Bengaluru Weather: ಬೆಂಗಳೂರಿನಲ್ಲಿ ಇಂದು ಆಲಿಕಲ್ಲು ಸಹಿತ ಜೋರು ಮಳೆ, ಮೆಟ್ರೋ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಸುಡು ಬಿಸಿಲಿನಿಂದ ಹೈರಾಣಾಗಿದ್ದ ಬೆಂಗಳೂರಿಗೆ ಸಂಜೆ ಮಳೆರಾಯ ತಂಪೆರೆದಿದ್ದಾನೆ. ರಾಜಧಾನಿಯ ಹಲವೆಡೆ ಗುರುವಾರ ಸಂಜೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು, ಸಂಜೆಯ ಮಳೆ ಜನಕ್ಕೆ ಹಿತವಾದ ಅನುಭವ ನೀಡಿದರೂ, ವಾಹನ ಸವಾರರು ಮತ್ತು ಕಚೇರಿಯಿಂದ ಮನೆಗೆ ಮರಳುವ ಉದ್ಯೋಗಿಗಳಿಗೆ ದಿಢೀರ್ ಮಳೆ ಸಾಕಷ್ಟು ಸಂಕಷ್ಟವನ್ನೂ ತಂದೊಡ್ಡಿದೆ. ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ಮೆಟ್ರೋ ಸಂಚಾರ ಅಸ್ತವ್ಯಸ್ತಗೊಂಡಿದೆ.

ಗುರುವಾರ ಸಂಜೆ ಐದು ಗಂಟೆಯ ಸುಮಾರಿಗೆ ನಗರದಲ್ಲಿ ವಾತಾವರಣ ದಿಢೀರ್ ಬದಲಾಯಿತು. ದಟ್ಟವಾದ ಕಾರ್ಮೋಡಗಳು ಕವಿದು ಕತ್ತಲು ಆವರಿಸಿದಂತಾಗಿ, ನೋಡನೋಡುತ್ತಿದ್ದಂತೆಯೇ ಬಿರುಸಿನ ಮಳೆ ಸುರಿಯಲಾರಂಭಿಸಿತು. ಸಂಜೆ 6.30ರವರೆಗಿನ ವರದಿಯ ಪ್ರಕಾರ, ನಗರದ ಚಾಮರಾಜಪೇಟೆ, ಬಸವೇಶ್ವರ ನಗರ ಮತ್ತು ಹಗದೂರು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರ ಜೊತೆಗೆ ಪ್ರಮುಖ ಜಂಕ್ಷನ್‌ಗಳಾದ ಕೆ.ಆರ್. ವೃತ್ತ, ಚಾಲುಕ್ಯ ವೃತ್ತ, ಐಟಿ ಕಾರಿಡಾರ್ ಕೋರಮಂಗಲ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಶೇಷಾದ್ರಿಪುರಂ, ಹೆಬ್ಬಾಳ, ಯಶವಂತಪುರ, ರಾಜಾಜಿನಗರ, ವಿಧಾನಸೌಧ ಹಾಗೂ ಶಿವಾಜಿನಗರ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿತ್ತು.

Bengaluru

ಸಂಜೆ ಕಚೇರಿ, ಶಾಲಾ-ಕಾಲೇಜು ಬಿಡುವ ಸಮಯದಲ್ಲೇ ಮಳೆ ಸುರಿದಿದ್ದರಿಂದ ವಾಹನ ಸವಾರರು ತೀವ್ರವಾಗಿ ಪರದಾಡುವಂತಾಯಿತು. ಪ್ರಮುಖ ರಸ್ತೆಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯಲ್ಲೇ ನಿಂತು ದೊಡ್ಡ ಹೊಂಡಗಳಂತಾಗಿದ್ದವು. ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ ಹಾಗೂ ಕಾರ್ಪೊರೇಷನ್ ವೃತ್ತದಂತಹ ಜನದಟ್ಟಣೆಯ ಪ್ರದೇಶಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

ನಗರ್ತಪೇಟೆಯಲ್ಲಿ ಆಲಿಕಲ್ಲು ಸಹಿತ ಜೋರು ಮಳೆ

ನಗರ ನಗರ್ತಪೇಟೆಯಲ್ಲಿ ಸಂಜೆ ನೋಡ ನೋಡುತ್ತಿದ್ದಂತೆ ಆಲಿಕಲ್ಲು ಸಹಿತ ಜೋರು ಮಳೆ ಸುರಿಯಲಾರಂಭಿಸಿತು. ರಸ್ತೆ ಮೇಲೆಲ್ಲ ಆಲಿಕಲ್ಲುಗಳು ಬಿದ್ದವು. ಎಲ್ಲಿ ನೋಡಿದರೆ ಆಲಿಕಲ್ಲುಗಳು ಕಂಡು ಬಂದಿದ್ದು, ಸುಮಾರು ಅರ್ಧಗಂಟೆಗೂ ಹೆಚ್ಚು ಹೊತ್ತು ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಹಾಗೆಯೇ ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಎಲ್ಲಾ ಮೆಟ್ರೋ ಮಾರ್ಗಗಳ ಸೇವೆಯಲ್ಲಿ ವಿಳಂಬ ಉಂಟಾಗಿದೆ.

ಮೇ 24 ರವರೆಗೆ ಭಾರೀ ಮಳೆ, ಯೆಲ್ಲೋ ಅಲರ್ಟ್

ಇಂದಿನಿಂದ (ಮೇ 21) ಮೇ 24 ರವರೆಗೆ ನಗರದಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದ್ದು. ಮುಂದಿನ ಮೂರು ದಿನ 75 ಮಿಲಿ ಮೀಟರ್‌ನಿಂದ 115 ಮಿಲಿ ಮೀಟರ್‌ವರೆಗೆ ಗುಡುಗು ಸಹಿತ ಭಾರೀ ಮಳೆ ಆಗಲಿದ್ದು, ಹವಾಮಾನ ಇಲಾಖೆ ಬೆಂಗಳೂರಿಗೆ ಈ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಅವಧಿಯಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 32 ರಿಂದ 33 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ. ಮೇ 24 ರಂದು ಭಾಗಶಃ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಆಲಿಕಲ್ಲು ಸಹಿತವು ಜೋರು ಮಳೆಯಾಗುವ ನಿರೀಕ್ಷೆಯಿದೆ. ಮೇ 25 ರಿಂದ ಮೇ 27 ರವರೆಗೆ ಹವಾಮಾನದಲ್ಲಿ ತುಸು ಬದಲಾವಣೆಯಾಗಲಿದ್ದು, ಸಾಮಾನ್ಯವಾಗಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ತಿಳಿಸಲಾಗಿದೆ. ಈ ದಿನಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಇರುವುದಿಲ್ಲ. ಆದರೆ ಗರಿಷ್ಠ ತಾಪಮಾನವು ಕೊಂಚ ಏರಿಕೆಯಾಗಿ 34 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+