Weekly Horoscope: ಈ ರಾಶಿಯವರಿಗಿದು ಅದೃಷ್ಟದ ವಾರ, ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ, ಎಲ್ಲಾ ಕೆಲಸದಲ್ಲೂ ಯಶಸ್ಸು

Weekly Horoscope 15 June to 21 June: ವೈದಿಕ ಜ್ಯೋತಿಷ್ಯದ ಪ್ರಕಾರ, ಜೂನ್ ತಿಂಗಳು ಗ್ರಹಗಳ ಚಲನೆಯ ದೃಷ್ಟಿಕೋನದಿಂದ ಬಹಳ ವಿಶೇಷವಾಗಿದೆ. ಅದರ ಪ್ರಕಾರ, ಈ ತಿಂಗಳು ಅನೇಕರ ಜೀವನದಲ್ಲಿ ಮಹತ್ವದ ತಿರುವು ಕಾಣಿಸಿಕೊಳ್ಳುವುದು. ಈ ವಾರ ಜೂನ್ 15 ರಿಂದ 21 ರವರೆಗೆ, ಅಂದರೆ ಮುಂದಿನ 7 ದಿನಗಳಲ್ಲಿ, ಅನೇಕ ದೊಡ್ಡ ಗ್ರಹಗಳ ಸಂಚಾರವಾಗುತ್ತದೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟ ಬೆಳಗುವುದು. ಕೆಲವರಿಗೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಜೂನ್ ಹೊಸ ವಾರವು ನಿಮ್ಮ ರಾಶಿ ಪ್ರಕಾರ ಹೇಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.

ಮೇಷ ರಾಶಿ:

ಮೇಷ ರಾಶಿಯವರ ಆತ್ಮ ವಿಶ್ವಾಸ ಈ ವಾರ ಹೆಚ್ಚಾಗುತ್ತದೆ. ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿಗಳು ಸಿಗಬಹುದು. ಪ್ರೇಮ ಸಂಬಂಧ ಗಟ್ಟಿಯಾಗುವುದು. ಹಣಕಾಸಿನ ವಿಷಯಗಳಲ್ಲಿ ನಿಮ್ಮ ಖರ್ಚನ್ನು ನಿಯಂತ್ರಿಸುವುದು ಮುಖ್ಯ. ಇಲ್ಲವಾದರೆ ವಾರದ ಕೊನೆಯಲ್ಲಿ ಹಣದ ಸಮಸ್ಯೆ ಎದುರಾಗಬಹುದು. ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಕಡೆ ಗಮನ ಕೊಡಿ.

Weekly Horoscope

ವೃಷಭ ರಾಶಿ:

ವೃಷಭ ರಾಶಿಯವರಿಗೆ, ಈ ವಾರ ಸಂತೋಷದಿಂದ ಕೂಡಿರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ನಿಮಗೆ ಉತ್ತಮ ಬೆಂಬಲ ಸಿಗುತ್ತದೆ. ಹೂಡಿಕೆಗೆ ವಾರ ಅನುಕೂಲಕರವಾಗಿದ್ದರೂ, ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಿ. ಆರೋಗ್ಯವು ಉತ್ತಮವಾಗಿರುತ್ತದೆ.

ಮಿಥುನ ರಾಶಿ:

ಜೂನ್ ಮೂರನೇ ವಾರವು ಮಿಥುನ ರಾಶಿಯವರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ವೃತ್ತಿಜೀವನದಲ್ಲಿ ಹಿರಿಯರಿಂದ ಬೆಂಬಲ ಸಿಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಕೆಲವು ತಪ್ಪು ತಿಳುವಳಿಕೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ತಾಳ್ಮೆಯಿಂದಿರಿ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮಾನಸಿಕ ಒತ್ತಡವನ್ನು ತಪ್ಪಿಸಲು ಧ್ಯಾನದ ಮೊರೆ ಹೋದರೆ ಒಳ್ಳೆಯದು.

ಕರ್ಕಾಟಕ ರಾಶಿ:

ಕರ್ಕಾಟಕ ರಾಶಿಯವರು ಹೊಸ ವಾರದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ಸಿಗಬಹುದು. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆಹಾರಕ್ರಮದ ಬಗ್ಗೆ ಗಮನ ಹರಿಸಿ.

ಸಿಂಹ ರಾಶಿ:

ಈ ವಾರ ಸಿಂಹ ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ನಿಮ್ಮ ನಾಯಕತ್ವದ ಗುಣಗಳಿಂದಾಗಿ ಎಲ್ಲರ ಮೆಚ್ಚುಗೆ ಪಡೆಯುವಿರಿ. ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವ ವಾರ. ಅಹಂಕಾರದ ಮಾತುಗಳಿಂದಾಗಿ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಮದುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಕನ್ಯಾ ರಾಶಿ:

ಹೊಸ ವಾರವು ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ಅವಕಾಶ ನೀಡುವುದು. ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಬಹುದು. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ಹಣಕಾಸಿನ ವಹಿವಾಟುಗಳನ್ನು ನಡೆಸುವಾಗ ಜಾಗರೂಕರಾಗಿರಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ.

ತುಲಾ ರಾಶಿ:

ಈ ವಾರವಿಡೀ ತುಲಾ ರಾಶಿಯವರಿಗೆ ಅದೃಷ್ಟಮಯವಾಗಿರುತ್ತದೆ. ಏನೇ ಕೆಲಸ ಮಾಡಿದರೂ ಯಶಸ್ಸು ಸಿಗುವುದು. ಒಂದರ್ಥದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುವ ವಾರ. ಅಂದುಕೊಂಡ ಕೆಲಸ ಸಾಧಿಸಲು ಉತ್ತಮ ಸಮಯ. ಹೊಸ ಯೋಜನೆಗಳು ಅಥವಾ ವ್ಯಾಪಾರಗಳು ಲಾಭದಾಯಕವಾಗುತ್ತವೆ. ಸಂಬಂಧಗಳು ಬಲಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರು ನಿಮ್ಮ ಜೀವನಕ್ಕೆ ಸಂಬಂಧಪಟ್ಟಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆಗ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಟ್ಟರೆ ಒಳ್ಳೆಯದು. ವೃತ್ತಿಜೀವನದಲ್ಲಿ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಆರ್ಥಿಕ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

ಧನು ರಾಶಿ:

ಈ ವಾರ ಧನು ರಾಶಿಯವರಿಗೆ ಕೂಡಾ ಅದೃಷ್ಟದ ವಾರ. ಪ್ರಯಾಣ, ಶಿಕ್ಷಣ ಮತ್ತು ವೃತ್ತಿಜೀವನದ ವಿಷಯದಲ್ಲಿ ಶುಭಫಲ ಸಿಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಹಳೆಯ ಸಾಲದಿಂದ ಮುಕ್ತಿ ಸಿಗುವುದು. ಹೊಸ ವಾಹನ ಖರೀದಿ ಸಾಧ್ಯತೆ ಇದೆ.

ಮಕರ ರಾಶಿ:

ಈ ವಾರ ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಇದ್ದರೆ ಮಕರ ರಾಶಿಯವರಿಗೆ ಲಾಭವಾಗುತ್ತದೆ. ದೀರ್ಘಾವಧಿಯ ಯೋಜನೆಗಳಲ್ಲಿ ಕೆಲಸ ಮಾಡಲು ಇದು ಒಳ್ಳೆಯ ಸಮಯ. ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಇರುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಹೊಸ ಕೆಲಸ ಸಿಗುವ ಸಂಭವವಿದೆ. ಅಥವಾ ಬಡ್ತಿ ಸಿಗಬಹುದು.

ಕುಂಭ ರಾಶಿ:

ಕುಂಭ ರಾಶಿಯ ಜನರು ಈ ವಾರ ಹೊಸ ಆಲೋಚನೆಗಳು ಮತ್ತು ಸೃಜನಶೀಲತೆಯಿಂದ ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳಿಂದ ಬೆಂಬಲ ಸಿಗುತ್ತದೆ. ನಿಮ್ಮ ಆದಾಯಕ್ಕೆ ತಕ್ಕಂತೆ ಖರ್ಚು ಮಾಡಿ. ಇಲ್ಲವಾದರೆ ಬಜೆಟ್‌ ಏರುಪೇರಾಗಬಹುದು.

ಮೀನ ರಾಶಿ:

ಮೀನ ರಾಶಿಯವರಿಗೆ ಈ ವಾರ ಆತ್ಮಾವಲೋಕನ ಮತ್ತು ಯೋಜನೆಗೆ ಸಮಯ ಸಿಗುತ್ತದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದ ವಾತಾವರಣವು ಸಂತೋಷವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+