ಸಾನ್ವಿ ಸುದೀಪ್ ಕೈಹಿಡಿಯುವ ಹುಡುಗ ಹೀಗಿರಬೇಕಂತೆ; ಅಳಿಯನಿಗೆ ಪ್ರಿಯಾ ಸುದೀಪ್ ಇಟ್ಟಿದ್ದಾರೆ ಈ ಡಿಮ್ಯಾಂಡ್

ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಯ ಮುದ್ದಿನ ಮಗಳು ಸಾನ್ವಿ ಸುದೀಪ್ (Sanvi Sudeep) ಅವರ ಮದುವೆ ವಿಚಾರ ಸದ್ಯ ಭಾರೀ ಸದ್ದು ಮಾಡುತ್ತಿದೆ. ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜಯ್ ನಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ 'ಮ್ಯಾಂಗೋ ಪಚ್ಚಿ' ಸಿನಿಮಾವನ್ನು ಪ್ರಿಯಾ ಸುದೀಪ್ ಅವರೇ ಸ್ವತಃ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ವಿಶೇಷ ಸಂದರ್ಶನವೊಂದರಲ್ಲಿ ಪ್ರಿಯಾ ಅವರು ಮಗಳ ಮದುವೆ ಬಗ್ಗೆ ಮಾತನಾಡಿದ್ದಾರೆ. ಸಾನ್ವಿ ಮದುವೆಯಾಗುವ ಹುಡುಗ ಹೇಗಿರಬೇಕು ಎಂದೂ ರಿವೀಲ್‌ ಮಾಡಿದ್ದಾರೆ.

ಮದುವೆ ಮಾಡಲ್ಲ

ಸಂದರ್ಶನದ ವೇಳೆ, "ಮಗಳು ಸಾನ್ವಿಗೆ ಮದುವೆ ಮಾಡಿ ಬೇರೆ ಮನೆಗೆ ಕಳಿಸುವುದು ಹೇಗೆ?" ಎಂಬ ಭಾವುಕ ಪ್ರಶ್ನೆಯನ್ನು ಪ್ರಿಯಾ ಅವರಿಗೆ ಕೇಳಲಾಯಿತು. ಇದಕ್ಕೆ ಪ್ರಿಯಾ ಸುದೀಪ್ ಅವರು ನಗುತ್ತಲೇ ನೀಡಿದ ಉತ್ತರ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪ್ರಿಯಾ ಅವರು, "ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ. ಒಂದು ವೇಳೆ ಮದುವೆ ಮಾಡಿದರೂ ಸಹ, ಮದುವೆಯಾಗುವ ಹುಡುಗನನ್ನೇ ನಮ್ಮ ಮನೆಗೆ (ಮನೆ ಅಳಿಯನಾಗಿ) ಕರೆಸಿಕೊಳ್ಳೋಣ ಅಂದುಕೊಂಡಿದ್ದೇನೆ" ಎಂದು ತಮಾಷೆಯಾಗಿ ಹೇಳಿದ್ದಾರೆ.

Priya Sudeep

ಮಗಳ ಮೇಲಿರುವ ಅತಿಯಾದ ಪ್ರೀತಿಯಿಂದಲೇ ಅವರು ಈ ಮಾತನ್ನು ಹೇಳಿದ್ದು, "ಅವಳು ಎಲ್ಲೇ ಇದ್ದರೂ, ಹೇಗೆ ಇದ್ದರೂ ಖುಷಿಯಾಗಿರಬೇಕು. ಅವಳ ಸಂತೋಷವೇ ನಮಗೆ ಮುಖ್ಯ. ಅವಳಿಗೆ ಎಲ್ಲಿ ನೆಮ್ಮದಿ ಮತ್ತು ಖುಷಿ ಸಿಗುತ್ತದೆಯೋ, ಅವಳು ಅಲ್ಲಿಯೇ ಇರಲಿ. ಅವಳು ಚೆನ್ನಾಗಿರಬೇಕು ಅಷ್ಟೇ ನಮ್ಮ ಆಸೆ" ಎಂದು ಮಗಳ ಭವಿಷ್ಯದ ಬಗ್ಗೆ ತಮ್ಮ ಕನಸು ಬಿಚ್ಚಿಟ್ಟಿದ್ದಾರೆ.

ಮನೆಯಲ್ಲಿ ಅಪ್ಪ-ಮಗಳದ್ದೇ ತರ್ಲೆ

ಸುದೀಪ್ ಮತ್ತು ಸಾನ್ವಿ ನಡುವಿನ ಬಾಂಡಿಂಗ್ ಬಗ್ಗೆ ಮಾತನಾಡಿದ ಪ್ರಿಯಾ, "ಅಪ್ಪ ಮತ್ತು ಮಗಳು ಇಬ್ಬರೂ ತರ್ಲೆಗಳು. ಮನೆಯಲ್ಲಿದ್ದರೆ ಇಬ್ಬರೂ ಸೇರಿಕೊಂಡು ನನ್ನ ಕಾಲು ಎಳೆಯುತ್ತಿರುತ್ತಾರೆ. ಸುದೀಪ್ ಏನಾದರೂ ನನ್ನ ಬಗ್ಗೆ ತಮಾಷೆ ಮಾಡಲು ಶುರು ಮಾಡಿದರೆ, ಸಾನ್ವಿ ತಕ್ಷಣ ಅಪ್ಪನ ಕೈಜೋಡಿಸಿ ನನಗೆ ರೇಗಿಸುತ್ತಾಳೆ. ಇಬ್ಬರೂ ತಂದೆ-ಮಗಳಿಗಿಂತ ಹೆಚ್ಚಾಗಿ ಆತ್ಮೀಯ ಸ್ನೇಹಿತರಂತೆ ಇರುತ್ತಾರೆ. ಸಾನ್ವಿ ಸದಾ ನನ್ನ ಬೆಂಬಲಕ್ಕೆ ನಿಲ್ಲುತ್ತಾಳೆ. ಅವಳು ನನಗೆ ನೀಡುವ ಧೈರ್ಯ ಮತ್ತು ಸಪೋರ್ಟ್ ಅನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ" ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸುದೀಪ್ ಅವರ ಯಶಸ್ಸಿನ ಹಿಂದೆ ಪ್ರಿಯಾ ಅವರ ಪಾತ್ರ ದೊಡ್ಡದಾಗಿದೆ. ಕಿಚ್ಚ ಸುದೀಪ್ ಅವರ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್ ಹಾಗೂ ಜವಾಬ್ದಾರಿಗಳ ನಡುವೆ, ಇಡೀ ಕುಟುಂಬ ಮತ್ತು ಮಗಳ ಜವಾಬ್ದಾರಿಯನ್ನು ಪ್ರಿಯಾ ಅವರೇ ನಿಭಾಯಿಸುತ್ತಾ ಬಂದಿದ್ದಾರೆ. ಈಗ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುವ ಮೂಲಕ ಸುದೀಪ್ ಅವರ ಸಿನಿಮಾ ಜರ್ನಿಗೆ ಮತ್ತಷ್ಟು ಶಕ್ತಿಯಾಗಿ ನಿಂತಿದ್ದಾರೆ.

Priya Sudeep

ಸಾನ್ವಿ ಸುದೀಪ್ ಅವರು ಕೇವಲ ಸ್ಟಾರ್ ಕಿಡ್ ಆಗಿ ಉಳಿಯದೆ, ತಮ್ಮದೇ ಆದ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸುದೀಪ್ ಅಭಿನಯದ ಬಹುನಿರೀಕ್ಷಿತ 'ಮಾರ್ಕ್ಸ್' ಸಿನಿಮಾದ ಸೂಪರ್ ಹಿಟ್ ಹಾಡಾದ 'ಮಸ್ತ್ ಮಲೈಕಾ' ಮೂಲಕ ಸಾನ್ವಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಹಾಡಿನಲ್ಲಿ ಸಾನ್ವಿ ತಮ್ಮ ಅದ್ಭುತ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸಿದ್ದು, ಪ್ರೇಕ್ಷಕರಿಂದ ಹಾಗೂ ಸಂಗೀತ ಪ್ರೇಮಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಖತ್ ಚರ್ಚೆಯಲ್ಲಿರುವ 'ನೆಪೋಟಿಸಂ' ವಿಷಯದ ಬಗ್ಗೆ ಕಿಚ್ಚ ಸುದೀಪ್ ಅವರು ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ. "ನನ್ನ ಮಗಳು ಚಿತ್ರರಂಗಕ್ಕೆ ಬಂದಿರುವುದು ನಾನು ನಟ ಎನ್ನುವ ಕಾರಣಕ್ಕಲ್ಲ, ಬದಲಿಗೆ ಅವಳಿಗೆ ಸಂಗೀತದ ಮೇಲೆ ಇರುವ ಆಸಕ್ತಿ ಮತ್ತು ಪ್ರೀತಿಯಿಂದ" ಎಂದು ಸ್ಪಷ್ಟಪಡಿಸಿದ್ದಾರೆ.

ಸುದೀಪ್ ಅವರ ಪ್ರಕಾರ, ಸಾನ್ವಿಗೆ ಚಿಕ್ಕ ವಯಸ್ಸಿನಿಂದಲೇ ಮ್ಯೂಸಿಕ್ ಕಡೆಗೆ ಹೆಚ್ಚಿನ ಒಲವಿತ್ತು. ಪೋಷಕರಾಗಿ ತಾವು ಅವಳ ಆಸಕ್ತಿಗೆ ಬೆಂಬಲ ನೀಡಿದ್ದಾರೆಯೇ ಹೊರತು, ಬಲವಂತವಾಗಿ ಸಿನಿಮಾರಂಗಕ್ಕೆ ತಂದಿಲ್ಲ. ತನ್ನ ಸ್ವಂತ ಪ್ರತಿಭೆ ಮತ್ತು ಶ್ರಮದಿಂದಲೇ ಅವಳು ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾಳೆ ಎಂದು ಸುದೀಪ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ತಂದೆಯ ದೊಡ್ಡ ಹೆಸರಿದ್ದರೂ ಸಹ, ತಮ್ಮದೇ ಆದ ವಿಶಿಷ್ಟ ಶೈಲಿಯ ಸಂಗೀತದ ಮೂಲಕ ಇಂಡಸ್ಟ್ರಿಯಲ್ಲಿ ಸ್ವತಂತ್ರವಾದ ಗುರುತು ಮೂಡಿಸಬೇಕು ಎನ್ನುವುದು ಸಾನ್ವಿ ಅವರ ಗುರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+