• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fifa World Cup 2022: ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್

|
Google Oneindia Kannada News

ಬೆಂಗಳೂರು, ನವೆಂಬರ್​ 21: ಆತಿಥೇಯ ಕತಾರ್​ ಮತ್ತು ಈಕ್ವೆಡಾರ್​ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಫಿಫಾ ವಿಶ್ವಕಪ್​ ಕತಾರ್​​ -2022ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ವಿಶ್ವಕಪ್ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ವಯಾಕಾಮ್​18 ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ. ಇಂಗ್ಲೀಷ್ ಅಲ್ಲದೆ ಭಾರತೀಯ ಭಾಷೆಗಳಾದ ತಮಿಳು, ಬೆಂಗಾಲಿ, ಮಲೆಯಾಳಂ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯದ ವೀಕ್ಷಕ ವಿವರಣೆ, ವಿಶ್ಲೇಷಣೆ ಅಭಿಮಾನಿಗಳಿಗೆ ಸಿಗುತ್ತಿದೆ.

ಮೊದಲ ಪಂದ್ಯದ ಮೇಲೆ ಎಲ್ಲರ ಕಣ್ಣು ಸಹಜವಾಗಿ ನಿರೀಕ್ಷೆ ಹೆಚ್ಚಾಗಿತ್ತು. ಅದರಲ್ಲೂ ಪಂದ್ಯ ಸೋಲಲು ಈಕ್ವೆಡಾರ್ ಆಟಗಾರರಿಗೆ ಸುಮಾರು 60 ಕೋಟಿ ರು ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದ ಬಳಿಕ ಮೊದಲ ಪಂದ್ಯದ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿತ್ತು. ಆದರೆ, ವರದಿಗಳಿಗೆ ವ್ಯತಿರಿಕ್ತವಾಗಿ, ಮೊದಲ ಪಂದ್ಯದಲ್ಲಿ ಅತಿಥೇಯ ರಾಷ್ಟ್ರ ಕತಾರ್ ಸೋಲು ಕಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಸೋಲು ಕಂಡರೂ ಬೇಡದ ದಾಖಲೆ ಬರೆದಿದೆ.

ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?

92 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿಥೇಯ ರಾಷ್ಟ್ರವೊಂದು ಉದ್ಘಾಟನಾ ಪಂದ್ಯದಲ್ಲೇ ಸೋಲುವ ಮೂಲಕ ಹೊಸ ದಾಖಲೆ ಬರೆದಿದೆ. ನವೆಂಬರ್ 20ರಂದು ನಡೆದ ಮೊದಲ ಪಂದ್ಯದಲ್ಲಿ ಈಕ್ವೆಡಾರ್ 2-0 ಅಂತರದಲ್ಲಿ ಕತಾರ್ ತಂಡಕ್ಕೆ ಸೋಲುಣಿಸಿದೆ. ಈಕ್ವೆಡಾರ್ ತಂಡದ ನಾಯಕ ಎನ್ನಾರ್ ವಲೆನ್ಸಿಯಾ ಪಂದ್ಯದ ಮೊದಲಾರ್ಧದಲ್ಲೇ ಎರಡು ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಶುಭಾರಂಭ ಕಾಣದ ಕತಾರ್: ಉದ್ಘಾಟನಾ ಪಂದ್ಯದಲ್ಲಿ ಫುಟ್ಬಾಲ್ ಮೊದಲ ಕಿಕ್‌ಗೂ ಮುನ್ನವೇ ವಿವಾದಗಳನ್ನು ಕತಾರ್ ಎದುರಿಸಿತ್ತು. ಹೀಗಾಗಿ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಒತ್ತಡ ಕೂಡಾ ಹೆಚ್ಚಾಗಿತ್ತು. ಆದರೆ, ಪಂದ್ಯದ ಆರಂಭದಿಂದಲೇ ಈಕ್ವೆಡಾರ್ ಹೆಚ್ಚಿನ ಆಕ್ರಮಣಕಾರಿ ಆಟ ಪ್ರದರ್ಶನದಿದ್ದರೂ ಅರ್ಹ ಜಯ ದಾಖಲಿಸಿದೆ. ಪಂದ್ಯದ ಮೊದಲಾರ್ಧದಲ್ಲೇ ಪಂದ್ಯದ ಹಣೆ ಬರಹ ನಿರ್ಧಾರವಾಗುವಂತೆ ತೋರಿದಾಗ ಕತಾರ್ ಅಭಿಮಾನಿಗಳು ಬೇಸರಗೊಂಡು, ಪ್ರೇಕ್ಷಕರ ಗ್ಯಾಲರಿ ತೊರೆಯುವುದು ಕಂಡು ಬಂದಿತ್ತು. ಮೊದಲಾರ್ಧದ ಹೊತ್ತಿಗೆ ಸುಮಾರು 20, 000 ಅಭಿಮಾನಿಗಳು ಕ್ರೀಡಾಂಗಣದಿಂದ ಹೊರ ನಡೆದಿದ್ದಾರೆ ಎಂಬ ವರದಿ ಇದೆ.

1966ರಿಂದ ಇಲ್ಲಿ ತನಕ ಎಂದೂ ಕಂಡಿರದಂಥ ಮತ್ತೊಂದು ದಾಖಲೆಗೂ 2022ರ ವಿಶ್ವಕಪ್ ಮೊದಲ ಪಂದ್ಯ ಸಾಕ್ಷಿಯಾಯಿತು. ಗೋಲು ಹೊಡೆಯಲು ಅತಿ ಕಡಿಮೆ ಪ್ರಯತ್ನಗಳನ್ನು ಈ ಪಂದ್ಯ ಕಂಡಿದೆ. ಕತಾರ್ 5 ಬಾರಿ ಹಾಗೂ ಈಕ್ವೆಡಾರ್ 6 ಬಾರಿ ಗೋಲು ಪೋಸ್ಟ್ ಸಮೀಪದಲ್ಲಿ ಚೆಂಡು ಒದ್ದಿದ್ದು ಬಿಟ್ಟರೆ ಹೆಚ್ಚಿನ ಪ್ರಯತ್ನಗಳು ದಾಖಲಾಗಲಿಲ್ಲ. ಅತಿಥೇಯ ಕತಾರ್ ತನ್ನ ಮುಂದಿನ ಪಂದ್ಯವನ್ನು ಸೆನೆಗಲ್ ವಿರುದ್ಧ ಆಡಲಿದೆ.

Fifa World Cup 2022: Qatar set unwanted World Cup record after defeat from Ecuador in opening game

ಅರ್ಹತಾ ಸುತ್ತಿನಿಂದ ಪ್ರವೇಶಿಸಿರುವ 32 ತಂಡಗಳು ಸ್ಪರ್ಧಿಸಲಿವೆ. 8 ಗುಂಪಿನ ಟಾಪ್ ಎರಡು ತಂಡಗಳು ಅಂದರೆ 16 ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿವೆ. ಡಿಸೆಂಬರ್ 3ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ. ಕತಾರ್ ಸಂಸ್ಥಾಪನಾ ದಿನದಂದೇ (ಡಿಸೆಂಬರ್ 18) ಅಂತಿಮ ಹಣಾಹಣಿ ನಡೆಯಲಿದೆ.

ಸಮಯ: ಫೀಫಾ ವಿಶ್ವಕಪ್ ಪಂದ್ಯಾವಳಿ ಭಾರತೀಯ ಕಾಲಮಾನ ಪ್ರಕಾರ 3:30 pm, 6:30 pm, 9:30 pm and 12:30 amಕ್ಕೆ ವೀಕ್ಷಿಸಬಹುದು.

ಪಂದ್ಯ ವೀಕ್ಷಣೆ: ವಯಾಕಾಮ್ ನೆಟ್ವರ್ಕ್ 18 ವಾಹಿನಿ, ಸ್ಫೋರ್ಟ್ 18 ಹಾಗೂ ಸ್ಫೋರ್ಟ್ 18 ಎಚ್ ಡಿ ಅಲ್ಲದೇ ಜಿಯೋ ಸಿನಿಮಾ ಆಪ್, ಜಿಯೋ ಟಿವಿ(app)ಯಲ್ಲಿ ಪ್ರಸಾರವಾಗಲಿದೆ.

English summary
Fifa World Cup 2022: Qatar have become the first host nation to lose their opening game in the 92-year history of the World Cup.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X