ವಿಶ್ವಕಪ್ 2022: ಇಂಗ್ಲೆಂಡ್ ತಂಡದಲ್ಲಿ ಯಾರು ಇನ್? ಯಾರು ಔಟ್?
ಕ್ರೀಡಾಲೋಕದ ಅತ್ಯಂತ ದೊಡ್ಡ ಫುಟ್ಬಾಲ್ ಹಬ್ಬಕ್ಕೆ ಕತಾರ್ ಮೈದಾನಗಳು ಅಣಿಯಾಗಿವೆ. ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್ ಬಲಿಷ್ಠ ತಂಡವನ್ನು ಪ್ರಕಟಿಸಿದ ಬಳಿಕ, ಇಂಗ್ಲೆಂಡ್ ಕೂಡಾ ತನ್ನ 26 ಸದಸ್ಯ ಬಲದ ಸಮತೋಲನದಿಂದ ಕೂಡಿದ ತಂಡವನ್ನು ಘೋಷಿಸಿದೆ.
ಸತತ ಏಳನೇ ಬಾರಿಗೆ ಇಂಗ್ಲೆಂಡ್ ತಂಡ ವಿಶ್ವಕಪ್ ಪಂದ್ಯಾವಳಿಗೆ ನೇರವಾಗಿ ಎಂಟ್ರಿ ಕೊಡುತ್ತಿದೆ. 1966 ರ ಬಳಿಕ ಕಪ್ ಎತ್ತುವ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ.
ಯುವ ಹಾಗೂ ಹಿರಿಯ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಇಂಗ್ಲೆಂಡ್ ಬಾಸ್ ಗರೇತ್ ಸೌತ್ ಗೇಟ್ ಹೇಳಿದ್ದಾರೆ.

ಯುಎಸ್ಎ, ವೇಲ್ಸ್, ಇರಾನ್ ಜೊತೆಗೆ ತ್ರಿ ಲಯನ್ಸ್ ತಂಡ ಬಿ ಗುಂಪಿನಲ್ಲಿದೆ. ಹೆಚ್ಚಿನ ಪ್ರತಿರೋಧವಿಲ್ಲದೆ ಇಂಗ್ಲೆಂಡ್ ನಾಕೌಟ್ ಹಂತ ತಲುಪುವ ನಿರೀಕ್ಷೆಯಿದೆ. ಇಂಗ್ಲೆಂಡ್ ತಂಡದ
ಗೋಲ್ ಕೀಪರ್ಸ್:
ನಿಕ್ ಪೋಪ್ (ನ್ಯೂ ಕ್ಯಾಸಲ್ ಯುನೈಟೆಡ್)
ಅರೋನ್ ರಾಮ್ಸ್ ಡೇಲ್ (ಆರ್ಸೆನಲ್)
ಡೀನ್ ಹೆಂಡರ್ಸನ್ (ನ್ಯಾಟಿಂಗ್ ಹ್ಯಾಮ್ ಫಾರೆಸ್ಟ್)
ಜೋರ್ಡನ್ ಪಿಕ್ ಫಾರ್ಡ್ (ಎವರ್ಟನ್)
ಫ್ರೆಸರ್ ಫೋರ್ಸ್ಟರ್ (ಟೋಟನ್ ಹ್ಯಾಮ್)
ಸ್ಯಾಮ್ ಜಾನ್ ಸ್ಟೋನ್ (ಕ್ರಿಸ್ಟಲ್ ಪ್ಯಾಲೇಸ್)
ಡಿಫೆಂಡರ್ಸ್:
ಹ್ಯಾರಿ ಮಗ್ಯುರ್ (ಮ್ಯಾಂಚೆಸ್ಟರ್ ಯುನೈಟೆಡ್)
ಕೈಲಿ ವಾಕರ್ (ಮ್ಯಾಂಚಸ್ಟರ್ ಸಿಟಿ)
ಜಾನ್ ಸ್ಟೋನ್ (ಮ್ಯಾಂಚೆಸ್ಟರ್ ಸಿಟಿ)
ಎರಿಕ್ ಡಯರ್ (ಟೋಟನ್ ಹ್ಯಾಮ್)
ಕಿರಾನ್ ಟ್ರಿಪ್ಪರ್ (ನ್ಯೂ ಕ್ಯಾಸಲ್ ಯುನೈಟೆಡ್)
ಲೂಕ್ ಶಾ (ಮ್ಯಾಂಚೆಸ್ಟರ್ ಯುನೈಟೆಡ್)
ಟ್ರೆಂಟ್ ಅಲೆಕ್ಸಾಂಡರ್- ಅರ್ನಾಲ್ಡ್ (ಲಿವರ್ ಪೂಲ್)
ಕಾನರ್ ಕಾಡಿ (ಎವರ್ಟನ್)
ಫಿಕಾಯೊ ಟೊಮೊರೊ (ಎಸಿ ಮಿಲಾನ್)
ಮಾರ್ಕ್ ಗುಯಿ (ಕ್ರಿಸ್ಟಲ್ ಪ್ಯಾಲೇಸ್)
ಬೆಂಜಮಿನ್ ವೈಟ್ (ಆರ್ಸೆನಲ್)
ಟೈರೊನ್ ಮಿಂಗ್ಸ್ (ಆಸ್ಟನ್ ವಿಲ್ಲಾ)
ಕೈಲಿ ವಾಕರ್ ಪೀಟರ್ಸ್ (ಸೌಥಾಂಪ್ಟನ್)

ಮಿಡ್ ಫೀಲ್ಡರ್ಸ್:
ಜೋರ್ಡನ್ ಹೆಂಡರ್ಸನ್ (ಲಿವರ್ ಪೂಲ್)
ಡೆಕ್ಲಾನ್ ರೈಸ್ (ವೆಸ್ಟ್ ಹ್ಯಾಮ್)
ಮಾಸನ್ ಮೌಂಟ್ (ಚೆಲ್ಸಿ)
ಜೂಡ್ ಬೆಲ್ಲಿಂಗ್ ಹ್ಯಾಮ್ (ಬೊರಸಿಯಾ ಡಾರ್ಟ್ ಮಂಡ್)
ಜೇಮ್ಸ್ ವಾರ್ಡ್ ಪ್ರೌಸ್ (ಸೌಥಾಂಪ್ಟನ್)
ಕೆಲ್ವಿನ್ ಫಿಲಿಫ್ಸ್ (ಮ್ಯಾಂಚೆಸ್ಟರ್ ಸಿಟಿ)
ಕೊನಾರ್ ಗಲಾಗರ್ (ಚೆಲ್ಸಿಯಾ)
ಎಮಿಲಿ ಸ್ಮಿತ್ ರೋವ್ (ಆರ್ಸೆನಲ್)
ಜೆಸ್ಸಿ ಲಿಂಗಾರ್ಡ್ (ನ್ಯಾಟಿಂಗ್ ಹ್ಯಾಮ್ ಫಾರೆಸ್ಟ್)
ಜೇಮ್ಸ್ ಮ್ಯಾಡಿಸನ್ (ಲೀಸ್ಟೆಸ್ಟರ್ ಸಿಟಿ)
ಹಾರ್ವಿ ಎಲಿಯಟ್ (ಲಿವರ್ ಪೂಲ್)
ಫಾರ್ವರ್ಡ್ಸ್:
ರಹೀಂ ಸ್ಟಲಿಂಗ್ಸ್ (ಚೆಲ್ಸಿ)
ಹ್ಯಾರಿ ಕೇನ್ (ಟೋಟೊಂನ್ ಹ್ಯಾಮ್)
ಜಾಕ್ ಗ್ರಿಲಿಶ್ (ಮ್ಯಾಂಚೆಸ್ಟರ್ ಸಿಟಿ)
ಬುಕಾಯೊ ಸಾಕಾ (ಆರ್ಸೆನಲ್)
ಫಿಲ್ ಫೊಡೆನ್ (ಮ್ಯಾಂಚೆಸ್ಟರ್ ಸಿಟಿ)
ಟಮ್ಮಿ ಅಬ್ರಾಹಾಂ (ರೋಮಾ)
ಜರಾಡ್ ಬೊವೆನ್ (ವೆಸ್ಟ್ ಹ್ಯಾಮ್)
ಇವಾನ್ ಟೊನಿ (ಬ್ರೆಂಟ್ ಫೊರ್ಡ್)
ಒಲಿ ವಾಟ್ಕಿನ್ಸ್ (ಆಸ್ಟನ್ ವಿಲ್ಲಾ)
ಮಾರ್ಕಸ್ ರಾಶ್ ಫೋರ್ಡ್ (ಮ್ಯಾಂಚೆಸ್ಟರ್ ಯುನೈಟೆಡ್)
ಜಾಡೊನ್ ಸ್ಯಾಂಚೋ (ಮ್ಯಾಂಚೆಸ್ಟರ್ ಯುನೈಟೆಡ್)
ಚೆಲ್ಸಿ ಕ್ಲಬ್ ಪರ ಆಡುವ ರೀಸ್ ಜೇಮ್ಸ್ ಹಾಗೂ ಬೆನ್ ಚಿಲ್ವೆಲ್ ಇಬ್ಬರು ಗಾಯಾಳುವಾಗಿದ್ದು, ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.
ಇಂಗ್ಲೆಂಡ್‌ನ ಸಾರ್ವಕಾಲಿಕ ಟಾಪ್ ಗೋಲ್ ಸ್ಕೋರರ್ ಆಗಲು ಹ್ಯಾರಿ ಕೇನ್‌ಗೆ ಕೆಲವೇ ಗೋಲುಗಳು ಬೇಕಾಗಿವೆ. ಕೇನ್ ಜೊತೆಗೆ ಮೂವರು ಮುಂಪಡೆ ಆಟಗಾರರೊಂದಿಗೆ ಇಂಗ್ಲೆಂಡ್ ಮೈದಾನಕ್ಕಿಳಿಯುವ ಸಾಧ್ಯತೆಯಿದೆ. ಇಂಗ್ಲೆಂಡ್ ತನ್ನ ನೆಚ್ಚಿನ 4-2-3-1 ಮಾದರಿ ಆಕ್ರಮಣಕಾರಿ ವ್ಯೂಹದೊಂದಿಗೆ ಸೆಣೆಸುವುದು ಖಚಿತವಾಗಿದೆ.
ಇಂಗ್ಲೆಂಡ್ XI (4-2-3-1): ಜೋರ್ಡನ್ ಪಿಕ್ ಫಾರ್ಡ್ (ಗೋಲ್ ಕೀಪರ್); ಕೈಲಿ ವಾಕರ್, ಜಾನ್ ಸ್ಟೋನ್, ಎರಿಕ್ ಡಯರ್, ಲೂಕ್ ಶಾ (ರಕ್ಷಣಾ ಪಡೆ); ಡೆಕ್ಲಾನ್ ರೈಸ್, ಜೂಡ್ ಬೆಲ್ಲಿಂಗ್ ಹ್ಯಾಮ್; ಮಾಸನ್ ಮೌಂಟ್, ಫಿಲ್ ಫೊಡೆನ್, ರಹೀಂ ಸ್ಟಲಿಂಗ್ಸ್; ಹ್ಯಾರಿ ಕೇನ್.












Click it and Unblock the Notifications