ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?

|
Google Oneindia Kannada News

ಕತಾರ್, ನವೆಂಬರ್ 20: ಸೌದಿ ಅರೇಬಿಯಾದ ಬ್ರಿಟಿಷ್ ಕೇಂದ್ರದ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳ ತಜ್ಞ ಮತ್ತು ಪ್ರಾದೇಶಿಕ ನಿರ್ದೇಶಕ ಅಮ್ಜದ್ ತಾಹಾ ಟ್ವೀಟ್‌ ಮಾಡುವ ಮೂಲಕ ಕತಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಗೆಲ್ಲಲು ಆತಿಥೇಯ ಕತಾರ್, ಈಕ್ವೆಡಾರ್‌ಗೆ ತಂಡದ ಆಟಗಾರರಿಗೆ ಲಂಚ ನೀಡಲು ಪ್ರಯತ್ನಿಸಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಫಿಫಾ ವಿಶ್ವಕಪ್ ಇಂದಿನಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್, ಈಕ್ವೆಡಾರ್ ತಂಡವನ್ನು ಎದುರಿಸಲಿದೆ. ಅಲ್ ಖೋರ್‌ನ ಅಲ್ ಬೇತ್ ಸ್ಟೇಡಿಯಂನಲ್ಲಿ ಇಂದು ಪಂದ್ಯ ನಡೆಯಲಿದೆ. ಆದರೆ, ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಫಿಫಾ ವಿಶ್ವಕಪ್‌ಗೆ ವಿವಾದಗಳು ಹುಟ್ಟಿಕೊಂಡಿವೆ. ಫಿಫಾ ವಿಶ್ವಕಪ್ ಆರಂಭಕ್ಕೂ ಮುನ್ನವೇ ಆತಿಥೇಯ ಕತಾರ್ ಗಂಭೀರ ಆರೋಪ ಎದುರಿಸಿದೆ.

ಇತಿಹಾಸದಲ್ಲಿ ಅತ್ಯಂತ ದುಬಾರಿ ಫುಟ್ಬಾಲ್ ಫಿಫಾ ವಿಶ್ವಕಪ್: ಎಷ್ಟು ಹಣ ಗಳಿಸುತ್ತೆ ಫಿಫಾ?ಇತಿಹಾಸದಲ್ಲಿ ಅತ್ಯಂತ ದುಬಾರಿ ಫುಟ್ಬಾಲ್ ಫಿಫಾ ವಿಶ್ವಕಪ್: ಎಷ್ಟು ಹಣ ಗಳಿಸುತ್ತೆ ಫಿಫಾ?

ಸೌದಿ ಅರೇಬಿಯಾದ ಬ್ರಿಟಿಷ್ ಕೇಂದ್ರದ ಕಾರ್ಯತಂತ್ರದ ರಾಜಕೀಯ ವ್ಯವಹಾರಗಳ ತಜ್ಞ ಮತ್ತು ಪ್ರಾದೇಶಿಕ ನಿರ್ದೇಶಕ ಅಮ್ಜದ್ ತಾಹಾ ಟ್ವೀಟ್ ಮಾಡುವ ಮೂಲಕ ಕತಾರ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಕತಾರ್ ಆರಂಭಿಕ ಪಂದ್ಯಕ್ಕೆ ಎದುರಾಳಿ ತಂಡ ಈಕ್ವೆಡಾರ್‌ಗೆ ಲಂಚ ನೀಡಲು ಪ್ರಯತ್ನಿಸಿದೆ ಎಂದು ಅವರು ಗಂಭೀರ ಆರೋಪ ಮಾಡಿರುವ ಸುದ್ದಿ ಜಾಗತಿಕವಾಗಿ ಹಬ್ಬಿದೆ.

FIFA World Cup 2022: Qatar accused of bribing Ecuador players 7.4 million dollars to lose opener

ಅಮ್ಜದ್ ಎಕ್ಸ್‌ಕ್ಲೂಸಿವ್ ಟ್ವೀಟ್‌

ಅಮ್ಜದ್ ತಾಹಾ ಟ್ವೀಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಎದುರಾಳಿ ತಂಡದ 8 ಈಕ್ವೆಡಾರ್ ಆಟಗಾರರಿಗೆ 60 ಕೋಟಿ ಲಂಚ ನೀಡಲು ಕತಾರ್ ಪ್ರಯತ್ನಿಸಿದೆ. ಅಲ್ಲದೆ ದ್ವಿತೀಯಾರ್ಧದಲ್ಲಿ ಪಂದ್ಯವನ್ನು 1-0 ಅಂತರದಲ್ಲಿ ಕಳೆದುಕೊಳ್ಳುವಂತೆ ಕೇಳಿಕೊಂಡರು. ಇದನ್ನು ಕತಾರ್ ಮತ್ತು ಈಕ್ವೆಡಾರ್ ಶಿಬಿರಗಳ 5 ಜನರು ಖಚಿತಪಡಿಸಿದ್ದಾರೆ. ಹಾಗಾಗದಿರಲಿ ಎಂದು ಆಶಿಸೋಣ. ಇದನ್ನು ಹಂಚಿಕೊಳ್ಳುವುದು ಅದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಭ್ರಷ್ಟಾಚಾರ ಮಾಡುತ್ತಿರುವ ಫಿಫಾ ಜಗತ್ತು ನಿಲ್ಲಿಸಬೇಕು ಎಂದು ಅವರು ಅಮ್ಜದ್ ಆಗ್ರಹಿಸಿದ್ದಾರೆ.

ಕತಾರ್ ಮೇಲೆ ಸಾಲು-ಸಾಲು ಟೀಕೆಗಳು

ಈ ಆರೋಪಗಳ ಬಗ್ಗೆ ಕತಾರ್ ಅಥವಾ ಈಕ್ವೆಡಾರ್ ಯಾವುದೇ ಹೇಳಿಕೆ ನೀಡಿಲ್ಲ. ಕತಾರ್ ಈಗಾಗಲೇ ಅನೇಕ ತೊಂದರೆಗಳಿಂದ ಸುತ್ತುವರಿದಿದೆ. ಆತಿಥೇಯ ದೇಶವು ಕ್ರೀಡಾಂಗಣದಲ್ಲಿ ಬಿಯರ್ ಕುಡಿಯುವುದನ್ನು ನಿಷೇಧಿಸಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಈ ಹಿಂದೆಯೂ ಈ ದೇಶದ ಮೇಲೆ ಹಲವು ಆರೋಪಗಳು ಕೇಳಿ ಬಂದಿವೆ. ಫಿಫಾ ವಿಶ್ವಕಪ್ ಆತಿಥ್ಯ ವಹಿಸಲು ಕತಾರ್ ಲಂಚ ನೀಡಿದೆ ಮತ್ತು ತನ್ನ ವಲಸೆ ಕಾರ್ಮಿಕರ ಮಾನವ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಆದರೆ, ಕತಾರ್ ತಂಡ ಫಿಫಾ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ಎರಡೂ ತಂಡಗಳು ಮೂರು ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿವೆ. ಕತಾರ್ ಮತ್ತು ಈಕ್ವೆಡಾರ್ ತಂಡಗಳು ಕೊನೆಯ ಬಾರಿಗೆ ಅಕ್ಟೋಬರ್ 2018ರಲ್ಲಿ ಮುಖಾಮುಖಿಯಾಗಿದ್ದವು.

FIFA World Cup 2022: Qatar accused of bribing Ecuador players 7.4 million dollars to lose opener

ಈ ಪಂದ್ಯವನ್ನು ಕತಾರ್ 4-3 ಅಂತರದಿಂದ ಗೆದ್ದುಕೊಂಡಿತು. ಇದು ಕತಾರ್‌ಗೆ ಚೊಚ್ಚಲ ವಿಶ್ವಕಪ್ ಆಗಿದ್ದು, ತಂಡವು ತವರಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ತೋರಲಿದೆ. 2002ರಲ್ಲಿ ಕೊನೆಯ ಬಾರಿಗೆ ಚೊಚ್ಚಲ ತಂಡ ಈ ಟೂರ್ನಿಯಲ್ಲಿ ಮೊದಲ ಪಂದ್ಯ ಗೆದ್ದಿತ್ತು. ನಂತರ ಫಿಫಾ ವಿಶ್ವಕಪ್‌ನ ತನ್ನ ಚೊಚ್ಚಲ ಪಂದ್ಯದಲ್ಲಿ ಸೆನೆಗಲ್ ಫ್ರಾನ್ಸ್ ತಂಡವನ್ನು ಸೋಲಿಸಿತ್ತು.

English summary
Ahead of Qatar's opening game at FIFA World Cup 2022, a major controversy has erupted in what could be the most controversial FIFA World Cup ever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X