Get Updates
Get notified of breaking news, exclusive insights, and must-see stories!

Zomato: ಹಸಿದ ಹೊಟ್ಟೆಗೆ ಜೊಮ್ಯಾಟೋ ಬರೆ.. ಆನ್‌ಲೈನ್ ಊಟ ಬಲು ದುಬಾರಿ

Zomato Raises Platform Fee: ದೇಶದ ಪ್ರಮುಖ ಫುಡ್ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೋ ಗ್ರಾಹಕರಿಗೆ ಬಿಗ್ ಶಾಕ್‌ ನೀಡಿದೆ. ತನ್ನ ಪ್ಲಾಟ್‌ಫಾರ್ಮ್ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ. ಹಾಗಾದ್ರೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಜೊಮಾಟೋ ಸಂಸ್ಥೆಯು ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದ ಈ ಮೂರು ವರ್ಷಗಳ ಅವಧಿಯಲ್ಲಿ ಮಾಡಿರುವ ಬೆಲೆ ಏರಿಕೆಯ ಸಂಪೂರ್ಣ ಗ್ರಾಫ್ ಇಲ್ಲಿದೆ. ಇದು ಗ್ರಾಹಕರ ಜೇಬಿಗೆ ಎಷ್ಟು ದೊಡ್ಡ ಕತ್ತರಿ ಹಾಕಿದೆ ಎಂಬುದನ್ನು ಈ ಅಂಕಿ-ಅಂಶಗಳೇ ಸಾಬೀತುಪಡಿಸುತ್ತವೆ.

Zomato Raises Platform Fee to 14 90 Food Delivery Gets Costlier for Customers Know details

ಯಾವಾಗ ಎಷ್ಟು ಹೆಚ್ಚಳ?

* ಆಗಸ್ಟ್ 2023 (ಆರಂಭ): ಕಂಪನಿಯು ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲು ಶುರು ಮಾಡಿದಾಗ ಅದರ ಬೆಲೆ ಕೇವಲ 2 ರೂಪಾಯಿ ಇತ್ತು.

* ಜನವರಿ 2024: ಕೆಲವೇ ತಿಂಗಳಲ್ಲಿ ಈ ಶುಲ್ಕವನ್ನು 4 ರೂಪಾಯಿ ಏರಿಸಲಾಯಿತು.

* ಡಿಸೆಂಬರ್ 2024 (ವರ್ಷಾಂತ್ಯ): ವರ್ಷ ಮುಗಿಯುವಷ್ಟರಲ್ಲಿ ಈ ಶುಲ್ಕ ಬರೋಬ್ಬರಿ 10 ರೂಪಾಯಿಗೆ ತಲುಪಿತು.

* ಸೆಪ್ಟೆಂಬರ್ 2025: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶುಲ್ಕವನ್ನು 12.50 ರೂಪಾಯಿಗೆ ಹೆಚ್ಚಿಸಲಾಯಿತು.

* ಮಾರ್ಚ್ 2026: ಇದೀಗ ಈ ವರ್ಷದ ಮಾರ್ಚ್‌ನಲ್ಲಿ 2.40 ರೂಪಾಯಿ ಏರಿಕೆ ಮಾಡುವ ಮೂಲಕ ಶುಲ್ಕ 14.90ಕ್ಕೆ (ಜಿಎಸ್‌ಟಿ ಹೊರತುಪಡಿಸಿ) ಬಂದು ನಿಂತಿದೆ. ಹೀಗೆ ಕೇವಲ 3 ವರ್ಷಗಳ ಅವಧಿಯಲ್ಲಿ ಜೊಮಾಟೋದ ಪ್ಲಾಟ್‌ಫಾರ್ಮ್ ಶುಲ್ಕವು ಭಾರಿ ಏರಿಕೆ ಕಂಡಿದೆ. 2 ರೂಪಾಯಿನಿಂದ ಆರಂಭವಾದ ಈ ದರವು ಈಗ 15 ರೂಪಾಯಿ ಗಡಿ ತಲುಪಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಹಸಿದ ಗ್ರಾಹಕರಿಗೆ 'ಡಬಲ್ ಬರೆ'

ಸಾಮಾನ್ಯ ಗ್ರಾಹಕರಿಗೆ ಈಗ ಎಲ್ಲೆಡೆಯಿಂದಲೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲದ (ಎಲ್‌ಪಿಜಿ) ಅಭಾವ ಮತ್ತು ಸಿಲಿಂಡರ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ, ಜೊಮಾಟೋ ತನ್ನ ಪ್ಲಾಟ್‌ಫಾರ್ಮ್ ಶುಲ್ಕ ಹೆಚ್ಚಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ.

ಹೋಟೆಲ್ ಬಿಲ್ ಹೆಚ್ಚಳ

ಎಲ್‌ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿರುವುದರಿಂದ ಮತ್ತು ಗ್ಯಾಸ್ ಸಿಲಿಂಡರ್‌ಗಳ ಕೊರತೆ ಎದುರಾಗಿರುವುದರಿಂದ, ಅನೇಕ ರೆಸ್ಟೋರೆಂಟ್‌ಗಳಲ್ಲಿ ಈಗಾಗಲೇ ಆಹಾರದ ಬೆಲೆಗಳನ್ನು ಶೇಕಡ 10ರಿಂದ 15 ರಷ್ಟು ಹೆಚ್ಚಿಸಿವೆ. ಹೀಗೆ ಗ್ರಾಹಕರ ಜೇಬಿಗೆ ಮೇಲಿಂದ ಮೇಲೆ ಕತ್ತರಿ ಬೀಳುತ್ತಲಿದೆ. ಅತ್ತ ಹೋಟೆಲ್ ಬೆಲೆ ಹೆಚ್ಚಾಗಿದ್ದರೆ, ಇತ್ತ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವಾಗ ಜೊಮಾಟೋ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕವೂ ಈಗ 14.90 (ತೆರಿಗೆ ಹೊರತುಪಡಿಸಿ) ರೂಪಾಯಿಗೆ ಏರಿಕೆಯಾಗಿದೆ.

ಪರಿಣಾಮ ಗ್ರಾಹಕರು ಈಗ ಹೋಟೆಲ್‌ನಿಂದ ನೇರವಾಗಿ ಖರೀದಿಸುವುದಕ್ಕಿಂತಲೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದಾಗ ಅತಿ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಆಹಾರದ ಬೆಲೆ ಏರಿಕೆ, ಪ್ಲಾಟ್‌ಫಾರ್ಮ್ ಶುಲ್ಕ, ಡೆಲಿವರಿ ಚಾರ್ಜ್, ಜಿಎಸ್‌ಟಿ ಸೇರಿ ಒಂದು ಸಾಮಾನ್ಯ ಊಟದ ಬೆಲೆಯೂ ಗಗನಕ್ಕೇರಿದ್ದು, ಇದರಿಂದ ಸಾಮಾನ್ಯ ಜನರು ತತ್ತರಿಸಿ ಹೋಗಿದ್ದಾರೆ.

ಗ್ರಾಹಕರಿಗೆ ಯಾವೆಲ್ಲಾ ಶುಲ್ಕಗಳ ಬರೆ?

* ರೆಸ್ಟೋರೆಂಟ್ ಪ್ಯಾಕಿಂಗ್ ಶುಲ್ಕ: ಆಹಾರವನ್ನು ಪ್ಯಾಕ್ ಮಾಡಲು ಪ್ರತಿಯೊಂದು ಹೋಟೆಲ್‌ಗಳು ಪ್ರತ್ಯೇಕ ಶುಲ್ಕ ವಿಧಿಸುತ್ತವೆ. ಇದು ಹೋಟೆಲ್‌ನಿಂದ ಹೋಟೆಲ್‌ಗೆ ಬದಲಾಗುತ್ತದೆ. ಸಾಮಾನ್ಯವಾಗಿ ಇದು ₹20 ರಿಂದ ₹50 ರವರೆಗೆ ಇರುತ್ತದೆ.

* ಪ್ಲಾಟ್‌ಫಾರ್ಮ್ ಶುಲ್ಕ: ಇದು ಕಂಪನಿಯು (Zomato/Swiggy) ತನ್ನ ಆ್ಯಪ್ ಸೇವೆಯನ್ನು ಬಳಸಿದ್ದಕ್ಕಾಗಿ ವಿಧಿಸುವ ಶುಲ್ಕ. ಪ್ರಸ್ತುತ ಇದು ಪ್ರತಿ ಆರ್ಡರ್‌ಗೆ ಸುಮಾರು 14.90 ರೂಪಾಯಿನಷ್ಟಿದೆ.

* ಡೆಲಿವರಿ ಶುಲ್ಕ: ನಿಮ್ಮ ಮನೆ ಮತ್ತು ಹೋಟೆಲ್ ನಡುವಿನ ದೂರದ ಆಧಾರದ ಮೇಲೆ ಈ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ದೂರ ಹೆಚ್ಚಾದಷ್ಟೂ ಈ ಶುಲ್ಕ ಹೆಚ್ಚಿರುತ್ತದೆ.

* ಜಿಎಸ್‌ಟಿ: ಆಹಾರದ ಬೆಲೆ, ಪ್ಯಾಕಿಂಗ್ ಶುಲ್ಕ ಮತ್ತು ಪ್ಲಾಟ್‌ಫಾರ್ಮ್ ಶುಲ್ಕ ಸೇರಿದಂತೆ ಒಟ್ಟು ಮೊತ್ತದ ಮೇಲೆಯೂ ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

* ಮಳೆ ಬರುವ ವೇಳೆ ಅಥವಾ ಆರ್ಡರ್‌ಗಳ ಸಂಖ್ಯೆ ವಿಪರೀತ ಹೆಚ್ಚಾದಾಗ 'ಡಿಮ್ಯಾಂಡ್' ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ವರದಿಗಳ ಪ್ರಕಾರ, ಜೊಮಾಟೋ ಸಂಸ್ಥೆಯು ವರ್ಷಕ್ಕೆ ಸುಮಾರು 85 ರಿಂದ 90 ಕೋಟಿ ಆರ್ಡರ್‌ಗಳನ್ನು ಪಡೆಯುತ್ತದೆ. ಈಗ ಕೇವಲ 1ರಿಂದ 2 ರೂಪಾಯಿ ಶುಲ್ಕ ಹೆಚ್ಚಿಸಿದರೂ ಸಹ ಕಂಪನಿಗೆ ವಾರ್ಷಿಕವಾಗಿ 85 ರಿಂದ 90 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಹರಿದುಬರಲಿದೆ. ಇನ್ನೂ ನೀವು ಆರ್ಡರ್ ಮಾಡುವ ಆಹಾರದ ಮೊತ್ತ ಎಷ್ಟೇ ಇರಲಿ ಪ್ರತಿ ಆರ್ಡರ್ ಮೇಲೂ ಕಂಪನಿಯು ವಿಧಿಸುವ ನಿರ್ದಿಷ್ಟ ಸೇವಾ ಶುಲ್ಕವೇ ಈ ಪ್ಲಾಟ್‌ಫಾರ್ಮ್ ಶುಲ್ಕ. ಇದು ಆಹಾರದ ಬೆಲೆ, ಜಿಎಸ್‌ಟಿ, ಡೆಲಿವರಿ ಶುಲ್ಕ ಮತ್ತು ಪ್ಯಾಕೇಜಿಂಗ್ ಶುಲ್ಕಗಳಿಗಿಂತ ಹೆಚ್ಚುವರಿ ಆಗಿರುತ್ತದೆ.

ಸ್ವಿಗ್ಗಿ ಜೊತೆ ಜೊಮ್ಯಾಟೋ ಪೈಪೋಟಿ

ಜೊಮಾಟೋದ ಪ್ರತಿಸ್ಪರ್ಧಿ ಸಂಸ್ಥೆಯಾಗಿರುವ ಸ್ವಿಗ್ಗಿ ಸಗ ಪ್ರಸ್ತುತ ತೆರಿಗೆ ಸೇರಿದಂತೆ ಪ್ರತಿ ಆರ್ಡರ್‌ಗೆ ಸುಮಾರು 14.99 ರೂಪಾಯಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಸಾಮಾನ್ಯವಾಗಿ ಈ ಎರಡು ಕಂಪನಿಗಳು ಒಂದೇ ರೀತಿಯ ಬೆಲೆ ಪ್ರವೃತ್ತಿಯನ್ನು ಅನುಸರಿಸುತ್ತಾ ಬಂದಿವೆ. ಇದೀಗ ಈ ಹೊರೆ ಬಿದ್ದಿರುವುದು ಮಾತ್ರ ಗ್ರಾಹಕರ ಮೇಲೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+