ಅಬ್ಬರಿಸಿದ ಗಿಲ್‌, ಸಾಯಿ ಸುದರ್ಶನ್, ಬಟ್ಲರ್: ಸಿಎಸ್‌ಕೆಗೆ 230 ರನ್‌ಗಳ ಗುರಿ ನೀಡಿದ ಗುಜರಾತ್ ಟೈಟಾನ್ಸ್‌

GT Vs CSK IPL 2026: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ (ಮೇ 21) ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರ ಭರ್ಜರಿ ಅರ್ಧಶತಕಗ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 229 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದೆ.

ಟಾಸ್‌ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಶುಭ್‌ಮನ್‌ ಗಿಲ್‌ ನಾಯಕತ್ವದ ಗುಜರಾತ್ ಟೈಟಾನ್ಸ್‌ ತಂಡವು ನಿಗದಿ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 229 ರನ್‌ಗಳನ್ನು ಕಲೆಹಾಕಿ ಸಿಎಸ್‌ಕೆಗೆ 230 ರನ್‌ಗಳ ಬೃಹತ್ ಟಾರ್ಗೆಟ್‌ ನೀಡಿದೆ.

GT vs CSK IPL 2026 Gill Sai Sudharsan and Jos Buttler Power Gujarat to 229 Runs in Ahmedabad

ಗುಜರಾತ್ ಪರ ಯಾರು ಎಷ್ಟು ರನ್ ಗಳಿಸಿದರು?

ಗುಜರಾತ್ ಟೈಟಾನ್ಸ್ ತಂಡದ ಪರ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ 53 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳ ಸಹಿತ 84 ರನ್‌ ಗಳಿಸಿದರೆ ಮತ್ತು ನಾಯಕ ಶುಭ್‌ಮನ್ ಗಿಲ್ 64(37), ಜೋಸ್ ಬಟ್ಲರ್ ಅಜೇಯ 57(27) ರನ್‌ ಗಳನ್ನು ಸಿಡಿಸುವ ಮೂಲಕ ತಂಡದ ಮೊತ್ತವನ್ನು ಏರಿಸಿದರು.

ಅಪಾಯಕಾರಿಯಾಗಿದ್ದ ಜಿಟಿ ನಾಯಕ ಗಿಲ್ ಅವರನ್ನು ಸ್ಪೆನ್ಸರ್ ಜಾನ್ಸನ್ ಔಟ್ ಮಾಡುವ ಮೂಲಕ ಜೊತೆಯಾಟವನ್ನು ಮುರಿದರು. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದ ಸಾಯಿ ಸುದರ್ಶನ್ ಅಂಕುಶ್ ಕಾಂಬೋಜ್ ಬೌಲಿಂಗ್ ದಾಳಿ ವೇಳೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಕೇವಲ 27 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿ ಗುಜರಾತ್ ತಂಡವು 200ರ ಗಡಿ ದಾಟುವಂತೆ ನೋಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+