Lionel Messi : ಫಿಫಾ ಇತಿಹಾಸದಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು ಗಳಿಸಿದ ಮೆಸ್ಸಿ
ನವದೆಹಲಿ, ಡಿಸೆಂಬರ್ 14: ಗೇಬ್ರಿಯಲ್ ಬಟಿಸ್ಟುಟಾ ಅವರ ದಾಖಲೆಯನ್ನು ಮುರಿದು ಫಿಫಾ ವಿಶ್ವಕಪ್‌ನ ಇತಿಹಾಸದಲ್ಲಿ ಅರ್ಜೆಂಟೀನಾ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಲಿಯೋನೆಲ್ ಮೆಸ್ಸಿ ಪಾತ್ರರಾಗಿದ್ದಾರೆ ಇದು ಮೆಸ್ಸಿ ಅವರ 11ನೇ ಗೋಲು.
ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ನಾಯಕ ಪೆನಾಲ್ಟಿ ಕಿಕ್‌ನಿಂದ ಗೋಲು ಗಳಿಸಿ 34 ನೇ ನಿಮಿಷದಲ್ಲಿ ಕ್ರೊಯೇಷಿಯಾ ವಿರುದ್ಧ 1-0 ಮುನ್ನಡೆ ಸಾಧಿಸಿದರು. ಮೆಸ್ಸಿ 11 ಗೋಲುಗಳೊಂದಿಗೆ ಹಂಗೇರಿಯ ಶ್ರೇಷ್ಠ ಸ್ಯಾಂಡರ್ ಕೊಕ್ಸಿಸ್ ಮತ್ತು ಜರ್ಮನ್ ಗೋಲ್-ಮೆಷಿನ್ ಜುರ್ಗೆನ್ ಕ್ಲಿನ್ಸ್‌ಮನ್ ಅವರನ್ನು ಸರಿಗಟ್ಟಿದ್ದಾರೆ.
ಪೀಲೆ (12), ಜಸ್ಟ್ ಫಾಂಟೈನ್ (13), ಗೆರ್ಡ್ ಮುಲ್ಲರ್ (14), ಬ್ರೆಜಿಲ್‌ನ ರೊನಾಲ್ಡೊ (15) ಮತ್ತು ಜರ್ಮನಿಯ ಮಿರೊಸ್ಲಾವ್ ಕ್ಲೋಸ್ (16) ಮಾತ್ರ ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿಗಿಂತ ಹೆಚ್ಚು ಗೋಲು ಗಳಿಸಿದ್ದಾರೆ. ಈ ಪಂದ್ಯವು ಅವರ 25 ನೇ ವಿಶ್ವಕಪ್ ಪಂದ್ಯವಾಗಿದೆ. ಲೋಥರ್ ಮ್ಯಾಥೌಸ್ ಜೊತೆಗೆ ಯಾವುದೇ ಅರ್ಜೆಂಟೀನಾದ ಆಟಗಾರನಿಗೆ ಅತಿ ಹೆಚ್ಚು ಪಂದ್ಯವಾಗಿದೆ.

ಪಂದ್ಯಾವಳಿಯ ಈ ಆವೃತ್ತಿಯಲ್ಲಿ ಅವರು ಐದು ಗೋಲುಗಳನ್ನು ಗಳಿಸಿದ್ದಾರೆ ಮತ್ತು ಗೋಲ್ಡನ್ ಬೂಟ್‌ಗಾಗಿ ರೇಸ್‌ನಲ್ಲಿ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಅವರೊಂದಿಗೆ ಮೆಸ್ಸಿ ಸಮಬಲದಲ್ಲಿದ್ದಾರೆ. ಅರ್ಜೆಂಟೀನಾ ಪುಟ್‌ಬಾಲ್ ತಾರೆ ಮೆಸ್ಸಿಯ ಅಮೋಘ ಪ್ರದರ್ಶನವು ಕ್ರೊಯೇಷಿಯಾ ವಿರುದ್ಧ 3-0 ಗೋಲುಗಳ ಭರ್ಜರಿ ಜಯದ ಹಾದಿಯನ್ನು ಸುಗಮಗೊಳಿಸಿತು. ಅವರು ಈ ಗೆಲುವಿನೊಂದಿಗೆ ಈಗ ಫೈನಲ್‌ಗೆ ಪ್ರವೇಶಿಸಿದ್ದಾರೆ. ಮೆಸ್ಸಿ ನೇತೃತ್ವದ ತಂಡ ಫ್ರಾನ್ಸ್ ವಿರುದ್ಧ ಮೊರಾಕೊ ಪಂದ್ಯದ ವಿಜೇತರನ್ನು ಎದುರಿಸಲಿದೆ.
ಇದು ಮೆಸ್ಸಿಯ ಎರಡನೇ ಫಿಫಾ ವಿಶ್ವಕಪ್ ಫೈನಲ್ ಆಗಿದ್ದು, ಅರ್ಜೆಂಟೀನಾ ಫಿಫಾ ವಿಶ್ವಕಪ್ 2014ರಲ್ಲಿ ಫೈನಲ್ ತಲುಪಿತು. ಆದರೆ ಜರ್ಮನಿಯ ವಿರುದ್ಧ ಏಕಾಂಗಿ ಗೋಲಿನಿಂದ ಸೋತಿತು. ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಮೆಸ್ಸಿ ತಮ್ಮ ದೇಶಕ್ಕಾಗಿ ಮೂರನೇ ಫಿಫಾ ವಿಶ್ವಕಪ್ ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ.












Click it and Unblock the Notifications