಬಯೋಡೇಟಾಗಳನ್ನು ಕಳುಹಿಸಿ ವೈಯಕ್ತಿಕ ಮೀಟಿಂಗ್‌ಗಳನ್ನು ಮಾಡುವ ವಿಧಾನವೂ ಅಲ್ಲ. ಇದಕ್ಕೆ ಬದಲಾಗಿ ಗಂಭೀರ ಡೇಟಿಂಗ್ ಅಥವಾ ಡೇಟ್-ಟು-ಮೇರಿ ಪ್ಲಾಟ್‌ಫಾರ್ಮ್‌ಗಳಂತಹ ಹೊಸ ಪ್ಲಾಟ್‌ಫಾರಂಗಳು ಹುಟ್ಟಿಕೊಂಡಿವೆ.

ಹುಟ್ಟಿನಿಂದಲೇ ತಿಳಿಯಬಹುದು ವ್ಯಕ್ತಿತ್ವ: ಜೂನ್‌ನಲ್ಲಿ ಜನಿಸಿದ ಮಹಿಳೆಯರ ವೃತ್ತಿ, ಸಾಮರ್ಥ್ಯ, ಜೀವನ ಮಾರ್ಗ ಹೀಗಿರುವುದು
ಹುಟ್ಟಿನಿಂದಲೇ ತಿಳಿಯಬಹುದು ವ್ಯಕ್ತಿತ್ವ: ಜೂನ್‌ನಲ್ಲಿ ಜನಿಸಿದ ಮಹಿಳೆಯರ ವೃತ್ತಿ, ಸಾಮರ್ಥ್ಯ, ಜೀವನ ಮಾರ್ಗ ಹೀಗಿರುವುದು

ಡೇಟ್-ಟು-ಮೇರಿ ಆ್ಯಪ್‌ಗಳ ಉದಯ:

"ಸಾಮಾನ್ಯವಾಗಿ, ಪೋಷಕರು ತಮ್ಮ ಮಕ್ಕಳ ಪ್ರೊಫೈಲ್‌ಗಳನ್ನು ನಿರ್ವಹಿಸುತ್ತಾರೆ. ಆದರೆ ಆ ವ್ಯಕ್ತಿ ಮದುವೆಯಾಗಲು ಇಷ್ಟವಿದೆಯೋ ಇಲ್ಲವೋ ಎಂದು ತಿಳಿದಿರುವುದಿಲ್ಲ. ಹೀಗಿರುವಾಗ ತಂದೆ ತಾಯಿ ನೀಡಿರುವ ವಿವರಗಳು ಸಂಪೂರ್ಣ ಸತ್ಯವಾಗಿರುತ್ತದೆ ಎಂದು ಹೇಲಲು ಬರುವುದಿಲ್ಲ.ಹಾಗಾಗಿ ಈಗ ಯುವಕರು ಪರ್ಸನಲೈಸ್ಡ್‌ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್‌ಗೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುತ್ತಿದ್ದಾರೆ.

ಪರ್ಸನಲೈಸ್ಡ್‌ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮದುವೆಯಾಗಲು ಬಯಸುವ ವ್ಯಕ್ತಿಯ ಇಷ್ಟ- ಕಷ್ಟಗಳು, ವ್ಯಕ್ತಿತ್ವ, ನಿರೀಕ್ಷೆಗಳು, ಜೀವನಶೈಲಿ ಮತ್ತು ಜೀವನದ ದೃಷ್ಟಿಕೋನಗಳ ಬಗ್ಗೆ ಹೇಳುವ ಪ್ರೊಫೈಲ್‌ನ್ನು ನೀಡುತ್ತದೆ. ಇಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿನ್ನು ಪ್ರಶ್ನೆಗಳ ರೂಪದಲ್ಲಿ ಕೇಳಿ ಸಂಗ್ರಹಿಸಲಾಗುತ್ತದೆ. ಮನೋವಿಜ್ಞಾನ ವೃತ್ತಿಪರರು ವಿನ್ಯಾಸಗೊಳಿಸಿದ ಸೈಕೋಮೆಟ್ರಿಕ್ ಪರೀಕ್ಷೆಗಳು ಮೌಲ್ಯಗಳು, ವ್ಯಕ್ತಿತ್ವ ಪ್ರಕಾರ ಮತ್ತು ಸಂಘರ್ಷ-ಪರಿಹಾರ ಶೈಲಿಯನ್ನು ನಿರ್ಣಯಿಸುತ್ತವೆ. ಇವೆಲ್ಲವೂ ಸರಿಯಾದ ಸಂಗಾತಿಯನ್ನು ಹುಡುಕಲು ಸಹಾಯ ಮಾಡುತ್ತದೆ.

ಮನೆ ಕೆಲಸಗಳಿಗೆ 'ಲೈಫ್‌ಸ್ಟೈಲ್‌ ಮ್ಯಾನೇಜರ್'‌ ಒಬ್ಬರಿದ್ದರೆ ಎಲ್ಲ ಕೆಲಸವೂ ಸರಾಗ: ಇದು ಹೊಸ ಟ್ರೆಂಡ್‌
ಮನೆ ಕೆಲಸಗಳಿಗೆ 'ಲೈಫ್‌ಸ್ಟೈಲ್‌ ಮ್ಯಾನೇಜರ್'‌ ಒಬ್ಬರಿದ್ದರೆ ಎಲ್ಲ ಕೆಲಸವೂ ಸರಾಗ: ಇದು ಹೊಸ ಟ್ರೆಂಡ್‌

ಈ ಅಪ್ಲಿಕೇಶನ್‌ಗಳು ವ್ಯಕ್ತಿಯ ಲೈಫ್‌ ಜರ್ನಿ ಮತ್ತು ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ವಿವರವಾದ ವೀಡಿಯೊ ಕರೆಗಳನ್ನು ನಡೆಸುತ್ತದೆ.ಇಲ್ಲಿ ವ್ಯಕ್ತಿ ಡೇಟಿಂಗ್ ಮಾಡುವ ಬಗ್ಗೆ ಗಂಭೀರವಾಗಿಲ್ಲ ಎನ್ನುವುದು ಕಂಡು ಬಂದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಲು ಥೆರಪಿ:

ಇಲ್ಲಿ ಸಂಬಂಧ ಸಲಹೆಗಾರರು ಮತ್ತು ಮನಶ್ಶಾಸ್ತ್ರಜ್ಞರು ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗುತ್ತಿದ್ದಾರೆ. ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಇವರು ಸಹಾಯ ಮಾಡುತ್ತಾರೆ. ವೆರೋನಾದಂಥಹ ಪ್ಲಾಟ್‌ಫಾರಂನ ಖಾಸಗಿ ಆಫ್‌ಲೈನ್ ಕಾರ್ಯಕ್ರಮ ಬರ್ಗಂಡಿಯಲ್ಲಿ, ವರ್ಷಕ್ಕೆ 2 ಲಕ್ಷ ರೂ. ಮತ್ತು ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲಿ ಬಳಕೆದಾರರ ಜೊತೆ ನಿಕಟವಾಗಿ ಕೆಲಸ ಮಾಡಲೆಂದೇ ಒಬ್ಬ ಸಂಬಂಧ ತರಬೇತುದಾರರನ್ನು ಮೀಸಲಿಡಲಾಗುತ್ತದೆ.

ಈ ಜರ್ನಿಯಲ್ಲಿ ಕೆಲವೊಮ್ಮೆ ಒಂಟಿತನ ಕಾಡಬಹುದು. ನಿಮಗೆ ಇಷ್ಟವಾದವರು ನಿಮ್ಮನ್ನು ಇಷ್ಟಪಡದೇ ಇರಬಹುದು. ಅವರು ನಿಮ್ಮ ಸಂಬಂಧವನ್ನು ತಿರಸ್ಕರಿಸಬಹುದು. ಹೀಗಾದಾಗ ಮನಸ್ಸನ್ನು ಹಗುರಾಗಿಸಲು ಥೆರಪಿ ಮತ್ತು ಸಮಾಲೋಚನೆಯನ್ನು ನೀಡಲಾಗುತ್ತದೆ. ಪ್ರಮಾಣೀಕೃತ ಸಂಬಂಧ ತರಬೇತುದಾರರು ವಾರಕ್ಕೊಮ್ಮೆಯಾದರೂ ನಿಮ್ಮನ್ನು ಕಾಂಟೆಕ್ಟ್‌ ಮಾಡುತ್ತಾರೆ. ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತಾರೆ.

ಇಲ್ಲಿ ಬಹಳ ಮುಖ್ಯವಾದ ಸಂಗತಿಯೆಂದರೆ ಈ ಮ್ಯಾಚ್‌ಮೇಕಿಂಗ್ ಪ್ಲಾಟ್‌ಫಾರ್ಮ್‌ಗಳು ಪೋಷಕರಿಗೆ ತಮ್ಮ ಮಕ್ಕಳ ಪರವಾಗಿ ಪ್ರೊಫೈಲ್‌ಗಳನ್ನು ರಚಿಸಲು ಅಥವಾ ನಿರ್ವಹಿಸಲು ಅನುಮತಿ ನೀಡುವುದಿಲ್ಲ. ಯಾರಿಗಾಗಿ ಸಂಗಾತಿ ಹುಡುಕಲಾಗುತ್ತದೆಯೋ ಅವರೇ ನೇರವಾಗಿ ಭಾಗಿಯಾಗಬೇಕು. ಯಾಕೆಂದರೆ ಇಂಥಹ ವೇದಿಕೆಗಳಲ್ಲಿ ಪೋಷಕರು ಮದ್ಯಪಾನ, ಧೂಮಪಾನ ಅಥವಾ ಕೆಲವೊಂದು ಕೆಟ್ಟ ಚಟಗಳ ಬಗ್ಗೆ ಬಹಿರಂಗಪಡಿಸದೇ ಇರಬಹುದು. ಆಗ ಹುಡುಗ ಅಥವಾ ಹುಡುಗಿಯ ಬಗ್ಗೆ ನಿಖರವಾದ ಮಾಹಿತಿ ರವಾನೆಯಾದಂತೆ ಆಗುವುದಿಲ್ಲ.

ಸಂಗಾತಿ ಹುಡಕಾಟಕ್ಕೆ ಪ್ರಯಾಣ:

ಜನರು ಈಗ ಮತ್ತೆ ಆಫ್‌ಲೈನ್ ಸೆಟ್ಟಿಂಗ್‌ಗೆ ಹಿಂತಿರುಗುತ್ತಿದ್ದಾರೆ. ಮುಂಬೈ, ದೆಹಲಿ, ಬೆಂಗಳೂರು ಮತ್ತು ಪುಣೆಯಂತಹ ನಗರಗಳಲ್ಲಿ ಮತ್ತು ಜಾಗತಿಕವಾಗಿ ಕ್ಯುರೇಟೆಡ್ ಪರಿಸರದಲ್ಲಿ 40 ರಿಂದ 60 ಸಿಂಗಲ್ಸ್‌ಗಳನ್ನು ಒಟ್ಟುಗೂಡಿಸಲಾಗುತ್ತದೆ. ಇಲ್ಲಿ ಮಾತುಕತೆಗೆ ಯಾರೂ ಬಲವಂತ ಮಾಡುವುದಿಲ್ಲ. ಸಂಭಾಷಣೆಗಳು ಸ್ವಾಭಾವಿಕವಾಗಿ ತೆರೆದುಕೊಳ್ಳಲು ಅನುವು ಮಾಡಿಕೊಡುವ ಸ್ಥಳವಾಗಿದೆ.

ಇಲ್ಲಿ ಎಲ್ಲರನ್ನೂ ಒಂದೇ ಕೋಣೆಯಲ್ಲಿ ಇಡುವುದಿಲ್ಲ. ಬದಲಾಗಿ ಕೆಲವೊಂದು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಈ ಚಟುವಟಿಕಯಲ್ಲಿ ಭಾಗವಹಿಸುವ ಮೂಲಕ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಯಾರಾದರೂ ಇಷ್ಟವಾಗಬಹದು. ಇದು ಸಂಬಂಧ ಬೆಳೆಸುವುದಕ್ಕೆ ದಾರಿ ಮಾಡಿಕೊಡಬಹುದು.

ಮ್ಯಾಚ್‌ಮೇಕಿಂಗ್ ಟ್ರಿಪ್‌ಗಳು ಕ್ಯುರೇಟೆಡ್ ಗುಂಪು ಪ್ರಯಾಣಗಳಾಗಿವೆ. ಅಲ್ಲಿ ವೃತ್ತಿಪರ ಮ್ಯಾಚ್‌ಮೇಕರ್‌ಗಳ ಮಾರ್ಗದರ್ಶನದಲ್ಲಿ ಒಂಟಿಯಾಗಿರುವವರನ್ನು ಜೋಡಿಯಾಗಿಸುವ ಉದ್ದೇಶದೊಂದಿಗೆ ಒಟ್ಟಿಗೆ ಟ್ರಿಪ್‌ ಮಾಡಿಸಲಾಗುತ್ತದೆ. ಇವು ಸಾಮಾನ್ಯವಾಗಿ ಮೂರರಿಂದ ಏಳು ದಿನಗಳವರೆಗೆ ಇರುತ್ತದೆ. ಮನಾಲಿ, ಋಷಿಕೇಶ, ಗೋವಾ ಅಥವಾ ಪಾಂಡಿಚೇರಿಯಂತಹ ಸ್ಥಳಗಳಲ್ಲಿ ಈ ಟ್ರಿಪ್‌ ನಡೆಯುತ್ತದೆ.

ಪ್ರಯಾಣವನ್ನು ರಚನಾತ್ಮಕ ಸಂವಹನಗಳೊಂದಿಗೆ ಸಂಯೋಜಿಸುವುದು ಇದರ ಉದ್ದೇಶ. ಚಟುವಟಿಕೆಗಳನ್ನು ಐಸ್-ಬ್ರೇಕರ್‌ಗಳು, ಹೊಂದಾಣಿಕೆ ಅವಧಿಗಳು ಮತ್ತು ವ್ಯಕ್ತಿತ್ವ-ಆಧಾರಿತ ಹೊಂದಾಣಿಕೆಯೊಂದಿಗೆ ಬೆರೆಸಲಾಗುತ್ತದೆ.̈ ಇಲ್ಲಿ ಹೆಚ್ಚು ಸ್ವಯಂ-ಅರಿವುಳ್ಳ ಪೀಳಿಗೆಗಾಗಿ ಕಟ್ಟುನಿಟ್ಟಿನ ಅಂಶಗಳನ್ನು ತೆಗೆದುಹಾಕಲಾಗಿದೆ. ಆಧುನಿಕ ಡೇಟಿಂಗ್‌ನ ಅವ್ಯವಸ್ಥೆಯಲ್ಲಿ ನ್ಯಾವಿಗೇಟ್ ಮಾಡುವ ಅನೇಕರಿಗೆ, ಇದು ಸಹಾಯ ಮಾಡಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+