Get Updates
Get notified of breaking news, exclusive insights, and must-see stories!

ವಿಶ್ವಕಪ್ 2022ಗಾಗಿ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ಪಡೆ ಹೇಗಿದೆ?

ಜನಪ್ರಿಯ ಕ್ರೀಡೆ ಫುಟ್ಬಾಲ್ ವಿಶ್ವಕಪ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಬ್ರೆಜಿಲ್, ಇಂಗ್ಲೆಂಡ್ ಸೇರಿದಂತೆ ಪ್ರಮುಖ ತಂಡಗಳು ಪ್ರಕಟಗೊಂಡ ಬಳಿಕ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡದ ಪರಿಚಯ ಇಲ್ಲಿದೆ.

ಪೋರ್ಚುಗಲ್ ತಂಡದ ಮುಖ್ಯ ಕೋಚ್ ಫರ್ನಾಂಡೋ ಸ್ಯಾಂಟೋಸ್ ವಿಶ್ವಕಪ್‌ಗಾಗಿ ತಂಡವನ್ನು ಹೆಸರಿಸಿದ್ದಾರೆ. ಸತತ ಎಂಟನೆ ಬಾರಿಗೆ ಪೋರ್ಚುಗಲ್ ನೇರವಾಗಿ ವಿಶ್ವಕಪ್ ಗೆ ಅರ್ಹತೆ ಪಡೆದುಕೊಂಡಿದೆ. ಪ್ರತಿಭಾವಂತ ಆಟಗಾರರನ್ನು ಹೊಂದಿದ್ದರೂ ಪೋರ್ಚುಗಲ್ ತಂಡ ಇಲ್ಲಿ ತನಕ ವಿಶ್ವಕಪ್ ಎತ್ತಲು ಸಾಧ್ಯವಾಗಿಲ್ಲ, 1966ರಲ್ಲಿ ಮೂರನೇ ಸ್ಥಾನಕ್ಕೇರಿದ್ದೇ ಇಲ್ಲಿ ತನಕದ ಅತ್ಯುತ್ತಮ ಸಾಧನೆ ಎನ್ನಬಹುದು.

ಉರುಗ್ವೆ, ಘಾನಾ ಹಾಗೂ ದಕ್ಷಿಣ ಕೊರಿಯಾ ಇರುವ ಎಚ್ ಗುಂಪಿನಲ್ಲಿ ಪೋರ್ಚುಗಲ್ ಸ್ಥಾನ ಪಡೆದುಕೊಂಡಿದೆ. ತಂಡದ ಆಯ್ಕೆ ಬಗ್ಗೆ ಸ್ಯಾಂಟೋಸ್ ಅಳೆದು ತೂಗಿ 26 ಮಂದಿಯನ್ನು ಆಯ್ಕೆ ಮಾಡಿದ್ದಾರೆ ಮೇಲ್ನೋಟಕ್ಕೆ ಸುಲಭವಾಗಿ ನಾಕೌಟ್ ಹಂತ ತಲುಪುವ ಸಾಮರ್ಥ್ಯ ಹೊಂದಿದೆ ಎನ್ನಬಹುದಾದರೂ, ಪ್ರಮುಖ ಆಟಗಾರರ ಮೇಲೆ ಒತ್ತಡ ಇದ್ದೇ ಇದೆ. ಮುಂಪಡೆಗಿಂತ ಮಿಡ್ ಫೀಲ್ಡ್ ಪಡೆ ಮೇಲೆ ಸ್ಯಾಂಟೋಸ್ ಹೆಚ್ಚಿನ ಒತ್ತು ನೀಡಿದಂತೆ ಕಾಣುತ್ತದೆ.

Portugal World Cup 2022 squad: Cristiano Ronaldo led team includes 6 Forwards

ಗೋಲ್ ಕೀಪರ್ಸ್:
ರುಯಿ ಪ್ಯಾಟ್ರಿಸಿಯೋ: ರೋಮಾ
ಜೋಸೆ ಸಾ : ವುಲ್ವ್ಸ್
ಡಿಯೊಗೊ ಕೋಸ್ಟಾ: ಪೋರ್ಟೋ

ಡಿಫೆಂಡರ್ಸ್:
ಪೆಪೆ: ಪೋರ್ಟೋ
ರುಬೆನ್ ಡಯಾಸ್: ಮ್ಯಾಂಚೆಸ್ಟರ್ ಸಿಟಿ
ಜುವಾನ್ ಕ್ಯಾನ್ಸೆಲೋ: ಮ್ಯಾಂಚೆಸ್ಟರ್ ಸಿಟಿ
ನುನೊ ಮೆಂಡೆಸ್: ಪಿಎಸ್ ಜಿ
ಡಿಯೊಗೊ ಡಾಲೊ : ಮ್ಯಾಂಚೆಸ್ಟರ್ ಯುನೈಟೆಡ್
ಅಂಟೋನಿಯೋ ಸಿಲ್ವಾ: ಬೆನ್ಫಿಕಾ
ರಾಫೆಲ್ ಗುರೆರಿಯೋ: ಬೊರೊಸಿಯೋ ಡೊರ್ಟ್ ಮಂಡ್
ಡ್ಯಾನಿಯೋ ಪೆರೆರಿಯಾ: ಪಿಎಸ್ ಜಿ

ಮಿಡ್ ಫೀಲ್ಡರ್ಸ್:

ವಿಟಿನ್ಹಾ: ಪಿಎಸ್ ಜಿ
ವಿಲಿಯಂ ಕರ್ವಾಲೋ : ರಿಯಲ್ ಬೆಟಿಸ್
ಬರ್ನಾಡೋ ಸಿಲ್ವಾ: ಮ್ಯಾಂಚೆಸ್ಟರ್ ಸಿಟಿ
ಜೋ ಮಾರಿಯೋ: ಬೆನ್ಫಿಕಾ
ಬ್ರುನೋ ಫರ್ನಾಂಡೀಸ್: ಮ್ಯಾಂಚೆಸ್ಟರ್ ಯುನೈಟೆಡ್
ರುಬೆನ್ ನೆವೆಸ್: ವುಲ್ವ್ಸ್
ಜುವಾನ್ ಪಾಲ್ಹಿನಾ: ವುಲ್ವ್ಸ್
ಮಾಥೆಯಸ್ ನುನೆಸ್: ವುಲ್ವ್ಸ್
ಒಟಾವಿಯೋ: ಪೋರ್ಟೊ

Portugal World Cup 2022 squad: Cristiano Ronaldo led team includes 6 Forwards

ಫಾರ್ವರ್ಡ್ಸ್:
ಕ್ರಿಸ್ಟಿಯಾನೊ ರೊನಾಲ್ಡೊ: ಮ್ಯಂಚೆಸ್ಟರ್ ಯುನೈಟೆಡ್
ಜೋ ಫೆಲಿಕ್ಸ್: ಅಟ್ಲೆಟಿಕೊ ಮ್ಯಾಡ್ರಿಡ್
ರಾಫೆಲ್ ಲಿಯೊ: ಎಸಿ ಮಿಲಾನ್
ರಿಕಾರ್ಡೊ ಹೊರ್ಟಾ: ಬ್ರಾಗಾ
ಗೊನ್ಸಾಲೊ ರಮೋಸ್: ಬೆನ್ಫಿಕಾ
ಆಂಡ್ರೆ ಸಿಲ್ವಾ: ಆರ್ ಬಿ ಲೈಪ್ ಜಿಗ್

ಸಂಭಾವ್ಯ ವ್ಯೂಹ(4-3-3) ಡಿಯೊಗೋ ಕೋಸ್ಟಾ; ಕ್ಯಾನ್ಸೆಲೊ, ಡಿಯಾಸ್, ಪೆಪೆ, ಮೆಂಡೆಸ್;ನೆವೆಸ್, ಬರ್ನಾಡೋ ಸಿಲ್ವಾ, ಫರ್ನಾಂಡೆಸ್; ಒಟಾವಿಯೋ, ರೊನಾಲ್ಡೊ, ಲಿಯೊ.

ಮೂವರು ಮುಂಪಡೆ ಆಟಗಾರರು ಹಾಗೂ ಅವರಿಗೆ ಬೆಂಬಲವಾಗಿ ರುಬೆನ್ ಡಿಯಾಸ್, ಪೆಪೆ ಜೊತೆಗೂಡಲಿದ್ದಾರೆ. ಒಟಾವಿಯೋ, ಕರ್ವಾಲೋ, ಬರ್ನಾಡೋ ಸಿಲ್ವಾ ಮೇಲೆ ಕೋಚ್ ಸ್ಯಾಂಟೋಸ್‌ಗೆ ಹೆಚ್ಚಿನ ನಿರೀಕ್ಷೆಯಿದೆ.

ವಿಶ್ವಕಪ್‌ಗೆ ಅರ್ಹತೆ: ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳ ಬಳಿಕ ಅರ್ಹತಾ ಸುತ್ತಿನ ಪಂದ್ಯಾವಳಿ ಆರಂಭವಾಗುತ್ತದೆ 1934ರಿಂದ ಇದೇ ಪದ್ಧತಿ ಜಾರಿಯಲ್ಲಿದೆ. ಅಫ್ರಿಕಾ, ಏಷ್ಯಾ, ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್, ದಕ್ಷಿಣ ಅಮೆರಿಕ, ಓಷಾನಿಯ ಮತ್ತು ಯುರೋಪ್ ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. ಅಂತಿಮವಾಗಿ 32 ದೇಶಗಳು ಒಂದು ತಿಂಗಳು ಕಪ್‌ಗಾಗಿ ಕಾದಾಟ ನಡೆಸಲಿವೆ.

ಮೊದಲು ಗುಂಪಿನ ಸುತ್ತು ಆಮೇಲೆ ನಾಕೌಟ್ ಹಂತ ಇರುತ್ತದೆ. ನಾಕೌಟ್ ಹಂತದಲ್ಲಿ ತಂಡಗಳು ಸಮಬಲವಾದರೆ ಹೆಚ್ಚಿನ ಅವಧಿ ನೀಡಿಕೆ ಹಾಗೂ ಪೆನಾಲ್ಟಿ ಶೂಟೌಟ್ ನೀಡಿ ಪಂದ್ಯದ ನಿರ್ಣಯ ಪಡೆಯಲಾಗುತ್ತದೆ. ನಂತರ 16 ರ ಹಂತ ಇದರಲ್ಲಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ, ವಿರುದ್ಧ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದ ವಿರುದ್ಧ ಸೆಣೆಸಲಿದೆ. ನಂತರ ಕ್ವಾಟರ್ ಫೈನಲ್ಸ್ , ಉಪಾಂತ್ಯ, ಮೂರನೇ ಸ್ಥಾನಕ್ಕಾಗಿ ಕಾದಾಟ, ಕೊನೆಯಲ್ಲಿ ಅಂತಿಮ ಹಣಾಹಣಿ ಇರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+