• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ 2022: ಸ್ಪೇನ್ ತಂಡದಲ್ಲಿ ಯಾರು ಇನ್? ಯಾರು ಔಟ್?

|
Google Oneindia Kannada News

ವಿಶ್ವದೆಲ್ಲೆಡೆ ಎಲ್ಲರ ಅಚ್ಚುಮೆಚ್ಚಿನ ಕ್ರೀಡೆ ಫುಟ್ಬಾಲ್ ಜಾಗತಿಕ ಸಮರಕ್ಕೆ ವೇದಿಕೆ ಸಜ್ಜಾಗಿದೆ. ನ.20ರಿಂದ ಕತಾರ್ ನ ವಿವಿಧ ಮೈದಾನಗಳಲ್ಲಿ ಫೀಫಾ ಫುಟ್ಬಾಲ್ ಹಬ್ಬಕ್ಕೆ ಚಾಲನೆಗೆ ಸಿಗಲಿದೆ. ವಿಶ್ವಕಪ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದೆನಿಸಿರುವ ಬ್ರೆಜಿಲ್ ಬಲಿಷ್ಠ ತಂಡವನ್ನು ಪ್ರಕಟಿಸಿದ ಬಳಿಕ, ಇಂಗ್ಲೆಂಡ್, ಅರ್ಜೆಂಟೀನಾ ಸೇರಿದಂತೆ ಪ್ರಮುಖ ದೇಶಗಳು ತಂಡಗಳನ್ನು ಹೆಸರಿಸಿವೆ. ಸ್ಪೇನ್ ಕೂಡಾ ತನ್ನ 26 ಸದಸ್ಯ ಬಲದ ಸಮತೋಲನದಿಂದ ಕೂಡಿದ ತಂಡವನ್ನು ಘೋಷಿಸಿದೆ.

ಸತತ ಹನ್ನೆರಡನೇ ಬಾರಿಗೆ ಸ್ಪೇನ್ ತಂಡ ವಿಶ್ವಕಪ್ ಪಂದ್ಯಾವಳಿಗೆ ನೇರವಾಗಿ ಎಂಟ್ರಿ ಕೊಡುತ್ತಿದೆ. 2010ರಲ್ಲಿ ಕಪ್ ಎತ್ತಿದ ಬಳಿಕ ಡಲ್ ಆಗಿರುವ ಸ್ಪೇನ್ ಈಗ ಪುಟಿದೇಳುವ ವಿಶ್ವಾಸದಲ್ಲಿದೆ.

ಕೂಲಿ ಕೆಲಸ ಮಾಡುವ ಪೋಷಕರ ಮಗಳು ಭಾರತೀಯ FIFA U-17 ಫುಟ್ಬಾಲ್ ವಿಶ್ವಕಪ್‌ ನಾಯಕಿ!ಕೂಲಿ ಕೆಲಸ ಮಾಡುವ ಪೋಷಕರ ಮಗಳು ಭಾರತೀಯ FIFA U-17 ಫುಟ್ಬಾಲ್ ವಿಶ್ವಕಪ್‌ ನಾಯಕಿ!

ಯುವ ಆಟಗಾರರನ್ನು ಹೊಂದಿರುವ ತಂಡ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಸ್ಪೇನ್ ತಂಡದ ಮುಖ್ಯ ಕೋಚ್ ಲೂಯಿಸ್ ಎನ್ರಿಕೆ ಹೇಳಿದ್ದಾರೆ.

ಜರ್ಮನಿ, ಕೋಸ್ಟರಿಕಾ ಹಾಗೂ ಜಪಾನ್ ತಂಡಗಳಿರುವ ಇ ಗುಂಪಿನಲ್ಲಿ ಸ್ಪೇನ್ ಇದ್ದು, 16ರ ಹಂಟ ತಲುಪಲು ಹೆಚ್ಚಿನ ಶ್ರಮ ವಹಿಸಬೇಕಾಗುತ್ತದೆ. ಜರ್ಮನಿ ಕೂಡಾ ಕಳೆದ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಸ್ಪೇನ್ ತನ್ನ ಮೊದಲ ಪಂದ್ಯವನ್ನು ಕೋಸ್ಟರಿಕಾ ವಿರುದ್ಧ ನವೆಂಬರ್ 23ರಂದು ಆಡಲಿದೆ.

ಗೋಲ್ ಕೀಪರ್ಸ್:

ರಾಬರ್ಟ್ ಸ್ಯಾಂಚೆಜ್ (ಬ್ರಿಂಟನ್)
ಡೇವಿಡ್ ಅಯ (ಬ್ರೆಂಟ್ ಫಾರ್ಡ್)
ಉನಾಯಿ ಸಿಮೋನ್ (ಅಥ್ಲೆಟಿಕ್ ಕ್ಲಬ್)

ಡಿಫೆಂಡರ್ಸ್:

ಸೀಸರ್ ಅಪಿಲಿಕ್ಯೂಟಾ (ಚೆಲ್ಸಿ)
ಹ್ಯೂಗೋ ಗಿಲ್ಲಾಮೊ: (ವಲೆನ್ಸಿಯಾ)
ಪಾ ಟೊರೆಸ್: (ವಿಲ್ಲಾರ್ ರಿಯಲ್)
ಎರಿಕ್ ಗಾರ್ಸಿಯಾ: (ಬಾರ್ಸಿಲೋನಾ)
ಜೋಸ್ ಗಯಾ (ವಲೆನ್ಸಿಯಾ)
ಡಾನಿ ಕರ್ವಾಲ್ : (ರಿಯಲ್ ಮ್ಯಾಡ್ರೀಡ್)
ಜೋರ್ಡಿ ಆಲ್ಬಾ: (ಬಾರ್ಸಿಲೋನಾ)
ಅಯ್ಮೆರಿಕ್ ಲಾಪೊರ್ಟೆ: (ಮ್ಯಾಂಚೆಸ್ಟರ್ ಸಿಟಿ)

ಮಿಡ್ ಫೀಲ್ಡರ್ಸ್:

ಸರ್ಗಿಯೋ ಬುಸ್ಕೆಟ್ಸ್ (ಬಾರ್ಸಿಲೋನಾ)
ಮಾರ್ಕೊಸ್ ಲಾರೆಂಟೆ (ಅಟ್ಲೆಟಿಕೋ ಮ್ಯಾಡ್ರಿಡ್)
ಪೆಡ್ರಿ (ಬಾರ್ಸಿಲೋನಾ)
ರೊಡ್ರಿ (ಮ್ಯಾಂಚೆಸ್ಟರ್ ಸಿಟಿ)
ಕೊಕೆ (ಅಟ್ಲೆಟಿಕೋ ಮ್ಯಾಡ್ರಿಡ್)
ಗಾವಿ (ಬಾರ್ಸಿಲೋನಾ)
ಕಾರ್ಲೊಸ್ ಸೊಲೆರ್ ( ಪಿ ಎಸ್ ಜಿ)

ಫಾರ್ವರ್ಡ್ಸ್:

ಅಲ್ವಾರೋ ಮೊರಾಟ: ಅಟ್ಲೆಟಿಕೋ ಮ್ಯಾಡ್ರಿಡ್
ಯೆರಮಿ ಪಿನೊ: (ವಿಲ್ಲಾರ್ ರಿಯಲ್)
ಫೆರನ್ ಟೊರೆಸ್: (ರಿಯಲ್ ಮ್ಯಾಡ್ರಿಡ್)
ಮಾರ್ಕೊ ಅಸೆನ್ಸಿಯೋ: (ರಿಯಲ್ ಮ್ಯಾಡ್ರಿಡ್)
ಪಾಬ್ಲೋ ಸರಬಿಯಾ: (ಪಿ ಎಸ್ ಜಿ)
ಡಾನಿ ಒಲ್ಮೊ : (ಆರ್ ಬಿ ಲೈಪ್ಜಿಗ್)
ನಿಕೊ ವಿಲಿಯಮ್ಸ್ : (ಅಟ್ಲೆಟಿಕ್ ಕ್ಲಬ್)
ಅನ್ಸು ಫಾಟಿ : (ಬಾರ್ಸಿಲೋನಾ)

ಸರ್ಗಿಯೋ ರಮೋಸ್, ಡೇವಿಡ್ ಡಿ ಗಿಯಾ, ಥಿಯಾಗೋ ಅಲ್ಕಾಂಟರಾ, ಗೆರಾರ್ಡ್ ಮೆರೆನೊ, ಸರ್ಗಿಯೊ ಕಾನಾಲೊಸ್, ನಾಚೋ ಫರ್ನಾಂಡಿಸ್, ಆಸ್ಪಸ್ ಸೇರಿದಂತೆ ಹಲವು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಸ್ಪೇನ್ ಕಣಕ್ಕಿಳಿಯುತ್ತಿದೆ.

ಮುಂಪಡೆಯ ಮೂವರು ಆಟಗಾರರಿಗೆ ಕೊಕೆ ಹಾಗೂ ಪೆಡ್ರಿ ಜೊತೆಗೆ ಬುಸ್ಕೆಟ್ಸ್ ಮಿಡ್ ಫೀಲ್ಡ್‌ನಲ್ಲಿ ನೆರವಾಗಲಿದ್ದಾರೆ.

ಸ್ಪೇನ್ XI (4-3-3): ಸಿಮೋನ್; ಕರ್ವಾಲ್, ಗಾರ್ಸಿಯಾ, ಲಾಪೊರ್ಟೆ, ಅಲ್ಬಾ; ಬುಸ್ಕೆಟ್ಸ್,ಕೊಕೆ, ಪೆಡ್ರಿ; ಸರಬಿಯಾ, ಮೊರಾಟಾ, ಟೊರೆಸ್

English summary
Spain World Cup 2022 squad for Fifa World Cup is out. Head coach Luis Enrique has picked 26 Players Check Who's in and Who's out?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X