Harpreet Brar: ವಿರಾಟ್ ಕೊಹ್ಲಿ-ಹರ್‌ಪ್ರೀತ್ ಬ್ರಾರ್ ನಡುವಿನ ಜಗಳದ ಹಿಂದಿನ ಅಸಲಿ ಕಥೆ
Harpreet Brar: ಇತ್ತೀಚೆಗಷ್ಟೇ ಧರ್ಮಶಾಲದಲ್ಲಿ ನಡೆದ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಈ ವೇಳೆ ವಿರಾಟ್ ಕೊಹ್ಲಿ ಅವರು ಹರ್‌ಪ್ರೀತ್ ಬ್ರಾರ್‌ಗೆ ಔಟ್ ಮಾಡು ನೋಡೋಣ ಎನ್ನುವ ರೀತಿಯಲ್ಲಿ ಲುಕ್ ಕೊಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಭಾರಿ ಆಗಿದ್ದು, ಈ ಬಗ್ಗೆ ಇದೀಗ ಬ್ರಾರ್ ಪ್ರತಿಕ್ರಿಯಿಸಿ ನಡೆದಿದ್ದೇನು ಎಂದು ವಿವರಿಸಿದ್ದಾರೆ.
ಪಂದ್ಯದ 9ನೇ ಓವರ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಎಸೆತವನ್ನು ಎದುರಿಸಿದ ಕೊಹ್ಲಿ ಅವರು ರನ್ ಓಡಲು ಮುಂದಾದರು. ಈ ವೇಳೆ ಪಂಜಾಬ್ ಫೀಲ್ಡರ್ ಹರ್‌ಪ್ರೀತ್ ಬ್ರಾರ್ ಚೆಂಡನ್ನು ವೇಗವಾಗಿ ತಡೆದಿದ್ದನ್ನು ನೋಡಿ ಕೊಹ್ಲಿ ಕ್ರೀಸ್‌ನಿಂದ ದೂರ ನಿಂತು ದಿಟ್ಟಿಸಿ ನೋಡುತ್ತಿದ್ದರು. ಈ ದೃಶ್ಯ ಹೇಗಿತ್ತು ಅಂದ್ರೆ ಔಟ್ ಮಾಡು ನೋಡೋಣ ಎನ್ನುವಂತಿತ್ತು.

ಬ್ರಾರ್ ಕೆಣಕಿದ ವಿರಾಟ್ ಕೊಹ್ಲಿ
ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಬ್ಯಾಟರ್‌ಗಳು ಬೇಗನೆ ಕ್ರೀಸ್‌ಗೆ ಮರಳಲು ಜೋರಾಗಿ ಓಡುತ್ತಾರೆ. ಆದರೆ ವಿರಾಟ್ ಕೊಹ್ಲಿ ಗಾಬರಿಯಾಗದೆ ಅಲ್ಲೇ ನಿಂತು ಹರ್‌ಪ್ರೀತ್ ಬ್ರಾರ್ ಕಡೆಗೆ ಸವಾಲು ಹಾಕುವಂತೆ ದಿಟ್ಟಿಸಿ ನೋಡಿದರು. ಬ್ರಾರ್ ಅವರ ಕೈಯಲ್ಲಿ ಚೆಂಡಿದ್ದರೂ ಕೊಹ್ಲಿ ಬೇಕಂತಲೇ ಕ್ರೀಸ್‌ಗೆ ಮರಳದೆ ರನ್ ಔಟ್ ಮಾಡು ನೋಡೋಣ ಎಂಬಂತೆ ಕೆಣಕಿದಂದಿತ್ತು.
ಹರ್‌ಪ್ರೀತ್ ಬ್ರಾರ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಬ್ರಾರ್, "ವಿರಾಟ್ ಭಾಯ್ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ಅವರು ಪಂಜಾಬಿ ಹುಡುಗ, ನಾನೂ ಕೂಡ. ಆ ಕ್ಷಣದಲ್ಲಿ ಏನೋ ಒಂದು ಕಿಡಿ ಹೊತ್ತಿಕೊಂಡಿತ್ತು," ಎಂದು ಹೇಳಿದ್ದಾರೆ. ಇನ್ನೂ ಪಂದ್ಯ ಕೊಹ್ಲಿ ತಮಾಷೆಯಾಗಿ ಬ್ರಾರ್ ಬಳಿ ಬಂದು, "ನಾನು 20 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ, ಸುಮ್ಮನೆ ರನ್ ಔಟ್ ಅಥವಾ ಸ್ಟಂಪ್ ಆಗುವುದಿಲ್ಲ ಎಂದು ನಗುತ್ತಾ ಹೇಳಿದರು," ಅಂತಾ ವರದಿಯಾಗಿದೆ.
ಇದು ಮೈದಾನದಲ್ಲಿ ನಡೆದ ಗಂಭೀರ ಜಗಳವಾಗಿರಲಿಲ್ಲ, ಬದಲಿಗೆ ಇಬ್ಬರು ಪಂಜಾಬಿ ಮೂಲದ ಆಟಗಾರರ ನಡುವಿನ ಆರೋಗ್ಯಕರ ಸ್ಪರ್ಧೆ ಮತ್ತು ತಮಾಷೆಯಾಗಿತ್ತು. ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಆಟದಿಂದ ಬ್ರಾರ್ ಅವರನ್ನು ಕೆಣಕಿದರೆ, ಬ್ರಾರ್ ಅದನ್ನು ನಗುನಗುತ್ತಲೇ ಸ್ವೀಕರಿಸಿದ್ದರು. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ಬ್ರಾರ್ ಅವರು ಬ್ರೇಕ್ ಹಾಕಿದ್ದಾರೆ.












Click it and Unblock the Notifications