Football Fight: ಮೈದಾನದಲ್ಲೇ ಫೈಟ್ ಮಾಡಿದ ಫುಟ್‌ಬಾಲ್ ಫ್ಯಾನ್ಸ್! ಕಾರಣ ತಿಳಿಯಿರಿ
ಫುಟ್‌ಬಾಲ್ ಅಂದ್ರೆ ಕ್ರೇಜ್ ನೆಕ್ಸ್ಟ್ ಲೆವೆಲ್, ಅದರಲ್ಲೂ ಫುಟ್‌ಬಾಲ್ ಅಭಿಮಾನಿಗಳ ಬಗ್ಗೆ ಹೇಳಬೇಕಿಲ್ಲ. ಫುಟ್‌ಬಾಲ್ ರೀತಿಯೇ ಅವರ ಕ್ರೇಜ್ ಕೂಡ ಡಬಲ್ ಆಗಿರುತ್ತೆ. ಆದ್ರೆ ಇದೇ ಕ್ರೇಜ್ ಹೆಚ್ಚಾಗಿ ಹುಚ್ಚಾಟಕ್ಕೆ ತಿರುಗಿದರೆ, ಪರಿಸ್ಥಿತಿ ಏನಾಗಬಹುದು ಅನ್ನೋದಕ್ಕೆ ಬ್ರೇಜಿಲ್ & ಅರ್ಜೆಂಟಿನಾ ಪಂದ್ಯ ಸಾಕ್ಷಿಯಾಗಿದೆ. ಅಭಿಮಾನಿಗಳ ಫೈಟಿಂಗ್ ನೋಡಿದ ಫುಟ್‌ಬಾಲ್ ಸ್ಟಾರ್ ಆಟಗಾರರೇ ಬೆಚ್ಚಿಬಿದ್ದಿದ್ದಾರೆ.
ಫುಟ್‌ಬಾಲ್ ವಿಶ್ವಕಪ್ ಕ್ವಾಲಿಫೈಯರ್ ಅಂದ್ರೆ, 2026ರ ಫಿಫಾ ಕಪ್ ಅಥವಾ ಫುಟ್‌ಬಾಲ್‌ನ ವಿಶ್ವಕಪ್‌ಗೆ ಆಯ್ಕೆಯಾಗಲು ಪೈಪೋಟಿ ಆರಂಭವಾಗಿದೆ. ಹೀಗೆ, ಅರ್ಜೆಂಟೀನಾ & ಬ್ರೆಜಿಲ್ ಪಂದ್ಯ ಕೂಡ ನಿನ್ನೆ ನಡೆದಿದೆ. ಆದರೆ ಈ ವೇಳೆ ಫುಟ್‌ಬಾಲ್ ಫ್ಯಾನ್ಸ್ ಹಾಗೂ ಪೊಲೀಸರ ನಡುವೆ ಘರ್ಷಣೆ ಶುರುವಾಗಿದೆ. ಹೀಗಾಗಿ ಫುಟ್‌ಬಾಲ್ ಮ್ಯಾಚ್ ಕೂಡ ಶುರುವಾಗುವುದಕ್ಕೆ ತಡವಾಗಿದೆ. ಬ್ರೆಜಿಲ್ ದೇಶದ, ಮರಕಾನಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಬ್ರೆಜಿಲ್ ಮ್ಯಾಚ್ ವೇಳೆ ಈ ಘಟನೆ ನಡೆದಿದೆ.

ಪಂದ್ಯದ ಸಮಯವೇ ಬದಲು!
ನೋಡ ನೋಡುತ್ತಲೇ ಅಭಿಮಾನಿಗಳ ನಡುವೆ ತೀವ್ರ ಕಿತ್ತಾಟ ಆರಂಭವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಎಂಟ್ರಿಯಾದರು. ಆದರೆ ಆಗ ಪೊಲೀಸರು & ಫ್ಯಾನ್ಸ್ ಮಧ್ಯೆ ಗಲಾಟೆ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಘಟನೆಗೆ ನಿಖರವಾದ ಕಾರಣ ಇನ್ನೂ ಬಯಲಾಗಿಲ್ಲ. ಹೀಗೆ ಘರ್ಷಣೆ ಶುರುವಾದ ಹಿನ್ನೆಲೆ ಪಂದ್ಯವು ಅರ್ಧ ಗಂಟೆ ತಡವಾಗಿ ಆರಂಭವಾಯಿತು.
ರಾಷ್ಟ್ರಗೀತೆ ಹಾಡುವಾಗ ಕಿರಿಕ್?
ಫುಟ್‌ಬಾಲ್ ವಿಚಾರದಲ್ಲಿ ಎಂತೆಂತಹ ಸಿಲ್ಲಿ ವಿಚಾರಕ್ಕೆ ಜಗಳ ಆಗುತ್ತೆ ಅಂದರೆ ಲೆಕ್ಕವಿಲ್ಲ. ಆದರೆ ಈ ಬಾರಿ ಸೀರಿಯಸ್ ವಿಚಾರಕ್ಕೆ ಗಲಾಟೆ ಶುರುವಾಗಿತ್ತು. ಬ್ರೆಜಿಲ್ & ಅರ್ಜೆಂಟೀನಾದ ಫ್ಯಾನ್ಸ್ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವ ವೇಳೆ ಜಗಳವಾಡಿದ್ದಾರೆ ಎನ್ನಲಾಗಿದೆ. ಆಗ ಪರಿಸ್ಥಿತಿ ಕೈಮೀರುತ್ತಿರುವ ವಿಚಾರ ಅರಿತುಕೊಂಡ ಪೊಲೀಸರು, ಅದನ್ನ ನಿಯಂತ್ರಿಸುವ ಉದ್ದೇಶಕ್ಕೆ ಲಾಠಿ ಚಾರ್ಚ್ ಮಾಡಿದ್ದಾರೆ. ಹೀಗೆ ಬ್ರೆಜಿಲ್ ಪೊಲೀಸ್ರು ಲಾಠಿ ಚಾರ್ಚ್ ಮಾಡುತ್ತಿದ್ದಂತೆಯೇ ರೊಚ್ಚಿಗೆದ್ದ ಫ್ಯಾನ್ಸ್ ಪೊಲೀಸರ ಮೇಲೆ ಅಲ್ಲಿದ್ದ ಆಸನಗಳನ್ನೆಲ್ಲಾ ಕಿತ್ತು ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು
ಇನ್ನು ಗ್ಯಾಲರಿಯಲ್ಲಿ ಗಲಾಟೆ ಶುರುವಾದ ಹಿನ್ನೆಲೆ ಕೆಲ ಅಭಿಮಾನಿಗಳು ಹೆದರಿ, ಅಲ್ಲಿಂದ ಓಡಿ ಮೈದಾನಕ್ಕೆ ನುಗ್ಗಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ. ತಕ್ಷಣಕ್ಕೆ ಮೆಸ್ಸಿಯ ತಂಡ ಅಂದ್ರೆ ಅರ್ಜೆಂಟೀನಾ ಟೀಂನ ಆಟಗಾರರು ಮೈದಾನವನ್ನು ಬಿಟ್ಟು ಡ್ರೆಸ್ಸಿಂಗ್ ರೂಮ್‌ಗೆ ವಾಪಸ್ ಆಗಿದ್ದರು. ನಂತರ ಗಲಾಟೆ ಮಾಡುತ್ತಿದ್ದ ಅಭಿಮಾನಿಗಳನ್ನು ನಿಯಂತ್ರಿಸಿದ ಖಾಕಿ ಪಡೆ, ಪಂದ್ಯ ಆರಂಭವಾಗಲು ವ್ಯವಸ್ಥೆ ಮಾಡಿತ್ತು. ಹೀಗೆ ಅಭಿಮಾನಿಗಳ ನಡುವೆ ನಡೆದ ಗಲಾಟೆ ಬಗ್ಗೆ ಮೆಸ್ಸಿ ಸೇರಿದಂತೆ ಫುಟ್‌ಬಾಲ್ ದಿಗ್ಗಜರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications