Bengaluru Flyover: ಹೆಚ್ಚುವರಿ ಕಾರ್ಮಿಕರ ಬಳಸಿ ಈಜಿಪುರ ಮೇಲ್ಸೇತುವೆ ಪೂರ್ಣಗೊಳಿಸಿ: ಜಿಬಿಎ ಖಡಕ್ ಎಚ್ಚರಿಕೆ

ಬೆಂಗಳೂರು: ಬೆಂಗಳೂರಿನ ಪ್ರಮುಖ ಕಾಮಗಾರಿಗಳಲ್ಲಿ ವರ್ಷಗಳಿಂದ ವಿಳಂಬ ಕಂಡ ಈಜಿಪುರ ಮೇಲ್ಸೇತುವೆ ಉದ್ಘಾಟನೆಗೆ ಮುಹೂರ್ತ ಸಮೀಪಿಸುತ್ತಿದೆ ಅನ್ನಿಸುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರು ಮೇಲಿಂದ ಮೇಲೆ ಕಾಮಗಾರಿ ಪರಿಶೀಲಿಸುತ್ತಿದ್ದಾರೆ. ಇಂದು ಪುನಃ ಕಾಮಗಾರಿ ಕುರಿತು ಸಭೆ ನಡೆಸಿ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಭೆ ನಡೆಸಿದರು. ಬಳಿಕ ಮಾತನಾಡಿದ ಆಯುಕ್ತರು, ಹೆಚ್ಚುವರಿ ಸಿಬ್ಬಂದಿಗಳನ್ನು ಹಾಗೂ ಕಾರ್ಮಿಕರನ್ನು ನಿಯೋಜಿಸಿಕೊಂಡು ಅಂತಿಮ ಗಡುವಿನೊಳಗಾಗಿ ಈಜೀಪುರ ಮೇಲ್ಸೇತುವೆ ನಿರ್ಮಾಣ ಕೆಲಸ ಮುಗಿಸುವಂತೆ ತಿಳಿಸಿದರು.

Bengaluru Eejipura Flyover

ಮೇಲ್ಸೇತುವೆ ಅಕ್ಟೋಬರ್ ಒಳಗೆ ಪೂರ್ಣಗೊಳಿಸಿ

ಈಜಿಪುರ ಮೇಲ್ಸೇತುವೆಯನ್ನು ಅಕ್ಟೋಬರ್ 2026 ಒಳಗೆ ಪೂರ್ಣಗೊಳಿಸುವಂತೆ ಈಗಾಗಲೇ ಡೆಡ್‌ಲೈನ್ ಫಿಕ್ಸ್ ಮಾಡಲಾಗಿದೆ. ನಿಗದಿತ ಗುಡುವಿನೊಳಗಾಗಿ ಪೂರ್ಣಗೊಳಿಸಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.ಮಡಿವಾಳ ಕಡೆಯ ಸೈಡ್ ರ‍್ಯಾಂಪ್ ಕಾಮಗಾರಿ ನಡೆಸುವ ಸ್ಥಳದಲ್ಲಿ ಬೆಸ್ಕಾಂನ ಆರ್.ಎಂ.ಯು ಅನ್ನು ನಾಳೆಯೇ ಸ್ಥಳಾಂತರ ಮಾಡಬೇಕು. ಆ ಬಳಿಕ ಕೇಂದ್ರೀಯ ಸದನದ ಎದುರಿರುವ ಮೂರು ಮರಗಳನ್ನು 4 ದಿನಗಳ ಒಳಗಾಗಿ ಕಟಾವು ಮಾಡಿ ರ‍್ಯಾಂಪ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

Blue Line Metro: ಬೆಂಗಳೂರು ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಪ್ರಮುಖ ಕಾಮಗಾರಿ ಯಶಸ್ವಿ
Blue Line Metro: ಬೆಂಗಳೂರು ಏರ್‌ಪೋರ್ಟ್‌ ಮೆಟ್ರೋ ಮಾರ್ಗದಲ್ಲಿ ಪ್ರಮುಖ ಕಾಮಗಾರಿ ಯಶಸ್ವಿ

ಡೌನ್‌ ರ‍್ಯಾಂಪ್ ಕಾಮಗಾರಿಗಳು ಬಾಕಿ

ದೊಮ್ಮಲೂರು ಕಡೆಯ ಡೌನ್ ರ‍್ಯಾಂಪ್ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದೆ. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು 15 ದಿನಗಳ ಒಳಗಾಗಿ ಬಾಕಿ ಡೌನ್ ರ‍್ಯಾಂಪ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅದಾದ ಬಳಿಕ ಸರ್ಜಾಪುರ ಕಡೆಯ ಡೌನ್ ರ‍್ಯಾಂಪ್ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಕೈಗೆತ್ತಿಕೊಳ್ಳಬೇಕು.

ಈಜೀಪುರ ಸಿಗ್ನಲ್ ಕಡೆಯಲ್ಲಿ ಅಳವಡಿಸುತ್ತಿರುವ 4 ಸ್ಪಾನ್ಸ್ ಲಾಂಚಿಂಗ್ ಕಾರ್ಯವನ್ನು ನಿನ್ನೆ ಆರಂಭಿಸಲಾಗಿದೆ. 2 ತಿಂಗಳಲ್ಲಿ ಅದನ್ನು ಪೂರ್ಣಗೊಳಿಸಬೇಕು. 5 ಪೋರ್ಟಲ್ ಫ್ರೇಮ್ ಗಳ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ ಅಂತ್ಯದೊಳಗಾಗಿ ಪ್ರಮುಖ ಮೇಲ್ಸೇತುವೆ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ರಸ್ತೆ ಗುಂಡಿಗಳನ್ನು ತ್ವರಿತ ಮುಚ್ಚಿ

ಈಜೀಪುರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ರಸ್ತೆ ಭಾಗದಲ್ಲಿ ಎಲ್ಲಿಯೂ ರಸ್ತೆ ಗುಂಡಿಗಳು ಇಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಗುರುತಿಸಿ ಕೂಡಲೆ ಮುಚ್ಚಿ ಸುಗಮ ಸಂಚಾರ ಕಲ್ಪಿಸಬೇಕು. ಜೊತೆಗೆ ಮಳೆಗಾಲ ಆರಂಭವಾಗುತ್ತಿದ್ದು, ಎರಡು ಬದಿಯ ಚರಂಡಿಗಳಲ್ಲಿ ಸಂಪೂರ್ಣ ಹೂಳೆತ್ತಿ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ಮಳೆಗಾಲದ ವೇಳೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಯಾವ ಭಾಗದಲ್ಲಿಯೂ ಜಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ದೇಶಿಸಿದರು.

Bengaluru Airport: ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯ 'ಚಾಲೆಂಜರ್ 2026' ನಿರ್ವಹಿಸಿದ 3000 ಸಿಬ್ಬಂದಿ
Bengaluru Airport: ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯ 'ಚಾಲೆಂಜರ್ 2026' ನಿರ್ವಹಿಸಿದ 3000 ಸಿಬ್ಬಂದಿ

ಮೇಲ್ಸೇತುವೆ ಕಾಮಗಾರಿ ಪ್ರಗತಿಯ ವಿವರ

ಈಜೀಪುರ ಮೇಲ್ಸೇತುವೆಯನ್ನು 2.59 ಕಿ.ಮೀ ಉದ್ದದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು 762 ಸೆಗ್ಮೆಂಟ್‌ಗಳಲ್ಲಿ 731 ಸೆಗ್ಮೆಂಟ್‌ಗಳು ಈಗಾಗಲೇ ಕಾಸ್ಟ್ ಮಾಡಲಾಗಿದೆ. ಜೂನ್ ಅಂತ್ಯದೊಳಗಾಗಿ ಸೆಗ್ಮೆಂಟ್ ಗಳ ಕಾಸ್ಟಿಂಗ್ ಪೂರ್ಣಗೊಳ್ಳಲಿದೆ. 66 ಸ್ಪಾನ್ ಗಳ ಪೈಕಿ 52 ಪೂರ್ಣಗೊಂಡಿದ್ದು, ಬಾಕಿ 14 ಸ್ಪಾನ್‌ಗಳ ಅಳವಡಿಕೆ ಪ್ರಗತಿಯಲ್ಲಿದೆ.

ಭೂಸ್ವಾಧೀನ ಮತ್ತು ರಸ್ತೆ ಅಗಲೀಕರಣ

ಗ್ರೇಡ್ ಮಟ್ಟದ ರಸ್ತೆಯಲ್ಲಿ ಏಕರೂಪ ಪಾದಚಾರಿ ಮಾರ್ಗ ಹಾಗೂ ರಸ್ತೆ ಅಗಲೀಕರಣಕ್ಕಾಗಿ ಸೆಂಟ್ ಜಾನ್ಸ್ ಸೇರಿದಂತೆ ಒಟ್ಟು 5998.6 ಚ.ಮೀ ಖಾಸಗಿ/ಸರ್ಕಾರಿ ಜಮೀನು ಹಸ್ತಾಂತರ ಪ್ರಕ್ರಿಯೆಗೆ ಭೂಸ್ವಾಧೀನ ಹಾಗೂ ಸಂಬಂಧಿತ ವಿಭಾಗದಿಂದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+