ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಫಾ ವಿಶ್ವಕಪ್‌ ವೀಕ್ಷಣೆಗಾಗಿ ಕೊಚ್ಚಿಯಲ್ಲಿ ಮನೆ ಖರೀದಿಸಿದ ಗ್ರಾಮಸ್ಥರು!

|
Google Oneindia Kannada News

ತಿರುವನಂತಪುರಂ, ನವೆಂಬರ್‌ 21: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಜಗತ್ತಿನಾದ್ಯಂತ ಫುಟ್‌ಬಾಲ್‌ ಪ್ರಿಯರನ್ನು ಸೆಳೆಯುತ್ತಿದೆ. ಫುಟ್‌ಬಾಲ್ ಜ್ವರದ ಕಾವು ಎಷ್ಟರ ಮಟ್ಟಿಗೆ ಇದೆಯೆಂದರೆ ಕೇರಳದ ಫುಟ್‌ಬಾಲ್ ಅಭಿಮಾನಿಗಳು ಪಂದ್ಯಾಟ ವೀಕ್ಷಿಸಲು ಮನೆಯೊಂದನ್ನೇ ಖರೀದಿಸಿದ್ದಾರೆ.

ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮಗಲ್‌ ಎಂಬ ಪುಟ್ಟ ಗ್ರಾಮದಲ್ಲಿರುವ ಫುಟ್‌ಬಾಲ್‌ ಅಭಿಮಾನಿಗಳು ಬರೋಬ್ಬರಿ 23 ಲಕ್ಷ ರೂಪಾಯಿ ಖರ್ಚು ಮಾಡಿ ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ವೀಕ್ಷಣೆಗಾಗಿ ಮನೆಯನ್ನೇ ಖರೀದಿಸಿದ್ದಾರೆ. ಈ ಗ್ರಾಮದ ಸುಮಾರು 17 ಫುಟ್‌ಬಾಲ್‌ ಅಭಿಮಾನಿಗಳು ಮನೆ ಖರೀದಿಸಲು ಯೋಚನೆ ಮಾಡಿದ್ದಾರೆ. ಮನೆಗೆ ತಗಲುವ 23 ಲಕ್ಷ ರೂಪಾಯಿಯನ್ನು ಎಲ್ಲರೂ ಸೇರಿ ಒಟ್ಟುಗೂಡಿಸಿ, ಮನೆ ಖರೀದಿಸಿದ್ದಾರೆ.

ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್ಉದ್ಘಾಟನಾ ಪಂದ್ಯದಲ್ಲೇ ಸೋಲು, ಬೇಡದ ದಾಖಲೆ ಬರೆದ ಕತಾರ್

ಪ್ರಮುಖವಾಗಿ ಗ್ರಾಮಸ್ಥರು ತಮ್ಮ ನೆಚ್ಚಿನ ಆಟಗಾರನಾದ ಅರ್ಜೆಂಟೀನಾದ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ ಫುಟ್‌ಬಾಲ್‌ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಅವರ ಭಾವಚಿತ್ರಗಳೊಂದಿಗೆ ಬ್ರೆಜಿಲ್‌, ಅರ್ಜೆಂಟೀನಾ ಹಾಗೂ ಪೋರ್ಚುಗಲ್‌ ದೇಶದ ಬಣ್ಣಗಳಿಂದ ಮನೆಗೆ ಬಣ್ಣ ಹಚ್ಚಿ ಸಿಂಗರಿಸಿದ್ದಾರೆ.

17 ಜನರು ಸೇರಿ ಈ ಮನೆ ಖರೀದಿಸಿದ್ದೇವೆ

17 ಜನರು ಸೇರಿ ಈ ಮನೆ ಖರೀದಿಸಿದ್ದೇವೆ

ಇದಲ್ಲದೆ ಅವರು ಮನೆಯಲ್ಲಿ ಹಲವಾರು ಫುಟ್‌ಬಾಲ್‌ ಆಟಗಾರರು ಮತ್ತು ಅವರ ತಂಡಗಳ ಕಟೌಟ್‌ಗಳನ್ನು ಇರಿಸಿದ್ದಾರೆ. ಫಿಪಾ ವಿಶ್ವಕಪ್‌ಗಾಗಿ ತಮ್ಮ ಸಿದ್ಧತೆಗಳ ಕುರಿತು ಮಾತನಾಡಿದ ಮನೆ ಖರೀದಿದಾರರಲ್ಲಿ ಒಬ್ಬರಾದ ಶೆಫೀರ್ ಪಿಎ, "ನಾವು ಫಿಫಾ ವಿಶ್ವಕಪ್ 2022 ಗಾಗಿ ವಿಶೇಷವಾದದ್ದನ್ನು ಮಾಡಲು ಯೋಜಿಸಿದ್ದೇವೆ. ನಮ್ಮಲ್ಲಿ 17 ಜನರು ಈಗಾಗಲೇ ಮಾರಾಟಕ್ಕಿದ್ದ ಈ ಮನೆಯನ್ನು 23 ಲಕ್ಷ ರೂಪಾಯಿಯನ್ನು ಎಲ್ಲರೂ ಸೇರಿ ಹಣ ಹಾಕಿ ಖರೀದಿಸಿದ್ದೇವೆ. ಅಲ್ಲದೆ ಫಿಫಾ ತಂಡಗಳ ಧ್ವಜಗಳಿಂದ ಅದನ್ನು ಅಲಂಕರಿಸಲಾಗಿದೆ. ನಾವು ಇಲ್ಲಿ ದೊಡ್ಡ ಪರದೆಯ ಟಿವಿಯಲ್ಲಿ ಪಂದ್ಯವನ್ನು ವೀಕ್ಷಿಸಲು ಯೋಜಿಸಿದ್ದೇವೆ ಎಂದು ಹೇಳಿದರು.

ಈ ಮನೆಯನ್ನು ಮಾರಾಟಕ್ಕೆ ಇತ್ತು

ಈ ಮನೆಯನ್ನು ಮಾರಾಟಕ್ಕೆ ಇತ್ತು

ಜಗತ್ತು ವಿಶ್ವಕಪ್‌ ಫುಟ್‌ಬಾಲ್ ಪಂದ್ಯಾಟದ ಕಡೆಗೆ ನೋಡುತ್ತಿದೆ. ಕ್ರೀಡಾಭಿಮಾನಿಗಳು ಎಲ್ಲರೂ 2022ರ ವಿಶ್ವಕಪ್ ಅನ್ನು ಉತ್ಸಾಹದಿಂದ ಸ್ವಾಗತಿಸುತ್ತಿದ್ದಾರೆ. ಆದ್ದರಿಂದ ನಾವು ಕೂಡ ಏನಾದರೂ ಕ್ರಿಯಾತ್ಮಕವಾಗಿ ಮಾಡುವ ಆಲೋಚನೆಯಿಂದ ಈ ಮನೆ ಖರೀದಿ ಮಾಡಿದ್ದೇವೆ. ನಾವು 17 ಜನರು ಪ್ರತಿದಿನ ಸಂಜೆ ಇಲ್ಲಿ ಓಡಾಡುತ್ತಿದ್ದೆವು. ಈ ನಡುವೆ ಮನೆಯ ಮಾಲೀಕರು ಈ ಮನೆಯನ್ನು ಮಾರಾಟ ಮಾಡಲು ಯೋಜಿಸಿದ್ದರು. ಆದ್ದರಿಂದ ನಾವು ಈ ಮನೆಯನ್ನು ಏಕೆ ಖರೀದಿಸಬಾರದು? ಎಂದು ಯೋಚಿಸಿದೆವು. ನಾವು ಈಗ ಒಟ್ಟಿಗೆ ಕುಳಿತು ವಿಶ್ವಕಪ್ ಅನ್ನು ಒಟ್ಟಿಗೆ ನೋಡುತ್ತೇವೆ. ಮನೆ ಖರೀದಿಸಿದ್ದರಿಂದ ಈಗ ಎಲ್ಲರೂ ಫುಟ್‌ಬಾಲ್‌ ಅನ್ನು ನೋಡಿ ಆನಂದಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಅಂತಿಮವಾಗಿ ಮನೆಯನ್ನು ಖರೀದಿಸಲು ಮುಂದಾದರು

ಅಂತಿಮವಾಗಿ ಮನೆಯನ್ನು ಖರೀದಿಸಲು ಮುಂದಾದರು

ಕಳೆದ 15ರಿಂದ 20 ವರ್ಷಗಳಿಂದಲೂ ಈ 17 ಮಂದಿ ಇಲ್ಲಿ ಸೇರುತ್ತಿದ್ದರು. ಆದ್ದರಿಂದ ತಾವು ಒಟ್ಟಿಗೆ ಫುಟ್‌ಬಾಲ್‌ ಪಂದ್ಯವನ್ನು ವೀಕ್ಷಿಸಲು ಮುಂದುವರಿಸಲು ಅವರು ಅಂತಿಮವಾಗಿ ಮನೆಯನ್ನು ಖರೀದಿಸಲು ಮುಂದಾದರು. ಇದರಿಂದ ಭವಿಷ್ಯದಲ್ಲಿ ನಮ್ಮ ಮಕ್ಕಳೂ ಕೂಡ ಫುಟ್‌ಬಾಲ್‌ ವೀಕ್ಷಣೆಯನ್ನು ಮುಂದುವರೆಸಬಹುದು. ಅಲ್ಲದೆ ಅವರ ಒಗ್ಗಟ್ಟು ಕೂಡ ಮುಂದುವರಿಯುತ್ತದೆ. "ಈಗ ನಾವು ದೊಡ್ಡ ಟಿವಿ ಖರೀದಿಸಲು ಯೋಜಿಸುತ್ತಿದ್ದೇವೆ. ಎಲ್ಲಾ ವಯೋಮಾನದ ಜನರು ಇಲ್ಲಿಗೆ ಬಂದು ಒಟ್ಟಿಗೆ ಫುಟ್‌ಬಾಲ್‌ ಆಟವನ್ನು ವೀಕ್ಷಿಸಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಶಫೀರ್ ತಿಳಿಸಿದರು.

ನಮಗೆ ನಿರ್ದಿಷ್ಟವಾದ ಸ್ಥಳವಿರಲಿಲ್ಲ

ನಮಗೆ ನಿರ್ದಿಷ್ಟವಾದ ಸ್ಥಳವಿರಲಿಲ್ಲ

ಮನೆಯ ಇನ್ನೊಬ್ಬ ಖರೀದಿದಾರ ಹ್ಯಾರಿಸ್ ಪಿಕೆ ಮಾತನಾಡಿ, ನಾವು ಹಲವು ವರ್ಷಗಳಿಂದ ಫುಟ್‌ಬಾಲ್ ವಿಶ್ವಕಪ್‌ ಪಂದ್ಯಗಳನ್ನು ಒಟ್ಟಿಗೆ ವೀಕ್ಷಿಸುತ್ತಿದ್ದೆವು. ಆದರೆ ನಮಗೆ ನಿರ್ದಿಷ್ಟವಾದ ಸ್ಥಳವಿರಲಿಲ್ಲ. ವಿಶ್ವಕಪ್ ಸಮೀಪಿಸುತ್ತಿದ್ದಂತೆ ನಾವು ಪಂದ್ಯಗಳನ್ನು ವೀಕ್ಷಿಸಲು ಒಳ್ಳೆಯ ಸ್ಥಳವನ್ನು ಹುಡುಕಿದ್ದೆವು. ಆಗ ಇಲ್ಲಿ ಮನೆ ಮತ್ತು ಜಮೀನು ಮಾರಾಟಕ್ಕೆ ಇದೆ ಎಂದು ನಮಗೆ ತಿಳಿಯಿತು. ಈ ಮನೆಗೆ 23 ಲಕ್ಷ ರೂ. ಬೆಲೆ ಇತ್ತು. ನಾವು 17 ಜನರು ಈ ಹಣವನ್ನು ಸಮಾನವಾಗಿ ಹಂಚಿಕೊಂಡು ಖರೀದಿಸಿದೆವು. ಈಗ ನಾವು ಸಂತೋಷವಾಗಿದ್ದೇವೆ. ಎಲ್ಲಾ ವಯಸ್ಸಿನ ಜನರು ಅದರ ಭಾಗವಾಗಿದ್ದಾರೆ ಎಂದು ಹ್ಯಾರಿಸ್ ತಿಳಿಸಿದರು.

English summary
The ongoing FIFA World Cup in Qatar has enthralled football lovers across the world and the fever is so high that Kerala football fans have even bought a house to watch the match.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X